ಅಣ್ಣಯ್ಯ ಸೀರಿಯಲ್​ ನಾಯಕಿ ನಿಶಾ ರವಿಕೃಷ್ಣ ನಾಲ್ಕು ಸೆಕೆಂಡ್​ಗಳ ಚಾಲೆಂಜ್​ ನೀಡಿದ್ದಾರೆ. ನೀವು ಟ್ರೈ ಮಾಡ್ತೀರಾ? ಏನಿದು ಚಾಲೆಂಜ್​? 

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಣ್ಣಯ್ಯ ಸೀರಿಯಲ್​ ವಿಶೇಷ ಕಥೆಯನ್ನು ಹೊಂದಿದೆ. ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ವಿಭಿನ್ನ ಕಥೆ ಇದಾಗಿದೆ. ಬೇರೊಬ್ಬರನ್ನು ಪ್ರೀತಿಸುವ ನಾಯಕಿಯನ್ನು ಅನಿವಾರ್ಯ ಕಾರಣಗಳಿಂದ ಮದುವೆಯಾಗುವ ನಾಯಕ ಈ ಅಣ್ಣಯ್ಯ. ಪತ್ನಿಗೆ ಆಕೆಯ ಲವರ್​ ಜೊತೆ ಸೇರಿಸುವುದು ಇವನ ಉದ್ದೇಶ, ಆದರೆ ಎಲ್ಲರ ಕಣ್ಣಿಗೆ ಮಾತ್ರ ಇವರು ಆದರ್ಶ ದಂಪತಿ. ಆದರೆ ಪತಿಗೆ ಆಗುತ್ತಿರುವ ಅನ್ಯಾಯವನ್ನು ಸರಿ ಮಾಡುತ್ತಲೇ ಮನೆಯವರ ವಿಶ್ವಾಸ ಗಳಿಸುತ್ತಿದ್ದಾಳೆ ನಾಯಕಿ. ಈ ದಂಪತಿ ಒಂದಾಗ್ತಾರಾ ಅಥ್ವಾ ನಾಯಕಿ ಲವರ್​ ಜೊತೆ ಹೋಗ್ತಾಳಾ ಎಂದೆಲ್ಲಾ ಪ್ರಶ್ನೆಗಳನ್ನು ಹೊತ್ತು ಸಾಗುತ್ತಿದೆ ಅಣ್ಣಯ್ಯ ಸೀರಿಯಲ್​.

ಇದೀಗ ಈ ಸೀರಿಯಲ್ ನಾಯಕಿ ನಿಶಾ ರವಿಕೃಷ್ಣ ಅವರು ತಮ್ಮ ಟೀಂಗೆ ಚಾಲೆಂಜ್​ ನೀಡಿದ್ದಾರೆ. ಇದರ ರೀಲ್ಸ್ ಒಂದನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ. ಗಟ್ಟಿಮೇಳದಲ್ಲಿ ರೌಡಿ ಬೇಬಿ ಎಂದೇ ಫೇಮಸ್​ ಆಗಿದ್ದ ನಿಶಾ, ಇಲ್ಲಿ ಲವರ್​ಗಾಗಿ ಕಾಯುತ್ತಿರುವ ಪತ್ನಿಯ ರೋಲ್​ ಮಾಡುತ್ತಿದ್ದಾರೆ. ಈ ಸೀರಿಯಲ್​ನಲ್ಲಿ ನಾಯಕನಾಗಿ ನಟಿಸುತ್ತಿರುವ ನಟನ ಹೆಸರು ವಿಕಾಸ್ ಉತ್ತಯ್ಯ. ಈಗ ನಿಶಾ ಅವರು ನಾಲ್ಕು ಸೆಕೆಂಡ್​ಗಳ ಚಾಲೆಂಜ್​ ನೀಡಿದ್ದಾರೆ. ಅದರಲ್ಲಿ ಮೊಬೈಲ್​ ಅನ್ನು ಕಾಣದ ಹಾಗೆ ಇಟ್ಟುಕೊಳ್ಳಬೇಕು. ಸೆಕೆಂಡ್​ ಮುಳ್ಳು ಓಡುತ್ತಿರುತ್ತದೆ. ನಾಲ್ಕು ಸೆಕೆಂಡ್​ಗೆ ಅದನ್ನು ನಿಲ್ಲಿಸಬೇಕು. ಆದ್ರೆ ನಟರಿಂದ ಅದು ಸಾಧ್ಯವಾಗಲೇ ಇಲ್ಲ. ಕುತೂಹಲ ಎನ್ನುವ ಈ ಚಾಲೆಂಜ್​ ಅನ್ನು ನೀವೂ ಸ್ವೀಕರಿಸುವಿರಾ ಎಂದು ಪ್ರಶ್ನಿಸಿದ್ದಾರೆ ನಟಿ ನಿಶಾ.

ಹಾಸನದ ಹುಡ್ಗೀರು ನಟ ಜೆಕೆಗೆ ಚಿವುಟಿ, ಕಚ್ಚಿ, ಹರಿದು ತಿಂದೇಬಿಟ್ರು! ಆ ದಿನ ನೆನೆದ ನಿರ್ದೇಶಕ ಆರೂರು ಜಗದೀಶ್​

ಇನ್ನು ವಿಕಾಸ್​ ಉತ್ತಯ್ಯ ಕುರಿತು ಹೇಳುವುದಾದರೆ, ಈ ಸೀರಿಯಲ್​ನಲ್ಲಿ ಇವರ ಹೆಸರು ಶಿವ. ಧಾರಾವಾಹಿಯಲ್ಲಿ ನಾಲ್ವರು ತಂಗಿಯರ ಮುದ್ದಿನ ಅಣ್ಣ ಈತ. ತಂಗಿಯರ ಪಾಲಿಗೆ ಶ್ರೀರಕ್ಷೆ. ಅವರ ಮೇಲೆ ಯಾರ ಕೆಟ್ಟ ಕಣ್ಣು ಬೀಳದಂತೆ ಜೋಪಾನ ಮಾಡುತ್ತಾನೆ. ಮೂಲತಃ ವಿಕಾಸ್​ ಕೊಡಗಿನವರು. ಕಿರುತೆರೆಗೆ ಎಂಟ್ರಿ ಕೊಡುವ ಮುನ್ನ ವಕೀಲರಾಗಿ ಕೆಲಸ ಮಾಡುತ್ತಿದ್ದರು. ಅದಕ್ಕೂ ಮುನ್ನ ಕೆಲವು ಸಿನಿಮಾಗಳಲ್ಲಿ ಅಭಿನಯಿದ್ದಾರೆ. ಮೇರಿ ಎಂಬ ಸಿನಿಮಾದಲ್ಲಿ ನಟಿಸಿದ್ದ ಇವರು, ಇತ್ತೀಚೆಗೆ 2023ರಲ್ಲಿ ದ್ವಂದ್ವ ದ್ವಯಂ, ಆನೆ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಕನಸಿನ ಮಳೆಯಾದವರು ಎಂಬ ಸೇರಿದಂತೆ ಕೆಲವು ಷಾರ್ಟ್​ ಫಿಲ್ಮಗಳಲ್ಲೂ ನಟಿಸಿದ್ದಾರೆ. ಸದ್ಯ ಇವರ ಕೈಯಲ್ಲಿ ಅಪಾಯದಲ್ಲಿ ಎಚ್ಚರಿಕೆ ಎಂಬ ಸಿನಿಮಾ ಇದೆ. ಇನ್ನು ನಿಶಾ ರವಿಕೃಷ್ಣನ್ ಕುರಿತು ಹೇಳುವುದಾದರೆ, ಇವರ ಪಾತ್ರ ಅಣ್ಣಯ್ಯದಲ್ಲಿ ಪಾರ್ವತಿ ರೋಲ್​.

ಅಣ್ಣಯ್ಯ ಸೀರಿಯಲ್​ನಲ್ಲಿಲ ತಂಗಿಯರ ಪಾತ್ರದಲ್ಲಿ ಕಾಟೇರದಲ್ಲಿ ಆರಾಧಾನಾ ರಾಮ್ ಅವರ ಬಾಲ್ಯದ ವರ್ಷನ್‌ನಲ್ಲಿ ಕಾಣಿಕೊಂಡಿದ್ದ ಅಂಕಿತಾ ಗೌಡ, ವೈಶಂಪಾಯನ ತೀರ ಮತ್ತು ಜಲಪಾತ ಸಿನಿಮಾಗಳಲ್ಲಿ ಅಭಿನಯಿಸಿರುವ ನಾಗಶ್ರೀ ಬೇಗಾರ್, ಪ್ರತೀಕ್ಷಾ ಶ್ರೀನಾಥ್ ಹಾಗೂ ಪ್ರಾಯಶಃ ಚಿತ್ರದಲ್ಲಿ ಅಭಿನಯಿಸಿರುವ ರಾಘವಿ ನಟಿಸುತ್ತಿದ್ದಾರೆ. ಇದೀಗ ಸೀರಿಯಲ್​ನ ನಟರು ನಾಲ್ಕು ಸೆಕೆಂಡ್​ ಚಾಲೆಂಜ್​ ತೆಗೆದುಕೊಂಡು ರೀಲ್ಸ್​ ಮಾಡಿದ್ದಾರೆ. ಅದನ್ನು ನಿಶಾ ಶೇರ್​ ಮಾಡಿಕೊಂಡಿದ್ದಾರೆ. 

ಗರ್ಲ್​ಫ್ರೆಂಡ್​ ಜೊತೆ ಗಂಡನ ಮದ್ವೆ ಮಾಡಿಸಲು ತಾನೇ ತಾಳಿ ರೆಡಿ ಮಾಡಿದ ಭಾಗ್ಯ! ಮುಂದೆ?

Annayya new kannada serial Artists reel #zeekannadaserials #annayya #nishamilana #nisha #vikas