Asianet Suvarna News Asianet Suvarna News

ನಿವೇದಿತಾ ಮತ್ತೆ ಪ್ರತ್ಯಕ್ಷ! ಏನಾದ್ರೂ ಮಾಡ್ಕೋ ತಾಯಿ... ಶೆಡ್‌ ಸಹವಾಸ ಬೇಡಪ್ಪಾ ಅನ್ನೋದಾ ನೆಟ್ಟಿಗರು?

ಚಂದನ್‌ ಶೆಟ್ಟಿ ಜೊತೆ ಡಿವೋರ್ಸ್‌ ಆದ ಬಳಿಕ ಸೈಲೆಂಟ್‌ ಆಗಿದ್ದ ನಿವೇದಿತಾ ಗೌಡ ಮತ್ತೆ ರೀಲ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ನೆಟ್ಟಿಗರು ಹೇಳ್ತಿರೋದೇನು?
 

Nivedita Gowda who was silent after divorce with Chandan Shetty  is back on the reels fans react suc
Author
First Published Jun 20, 2024, 4:34 PM IST

 ಕಳೆದ ಕೆಲವು ತಿಂಗಳುಗಳಿಂದ ದಿನೇ ದಿನೇ ಹಾಟ್‌ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಿಗ್‌ಬಾ‌ಸ್‌ ಬೆಡಗಿ, ಗೊಂಬೆ ಎಂದೇ ಕರೆಸಿಕೊಳ್ತಿರೋ ನಿವೇದಿತಾ ಗೌಡ, ಡಿವೋರ್ಸ್‌ ಕೇಸ್‌ ಬಳಿಕ ಕೆಲ ದಿನ ಸೈಲೆಂಟ್‌ ಆಗಿದ್ರು. ಈಗ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟ ದಿನಗಳವರೆಗೆ ಸಕತ್‌ ಟ್ರೋಲ್‌ ಮಾಡುತ್ತಿದ್ದರೆಲ್ಲ ಈಗ ಗಪ್‌ಚುಪ್‌ ಆಗಿದ್ದಾರೆ. ಕಳೆದ ವಾರ ನಿವೇದಿತಾ ಮತ್ತು ಚಂದನ್‌ ಶೆಟ್ಟಿ ಡಿವೋರ್ಸ್ ಪ್ರಕರಣ ಸಕತ್‌ ಸದ್ದು ಮಾಡಿತ್ತು. ಏಕಾಏಕಿ ಅಭಿಮಾನಿಗಳಿಗೆ ದಂಪತಿ ಶಾಕ್‌ ಕೊಟ್ಟಿದ್ದರು. ಸ್ವಲ್ಪ ದಿನ ಸುಮ್ಮನೆ ಇದ್ದ ನಟಿ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು ರೀಲ್ಸ್‌ ಮಾಡಿದ್ದಾರೆ. ಈ ಬಾರಿ ನಿವೇದಿತಾ ಸಿಂಪಲ್‌ ಡ್ರೆಸ್‌ನಲ್ಲಿ ಮಿಂಚಿದ್ದಾರೆ. 

ಕೆಲವರು ನಿನ್ನನ್ನು ನೋಡಿ ಏನೋ ಹೇಳಬೇಕು ಅಂದುಕೊಂಡೆ, ಆದ್ರೆ ಶೆಡ್‌ ನೆನಪಾಗಿ ಅದ್ರ ಸಹವಾಸ ಬೇಡ ಅಂತ ಸುಮ್ಮನೇ ಬಿಟ್ಟಿದ್ದೇನೆ ಎಂದಿದ್ದಾರೆ. ದರ್ಶನ್‌ ಮತ್ತು ಗ್ಯಾಂಗ್‌, ರೇಣುಕಾಸ್ವಾಮಿ ಅವರನ್ನು ಶೆಡ್‌ನಲ್ಲಿ ಇಟ್ಟು ಚಿತ್ರಹಿಂಸೆ ಕೊಟ್ಟು ಸಾಯಿಸಿರುವ ಘಟನೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡಿರೋ ಕಮೆಂಟಿಗರು ಅದರ ಸಹವಾಸ ಬೇಡ ಎಂದು ಬಾಯಿಮುಚ್ಚುಕೊಂಡು ಇದ್ದೇವೆ ಎಂದಿದ್ದಾರೆ. ಇನ್ನು ಕೆಲವರು, ಚಂದನ್‌ ಶೆಟ್ಟಿ ಬಾಳನ್ನು ಅನ್ಯಾಯವಾಗಿ ಹಾಳು ಮಾಡಿದ್ಯಲ್ಲಾ ಎಂದು ನಿವೇದಿತಾ ಅವರ ವಿರುದ್ಧ ಗರಂ ಆಗಿದ್ದಾರೆ. ಮತ್ತೆ ಕೆಲವರು ಡಿವೋರ್ಸ್‌ ಬಳಿಕ ಎಷ್ಟೊಂದು ಗ್ಲೋ ಬಂದಿದೆ ನೋಡಿ ಎನ್ನುತ್ತಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಮತ್ತೆ ಕೆಲವರು ಮೇಕಪ್‌ ಜಾಸ್ತಿ ಮಾಡಿಕೊಂಡಿದ್ದಾಳಷ್ಟೇ ಅನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ಸಲದ ಕಮೆಂಟ್‌ಗಳು ಭಿನ್ನ ಭಿನ್ನವಾಗಿವೆ. 

ನೇರಪ್ರಸಾರದಲ್ಲಿ ನಟಿ ತಾರಾ ಮಾತು: ನಿವೇದಿತಾ-ಚಂದನ್​ ಡಿವೋರ್ಸ್​ ವಿಷಯ ಪ್ರಸ್ತಾಪ?

ಅಷ್ಟಕ್ಕೂ, ಬಾರ್ಬಿಡಾಲ್​ ಎಂದೇ ಫೇಮಸ್​ ಆಗಿರೋ ನಿವೇದಿತಾ ಗೌಡ ರೀಲ್ಸ್​ ಮಾಡುವುದು ಕೆಲವು ತಿಂಗಳುಗಳಿಂದ ಹೆಚ್ಚುತ್ತಲೇ ಇತ್ತು. ದಿನಕ್ಕೊಂದರಂತೆ ಡ್ರೆಸ್​ ಮಾಡಿಕೊಂಡು ರೀಲ್ಸ್​ ಮಾಡುತ್ತಿದ್ದರು. . ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಹಲವೊಮ್ಮ ಸಿಂಗಲ್​ ಆಗಿ, ಕೆಲವೊಮ್ಮೆ ಆಗ ಪತಿಯಾಗಿದ್ದ ಚಂದನ್​ ಶೆಟ್ಟಿ ಜೊತೆ ಈಕೆ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಹಾಕುತ್ತಿದ್ದರು. 

ಸಾಮಾನ್ಯವಾಗಿ ಇವರು ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಡಿವೋರ್ಸ್‌ ಬಳಿಕ ಮತ್ತೆ ಈಗ ಪ್ರತ್ಯಕ್ಷ ಆಗಿದ್ದಾರೆ. ಇಂಥ ವಿಡಿಯೋ ಮೊದಲು ಹಾಕಿದ್ದರೆ ಏನಾದರೂ ನೆಗೆಟಿವ್‌ ಕಮೆಂಟ್‌ ಬರೋದು ಹೆಚ್ಚಾಗುತ್ತಿತ್ತು. ಆದರೆ ಈಗ ಹೆಚ್ಚಿನವರು ಬೇರೆಯವರ ರೀತಿಯಲ್ಲಿ ಕಮೆಂಟ್‌ ಮಾಡಲಾಗುತ್ತಿದೆ. 

ಡಿವೋರ್ಸ್​ ಬಳಿಕವೂ ನಿವೇದಿತಾ-ಚಂದನ್​ ಒಟ್ಟಿಗೇ ಇದ್ದಾರಾ? ಇನ್​ಸ್ಟಾಗ್ರಾಮ್​ ನೋಡಿ ಗುಸುಗುಸು ಶುರು!

Latest Videos
Follow Us:
Download App:
  • android
  • ios