Asianet Suvarna News Asianet Suvarna News

ಶೀಘ್ರ ಶುರುವಾಗಲಿದೆ ಬಿಗ್​ಬಾಸ್! ಸಲ್ಮಾನ್​ ಖಾನ್​ ಔಟ್​- ಈ ಜಾಗಕ್ಕೆ ಹೊಸ ಎಂಟ್ರಿ ಯಾರು ಗೊತ್ತಾ?

ಶೀಘ್ರ ಶುರುವಾಗಲಿದೆ ಬಿಗ್​ಬಾಸ್! ಆದರೆ ಈ ಬಾರಿ ಸಲ್ಮಾನ್​ ಖಾನ್​ ಕಾರ್ಯಕ್ರಮ ನಡೆಸಿಕೊಡುತ್ತಿಲ್ಲ. ಈ ಜಾಗಕ್ಕೆ ಹೊಸ ಎಂಟ್ರಿ ಯಾರು ಗೊತ್ತಾ?
 

Anil Kapoor will host the third season of Bigg Boss OTT instead of Salman Khan promo released suc
Author
First Published May 31, 2024, 9:41 PM IST

ವಿವಾದಾತ್ಮಕ ಷೋ ಎಂದೇ ಫೇಮಸ್​ ಆಗಿರೋ ಬಿಗ್​ಬಾಸ್​ ಮೊದಲು ಶುರುವಾಗಿದ್ದು ಹಿಂದಿಯಲ್ಲಿ. ಇದಾಗಲೇ ಹಿಂದಿ ಬಿಗ್​ಬಾಸ್​ 17 ಸೀಸನ್​ಗಳನ್ನು ಮುಗಿಸಿದ್ದು, 18ನೇ ಸೀಸನ್​ಗೆ ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆಯೇ, ಓಟಿಟಿ ಬಿಗ್​ಬಾಸ್​ ಕೂಡ ಮಾಡಲಾಗಿದೆ ಓಟಿಟಿಯ ಎರಡು ಸೀಸನ್​ಗಳು ಇದಾಗಲೇ ಮುಗಿದು 3ನೇ ಸೀಸನ್​ಗೆ ಸಜ್ಜಾಗುತ್ತಿದ್ದಾರೆ. ಬಿಗ್​ಬಾಸ್​ 17 ಸೀಸನ್​ಗಳನ್ನೂ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಅವರೇ ನಡೆಸಿಕೊಟ್ಟಿದ್ದರು. ಆದರೆ ಓಟಿಟಿಯಲ್ಲಿ ಸ್ವಲ್ಪ ಬದಲಾವಣೆ ಆಗಿದ್ದು, ಇದೀಗ ಮತ್ತೊಂದು ಕುತೂಹಲದ ಮಾಹಿತಿ ಹೊರ ಬಂದಿದೆ.

ಬಿಗ್​ ಬಾಸ್​ ಒಟಿಟಿ ಮೊದಲ ಸೀಸನ್​ ಅನ್ನು ಕರಣ್​ ಜೋಹರ್​ ನಿರೂಪಣೆ ಮಾಡಿದ್ದರು. ಆದರೆ ಎರಡನೇ ಸೀಸನ್​ಗೆ ಸಲ್ಮಾನ್​ ಖಾನ್​ ಎಂಟ್ರಿ ಆಗಿತ್ತು. ಮೂರನೇ ಸೀಸನ್​ ಅನ್ನು ಕೂಡ ಸಲ್ಲುಭಾಯಿನೇ ನಡೆಸಿಕೊಡುವುದಾಗಿ ಹೇಳಲಾಗಿತ್ತು. ಆದರೆ ಇದೀಗ ಹೊಸ ಪ್ರೊಮೋ ರಿಲೀಸ್​ ಆಗಿದೆ. ಅದರಲ್ಲಿ ಸಲ್ಮಾನ್​ ಖಾನ್​ ಹೆಸರು ಇಲ್ಲ. ಆದರೆ ಸೋನಂ ಕಪೂರ್​ ಸೋಷಿಯಲ್​ ಮೀಡಿಯಾದಲ್ಲಿ ಪ್ರೊಮೋ ಶೇರ್​ ಮಾಡಿಕೊಂಡಿದ್ದಾರೆ. ಇದರಲ್ಲಿ ಯಾರ ಮುಖವೂ ಕಾಣಿಸುತ್ತಿಲ್ಲ. ಆದರೆ ಸೋನಂ ಕಪೂರ್​ ಅವರು ಅನಿಲ್​ ಕಪೂರ್​ ಪುತ್ರಿಯಾಗಿರುವ ಕಾರಣ, ಈ ಷೋ ಅನ್ನು ಅನಿಲ್​ ಕಪೂರ್​ ನಿರ್ವಹಿಸಲಿದ್ದಾರೆ ಎನ್ನುವುದು ಬಹುತೇಕ ಖಚಿತವಾಗಿದೆ.

ಆರು ವರ್ಷಗಳ ಲಿವ್‌ ಇನ್‌ ಸಂಬಂಧಕ್ಕೆ ಬಿತ್ತು ಬ್ರೇಕ್‌? ಮಲೈಕಾ- ಅರ್ಜುನ್‌ ನಡುವೆ ಆಗಿದ್ದೇನು?

 ಇದಕ್ಕೆ ಕಾರಣವೂ ಇದೆ. ಈಗ ಬಿಡುಗಡೆ ಆಗಿರುವ ಈ ಪ್ರೋಮೋದಲ್ಲಿ ಅನಿಲ್​ ಕಪೂರ್​ ಅವರ ಮುಖ ಕಾಣಿಸುತ್ತಿಲ್ಲವಾದರೂ ಅವರ ಧ್ವನಿ ಇದೆ. ಜೊತೆಗೆ ಮಗಳು ಸೋನಂ ಇದನ್ನು ಶೇರ್​ ಮಾಡಿಕೊಂಡಿದ್ದಾರೆ.  ‘ಪ್ರತಿಭಾವಂತ, ಪರಿಶ್ರಮಿ ಮತ್ತು ಹ್ಯಾಂಡ್ಸಮ್​ ವ್ಯಕ್ತಿಯನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಕ್ಯಾಪ್ಷನ್​ ನೀಡಿದ್ದಾರೆ. ಇವೆಲ್ಲವುಗಳಿಂದ ಅನಿಲ್​ ಕಪೂರ್​ ಅವರೇ ಈ ಷೋ ನಡೆಸಿಕೊಡುತ್ತಾರೆ ಎನ್ನಲಾಗುತ್ತಿದೆ. 

ಇನ್ನು ಸಲ್ಮಾನ್​ ಖಾನ್​ ಕುರಿತು ಹೇಳುವುದಾದರೆ,  ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಸಿಕಂದರ್​’ ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ‘ಬಿಗ್​ ಬಾಸ್​ ಒಟಿಟಿ ಸೀಸನ್​ 3’ ನಿರೂಪಣೆಯ ಜವಾಬ್ದಾರಿ ಹೊತ್ತುಕೊಂಡರೆ ಸಮಯ ಹೊಂದಿಸುವುದು ಸುಲಭವಲ್ಲ. ಹಾಗಾಗಿ ಅವರು ಒಟಿಟಿ ವರ್ಷನ್​ನ ನಿರೂಪಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ನಿರ್ಮಾಪಕರಿಗೆ 2.55 ಕೋಟಿ ರೂಪಾಯಿ ಪಂಗನಾಮ ಹಾಕಿದ್ರಾ ಸನ್ನಿ ಡಿಯೋಲ್‌? ಏನಿದು ಆರೋಪ?
 

Latest Videos
Follow Us:
Download App:
  • android
  • ios