Annayya Serial Zee Kannada: ʼಅಣ್ಣಯ್ಯʼ ಧಾರಾವಾಹಿಯಲ್ಲಿ ಶಿವುಗೆ ಪಾರು ಪ್ರೇಮ ನಿವೇದನೆ ಮಾಡಿದ್ದಾಳೆ. ಅದನ್ನು ಶಿವು ಒಪ್ಪದೆ ಇದ್ದಾಗ ಅವಳು ಕೆರೆಗೆ ಹಾರಿದ್ದಾಳೆ. ಹಾಗಾದರೆ ಮುಂದೆ ಏನಾಗುವುದು? 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಅಣ್ಣಯ್ಯʼ ಧಾರಾವಾಹಿಯಲ್ಲಿ ಶಿವು ಮೇಲೆ ಪಾರುಗೆ ಲವ್‌ ಆಗಿದೆ. ಆದರೆ ಇನ್ನೂ ಅವಳು ಅದನ್ನು ಗಂಡನ ಬಳಿ ಹೇಳಿಕೊಳ್ತಿಲ್ಲ. ಇನ್ನೊಂದು ಕಡೆ ಪಾರುಗೆ ನನ್ನ ಕಂಡರೆ ಪ್ರೀತಿ ಇಲ್ಲ, ತಂಗಿಯಂದಿರ ಮದುವೆ ಆದಕೂಡಲೇ ಅವಳು ನನ್ನ ಮನೆ ಬಿಟ್ಟು ಹೋಗ್ತಾಳೆ ಅಂತ ಶಿವು ಭಾವಿಸಿದ್ದಾನೆ. ಈಗ ಪಾರು ಧೈರ್ಯ ಮಾಡಿ ಶಿವುಗೆ ಪ್ರೇಮ ನಿವೇದನೆ ಮಾಡಿದ್ದಾಳೆ. 

ಕೆರೆಗೆ ಹಾರಿದ ಪಾರು! 
ಶಿವುನನ್ನು ಪಾರು ಬೆಟ್ಟದ ಮೇಲೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ತುಂಬ ಸುಂದರವಾಗಿ ಡೆಕೋರೇಟ್‌ ಮಾಡಲಾಗಿತ್ತು. ಶಿವು ಬಳಿ ಪಾರು “ಐ ಲವ್‌ ಯು” ಎಂದು ಹೇಳುತ್ತಾಳೆ. ಆಗ ಶಿವು “ಜೋಕ್‌ ಮಾಡಬೇಡ ಪಾರು” ಎಂದು ಹೇಳುತ್ತಾನೆ. ಪಾರು ಎಷ್ಟೇ ಸಲ “ಐ ಲವ್‌ ಯು ಶಿವು ಮಾವ. ನಿನ್ನ ಮೇಲೆ ನನಗೆ ಪ್ರೀತಿ ಆಗಿದೆ” ಎಂದು ಹೇಳುತ್ತಾಳೆ. ಆದರೂ ಕೂಡ ಅವನು ನಂಬೋಕೆ ರೆಡಿ ಇರೋದಿಲ್ಲ. ಹೀಗಾಗಿ ಅವಳು ಬೇರೆ ವಿಧಿ ಇಲ್ಲದೆ ನಿನಗೋಸ್ಕರ ನಾನು ಏನು ಬೇಕಿದ್ರೂ ಮಾಡ್ತೀನಿ, ನನ್ನ ಪ್ರೀತಿ ಸಾಬೀತುಪಡಿಸ್ತೀನಿ ಎಂದು ಅಲ್ಲೇ ಇದ್ದ ಕೆರೆಗೆ ಹಾರುತ್ತಾಳೆ.

ಅಪ್ಪ ಕೊಟ್ಟ 100 ರೂ. ಖರ್ಚು ಮಾಡಿದ್ದಕ್ಕೆ ಪ್ರಶ್ನೆ ಮಾಡಿದ್ರು ಅಂತ ತಿಂಗಳಿಗೆ 12 ಸಾವಿರ ದುಡಿಯಲು ಶುರು ಮಾಡ್ದೆ: ಮೋಕ್ಷಿತಾ

ವೈರಲ್‌ ಆಗ್ತಿರೋ ವಿಡಿಯೋ!
ಪಾರು ಕೆರೆಗೆ ಬಿದ್ದಕೂಡಲೇ ಶಿವು ಕೂಡ ತಕ್ಷಣ ಕೆರೆಗೆ ಹಾರಿ ಅವಳನ್ನು ಕಾಪಾಡುತ್ತಾನೆ. ಆಗ ಶಿವುಗೆ ಸತ್ಯ ಅರಿವಾಗಬಹುದು. ಪಾರು ನಿಜಕ್ಕೂ ನನ್ನ ಪ್ರೀತಿಸ್ತಾಳೆ, ನನ್ನ ಜೊತೆಯೇ ಇರುತ್ತಾಳೆ ಅಂತ ಗೊತ್ತಾದರೆ ಶಿವು ಖುಷಿಗೆ ಪಾರವೇ ಇಲ್ಲ ಎನ್ನಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಪ್ರೋಮೋ ವೈರಲ್‌ ಆಗ್ತಿದೆ, ಆದರೆ ಜೀ ವಾಹಿನಿಯು ಈ ಬಗ್ಗೆ ಮಾಹಿತಿ ಹಂಚಿಕೊಂಡ ಹಾಗಿಲ್ಲ. ಅದೇನೇ ಇರಲಿ, ಪಾರು-ಶಿವು ಒಂದಾದರೆ ವೀಕ್ಷಕರಿಗಂತೂ ಹಬ್ಬವೋ ಹಬ್ಬ. ಈ ದಿನಕ್ಕೋಸ್ಕರ ಅವರು ಕಾಯುತ್ತಿದ್ದಾರೆ. 

ಪಾರು ಧಾರಾವಾಹಿಯಲ್ಲಿ ಶತ್ರು, ರಿಯಲ್‌ನಲ್ಲಿ ಪ್ರಾಣ ಸ್ನೇಹಿತೆ; ಮಾನ್ಸಿ ಜೋಶಿ ಮದುವೆಯಲ್ಲಿ ಮೋಕ್ಷಿತಾ ಪೈ

ಪಾರು ಏನು ಮಾಡ್ತಾಳೆ? 
ʼಅಣ್ಣಯ್ಯʼ ಧಾರಾವಾಹಿಯಲ್ಲಿ ಮಾವನ ಮಗಳು ಪಾರು ಕಂಡ್ರೆ ಶಿವುಗೆ ತುಂಬ ಇಷ್ಟ. ಆದರೆ ಅವಳು ಮಾತ್ರ ಬೇರೆ ಹುಡುಗನನ್ನು ಪ್ರೀತಿಸಿದ್ದಳು. ತನ್ನ ಅಪ್ಪ ಈ ಮದುವೆಗೆ ಒಪ್ಪಲ್ಲ ಎಂದು ಶಿವು ಸಹಾಯದಿಂದ ಅವಳು ಓಡಿಹೋಗಲು ರೆಡಿಯಾಗಿದ್ದಳು. ಆದರೆ ಆ ಹುಡುಗ ಪಾರುಗೆ ಕೈಕೊಟ್ಟು ಮೋಸ ಮಾಡಿದ. ಪಾರು, ಶಿವು ಜೊತೆ ಓಡಿ ಹೋದಳು ಅಂತ ಸುದ್ದಿ ಹಬ್ಬಿತು. ಹೀಗಾಗಿ ಶಿವು-ಪಾರು ಮದುವೆ ಮಾಡಿದರು. ಶಿವು ತಂಗಿಯಂದಿರ ಮದುವೆ ಆದ್ಮೇಲೆ ಮನೆ ಬಿಟ್ಟು ಹೋಗ್ತೀನಿ ಅಂತ ಪಾರು ಆರಂಭದಲ್ಲಿ ಹೇಳಿದ್ದಳು. ಆದರೆ ಈಗ ಪಾರುಗೆ ಶಿವು ಮೇಲೆ ಲವ್‌ ಆಗಿದೆ. ಈ ಜೋಡಿ ಒಂದಾಗಲಿದೆಯಾ ಎಂದು ಕಾದು ನೋಡಬೇಕಿದೆ. ಪಾರು ತಂದೆಯೇ ಶಿವು ಪಾಲಿಗೆ ವಿಲನ್.‌ ಶಿವು ತಂದೆ ಆಸ್ತಿಯನ್ನೆಲ್ಲ ಪಾರು ತಂದೆ ಕಬಳಿಸಿದ್ದಾರೆ. ಇದಕ್ಕೆಲ್ಲ ಪಾರು ಏನು ಮಾಡುತ್ತಾಳೆ ಎಂದು ಕಾದು ನೋಡಬೇಕಾಗಿದೆ.

ಪಾತ್ರಧಾರಿಗಳು
ಶಿವು ಪಾತ್ರದಲ್ಲಿ ವಿಕಾಶ್‌ ಉತ್ತಯ್ಯ, ಪಾರು ಪಾತ್ರದಲ್ಲಿ ಭೂಮಿಕಾ ರಮೇಶ್‌ ಅವರು ನಟಿಸುತ್ತಿದ್ದಾರೆ. ಅಂದಹಾಗೆ ನಾಗೇಂದ್ರ ಶಾ, ಸುಷ್ಮಿತ್‌ ಜೈನ್‌ ಕೂಡ ಈ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. 

View post on Instagram