ಕಸ ಗುಡಿಸೋರು ಬಂದಿಲ್ಲ ಕ್ಯಾರವಾನ್ ಬಂದಿಲ್ಲ ಅಂದ್ರೂ ನಾನು 7.30ಕ್ಕೆ ಸೆಟ್‌ನಲ್ಲಿ ಇರ್ತೀನಿ; ಶಿಸ್ತಿನ ಬಗ್ಗೆ ಶ್ವೇತಾ ಚಂಗಪ್ಪ

ಯಾವುದೇ ಕೆಲಸ ಇರಲಿ ಒಮ್ಮೆ ಮೇಕಪ್ ಹಾಕಿದ ಮೇಲೆ ಯಾವ ಯೋಚನೆ ಇರಬಾರದು ಎಂದು ಶಿಸ್ತಿನ ಟಿಪ್ಸ್ ಕೊಟ್ಟ ಶ್ವೇತಾ. 

Anchor Swetha Changappa talks about discipline in life during shooting vcs

ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಮಿಂಚಿದ ಚೆಲುವೆ ಶ್ವೇತಾ ಚಂಗಪ್ಪ ಇವತ್ತಿಗೂ ತಮ್ಮ ಬಣ್ಣದ ಜರ್ನಿಯಲ್ಲಿ ಪಾಲಿಸುವ ಕೆಲವೊಂದು ರೂಲ್ಸ್‌ಗಳನ್ನು ಹಂಚಿಕೊಂಡಿದ್ದಾರೆ.

ಪಾತ್ರ ಮುಖ್ಯ:

'ನಮ್ಮ ಪರ್ಸನಲ್ ಲೈಫ್‌ನಲ್ಲಿ ಏನ್ ಏನೋ ನಡೆಯುತ್ತಿರುತ್ತದೆ. ಮೇಕಪ್ ಹಾಕಿಕೊಂಡ ಮೇಲೆ ಆ ಯೋಚನೆಗಳು ಶುರುವಾದರೆ ನಮ್ಮ ಕೈಗೆ ಕೊಟ್ಟಿರುವ ಪಾತ್ರವನ್ನು ಸರಿಯಾಗಿ ಮಾಡಲು ಆಗುವುದಿಲ್ಲ. ಹೀಗಾಗಿ ನಾನೇ ನಿರ್ಧಾರ ತೆಗೆದುಕೊಂಡಿರುವುದು ಏನೆಂದರೆ ಒಂದು ಸಲ ನಾನು ಸೆಟ್‌ಗೆ ಕಾಲಿಟ್ಟು ಮೇಕಪ್ ಹಾಕಿಕೊಂಡ ಮೇಲೆ ನನ್ನ ಆಲೋಚನೆಗಳು ಆಫ್ ಆಗಬೇಕು. ನನ್ನ ಪಾತ್ರ ಆಗಿರಬೇಕು ಅದು ಬಿಟ್ಟು ಬೇರೆ ಏನೂ ಇಲ್ಲ' ಎಂದು ರರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಶ್ವೇತಾ ಮಾತನಾಡಿದ್ದಾರೆ.

ಶಿಸ್ತು:

'ನಮ್ಮ ತಂದೆಯಿಂದ ಶಿಸ್ತು ಕಲಿತೆ, ಕೆಲಸ ಇರಲಿ ಬಿಡಲಿ ದಿನ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದೇಳುತ್ತಿದ್ದರು. ನಾನು ಕೂಡ ಬೆಳಗ್ಗೆ ಬೇಗ ಎದ್ದೇಳುವುದಕ್ಕೆ ಇಷ್ಟ ಪಡುತ್ತೀನಿ. ಚಿತ್ರರಂಗಕ್ಕೆ ನನ್ನನ್ನು ಕರೆದುಕೊಂಡು ಬಂದಿದ್ದು ಎನ್‌ ನಾರಾಯಣ್ ಸರ್..ಅವರು ಕೂಡ ತುಂಬಾ ಶಿಸ್ತಿನ ವ್ಯಕ್ತಿ. ಇವತ್ತಿಗೂ ಯಾರಾದರೂ ಸೆಟ್‌ಗೆ ಲೇಟಾಗಿ ಬರುವುದು ಮಾಡಿದರೆ ನನಗೆ ಹಿಂದೆ ಆಗುತ್ತಿರುತ್ತದೆ ಏಕೆಂದರೆ ನಮಗೆ ಟೈಂ ಅಂದ್ರೆ ಟೈಂ. ಏಳು ಗಂಟೆಗೆ ಶಾಟ್ ಇರುತ್ತದೆ ಅಂದ್ರೆ ನಾವು 7 ಗಂಟೆ ಅಷ್ಟರಲ್ಲಿ ರೆಡಿಯಾಗಿರುತ್ತೀನಿ ತಿಂಡಿ ಇರುತ್ತಿರಲಿಲ್ಲ ಏನೂ ಇಲ್ಲ...ಒಂದಿಷ್ಟು ಶಾಟ್ಸ್‌ಗಳನ್ನು ಮುಗಿಸಿ 9 ಗಂಟೆ ಸುಮಾರಿಗೆ ತಿಂಡಿ ಮಾಡುತ್ತಿದ್ದೆವು. ಇವಾಗ ಹಾಗಲ್ಲ...ಕೆಲವು ವ್ಯಕ್ತಿ ಬಂದು ತಿಂದು ರೆಡಿಯಾಗಿ ಮಾಡಿದಾಗ ಸೆಟ್‌ಗೆ ಹೋಗೋದು....ಇವತ್ತಿಗೂ ನಾನು ಆಂಕರಿಂಗ್ ಮಾಡಲಿ ಅಥವಾ ಜಡ್ಜ್‌ ಸ್ಥಾನದಲ್ಲಿ ಕೂತಿರಲಿಲ್ಲ ತಪ್ಪದೆ 7.30ಗೆ ಸೆಟ್‌ನಲ್ಲಿ ಇರುತ್ತೀನಿ...ಅಲ್ಲಿ ಕಸ ಗುಡಿಸಿರುತ್ತಾರೋ ಇಲ್ವೋ ಕ್ಯಾರವಾನ್ ಬಂದಿಲ್ಲ ಅಂದರೂ ನಾನು ಹೋಗುತ್ತೀನಿ ಏಕೆಂದರೆ ಅದು ನನ್ನ ಕರ್ತವ್ಯ' ಎಂದು ಶ್ವೇತಾ ಚಂಗಪ್ಪ ಹೇಳಿದ್ದಾರೆ.

ಸತ್ಯವಾಗಲೂ ಲೀಲಾವತಿ ವಿಚಾರ ಮಾತಾಡಬಾರದು, ರಾಜ್‌ಕುಮಾರ್‌ಗೆ ಜಾಣತನ ಇರಲಿಲ್ಲ: ಬಿ ಗಣಪತಿ ಹೇಳಿಕೆ ವೈರಲ್!

ಎಸ್‌ ನಾರಾಯಣ್ ಸರ್:

ನಾರಾಯಣ್ ಸರ್ ಜೊತೆ ನಾನು ಸಂಪರ್ಕದಲ್ಲಿ ಇಲ್ಲ ಆದರೆ ಅವರ ಮಗನ ಜೊತೆ ಮಾತನಾಡುತ್ತೀನಿ ಏಕೆಂದರೆ ನನಗೆ ಯಾರಿಗೂ ಡಿಸ್ಟರ್ಬ್ ಮಾಡುವುದಿಲ್ಲ. ಮಗನ ಜೊತೆ ಮಾತನಾಡಿದಾಗ ಸರ್ ಹೇಗಿದ್ದಾರೆ ಅಮ್ಮ ಹೇಗಿದ್ದಾರೆ ಎಂದು ವಿಚಾರಿಸಿಕೊಳ್ಳುತ್ತೀನಿ. ಬಹುಷ ಇಂಡಸ್ಟ್ರಿಯಲ್ಲಿ ಒಬ್ಬ ವ್ಯಕ್ತಿಯನ್ನು ನೋಡಿದ ತಕ್ಷಣ ಕಾಲಿಗೆ ನಮಸ್ಕಾರ ಮಾಡುವುದು ಅಂದ್ರೆ ಅದು ಎಸ್ ನಾರಾಯಣ್ ಸರ್ ಮತ್ತು  ಅವರ ಹೆಂಡತಿ. ಇವತ್ತು ನಾನು ಈ ಸ್ಥಾನದಲ್ಲಿ ಇದ್ದರೆ ಅದಕ್ಕೆ ನಾರಾಯಣ್ ಸರ್ ಕಾರಣ. ಸರ್ ಅವರ ಪತ್ನಿ ಭಾಗ್ಯಮ್ಮ ಕೂಡ ಹಾಗೆ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ...ಇವತ್ತಿಗೂ ಹೇಗಿದ್ಯಾ ಮಗಳೇ ಎಂದು ಮಾತನಾಡಿಸುತ್ತಾರೆ. ಸೆಟ್‌ನಲ್ಲಿ ನನಗೆ ಊಟ ಮಾಡಿಸುತ್ತಿದ್ದರು ಹಾಗೂ ಊಟ ಕಳುಹಿಸುತ್ತಿದ್ದರು, ಅಲ್ಲದೆ ಮನೆಯಲ್ಲಿ ತಿಂಗಳಿಗೆ ಒಮ್ಮೆ ಏನಾದರೂ ಫಂಕ್ಷನ್ ಮಾಡಿ ಎಲ್ಲರಿನ್ನು ಕರೆದು ಊಟ ಹಾಕುತ್ತಿದ್ದರು ಹೀಗಾಗಿ ನನಗೆ ಅಮ್ಮ ತುಂಬಾನೇ ಇಷ್ಟ ಎಂದಿದ್ದಾರೆ ಶ್ವೇತಾ.

ನನ್ನ ಗಂಡನಿಗೆ ಮೆಹಂದಿ ವಾಸನೆ ಅಂದ್ರೆ ಆಗಲ್ಲ ಅದಿಕ್ಕೆ ಮದುವೆಯಲ್ಲಿ ಹಾಕಿಕೊಂಡಿಲ್ಲ; ಸೋನಾಕ್ಷಿ ಸಿನ್ಹಾ

ಫೇಮ್ ತಲೆಯಲ್ಲಿ ಇಲ್ಲ:

ಫೇಮ್‌ ಅನ್ನೋದು ತಲೆಗೆ ಹೋಗುತ್ತಿರಲಿಲ್ಲ ಏಕೆಂದರೆ ಫ್ರೀ ಆಗಿ ಕುಳಿತುಕೊಂಡು ಯೋಚನೆ ಮಾಡುವಷ್ಟು ಫ್ರೀ ಇರುತ್ತಿರಲಿಲ್ಲ. ಬೆಳಗ್ಗೆ ಒಂದು ಪ್ರಾಜೆಕ್ಟ್‌ ಸಂಜೆ ಒಂದು ಪ್ರಾಜೆಕ್ಟ್‌ ಮಾಡುತ್ತಿದ್ದೆ. ತಿಂಗಳಿನಲ್ಲಿ 31 ದಿನವೂ ಸಾಲುತ್ತಿರಲಿಲ್ಲ ಏಕೆಂದರೆ ನಾನು 41 ಅಥವಾ 45 ದಿನಗಳ ಲೆಕ್ಕದಲ್ಲಿ ಮಾಡುತ್ತಿದ್ದೆ. ನನಗೆ ಯಶಸ್ಸು ಸಿಕ್ಕಿದೆ ನನಗೆ ಜನರನ್ನು ಹೀಗೆ ನೋಡುತ್ತಾರೆ ಅನ್ನೋ ಆಲೋಚನೆ ಬರಲಿಲ್ಲ ಅದಿಕ್ಕೆ ಇನ್ನು ಹೀಗೆ ಇರುವುದು...ಸಕ್ಸಸ್‌ ತಲೆಗೆ ಹೋಗಿಲ್ಲ ಎಂದು ಶ್ವೇತಾ ಮಾತನಾಡಿದ್ದಾರೆ. 

Latest Videos
Follow Us:
Download App:
  • android
  • ios