ಸಖಿಯೇ ಸಖಿಯೇಗೆ ಆ್ಯಂಕರ್ಸ್ ಶ್ವೇತಾ-ಅಕುಲ್ ಭರ್ಜರಿ ಸ್ಟೆಪ್: ಜಗ್ಗಣ್ಣ ಕಂಡುಬಿಟ್ರು ಎಂದ ಫ್ಯಾನ್ಸ್
ಕೋಟಿ ಚಿತ್ರದ ಸಖಿಯೇ ಸಖಿಯೇಗೆ ಆ್ಯಂಕರ್ಸ್ ಶ್ವೇತಾ-ಅಕುಲ್ ಭರ್ಜರಿ ಸ್ಟೆಪ್ ಹಾಕಿದ್ದು ಥಹರೇವಾರಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ.
ಕೋಟಿ ಸಿನಿಮಾದ ಸಖಿಯೇ ಸಖಿಯೇ ಇದೀಗ ಸಕತ್ ಫೇಮಸ್ ಆಗಿದೆ. ಈ ಚಿತ್ರದ ಪ್ರಮೋಷನ್ಗಾಗಿ ಇದಾಗಲೇ ಹಲವಾರು ಸ್ಟಾರ್ ನಟ-ನಟಿಯರು ರೀಲ್ಸ್ ಮಾಡಿದ್ದಾರೆ. 'ಕೋಟಿ' ಎಂಬ ಒಬ್ಬ ಸಾಮಾನ್ಯ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೋಟಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ರೂಪಾಯಿ ದುಡಿದು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ. ಈ ಕಥಾಹಂದರದ 'ಕೋಟಿ' ಸಿನಿಮಾ ಜನಮೆಚ್ಚುಗೆ ಗಳಿಸಿದ್ದು, ಅದರಲ್ಲಿನ ಸಖಿಯೇ ಸಖಿಯೇ ಹಾಡು ಭಾರಿ ವೈರಲ್ ಆಗಿದೆ.
ಇದೀಗ ಈ ಹಾಡಿಗೆ ಆ್ಯಂಕರ್ಗಳಾದ ಶ್ವೇತಾ ಚೆಂಗಪ್ಪ ಮತ್ತು ಅಕುಲ್ ಬಾಲಾಜಿ ರೀಲ್ಸ್ ಮಾಡಿದ್ದಾರೆ. ಜೀ ಕನ್ನಡದ ಮಹಾನಟಿ ಡಾನ್ಸ್ ರಿಯಾಲಿಟಿ ಷೋನಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಇಬ್ಬರು ನಿರೂಪಕರು ಸಕತ್ ರೀಲ್ಸ್ ಮಾಡಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ. ಇವರಿಬ್ಬರೂ ಹೇಳಿ ಕೇಳಿ ಫೇಮಸ್ ಆ್ಯಂಕರ್ಗಳು. ಇದೀಗ ರೀಲ್ಸ್ ಮಾಡುವ ಮೂಲಕವೂ ಸೈ ಎನಿಸಿಕೊಂಡಿದ್ದಾರೆ. ಶೂಟಿಂಗ್ ಸೆಟ್ನಲ್ಲಿಯೇ ರೀಲ್ಸ್ ಮಾಡಿದ್ದರಿಂದ ಅತ್ತ ಕಡೆಯಿಂದ ವ್ಯಾನೆಟಿ ವ್ಯಾನ್ನಿಂದ ನಟ ಜಗ್ಗೇಶ್ ಅವರು ಇಳಿದು ಬರುವುದು ಕೂಡ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಜಗ್ಗಣ್ಣ ಸರ್ ಕಾಣಿಸ್ತಿದ್ದಾರೆ ಎಂದೇ ಹಲವರು ಕಮೆಂಟ್ ಮಾಡುತ್ತಿದ್ದಾರೆ.
ಮದ್ವೆಗೆ 60 ಲಕ್ಷ ಖರ್ಚು ಮಾಡಿಬಿಟ್ಟೆ, ದೊಡ್ಡ ಪಾಠ ಕಲಿಸಿತು ಲೈಫ್... ಚಂದನ್ ಶೆಟ್ಟಿ ಮನದಾಳದ ಮಾತು...
ಅಕುಲ್ ಬಾಲಾಜಿ ಕೂಡ ಆ್ಯಂಕರ್ ನಿಂಗ್‌ನಲ್ಲಿ ಸಕತ್ ಫೇಮಸ್. ಅಗಥ, ಗುಪ್ತ ಗಾಮಿನಿ, ಯಾವ ಜನ್ಮದ ಮೈತ್ರಿ, ಜಗಳಗಂಟಿಯರು ಸೇರಿದಂತೆ ಕೆಲ ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಹಳ್ಳಿ ಹೈದ ಪ್ಯಾಟೆಗ್ ಬಂದ, ಪ್ಯಾಟೆ ಮಂದಿ ಕಾಡಿಗ ಬಂದ್ರು ಸೇರಿದಂತೆ 30ಕ್ಕೂ ಹೆಚ್ಚು ಟಿವಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. 2007 ರಲ್ಲಿ ತೆರೆಕಂಡ `ಮಿಲನ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಬೆಳ್ಳಿ ಪರದೆಗೆ ಎಂಟ್ರಿಕೊಟ್ಟಿರುವ ಅಕುಲ್ ಅವರು, 2008 ರಲ್ಲಿ ತೆರೆಕಂಡ `ಆತ್ಮೀಯ’ ಚಿತ್ರದ ಮೂಲಕ ನಾಯಕ ನಟನಾಗಿದ್ದಾರೆ. ವಾಸ್ತವ, ನೆರಮು, ಬನ್ನಿ, ಮೈನ, ಪ್ಯಾರ್ಗೆ ಆಗ್ಬಿಟ್ಟೈತೆ, ಲೂಸ್ಗಳು, ಕ್ರೇಜಿಸ್ಟಾರ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಇನ್ನು ಶ್ವೇತಾ ಅವರು, ಎಸ್. ನಾರಾಯಣ ನಿರ್ದೇಶನದ ಸುಮತಿ ಧಾರಾವಾಹಿಯ ಮೂಲಕ ಕಿರುತೆರೆ ಎಂಟ್ರಿ ಕೊಟ್ಟವರು. 2006 ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ಕಾದಂಬರಿ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದವರು. ಅಲ್ಲಿಂದ ಅನೇಕ ಸೀರಿಯಲ್ಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ‘ಸುಮತಿ’, ‘ಕಾದಂಬರಿ’, ‘ಸುಕನ್ಯಾ’, ‘ಅರುಂಧತಿ’, ‘ಸಂಗೀತಾ’ ಮುಂತಾದ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಶ್ವೇತಾ ಚಂಗಪ್ಪ ಅವರು ವೀಕ್ಷಕರನ್ನು ರಂಜಿಸಿದ್ದಾರೆ. ಧಾರಾವಾಹಿ ಮಾತ್ರವಲ್ಲದೇ ಅನೇಕ ರಿಯಾಲಿಟಿ ಶೋಗಳಲ್ಲೂ ಅವರು ಭಾಗವಹಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 2’, ‘ಹಾಕು ಹೆಜ್ಜೆ ಹಾಕು’, ‘ಕುಣಿಯೋಣು ಬಾರ’, ‘ಡಾನ್ಸಿಂಗ್ ಸ್ಟಾರ್’, ‘ಮಜಾ ಟಾಕೀಸ್’ ಮುಂತಾದ ಕಾರ್ಯಕ್ರಮಗಳಿಂದ ಅವರು ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಕನ್ನಡ ಬಿಗ್ ಬಾಸ್ 2 ನೇ ಸೀಸನ್ ನಲ್ಲಿ ಸ್ಪರ್ಧಿಯಾಗಿ ಶ್ವೇತಾ ಚಂಗಪ್ಪ ಭಾಗವಹಿಸಿದ್ದರು. ಇವರು ನಾಲ್ಕನೇ ಸ್ಥಾನಗಳಿಸಿದರು. ನಂತರ ಮಜಾ ಟಾಕೀಸ್ ರಾಣಿಯಾಗಿ ಎಲ್ಲರಿಗೂ ಇಷ್ಟವಾಗಿದ್ದರು. ಮೂರು ಬಾರಿ ಜೀ ಕನ್ನಡದ ಬೆಸ್ಟ್ ಆ್ಯಂಕರ್ ಪ್ರಶಸ್ತಿ ಪಡೆದಿದ್ದಾರೆ.
ನಿವೇದಿತಾ ಮತ್ತೆ ಪ್ರತ್ಯಕ್ಷ! ಏನಾದ್ರೂ ಮಾಡ್ಕೋ ತಾಯಿ... ಶೆಡ್ ಸಹವಾಸ ಬೇಡಪ್ಪಾ ಅನ್ನೋದಾ ನೆಟ್ಟಿಗರು?
ಇನ್ನು ಚಿತ್ರರಂಗದಲ್ಲಿಯೂ ಶ್ವೇತಾ ಸಾಕಷ್ಟು ಹೆಸರು ಮಾಡಿದ್ದಾರೆ. ತಂಗಿಗಾಗಿ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ನಟಿ, ವಿಷ್ಣುವರ್ಧನ ಅವರ ಅಭಿನಯದ ವರ್ಷ ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ. ಕೃಷ್ಣನ್ ಮ್ಯಾರೇಜ್ ಸ್ಟೋರಿ, ಗನ್ ಮುಂತಾದ ಚಿತ್ರಗಳಲ್ಲಿ ಕಂಠದಾನ ಕಲಾವಿದೆಯಾಗಿಯೂ ವಿಶೇಷ ಮನ್ನಣೆ ಗಿಟ್ಟಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಶಿವರಾಜ್ ಕುಮಾರ್ ಅವರ 125ನೇ ಸಿನಿಮಾ ವೇದಾದಲ್ಲಿಯೂ ನಟಿಸಿರೋ ಶ್ವೇತಾ ಅವರು ಅಲ್ಲಿ ಪಾರಿ ಆಗಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಅರುಂಧತಿ ಧಾರಾವಾಹಿಯ ನಟನೆಗೆ ಶ್ವೇತಾ ಅವರಿ, ಕರ್ನಾಟಕ ಸರಕಾರದ ಮಧ್ಯಂಸನ್ಮಾನ ಪ್ರಶಸ್ತಿ ಲಭಿಸಿದೆ.