ಎಸ್. ನಾರಾಯಣ್ ಜೊತೆ ಕೈ ಜೋಡಿಸಿ 'ಸೂರ್ಯವಂಶ'ಕ್ಕೆ ಎಂಟ್ರಿ ಕೊಟ್ಟ ಅನಿರುದ್ಧ್; ಸಿಂಹ ಘರ್ಜನೆ ಶುರು
ಮತ್ತೆ ಕಿರುತೆರೆಗೆ ಮರುಳಿದ ಅನಿರುದ್ಧ್. ಸೂರ್ಯವಂಶ ಕಥೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎನ್. ನಾರಾಯಣ್...
ಕನ್ನಡ ಚಿತ್ರರಂಗ ಹಾಗೂ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟ ಅನಿರುದ್ಧ್ ಮತ್ತು ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಹೊಸ ಧಾರಾವಾಹಿ ' ಸೂರ್ಯವಂಶ'ಕ್ಕೆ ಒಂದಾಗಿದ್ದಾರೆ. ಇಬ್ಬರೂ ಡೆಡ್ಲಿ ಕಾಂಬಿನೇಷನ್ ಎಂದೇಳುತ್ತಿರುವ ನೆಟ್ಟಿಗರು ನಿರೀಕ್ಷೆ ಹೆಚ್ಚಿಗೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಶೂಟ್‌ಗಳು ಸಖತ್ ವೈರಲ್ ಆಗುತ್ತಿದೆ.
'ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತಾ ಇದ್ದೇನೆ. ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್ ನಾರಾಯಣ್ ಸರ್ ಅವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ 'ಸೂರ್ಯವಂಶ'ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತದೆ ಅನ್ನೋ ಭರವಸೆ ನನಗಿದೆ' ಎಂದು ಅನಿರುದ್ಧ ಬರೆದುಕೊಂಡಿದ್ದಾರೆ.
ನೇರಳೆ ಬಣ್ಣದ ಸೂಟ್‌ನಲ್ಲಿ ಅನಿರುದ್ಧ್ ಕಾಣಿಸಿಕೊಂಡರೆ, ವೈಟ್ ಆಂಡ್ ವೈಟ್ ಪಂಚೆಯಲ್ಲಿ ಎಸ್ ನಾರಾಯಣ್ ಕಾಣಿಸಿಕೊಂಡಿದ್ದಾರೆ. ಎರಡು ಡೆಡ್ಲಿ ಕಾಂಬಿನೇಷನ್ ಡಿಫರೆಂಟ್ ಲುಕ್‌ಗಳು ಕಥೆ ಏನೆಂದು ಗೆಸ್ ಮಾಡುವುದರಲ್ಲಿ ಅಭಿಮಾನಿಗಳು ಬ್ಯುಸಿಯಾಗಿದ್ದಾರೆ.
ಇದೇ ಹೆಸರಿನಲ್ಲಿ ಸಿನಿಮಾನೂ ಇದೆ:
1999ರಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ಅಭಿನಯಿಸಿರುವ ಸೂರ್ಯವಂಶ ಚಿತ್ರಕ್ಕೆ ಆಗ ಎಸ್.ನಾರಾಯಣ್ ನಿರ್ದೇಶನ ಮಾಡಿದ್ದರು. ಆ ಕಾಲದಲ್ಲಿ ಭರ್ಜರಿ ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ ಮಾಡಿತ್ತು. ಈಗ ಅದೇ ಹಸರನ್ನು ಇಟ್ಟುಕೊಂಡು ಧಾರಾವಾಹಿ ಮಾಡುತ್ತಿರುವ ಕಾರಣ ದಾದರನ್ನು ನಿಮ್ಮಲ್ಲಿ ಕಾಣುತ್ತೀವಿ ಎಂದು ಅನಿರುದ್ಧ್‌ಗೆ ಹೇಳುತ್ತಿದ್ದಾರೆ.
ಮಾಸ್ಟರ್ ಸಾಂಗ್‌ಗೆ ಮಗನ 'ಜೊತೆಜೊತೆ'ಯಲಿ ಹೆಜ್ಜೆ ಹಾಕಿದ ಅನಿರುದ್ಧ್
ಜೊತೆ ಜೊತೆಯಲಿ ಗುಡ್ ಬೈ:
ಕೆಲವೊಂದು ವೈಯಕ್ತಿಕ ಕಾರಣಗಳಿಂದ ಅನಿರುದ್ಧ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬಂದಿದ್ದರು. ನಿರ್ದೇಶಕರು ಮತ್ತು ನಟನ ನಡುವೆ ಮನಸ್ತಾಪವಿತ್ತು. ಅನಿರುದ್ಧ್ ವಿರುದ್ಧ ಕೆಲವೊಂದು ಆರೋಪಗಳು ಕೇಳಿ ಬಂದಿತ್ತು. ಆ ಸಮಯಲ್ಲಿ ಅನಿರುದ್ಧ್ ಪರ ನಿಂತಿದ್ದು ಅಭಿಮಾನಿಗಳು. ನಮ್ಮ ನಟನ ಮೇಲೆ ಏನ್ ಏನೋ ಆರೋಪ ಮಾಡಬಾರದು ಕಲೆಗೆ ಗೌರವ ಕೊಡುವ ವ್ಯಕ್ತಿ ಅವರ, ಮತ್ತೊಮ್ಮೆ ಅವಕಾಶ ಕೊಡಬೇಕು ಆರ್ಯವರ್ಧನ್ ಇಲ್ಲದೆ ಧಾರಾವಾಹಿ ನಾವು ನೋಡುವುದಿಲ್ಲ ಎಂದು ಹೋರಾಟ ಮಾಡಿದ್ದರು.
ಹೊಸ ಮನೆಗೆ ಕಾಲಿಟ್ಟ ನಟ.
ಜಯನರಗದಲ್ಲಿ ಭಾರತಿ ವಿಷ್ಣುವರ್ಧನ್ ಹೊಸ ಮನೆ ಕಟ್ಟಿಸಿ ಅದ್ಧೂರಿಯಾಗಿ ಗೃಹಪ್ರವೇಶ ಮಾಡಿದ್ದರು. ಡಾ. ವಿಷ್ಣುವರ್ಧನ್ ಹಳೆ ಮನೆ ಇರುವ ಸ್ಥಳದಲ್ಲಿ ಭವ್ಯಬಂಗಲೆ ನಿರ್ಮಾಣ ಮಾಡಿ ವಲ್ಮೀಕ ಎಂದು ಹೆಸರಿಟ್ಟಿದ್ದಾರೆ. ಕನ್ನಡ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಭಾಗಿಯಾಗಿ ಶುಭ ಹಾರೈಸಿದ್ದರು. ಮನೆ ಹೊರಗಿನಿಂದ ನೋಡಲು ತುಂಬಾನೇ ವಿಭಿನ್ನವಾಗಿದ್ದು ಎಲ್ಲಿ ನೋಡಿದ್ದರು ಸಾಹಸ ಸಿಂಹ ಅವರ ಫೋಟೋ ಕಾಣಬಹುದು.
ಮಕ್ಕಳು ಕೂಡ ಸೆಲೆಬ್ರಿಟಿಗಳು:
ಅನಿರುದ್ಧ್‌ಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮಗನ ಹೆಸರು ಜೇಷ್ಠವರ್ಧನ್ ಮಗಳ ಹೆಸರು ಶ್ಲೋಕ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಅಕ್ಟಿವ್ ಅಗಿದ್ದು ತಂದೆ ಜೊತೆ ಸೇರಿಕೊಂಡಿ ಟ್ರೆಂಡಲ್ಲಿರುವ ಹಾಡುಗಳಿಗೆ ರೀಲ್ಸ್ ಮಾಡುತ್ತಾರೆ. ವಿದ್ಯಾಭ್ಯಾದಸಲ್ಲಿ ತೊಡಗಿಸಿಕೊಂಡಿರುವ ಜೇಷ್ಠವರ್ಧನ್‌ಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಯಾವ ಬಾಲಿವುಡ್ ಹೀರೋ ಕಡಿಮೆ ಇಲ್ಲ ಎಂದು ಫೋಸ್ಟ್ ಕಾಮೆಂಟ್ ಮಾಡುತ್ತಾರೆ ಫ್ಯಾನ್ಸ್.