Asianet Suvarna News Asianet Suvarna News

ರಿಷಬ್​ಗೆ ಒಮ್ಮೆಯೂ ಐ ಲವ್​ ಯೂ ಹೇಳ್ಲಿಲ್ಲ, ಮೊದಲು ಕಿಸ್​ ಕೊಟ್ಟಿದ್ದು.... ಆ್ಯಂಕರ್​ ಅನುಶ್ರೀ ಜೊತೆ ಪ್ರಗತಿ

ಆ್ಯಂಕರ್​ ಅನುಶ್ರೀ ಅವರ ಷೋಗೆ ಬಂದಿರುವ ರಿಷಬ್​ ಶೆಟ್ಟಿ ಪತ್ನಿ ಪ್ರಗತಿ ಅವರು ಮೊದಲು ಐ ಲವ್​ ಯೂ ಹೇಳಿದ್ದು ಯಾವಾಗ, ಕಿಸ್​ ಕೊಟ್ಟಿದ್ದು ಯಾವಾಗ ಎಂಬೆಲ್ಲಾ ಪ್ರಶ್ನೆಗೆ ಏನು ಉತ್ತರ ಕೊಟ್ಟಿದ್ದಾರೆ ನೋಡಿ. 
 

Pragati Rishab Shetty in Anchor Anushrees show about first kiss and about love story suc
Author
First Published Sep 20, 2024, 6:09 PM IST | Last Updated Sep 20, 2024, 6:09 PM IST

 ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ, ನಟ ಮತ್ತು ನಿರ್ಮಾಪಕ ರಿಷಬ್​ ಶೆಟ್ಟಿಯವರ ಪರಿಚಯ ಸದ್ಯ ಯಾವ ಕನ್ನಡಿಗರೂ ಬೇಕಿಲ್ಲ. ಚಿಕ್ಕ ಬಜೆಟ್​ನಲ್ಲಿ ತಯಾರಾಗುವ ಚಿತ್ರವೊಂದು ಪ್ಯಾನ್​ ಇಂಡಿಯಾ ಮಟ್ಟದಲ್ಲಿಯೂ ಗುರುತಿಸಿಕೊಳ್ಳಬಹುದು ಎಂಬುದನ್ನು ಕಾಂತಾರ ಚಿತ್ರದ ಮೂಲಕ ಸಾಬೀತು ಮಾಡಿರುವ ರಿಷಬ್​ ಅವರು, ಈಗ ಭಾರತ ಮಾತ್ರವಲ್ಲದೇ ವಿವಿಧ ದೇಶಗಳಲ್ಲಿಯೂ ಚಿರಪರಿಚಿತ ನಟರಾದವರು. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರ್ತಾಳೆ ಎನ್ನುವುದು ರಿಷಬ್​ ಶೆಟ್ಟಿ ಅವರ ಜೀವನದಲ್ಲಿಯೂ ಸಾಬೀತಾಗಿದೆ. ಅವರೇ ಪ್ರಗತಿ ಶೆಟ್ಟಿ.  2017ರಲ್ಲಿ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕುಂದಾಪುರದಲ್ಲಿ ಪ್ರಗತಿ-ರಿಷಬ್ ಮದುವೆ ನಡೆಯಿತು. ಈ ದಂಪತಿಗೆ ಮಗ ರಣ್ವಿತ್ ಶೆಟ್ಟಿ ಹಾಗೂ ಮಗಳು ರಾಧ್ಯ ಶೆಟ್ಟಿ ಮಕ್ಕಳಿದ್ದಾರೆ. 


ಇದೀಗ ಆ್ಯಂಕರ್​ ಅನುಶ್ರೀ ಅವರು ಪ್ರಗತಿ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ ರಿಷಬ್​ ಶೆಟ್ಟಿಯವರಿಗೆ ಮೊದಲ ಬಾರಿಗೆ ಐ ಲವ್​ ಯೂ ಎಂದು ಯಾವಾಗ ಹೇಳಿದ್ದು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರಗತಿಯವರು ಇದುವರೆಗೂ ಒಮ್ಮೆಯೂ ಹೇಳಲಿಲ್ಲ ಎಂದಿದ್ದಾರೆ. ಮೊದಲು ಕಿಸ್​ ಮಾಡಿದ್ದು ಯಾವಾಗ ಎಂದು ಪ್ರಶ್ನಿಸಿದಾಗ, ಪ್ರಗತಿ ಅದನ್ನೆಲ್ಲಾ ಹೇಳ್ಲೇ ಬೇಕಾ ಎಂದು ಕೇಳಿದ್ದಾರೆ. ಆಗ ಅನುಶ್ರೀ ರಿಷಬ್​ ಅವರಿಗೇ ಕೇಳ್ತೇನೆ ಬಿಡಿ ಎಂದಾಗ, ಸರಿ ಅವರಿಗೇ ಕೇಳಿ ಎಂದು ನಾಚಿಕೊಂಡಿದ್ದಾರೆ ಪ್ರಗತಿ. ಇದೇ ವೇಳೆ ರಿಷಬ್​ ಶೆಟ್ಟಿಯವರ ಹಲವು ಒಳ್ಳೆಯ ಗುಣವನ್ನು ಪತ್ನಿ ಪ್ರಗತಿ ತೆರೆದಿಟ್ಟಿದ್ದಾರೆ. ಅವರು ಯಾವಾಗಲೂ ಯಾರಿಗೂ ಮೋಸ ಮಾಡಲಿಲ್ಲ, ಕೆಟ್ಟದ್ದನ್ನು ಮಾತನಾಡಲಿಲ್ಲ. ಅದೇ ಅವರನ್ನು ಕಾಪಾಡಿಕೊಂಡು ಬರುತ್ತಿದೆ ಎಂದು ಹೇಳಿದ್ದಾರೆ. ರಿಷಬ್​ ಅವರನ್ನು ಮೊದಲ ಬಾರಿ ನೋಡಿಯಾಗ ಹೇಳಿದ್ದೇನು ಎಂಬ ಪ್ರಶ್ನೆಗೆ ಪ್ರಗತಿ ಅವರು,  ಪ್ಲೀಸ್​ ಊಟ ಮಾಡು, ಐಸ್​ಕ್ರೀಮ್​ ಕೊಡ್ತೀನಿ ಎಂದಿದ್ದೆ ಎಂದು ಹೇಳಿ ನಕ್ಕಿದ್ದಾರೆ. ಕೊನೆಗೆ ದಿನವೂ  ಲೇಟಾಗಿ ಮಲಗ್ತೀವಿ, ಬೆಳಿಗ್ಗೆ ಲೇಟಾಗಿ ಏಳೋದೇ ಆಗಿದೆ ಎನ್ನುವ ದಿನಚರಿಯ ಕುರಿತೂ ಹೇಳಿದ್ದಾರೆ. ಪತಿಯನ್ನು ಆರಂಭದಲ್ಲಿ ಪ್ರೀತಿ ಜಾಸ್ತಿಯಾದಾಗಲೆಲ್ಲಾ ಪುತ್ತೂಸ್​ ಅಂತ ಎಂದು ಕರೆಯುತ್ತಿದ್ದೆ ಎಂದು ತಿಳಿಸಿದ್ದಾರೆ. ಇನ್ನು ರಿಷಬ್​ ಶೆಟ್ಟಿ ಅವರನ್ನು ಸಂದರ್ಶನ ಮಾಡಿದ್ರೆ ನಿಮ್ಮ ಬಗ್ಗೆ ಹೇಳೋ ಮಾತೇನು ಎಂದು ಅನುಶ್ರೀ ಕೇಳಿದಾಗ, ಪ್ರಗತಿ, ಅವಳು ಕೆಲ್ಸ ಮಾಡೋ ರೀತಿ ಸರಿಯಲ್ಲ, ಅವಳಿಗೆ ಭಾಷೆ ಸರಿ ಇಲ್ಲ ಎನ್ನುತ್ತಾರೆ ಅಷ್ಟೇ ಎಂದಿದ್ದಾರೆ. ಇನ್ನು ಅನುಶ್ರೀ, ಅಭಿಮಾನಿಗಳ ಪ್ರಶ್ನೆ ಕಾಂತಾರ-2 ಯಾವಾಗ ನೋಡ್ಬೋದು ಎನ್ನೋ ಪ್ರಶ್ನೆಗೆ ಪ್ರಗತಿ ಸೈಲೆಂಟ್​ ಆಗಿ ನಕ್ಕಿದ್ದಾರೆ. 

ರಿಷಬ್​ ಶೆಟ್ಟಿ ಪದೇ ಪದೇ ಹೇಳೋ ಸುಳ್ಳು ಇದೇ ಅಂತೆ! ಪತಿಯ ಗುಟ್ಟು ರಿವೀಲ್​ ಮಾಡಿದ ಪ್ರಗತಿ

ಅಂದಹಾಗೆ,  ರಿಷಬ್​ ಮತ್ತು ಪ್ರಗತಿ ಅವರ ಲವ್​ಸ್ಟೋರಿಯೂ ಚೆನ್ನಾಗಿದೆ. 'ರಿಕ್ಕಿ' ಸಿನಿಮಾ ನೋಡಲು ಪ್ರಗತಿಯವರು ಫ್ರೆಂಡ್ಸ್​ ಜೊತೆ ಹೋದಾಗ,   ಚಿತ್ರತಂಡ ಕೂಡ ಅಲ್ಲಿತ್ತು.  ಅಲ್ಲಿಯವರೆಗೆ ಪ್ರಗತಿ ಅವರಿಗೆ ರಿಷಬ್​ ಯಾರು ಎಂದೇ ಗೊತ್ತಿರಲಿಲ್ಲ. ಸಿನಿಮಾ ಮುಗಿದ ಬಳಿಕ ಅಲ್ಲೇ ಇದ್ದ ರಿಷಬ್ ಶೆಟ್ಟಿಯವರ ಪರಿಚಯವನ್ನು ಸ್ನೇಹಿತೆಯರು ಮಾಡಿಸಿದಾಗ  ಫೋಟೋ ಹೊಡೆಸಿಕೊಂಡು ಬಂದಿದ್ದರು.  ಇಬ್ಬರೂ ಕರಾವಳಿಯವರು ಎಂದು ಗೊತ್ತಾದದ್ದೇ ತಡ, ಬಳಿಕ ಫೇಸ್‌ಬುಕ್‌ನಲ್ಲಿ ಪ್ರಗತಿಯವರನ್ನು ಹುಡುಕಿ ರಿಷಬ್ ಶೆಟ್ಟಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರಂತೆ. ಅಲ್ಲಿಂದಲೇ ಲವ್​ ಶುರುವಾದದ್ದು. ಒಂದು ವರ್ಷದಲ್ಲಿಯೇ ಪ್ರೀತಿ, ಪ್ರಪೋಸ್​, ಮನೆಯಲ್ಲಿ ಎಲ್ಲರನ್ನೂ ಒಪ್ಪಿಸಿ ಮದುವೆಯೂ ಆಗಿದೆ.  ಪತ್ನಿಯ ಸಹಕಾರವನ್ನು ರಿಷಬ್​ ಸದಾ ಬಣ್ಣಿಸುತ್ತಲೇ ಇರುತ್ತಾರೆ.  

  ಇನ್ನು ಪ್ರಗತಿ ಕುರಿತು ಹೇಳುವುದಾದರೆ,  ಮದುವೆ ಬಳಿಕ ಸಿನಿಮಾ ರಂಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಪ್ರಗತಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿದ್ದಾರೆ. ಹಲವು ಚಿತ್ರಗಳಿಗೆ ಕಾಸ್ಟ್ಯೂಮ್ ಡಿಸೈನಿಂಗ್​ ಮಾಡಿದ್ದಾರೆ.  ಸ.ಹಿ.ಪ್ರಾ. ಶಾಲೆ, ಬೆಲ್ ಬಾಟಂ, ಕಥಾಸಂಗಮಕ್ಕೆ ಪ್ರಗತಿ ಶೆಟ್ಟಿ ಸೇರಿದಂತೆ  ರುದ್ರಪ್ರಯಾಗ’, ‘777 ಚಾರ್ಲಿ’ ಚಿತ್ರಗಳಿಗೂ ಕಾಸ್ಟ್ಯೂಮ್ ಡಿಸೈನಿಂದ  ಮಾಡಿದ್ದಾರೆ. 

ತರುಣ್​ ಜೊತೆ ಮದ್ವೆ ಆದ್ಮೇಲೆ ದಪ್ಪ ಆಗಿದ್ಯಾಕೆ ಕೇಳಿದ್ರೆ ನಾಚುತ್ತಲೇ ನಟಿ ಸೋನಲ್​ ಮೊಂಥೆರೋ ಹೇಳಿದ್ದೇನು ಕೇಳಿ...


Latest Videos
Follow Us:
Download App:
  • android
  • ios