ನಾನು ನಂದಿನಿ ಹಾಡಿಗೆ ಇದೀಗ ಆ್ಯಂಕರ್​ ಅನುಶ್ರೀ ಮತ್ತು ಪುಟಾಣಿಗಳು ರೀಲ್ಸ್​ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್​ ಆಗಿದೆ. 

ಬೆಂಗಳೂರಿಗೆ ಬಂದು ಪಿಜಿಯಲ್ಲಿ (Paying guest) ಉಳಿಯುವ ಹೆಣ್ಣು ಮಕ್ಕಳು ವಾಸ್ತವ ಚಿತ್ರಣ ಹೇಗಿರುತ್ತೆ? ಪಿಜಿಯಲ್ಲಿ ಆಹಾರ ಸರಿ ಇಲ್ಲದೆ, ಕನ್ನಡ ಮೀಡಿಯಂನಲ್ಲಿ ಓದಿದ ಕಾರಣಕ್ಕೆ ಇಂಗ್ಲೀಷ್ ಬಾರದೇ ಏನೆಲ್ಲಾ ಹೇಗೆಲ್ಲಾ ಗೋಳಾಡುತ್ತಾರೆ ಎಂಬುದನ್ನು ಹಾಡು 'ನಾನು ನಂದಿನಿ ಬೆಂಗಳೂರು ಬಂದಿನಿ... ಹಾಡು ಜನರಿಗೆ ಸಕತ್​ ಕ್ರೇಜ್​ ಹುಟ್ಟಿಸಿಬಿಟ್ಟಿದೆ. ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸಿದೆ. ಈ ಹಾಡನ್ನು ಕ್ರಿಯೇಟ್ ಮಾಡಿದವರು ವಿಕಿಪಿಡಿಯಾ ಖ್ಯಾತಿಯ ವಿಕ್ಕಿ (vicky)ಎಂಬುವವರು. ಸಾಕಷ್ಟು ಹಾಸ್ಯದ ವೀಡಿಯೋಗಳನ್ನು ಇವರು ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದು, ಅವುಗಳಲ್ಲಿ ಕೆಲವೊಂದು ಸಾಕಷ್ಟು ವೈರಲ್ ಕೂಡ ಆಗಿವೆ.

 ಒಂದು ಹಾಡು ಟ್ರೆಂಡ್​ ಆಗಿದೆ ಅಂದಾಕ್ಷಣ ಅದಕ್ಕೆ ರೀಲ್ಸ್​ ಮಾಡುವುದು ಮಾಮೂಲು. ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ, ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ವರ್ಗದವರು ಎಲ್ಲರಿಗೂ ಈಗ ನಾನು ನಂದಿನಿ ಹುಚ್ಚು ಹಿಡಿಸಿದೆ. ಇದೀಗ ನಟಿ ಅನುಶ್ರೀ ಅವರು ಕೆಲವು ಮಕ್ಕಳ ಜೊತೆಗೂಡಿ ಈ ಹಾಡನ್ನು ಹಾಡಿದ್ದು, ಅದು ಸಕತ್​ ವೈರಲ್​ ಆಗುತ್ತಿದೆ. ರಾಣಿಯಂತೆ ಡ್ರೆಸ್​ ಮಾಡಿಕೊಂಡಿರುವ ಅನುಶ್ರೀ ಅವರು, ಸಿಂಹಾಸನದ ರೀತಿಯ ಖುರ್ಚಿಯಲ್ಲಿ ಕುಳಿತು ಈ ರೀಲ್ಸ್ ಮಾಡಿದ್ದಾರೆ. ಇವರಿಗೆ ಹಲವು ಮಕ್ಕಳು ಸಾಥ್​ ಕೊಟ್ಟಿದ್ದಾರೆ. 

ನಾನು ನಂದಿನಿ... ಹಾಡಿಗೆ ನಟಿ ರಮ್ಯಾ ರೀಲ್ಸ್​ ವೈರಲ್​: ಇವ್ಳು ನಮ್​ ನಂದು ಎಂದ ಫ್ಯಾನ್ಸ್​

ನಿನ್ನೆಯಷ್ಟೇ ಈ ಹಾಡಿಗೆ ರಮ್ಯಾ ಫ್ಯಾನ್ಸ್​ಪೇಜ್​ನಿಂದ ರೀಲ್ಸ್​ ಶೇರ್​ ಮಾಡಲಾಗಿತ್ತು. ಅದರಲ್ಲಿ ನಟಿ ರಮ್ಯಾ (Ramya) ನಾನು ನಂದಿನಿ ಹಾಡನ್ನು ಹೇಳಿದಂತೆ ತೋರಿಸಲಾಗಿದೆ. ಅಸಲಿಗೆ ರಮ್ಯಾ ಇದಾಗಲೇ ಮಾಡಿರುವ ಯಾವುದೋ ಹಾಡಿನ ಒರಿಜಿನಲ್​ ವಿಡಿಯೋ ಹಾಕಿ ಅದಕ್ಕೆ ಹಿನ್ನೆಲೆಯಾಗಿ ನಾನು ನಂದಿನಿ ಹಾಡನ್ನು ಹೇಳಲಾಗಿದೆ. ಇಡೀ ವಿಡಿಯೋ ಉದ್ದಕ್ಕೂ ಲಿಪ್​ ಸಿಂಕ್​ ಆಗದೇ ಇರುವುದು ಹಾಗೂ ರಮ್ಯಾ ಅವರು ಬೇರೆಯ ಹಾಡೇ ಹಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಇದೆಲ್ಲಾ ಗೊತ್ತಿದ್ದರೂ ರಮ್ಯಾ ಫ್ಯಾನ್ಸ್​ ಸಕತ್​ ಎಂಜಾಯ್​ ಮಾಡುತ್ತಿದ್ದಾರೆ.

ಇನ್ನು ಈ ಹಾಡಿನ ಫುಲ್​ ಲಿರಿಕ್ಸ್​ ಬೇಕು ಎನ್ನುವವರಿಗಾಗಿ ಇಲ್ಲಿದೆ ಹಾಡು: 'ನಾನು ನಂದಿನಿ ಬೆಂಗಳೂರು ಬಂದಿನಿ, ಪಿಜಿಲಿ ಇದ್ದೀನಿ ಐಟಿ ಕೆಲಸ ಮಾಡ್ತೀನಿ, ಊಟ ಸರಿ ಇಲ್ಲ ಅಂದ್ರೂನು ತಿಂತಿನಿ ಬಂದ ದುಡ್ಡೆಲ್ಲಾ ಮನೆಗೆ ಕಳಿಸ್ತೀನಿ, ಬಾರೆ ನಂದಿನಿ ಗೋಬಿ ತಿನಿಸ್ತೀನಿ ಬೇ ಬೇ ಬೇಡ, ಬಾರೆ ನಂದಿನಿ ಬೆಂಗಳೂರು ತೋರಿಸ್ತೀನಿ, ಓಹ್ ಬೇಡ ಓಹ್ ಬೇಡ, ಬಾರೆ ನಂದಿನಿ ಪೇಡ ತಿನ್ನಿಸ್ತೀನಿ, ಬೆ ಬೆ ಬೇಡ, ಬಾರೆ ನಂದಿನಿ ಪಿಕ್ಚರ್ ತೋರಿಸ್ತೀನಿ, ಬೇಡ ಬೇಡ, ನೋಡಮ್ಮ ಇಂಗ್ಲೀಷ್ ನೀನು ಕಲಿಬೇಕು, ಇಲ್ಲ ಅಂದ್ರೆ ಐಟಿಲಿ ಕಷ್ಟ ಆಗುತ್ತೆ ಸರ್ ನಾನು ಕನ್ನಡ ಮೀಡಿಯಾಂನಲ್ಲಿ ಓದಿದ್ದೆ. ಅದಕ್ಕೆ ನನ್ನ ಇಂಗ್ಲೀಷ್ ಅಷ್ಟಕಷ್ಟೆ, ಐ ಕ್ಯಾನ್ ಟ್ರೈ ಐ ಕ್ಯಾನ್ ಟಾಕ್, ಬಟ್ ವಾಟ್ ಐ ಸ್ಪೀಕ್ ಇಟ್ಸ್ ಬಟ್ಲರ್ ಇಂಗ್ಲೀಷ್...'

ನಾನು ನಂದಿನಿ, ಬೆಂಗಳೂರಿಗೆ ಬಂದೀನಿ... ವೈರಲ್‌ ಹಾಡಿಗೆ ಹೊಸ ಲೈನ್‌ ಸೇರಿಸಿದ ಬೆಂಗ್ಳೂರ್‌ ಮಂದಿ!

ಅನುಶ್ರೀ ಅವರ ರೀಲ್ಸ್​ ಈ ಲಿಂಕ್ಸ್​ನಲ್ಲಿದೆ: 

https://www.facebook.com/reel/1952940641772648