Asianet Suvarna News Asianet Suvarna News

ಸೀತಾ-ರಾಮ ವಿವಾಹದ ಟೈಮ್​ನಲ್ಲೇ ಎಂಟ್ರಿ ಕೊಟ್ಟಳು ಇನ್ನೋರ್ವ ಮಾಜಿ ಪ್ರೇಯಸಿ! ಮುರಿದು ಬೀಳುತ್ತಾ ಮದ್ವೆ?

 ಸೀತಾ-ರಾಮ ಮದ್ವೆ ಟೈಮ್​ನಲ್ಲೇ ಎಂಟ್ರಿ ಕೊಟ್ಟಿದ್ದಾಳೆ  ಇನ್ನೋರ್ವ ಮಾಜಿ ಪ್ರೇಯಸಿ!  ಮದುವೆಗೆ ವಿಘ್ನ ಆಯ್ತಾ? ಸೀರಿಯಲ್​ನಲ್ಲಿ ಇದೇನಿದು ಟ್ವಿಸ್ಟ್​?
 

Another ex lover of Ram has entered during Seeta Ramas marriage time suc
Author
First Published Jun 29, 2024, 4:42 PM IST

ಸೀತಾರಾಮರ ಮದುವೆ ನಡೆಯುತ್ತಿದೆ. ಇದಾಗಲೇ ಎಲ್ಲಾ ಶಾಸ್ತ್ರಗಳೂ ಮುಗಿದು ಹಸೆಮಣೆಯ ಮೇಲೆ ಕುಳಿತಿದ್ದಾರೆ ವಧು-ವರರು.  ಹಲವು ಅಡೆತಡೆಗಳನ್ನು ಮೀರಿ ಮದುವೆ ಮಂಟಪದವರೆಗೂ ಸೀತಾ-ರಾಮ ಜೋಡಿ ಬಂದು ನಿಂತಿದೆ. ಮದುವೆ ಕಾರ್ಯಗಳೂ ಆರಂಭವಾಗಿದೆ.  ಅದ್ಧೂರಿ ನಿಶ್ಚಿತಾರ್ಥದ ಬಳಿಕ, ಈಗ ಮದುವೆಯ ಶಾಸ್ತ್ರಗಳು ಶುರುವಾಗಿವೆ. ಸೀರಿಯಲ್​ ಮದ್ವೆ ಎಂದರೆ ಅದರಲ್ಲಿಯೂ ಆಗರ್ಭ ಶ್ರೀಮಂತರ ಮದುವೆ ಎಂದರೆ ರಿಯಲ್​ ಲೈಫ್​ ಮದುವೆಯ ಹಾಗೆಯೇ ಭರ್ಜರಿಯಾಗಿ ನಡೆಯುತ್ತದೆ. ಅದರಂತೆಯೇ ಸೀತಾ ರಾಮರ ಮದುವೆ ಕಾರ್ಯವನ್ನು ಇದಾಗಲೇ ಹಲವು ಎಪಿಸೋಡ್​ಗಳಲ್ಲಿ ವೀಕ್ಷಕರು ನೋಡಿದ್ದು, ಈಗ ರಾಮ ಸೀತಾಳ ಕುತ್ತಿಗೆಗೆ ಮಂಗಳಸೂತ್ರ ಕಟ್ಟುವುದೊಂದೇ ಬಾಕಿಯಾಗಿದೆ. ಅದಾಗಲೇ ಮಾಜಿ ಪ್ರೇಯಸಿಯೊಬ್ಬಳ ಎಂಟ್ರಿಯಾಗಿದೆ. ರಾಮ್​ ಕೊಟ್ಟಿರೋ ಗಿಫ್ಟ್​ ಅನ್ನು ಅವನಿಗೆ ವಾಪಸ್​ ಕೊಟ್ಟು ಒಂದೇ ಸಲ ಅಪ್ಪಿಕೋ ಎಂದು ಹೇಳುತ್ತಿದ್ದಾಳೆ. ರಾಮ್​ ಅದಕ್ಕೆ ಒಪ್ಪಿ ತಬ್ಬಿಕೊಂಡಿದ್ದಾನೆ, ಮುಂದೇನು?

ಅಷ್ಟಕ್ಕೂ ರಾಮ್​ ಬಾಳಲ್ಲಿ ಚಾಂದನಿ ಎನ್ನುವ ಪ್ರೇಯಸಿ ಇದ್ದಳು. ಅವಳಿಗಾಗಿ ಜೀವವನ್ನೇ ಕೊಡುತ್ತಿದ್ದ ರಾಮ್​. ಆದರೆ ಅವಳು ಮೋಸ ಮಾಡಿ ರಾಮ್​ನಿಗೆ ಶಾಕ್​ ಕೊಟ್ಟಿದ್ದಳು. ಸೀತಾ ಮತ್ತು ರಾಮ್​ ಪ್ರೀತಿಸುತ್ತಿರುವ ವಿಷಯ ಗೊತ್ತಾಗಿ ಚಿಕ್ಕಿ ಭಾರ್ಗವಿ ನೆರವಿನಿಂದ ಅವರಿಬ್ಬರನ್ನೂ ಬೇರೆ ಮಾಡಿ ತಾನು ಮತ್ತೆ ಎಂಟ್ರಿ ಪಡೆಯಲು ಸಾಕಷ್ಟು ಸರ್ಕಸ್​ ಮಾಡಿದ್ದಳು. ಕೊನೆಗೆ ಸೋತು ವಾಪಸಾಗಿದ್ದಳು. ಆದರೆ ಇದೀಗ ಚಾಂದನಿ ಬದಲು ಧನ್ಯಶ್ರೀ ಎಂಟ್ರಿಯಾಗಿದೆ. ಏನಿದು ಟ್ವಿಸ್ಟ್​? ರಾಮ್​ಗೆ ಮತ್ತೋರ್ವ ಪ್ರೇಯಸಿ ಇದ್ದಳಾ? ಅವಳನ್ನು ನೋಡಿದಾಗ ರಾಮ್​ ಕರಗಿದ್ದೇಕೆ? ಇದಕ್ಕೆ ಇಲ್ಲಿದೆ ಉತ್ತರ.

ನಿಮಗಿಷ್ಟದ 'ಸಿಹಿ' ತಿಂಡಿಯ ಮೂಲಕ ಜೋಡಿಯ ವರ್ಣಿಸಿ: ಸೀತಾರಾಮ ತಂಡದಿಂದ ಹೀಗೊಂದು ಆಫರ್​

ಅಷ್ಟಕ್ಕೂ ಇದು ಸೀತಾರಾಮ ಸೀರಿಯಲ್​ ಕಥೆಯಲ್ಲ. ಬದಲಿಗೆ ಜೀ ಕನ್ನಡದಲ್ಲಿ ನಡೆಯುತ್ತಿರುವ ಮಹಾನಟಿ ರಿಯಾಲಿಟಿ ಷೋ. ಇದರಲ್ಲಿ ವಿವಿಧ ಸೀರಿಯಲ್​ ಕಥಾನಾಯಕರ ಜೊತೆ, ಸ್ಪರ್ಧಿಗಳು ಆ್ಯಕ್ಟಿಂಗ್​ ಮಾಡಬೇಕಿದೆ. ಅದಕ್ಕಾಗಿ ಬೇರೆ ಬೇರೆ ರೀತಿಯ ಕಥೆಗಳನ್ನು ಹೆಣೆಯಲಾಗುತ್ತಿದೆ. ನಾಯಕರು ಯಾವ ಸೀರಿಯಲ್​ನಲ್ಲಿ ಆ್ಯಕ್ಟ್​ ಮಾಡುತ್ತಿದ್ದಾರೋ ಅದೇ ಸೀರಿಯಲ್​ನ ಹೆಸರು ಇಟ್ಟುಕೊಂಡು ತಾವು ಅದರ ನಾಯಕಿ ಎಂದು ಕಲ್ಪಿಸಿಕೊಂಡು ಈ ಮಹಾನಟಿ ಸ್ಪರ್ಧಿಗಳು ಆ್ಯಕ್ಟ್​ ಮಾಡಬೇಕಿದೆ. ಇಲ್ಲೂ ಅಷ್ಟೇ. ಧನ್ಯಶ್ರೀ ಅವರು ರಾಮ್​ ಬಳಿ ಬಂದು ಹಿಂದಿನ ಪ್ರೀತಿಯನ್ನು ನಿವೇದಿಸಿಕೊಂಡಿದ್ದಾರೆ. ಇದಕ್ಕಾಗಿ ಇಡೀ ಸೀತಾರಾಮ ತಂಡದ ವಿವಿಧ ಕಲಾವಿದರನ್ನೂ ವೇದಿಕೆ ಮೇಲೆ ನೋಡಬಹುದು. ಆರಂಭದಲ್ಲಿ ಸಿಹಿಯನ್ನು ಭೇಟಿ ಮಾಡುವ ಧನ್ಯಶ್ರೀ ಅವರು ಕೊನೆಗೆ ರಾಮ್​ ಬಳಿ ಬಂದು ಅಪ್ಪಿಕೊಳ್ಳುವಂತೆ ಹೇಳಿರುವ ಸನ್ನಿವೇಶ ಸೃಷ್ಟಿ ಮಾಡಲಾಗಿದೆ.

ಅಷ್ಟಕ್ಕೂ ರಾಮ ಸೀತಾಳ ಕುತ್ತಿಗೆಗೆ ಮಂಗಳಸೂತ್ರ ಕಟ್ಟಿ ಸಿಂಧೂರ ಹಚ್ಚುವವರೆಗೂ ಸೀರಿಯಲ್​ ಫ್ಯಾನ್ಸ್​ಗೆ ಆತಂಕ ಇದ್ದೇ ಇದೆ. ಇದಕ್ಕೆ ಕಾರಣ,  ಮದುವೆಗೆಂದು ಆಭರಣದ ಅಂಗಡಿಗೆ ಹೋದಾಗ  ಯುವತಿಯೊಬ್ಬಳನ್ನು ಸೀತಾ ಗಾಬರಿಯಾಗಿದ್ದಳು. ಇವಳು ಯಾರು ಎನ್ನುವುದು ಈಗಿರುವ ಪ್ರಶ್ನೆ.   ಅನಂತ ಲಕ್ಷ್ಮಿಯವರ ಕುರಿತು ರಾಮ್​ ಹತ್ರ ಹೇಳಬೇಕಾ ಎಂದು ಯುವತಿಯೊಬ್ಬಳು ತನ್ನಷ್ಟಕ್ಕೇ ತಾನು ಮಾತನಾಡಿಕೊಂಡಿದ್ದಾಳೆ. ಅವಳನ್ನು ನೋಡಿದ ಸೀತಾಳಿಗೆ ಶಾಕ್​ ಆಗಿತ್ತು. ಇವೆಲ್ಲಾ ಪ್ರಶ್ನೆಗಳು ಸದ್ಯ ಸೀರಿಯಲ್​ನಲ್ಲಿ ಬಾಕಿ ಇವೆ. ಈ ಮಧ್ಯೆ, ಗೋಡೆ ಬರಹ ನೋಡಿ ಫ್ಯಾನ್ಸ್​ ಸೀತಾರಾಮ ಕಲ್ಯಾಣ ಆಗುವುದು ಡೌಟ್​ ಎನ್ನುತ್ತಿದ್ದಾರೆ. ಅಷ್ಟಕ್ಕೂ ಸೀತಾ ತನ್ನ ಇತಿಹಾಸ ಹೇಗಾದರೂ ಮಾಡಿ ಹೇಳಬೇಕಿತ್ತು, ಇಲ್ಲದಿದ್ದರೆ ಮದ್ವೆಯಾದ್ಮೇಲೆ ಸುಮ್ಮನೇ ತೊಂದರೆ ಎನ್ನುವುದು ಬಹುತೇಕ ಮಂದಿಯ ಅಭಿಪ್ರಾಯ ಕೂಡ. 

ಕೆಲಸ ಸಿಕ್ಕ ಖುಷಿಯಲ್ಲಿ ಅಮ್ಮನ ಜೊತೆ ಭಾಗ್ಯ ಮಕ್ಕಳ ಭರ್ಜರಿ ಡಾನ್ಸ್​: ಮಧ್ಯೆ ಭಯ ಹುಟ್ಟಿಸಿದ ಅಜ್ಜಿ!

Latest Videos
Follow Us:
Download App:
  • android
  • ios