'ಸೂರ್ಯವಂಶ'ದ ಸತ್ಯಮೂರ್ತಿ ಮೊಮ್ಮಗನಾಗಿ ಕಿರುತೆರೆಗೆ ಮರಳಿದ ಅನಿರುದ್ಧ್; ಜೊತೆಜೊತೆಯಲಿ ಬಳಿಕ ಹೊಸ ಧಾರಾವಾಹಿ
'ಜೊತೆಜೊತೆಯಲಿ' ಧಾರಾವಾಹಿ ನಂತರ ಇದೀಗ ನಟ ಅನಿರುದ್ಧ್ ಜಾಟ್ಕರ್, 'ಸೂರ್ಯವಂಶ' ಧಾರಾವಾಹಿ ಮೂಲಕ ಕಿರುತೆರೆಗೆ ಹಿಂತಿರುಗುತ್ತಿದ್ದಾರೆ. ಡಾ. ವಿಷ್ಣು ಅಭಿನಯದ ಜನಪ್ರಿಯ ಚಲನಚಿತ್ರ 'ಸೂರ್ಯವಂಶ'ದ ಸತ್ಯಮೂರ್ತಿಯ ಮೊಮ್ಮಗನ ಪಾತ್ರವನ್ನು ಅವರು ಇದರಲ್ಲಿ ನಿರ್ವಹಿಸಲಿದ್ದಾರೆ.
ಕಡೆಯದಾಗಿ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ನಟ ಅನಿರುದ್ಧ್ ಜಾಟ್ಕರ್, ಒಂದು ಸಣ್ಣ ಗ್ಯಾಪ್ ಬಳಿಕ ಇದೀಗ ಕಿರುತೆರೆಗೆ ಮರಳುತ್ತಿದ್ದಾರೆ. ಈ ಬಾರಿ'ಸೂರ್ಯವಂಶ' ಧಾರಾವಾಹಿಯಲ್ಲಿ ನಾಯಕ ನಟನಾಗಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ.
1999ರಲ್ಲಿ ಬಿಡುಗಡೆಯಾದ ಎಸ್. ನಾರಾಯಣ್ ನಿರ್ದೇಶನದ ಬ್ಲಾಕ್‌ಬಸ್ಟರ್ ಚಿತ್ರ 'ಸೂರ್ಯವಂಶ'ವನ್ನು ಮೆಚ್ಚದವರು ಯಾರು? ಚಿತ್ರದಲ್ಲಿ ನಾಯಕ ನಟ ಮತ್ತು ನಟನ ತಂದೆ(ಸತ್ಯಮೂರ್ತಿ) ಎರಡೂ ಪಾತ್ರಗಳಲ್ಲಿ ವಿಷ್ಣುವರ್ಧನ್ ಅದ್ಭುತವಾಗಿ ಅಭಿನಯಿಸಿ ಜನಮನ ಗೆದ್ದಿದ್ದರು. ಅದರಲ್ಲಿ ನಾಯಕ ನಟನಿಗೆ ಪುಟ್ಟ ಮಗನೊಬ್ಬ ಇದ್ದ. ಆತನನ್ನು ಕದ್ದು ಮುಚ್ಚಿ ಭೇಟಿಯಾಗುತ್ತಿದ್ದ ಅಜ್ಜ ಸತ್ಯಮೂರ್ತಿಯ ಕತೆಯೂ ಸೊಗಸಾಗಿತ್ತು. ಈಗ ಇದೇ ಸತ್ಯಮೂರ್ತಿಯ ಮೊಮ್ಮಗನಾಗಿ ಅನಿರುದ್ಧ್ 'ಸೂರ್ಯವಂಶ' ಧಾರಾವಾಹಿಯಲ್ಲಿ ಪಾತ್ರ ನಿರ್ವಹಿಸಲಿದ್ದಾರೆ.
ಒಟಿಟಿ ಬಿಡುಗಡೆಗೆ ರೆಡಿಯಾದ 2023ರ ಬ್ಲಾಕ್‌ಬಸ್ಟರ್ ಚಿತ್ರ 'ದಿ ಕೇರಳ ಸ ...
ಧಾರಾವಾಹಿಯು ಉದಯ ಟಿವಿಯಲ್ಲಿ ಪ್ರಸಾರವಾಗಲಿದ್ದು, ಅನಿರುದ್ಧ್ ಜಟ್ಕರ್ ಅವರು 'ಸೂರ್ಯವಂಶ'ದ ಧಾರಾವಾಹಿ ರೂಪಾಂತರದಲ್ಲಿ ತಮ್ಮ ಚಿತ್ರಣದೊಂದಿಗೆ ಪರದೆಯ ಮೇಲೆ ಬೆಳಕು ಚೆಲ್ಲಲಿದ್ದಾರೆ.
ಚಾನೆಲ್ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ, ಸೂರ್ಯವಂಶ ಚಿತ್ರದ ಲಿಂಕನ್ನು ಧಾರಾವಾಹಿಗೆ ನೀಡಿರುವುದನ್ನು ಕಾಣಬಹುದು. ಇದರಲ್ಲಿ ನಾಯಕಿಯಾಗಿ ಖ್ಯಾತ ನಟಿ ನಯನ ರಾಜ್ ಅಭಿನಯಿಸುತ್ತಿದ್ದಾರೆ.
ಪ್ರೋಮೋ ನೋಡಿದ ವೀಕ್ಷಕರು ಧಾರಾವಾಹಿ ಪ್ರಸಾರಕ್ಕೆ ಕಾತುರದಿಂದ ಕಾಯುತ್ತಿದ್ದು, ಪ್ರಸಾರದ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಘೋಷಿಸಬೇಕಾಗಿದೆ.