Asianet Suvarna News Asianet Suvarna News

ನನ್ನಪ್ಪ ಗೋಲ್ಡ್ ಮೆಡಲಿಸ್ಟ್, ಬಿಟ್ಟು ಹೋದ ಅಪ್ಪನ ಬಗ್ಗೆ ಮೊದಲ ಬಾರಿ ಮಾತನಾಡಿದ ಅನುಶ್ರೀ

ನಾನು ಮಾತು ಜಾಸ್ತಿ ಆಡುವುದೆಂದರೆ ಅದು ನನ್ನ ಅಪ್ಪನಿಂದ ಬಂದ ಒಂದೇ ಒಂದೇ ಬಳುವಳಿ. ಅವರು ತುಂಬಾ ಮಾತನಾಡುತ್ತಿದ್ದರು ಎಂದು ನಿರೂಪಕಿ ಅನುಶ್ರೀ ಅಪ್ಪನ ಬಗ್ಗೆ ಹೇಳಿಕೊಂಡಿದ್ದಾರೆ.

Anchor Anushree talk about her father in tulu interview gow
Author
First Published May 15, 2024, 11:15 AM IST | Last Updated May 17, 2024, 6:15 PM IST

ಕರಾವಳಿ ಬೆಡಗಿ ಪ್ರಸಿದ್ಧ ನಿರೂಪಕಿ ಅನುಶ್ರೀ ಅವರು ಮೊದಲ ಬಾರಿಗೆ ತುಳುವಿನಲ್ಲಿ ಸಂದರ್ಶನ ನೀಡಿದ್ದಾರೆ. ತುಳುವಿನ ಪಾಡ್‌ ಕಾಸ್ಟ್ ಚಿಲ್ಲಿಂಗ್ ವಿಥ್ ಚಿಲಿಂಬಿ ಕಾರ್ಯಕ್ರಮಕ್ಕೆ ಬಂದಿದ್ದು, ದಿ ಪವರ್ ಹೌಸ್‌ ವೈನ್ಸ್ ಯೂಟ್ಯೂಬ್‌ ನಲ್ಲಿ ಲಭ್ಯವಿದೆ.

ನೀವು ಮಾತು ಜಾಸ್ತಿ ಮಾತನಾಡುವುದು ಹೇಗೆ? ಎಲ್ಲಿ ನಿರೂಪಣೆ ಕಲಿತಿರಿ ಎಂದು ಸಂದರ್ಶಕ ಪ್ರಶ್ನೆ ಕೇಳಿದಾಗ ಉತ್ತರಿಸಿದ ಅನುಶ್ರೀ ನಾನು ಮಾತು ಜಾಸ್ತಿ ಆಡುವುದೆಂದರೆ ಅದು ನನ್ನ ಅಪ್ಪನಿಂದ ಬಂದ ಒಂದೇ ಒಂದೇ ಬಳುವಳಿ. ಅವರು ತುಂಬಾ ಮಾತನಾಡುತ್ತಿದ್ದರು. ಅವರು ಕೆಲಸ ಮಾಡಿಕೊಂಡಿದ್ದ ಕಂಪೆನಿಯಲ್ಲಿ ಮಾರ್ಕೆಟಿಂಗ್‌ ನಲ್ಲಿ ಅವರು ಗೋಲ್ಡ್ ಮೆಡಲಿಸ್ಟ್. ಮಾತು ನನಗೆ ನನ್ನ ತಂದೆಯಿಂದಲೇ ಬಂದಿದ್ದು.

ಕೋಟ್ಯಂತರ ಜನರ ಪ್ರಶ್ನೆಗೆ ಇಲ್ಲಿದೆ ಉತ್ತರ, ಮದುವೆಯಾಗಲು ನಿರ್ಧರಿಸಿದ ...

ಒಬ್ಬ ತಂದೆಯಾದವನು ಹಿರೋ ತರ ಇರಬೇಕು. ನಮ್ಮ ತಂದೆ ನಮಗೆ ಹಿರೋ ತರ ಇರಲಿಲ್ಲ. ನನ್ನ ಅಮ್ಮನ ಜೊತೆಗೆ ಒಳ್ಳೆಯ ಗಂಡನಂತೆ ಇದ್ರಾ ನನಗದು ಗೊತ್ತಿಲ್ಲ. ಅವರು ಮನೆಗೆ ಸರಿಯಾಗಿ ಬರುತ್ತಿರಲಿಲ್ಲ ಅವರ ಬ್ಯುಸಿನೆಸ್‌ , ಅವರ ಫ್ರೆಂಡ್ಸ್, ಅವರ ಸ್ಟಾಂಡರ್ಡ್‌ ಅದೇ ಜೀವನ ಆಗಿತ್ತು. ನಮ್ಮ ಜೀವನ,  ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿದ್ದೇ ಇಲ್ಲ. ಒಂದು ಸಮಯದಲ್ಲಿ ಅವರಿಗೆ ನಮ್ಮ ಜೊತೆಗೆ ಇರಲು ಇಷ್ಟ ಇರಲಿಲ್ಲ. ಅವರೇ ತೀರ್ಮಾನಿಸಿ ನಮ್ಮನ್ನು ಬಿಟ್ಟು ಹೋದರು. 25 ವರ್ಷಗಳ ಹಿಂದೆ ನಮ್ಮನ್ನು ಬಿಟ್ಟು ಹೋದರು. 25 ವರ್ಷ ಅವರಿಲ್ಲದೆ ನಾವು ಬೆಳೆದಿದ್ದು.

ಅಪ್ಪ ಇಲ್ಲದೆ ಬದುಕೋದು ಮೊದಲಿಗೆ ನಮಗೆ ಕಷ್ಟವಾಯ್ತು. ಸಮಾಜ ನೋಡುವ ರೀತಿ ಬದಲಾಯ್ತು. ಅಪ್ಪ ಇಲ್ಲದ ಹೆಣ್ಣು ಮಗುವನ್ನು ಸಮಾಜ ನೋಡವ ರೀತಿಯೇ ಬೇರೆ. ಅಪ್ಪ ಇಲ್ಲದ ಹೆಣ್ಣು ಮಗು  ಸಂಜೆ 7 ಗಂಟೆ ಮೇಲೆ ಮನೆಗೆ ಬಂದರೆ ನೋಡುವ ರೀತಿಯೇ ಬೇರೆ. ಅಪ್ಪ ಇಲ್ಲದ ಮಕ್ಕಳು ಟಿಲಿವಿಷನ್‌ ಇಂಡಸ್ಟ್ರಿಗೆ ಹೋದರೆ ನೋಡುವ ರೀತಿಯೇ ಬೇರೆ. ಅಪ್ಪ ಇಲ್ಲದ ಹೆಣ್ಣು ಮಕ್ಕಳು ಜೀವನದಲ್ಲಿ ಸಾಧಿಸಿದರೆ ನೋಡುವ ರೀತಿಯೇ ಬೇರೆ. ಅಪ್ಪ ಇಲ್ಲದ ಮಗಳು ಮನೆ ಖರೀದಿ ಮಾಡಿದರೆ ನೊಡುವ ರೀತಿಯೇ ಬೇರೆ. ಅದೇ ಒಂದು ಹುಡುಗ ತೆಗೆದರೆ ಅದು ಇತರರಿಗೆ ಮಾದರಿ ಎನ್ನುತ್ತಾರೆ. ಒಂದು ಹುಡುಗಿ ತೆಗೆದರೆ ಅದಕ್ಕೆ ಬೇರೆಯೇ ಹೆಸರು ನೀಡುತ್ತಾರೆ. ನಾನು ಇದೆಲ್ಲವನ್ನೂ ಅನುಭವಿಸಿದ್ದೇನೆ.

ಚಿನ್ನದ ಕರಿಮಣಿ ಇಲ್ಲವೆಂದು ಯಾವ ಸಮಾರಂಭಕ್ಕೂ ಅಮ್ಮನನ್ನ ಕರೆಯುತ್ತಿರಲ ...

ನನಗೆ ಮಾತಿನ ಮಹತ್ವ ತುಂಬಾ ಲೇಟ್‌ ಆಗಿ ತಿಳಿದಿದ್ದು, ಬೆಂಗಳೂರಿಗೆ ಹೋದ ನಂತರ ಹಣ ಸಿಗುತ್ತದೆ ಕೆಲಸ ಮಾಡಬೇಕು ಅಂದುಕೊಂಡಿದ್ದೆ. ಆಗ ನನಗೆ ಒಂದು ದಿನಕ್ಕೆ 250 ರೂ ವೇತನ ಇತ್ತು. ತಿಂಗಳ ಕೊನೆಗೆ 1500 ರೂ ಬಂದರೆ ಅದು ದೊಡ್ಡ ವಿಷಯವೇ ಆಗಿತ್ತು. ನನ್ನ ಹಾಸ್ಟೆಲ್‌ ಫೀಸ್‌ 2000 ರೂ ಆಗಿತ್ತು. ಹೀಗಾಗಿ ಅದು ಮ್ಯಾಚ್‌ ಆಗುತ್ತಿರಲಿಲ್ಲ. ಬೆಂಗಳೂರಲ್ಲಿ ಆಗ ಎಂಸಿ ರೀನಾ ತುಂಬಾ ಫೇಮಸ್‌ ಆಗಿದ್ದರು ಅವರ ಜೊತೆಗೆ ನಾನು ಸಹಾಯಕಿ ಆಗಿ ಹೊಗುತ್ತಿದ್ದೆ. ಬಳಿಕ ಅವರು ನನಗೆ ನೀನೆ ಮಾಡು ಎಂದು ಹೇಳುತ್ತಿದ್ದರು.

 

Latest Videos
Follow Us:
Download App:
  • android
  • ios