ನಾನು ನಂದಿನಿ, ಬೆಂಗಳೂರಿಗೆ ಬಂದೀನಿ... ವೈರಲ್‌ ಹಾಡಿಗೆ ಹೊಸ ಲೈನ್‌ ಸೇರಿಸಿದ ಬೆಂಗ್ಳೂರ್‌ ಮಂದಿ!

ನಾನು ನಂದಿನಿ, ಬೆಂಗಳೂರಿಗೆ ಬಂದೀನಿ ಹಾಡು ವೈರಲ್‌ ಆಗುತ್ತಿದೆ. ಈ ಹಾಡಿಗೆ ಹೊಸ ಲೈನ್‌ ಸೇರ್ಪಡೆ ಮಾಡಿಕೊಂಡು ಹಸುಗಳ ಸಮಸ್ಯೆಗಳನ್ನು ಜನರು ಮುನ್ನೆಲೆಗೆ ತಂದಿದ್ದಾರೆ.

Bengaluru people adding new lines for Nanu nandini bangalore bandini viral song sat

ಬೆಂಗಳೂರು (ಸೆ.18): ಐಟಿ ಸಿಟಿ ನಗರ ಎಂದು ಪ್ರಸಿದ್ಧಿಯಾಗಿರುವ ಬೆಂಗಳೂರಿನಲ್ಲಿ ಈಗ 'ನಾನು ನಂದಿನಿ ಬೆಂಗಳೂರು ಬಂದಿನಿ, ಪಿಜಿಲಿ ಇದ್ದೀನಿ ಐಟಿ  ಕೆಲಸ ಮಾಡ್ತೀನಿ... ಹಾಡು ತಿಂಬಾ ವೈರಲ್‌ ಆಗಿದೆ. ಈ ವೈರಲ್‌ ಹಾಡಿಗೆ ಹಸುಗಳ ಫೋಟೋಗಳನ್ನು ಶೇರ್‌ ಮಾಡಿಕೊಂಡಿರುವ ಬೆಂಗಳೂರಿನ ಜನರು, ಕಸದ ಸಮಸ್ಯೆಗಳ ಬಗ್ಗೆ ಹೊಸ ಲೈನ್‌ಗಳನ್ನು ಸೇರ್ಪಡೆ ಮಾಡಿದ್ದಾರೆ. ಈ ಮೂಲಕ ಸ್ವಚ್ಛತೆಯನ್ನು ಕಾಪಾಡದ ಬಿಬಿಎಂಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ (ಹಳೆಯ ಟ್ವಿಟರ್) ನಮ್ಮ ಬೆಂಗಳೂರು ಖಾತೆದಾರರು ನಾನು ನಂದಿನಿ ಹಾಡಿಗೆ ಹೊಸ ಲೈನ್‌ ಸೇರ್ಪಡೆ ಮಾಡಿ ಹಂಚಿಕೊಂಡಿದ್ದಾರೆ.
ನಾನು ನಂದಿನಿ, 
ಬೆಂಗಳೂರು ಬಂದಿನಿ
ಯಾರು ಊಟ 🥘 ಹಾಕಲ್ಲ 
ಹಾಗಾಗಿ, ಬೆಂಗಳೂರು ಕಸ ತಿನ್ನೀನಿ
ಅದ್ರೂನು ಹಾಲು🥛 ಕೊಡ್ತೀನಿ 🤦‍
ಎಂದು ಬರೆದುಕೊಂಡಿದ್ದಾರೆ.

ನಾನು ನಂದಿನಿ ಬೆಂಗ್ಳೂರು ಬಂದೀನಿ... ವಿಕಿಪೀಡಿಯಾ ಖ್ಯಾತಿಯ ವಿಕ್ಕಿ ಈ ಹಾಡು ಫುಲ್ ವೈರಲ್

ಬೆಂಗಳೂರಿನಲ್ಲಿ ಮೇಯುವುದಕ್ಕೆ ಹುಲ್ಲು ಇಲ್ಲದಿದ್ದರೂ ಕಸವನ್ನೇ ತಿಂದು ರಸವನ್ನಾಗಿ ಮಾಡಿ ಹಾಲು ಕೊಡುವ ಸಾವಿರಾರು ಹಸುಗಳಿವೆ. ಕಾಂಕ್ರೀಟ್ ಕಾಡಾಗಿರುವ ಬೆಂಗಳೂರಿನ ಹಳೆಯ ಪ್ರದೇಶವಾಗಿರುವ ಚಾಮರಾಜಪೇಟೆ, ಕೆ.ಆರ್. ಮಾರುಕಟ್ಟೆ, ಕಾಟನ್‌ಪೇಟೆ, ವಿವಿಪುರಂ, ಬಿನ್ನಿಪೇಟೆ ಸೇರಿದಂತೆ ಹಲವು ಬಡಾವಣೆಗಳಲ್ಲಿ ಹಸುಗಳನ್ನು ಸಾಕಣೆ ಮಾಡಲಾಗುತ್ತದೆ. ಈ ಹಸುಗಳ ಗಂಜಲ ಮತ್ತು ಸಗಣಿಯನ್ನು ರಾಜಕಾಲುವೆಗಳಿಗೆ ಹರಿಸಲಾಗುತ್ತದೆ. ಇದರಿಂದ ಹಸುಗಳ ತ್ಯಾಜ್ಯ ವಿಲೇವಾರಿಗೆ ಯಾವುದೇ ಸಮಸ್ಯೆ ಇಲ್ಲದಂತಾಗಿದೆ. ಆದರೆ, ಮೇವು ಇಲ್ಲದೇ ಕಸವನ್ನು ತಿನ್ನುತ್ತವೆ.

ರಾತ್ರಿ ರಸ್ತೆಯಲ್ಲಿ ಕಟ್ಟಿದರೆ, ಹಗಲು ರಸ್ತೆಗೆ ಬಿಡುವ ಪಶುಪಾಲಕರು: ಹಸುಗಳನ್ನು ರಾತ್ರಿ ವೇಳೆ ಮನೆಯ ಮುಂಭಾಗದ ರಸ್ತೆಯಲ್ಲಿಯೇ ಕಟ್ಟಿಕೊಳ್ಳುತ್ತಾರೆ. ಆದರೆ, ಬೆಳಗ್ಗೆಯಿಂದ ಸಂಜೆವರೆಗೆ ರಸ್ತೆಯಲ್ಲಿ ಕಟ್ಟಿದರೆ ವಾಹನಗಳ ಸಂಚಾರಕ್ಕೆ ಸಮಸ್ಯೆ ಆಗಲಿದೆ ಎಂದು ಅವುಗಳನ್ನು ಮೇಯಲು ಬಿಡಲಾಗುತ್ತದೆ. ಆದರೆ, ಬರೀ ಕಾಂಕ್ರೀಟ್‌ ಕಾಡಾಗಿರುವ ನಗರದಲ್ಲಿ ಮೇಯಲು ಹುಲ್ಲು ಸಿಗದೇ ಜನರು ತೊಟ್ಟಿಗಳಲ್ಲಿ ಬೀಸಾಡಿರುವ ಹಸಿ ಕಸ, ಹಳಸಿದ ಆಹಾರ ಪದಾರ್ಥಗಳು, ಕೊಳೆತ ಹಣ್ಣುಗಳು, ತರಕಾರಿಗಳ ಸಿಪ್ಪೆಗಳನ್ನು ತಿನ್ನುತ್ತವೆ. ಈ ಹಸುಗಳಿಂದ ಬೆಳಗ್ಗೆ ಮತ್ತು ಸಂಜೆ ಹಾಲನ್ನು ಕರೆದು ಮಾರಾಟ ಮಾಡಲಾಗುತ್ತದೆ. ಕೆಲವರು ನಂದಿನಿ ಡೈರಿಗೆ ಹಾಕುತ್ತಾರೆ.

ಬೆಂಗಳೂರಿನ ಜನರಿಗೆ ಕುಡಿಯೋದಕ್ಕೂ ಕಾವೇರಿ ನೀರು ಕೊಡಲಾಗಲ್ಲ: ಗೃಹ ಸಚಿವ ಪರಮೇಶ್ವರ್‌ ಮಾಹಿತಿ

ರಸ್ತೆಗಳಲ್ಲಿ ಸಂಚಾರಕ್ಕೆ ಸಂಚಕಾರ: ಬೆಂಗಳೂರಿನ ಪ್ರಮುಖ ರಸ್ತೆಗಳಾದ ಕಾಟನ್‌ಪೇಟೆ, ಗೂಡ್ಸ್‌ಶೆಡ್‌ ರಸ್ತೆ, ಮಡಿವಾಳ, ಬಾಪೂಜಿನಗರ, ವೈಟ್‌ಫೀಲ್ಡ್‌, ದೊಮ್ಮಲೂರು, ಯಶವಂತಪುರ ಸೇರಿದಂತೆ ವಿವಿಧ ಭಾಗಗಳಲ್ಲಿ ರಸ್ತೆಗಳಲ್ಲಿ ಹಸುಗಳು ನಿಂತುಕೊಂಡು ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ತಂದೊಡ್ಡುತ್ತವೆ. ಈ ವೇಳೆ ಟ್ರಾಫಿಕ್‌ ಪೊಲೀಸರು ವಾಹನಗಳ ದಟ್ಟಣೆ ತಗ್ಗಿಸಲು ಹಸುಗಳನ್ನು ಓಡಿಸಿಕೊಂಡು ಹೋಗುತ್ತಾರೆ. ಇನ್ನು ಹಸುಗಳನ್ನು ರಸ್ತೆಗೆ ಬಿಡದಂತೆ ನಿಯಂತ್ರಣ ಮಾಡಬೇಕಾದ ಸ್ಥಳೀಯ ಆಡಳಿತ ಸಂಸ್ಥೆ ಬಿಬಿಎಂಪಿ ಅಧಿಕಾರಿಗಳು ಮಾತ್ರ ನಿದ್ದೆ ಮಾಡುತ್ತಿದ್ದಾರೆ. ಕಸವನ್ನೂ ಸ್ವಚ್ಛಗೊಳಿಸಲ್ಲ, ಕಸ ಹಾಕುವವರ ನಿಯಂತ್ರಣವನ್ನೂ ಮಾಡಲ್ಲ, ಹಸುಗಳು ರಸ್ತೆಗೆ ಬಂದರೂ ಅವುಗಳನ್ನು ಹಿಡಿದು ದಂಡವನ್ನೂ ವಿಧಿಸಲ್ಲ. ಬಿಬಿಎಂಪಿ ನಿರ್ಲಕ್ಷ್ಯದಿಂದ ಇಂತಹ ಪರಿಸ್ಥಿತಿ ಅನಿವಾರ್ಯವಾಗಿದೆ.

ನಾನು ನಂದಿನಿ ವೈರಲ್‌ ವೀಡಿಯೋದಲ್ಲೇನಿದೆ: 'ನಾನು ನಂದಿನಿ ಬೆಂಗಳೂರು ಬಂದಿನಿ, ಪಿಜಿಲಿ ಇದ್ದೀನಿ ಐಟಿ  ಕೆಲಸ ಮಾಡ್ತೀನಿ, ಊಟ ಸರಿ ಇಲ್ಲ ಅಂದ್ರೂನು ತಿಂತಿನಿ ಬಂದ ದುಡ್ಡೆಲ್ಲಾ ಮನೆಗೆ ಕಳಿಸ್ತೀನಿ, ಬಾರೆ ನಂದಿನಿ ಗೋಬಿ ತಿನಿಸ್ತೀನಿ ಬೇ ಬೇ ಬೇಡ, ಬಾರೆ ನಂದಿನಿ ಬೆಂಗಳೂರು ತೋರಿಸ್ತೀನಿ, ಓಹ್ ಬೇಡ ಓಹ್ ಬೇಡ, ಬಾರೆ ನಂದಿನಿ ಪೇಡ ತಿನ್ನಿಸ್ತೀನಿ, ಬೆ ಬೆ ಬೇಡ, ಬಾರೆ ನಂದಿನಿ ಪಿಕ್ಚರ್ ತೋರಿಸ್ತೀನಿ, ಬೇಡ ಬೇಡ, ನೋಡಮ್ಮ ಇಂಗ್ಲೀಷ್ ನೀನು ಕಲಿಬೇಕು,  ಇಲ್ಲ ಅಂದ್ರೆ ಐಟಿಲಿ ಕಷ್ಟ ಆಗುತ್ತೆ ಸರ್ ನಾನು ಕನ್ನಡ ಮೀಡಿಯಾಂನಲ್ಲಿ ಓದಿದ್ದೆ. ಅದಕ್ಕೆ ನನ್ನ ಇಂಗ್ಲೀಷ್ ಅಷ್ಟಕಷ್ಟೆ,  ಐ ಕ್ಯಾನ್ ಟ್ರೈ ಐ ಕ್ಯಾನ್ ಟಾಕ್, ಬಟ್ ವಾಟ್ ಐ ಸ್ಪೀಕ್ ಇಟ್ಸ್ ಬಟ್ಲರ್ ಇಂಗ್ಲೀಷ್'  ಇದು ಈ ಹಾಡಿನ ಲಿರೀಕ್ಸ್‌ ಆಗಿದೆ.

Latest Videos
Follow Us:
Download App:
  • android
  • ios