30 ದಾಟಿದರೂ ಮದುವೆಯಾಗದೆ ಇರಲು ಈ ವ್ಯಕ್ತಿನೇ ಕಾರಣ; ಕೊನೆಗೂ ಸತ್ಯ ಬಾಯಿಬಿಟ್ಟ ಅನುಪಮಾ ಗೌಡ!
ಮದುವೆ ಆಗುವ ನಿರ್ಧಾರದಿಂದ ದೂರ ಸರಿದಿರುವುದು ಯಾಕೆ? ಅನುಬಂಧ ವೇದಿಕೆಯಲ್ಲಿ ಅನುಪಮಾ ಹೇಳಿದ ಮಾತುಗಳು......
ಕನ್ನಡ ಕಿರುತೆರೆಯ ಅಕ್ಕ, ಬಿಗ್ ಬಾಸ್ ಸ್ಪರ್ಧಿ ಅನುಪಮಾ ಗೌಡ ಸದ್ಯ ನಟನೆಯಿಂದ ದೂರ ಉಳಿದು ನಿರೂಪಕಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೋನಾ ಲಾಕ್ ಡೌನ್ ಸಮಯದಲ್ಲಿ ಅನುಪಮಾ ಗೌಡ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು, ತಮ್ಮ ಲೈಫ್‌ಸ್ಟೈಲ್, ಫ್ಯಾಷನ್, ಆಹಾರ, ಶಾಪಿಂಗ್, ಮೇಕಪ್, ಶೂಟಿಂಗ್, ಮನೆ....ಹೀಗೆ ಸಾಲು ಸಾಲು ವಿಚಾರಗಳನ್ನು ಜನರಿಗೆ ತೋರಿಸಲು ಶುರು ಮಾಡಿದ್ದರು. ಅಲ್ಲಿಂದ ಅನುಪಮಾ ಗೌಡರವರಿಗೆ ಒಳ್ಳೆಯ ಫ್ಯಾನ್ ಬೇಸ್ ಬೆಳೆಯಿತ್ತು. ಈಗಲೂ ಅನುಪಮಾ ಅಪ್ಲೋಡ್ ಮಾಡುವ ವಿಡಿಯೋ ಮತ್ತು ಫೋಟೋಗಳನ್ನು ಲಕ್ಷಾಂತರ ಜನರು ನೋಡುತ್ತಾರೆ ಹಾಗೂ ಲೈಕ್ ಆಂಡ್ ಕಾಮೆಂಟ್ ಮಾಡುತ್ತಾರೆ.
ಕೆಲವು ದಿನಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅನುಬಂಧ ಅವಾರ್ಡ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತ್ತು. ಈ ವರ್ಷ ಅವಾರ್ಡ್ ಕಾರ್ಯಕ್ರಮದಲ್ಲಿ ಅನುಪಮಾ ಗೌಡ ಮತ್ತು ನಿರಂಜನ್ ದೇಶಪಾಂಡೆ ನಿರೂಪಣೆ ಮಾಡಿದ್ದರು. ರಿಯಲ್ ಸ್ಟಾರ್ ಉಪೇಂದ್ರ ವಿಶೇಷ ಅತಿಥಿಯಾಗಿ ಆಗಮಿಸಿದ್ದಾಗ ಅನುಪಮಾ ತಮ್ಮ ಮದುವೆ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. 'ಪ್ರೀತಿ- ಪ್ರೇಮಾ ಪುಸ್ತಕದ ಬದನೆಕಾಯಿ ಅಂತ ಡೈಲಾಗ್ ಹೇಳಿಬಿಟ್ರಿ ಅದಕ್ಕೆ ನಾನು ಇನ್ನೂ ಮದುವೆಯಾಗಿಲ್ಲ' ಎಂದು ಅನುಪಮಾ ಗೌಡ ಹೇಳುತ್ತಾರೆ. ತಕ್ಷಣವೇ ಉಪೇಂದ್ರರವರು 'ಆ ಡೈಲಾಗೇ ಪುಸ್ತಕದ ಬದನೆಕಾಯಿ ಅಮ್ಮಾ' ಎಂದಿದ್ದಾರೆ.
ಶ್ರೀಮಂತ ರಾಜಗುಳಿಗ ಕ್ಷೇತ್ರಕ್ಕೆ ಭೇಟಿ ನೀಡಿದ ಸೋನಲ್; ಹುಟ್ಟೂರು ಮರೆತಿಲ್ಲ ಎಂದ ನೆಟ್ಟಿಗರು
ಅಲ್ಲಿಗೆ ಮಾತು ನಿಲ್ಲಿಸದ ಅನುಪಮಾ ಗೌಡ 'ನಮಗೆ ನಿಮ್ಮನ್ನು ನೋಡಿದ್ರೆ ಹೊಟ್ಟೆ ಉರಿಯುತ್ತೆ' ಎಂದು ಹೇಳಿದ್ದಾರೆ. ಅನುಪಮಾರಿಗೆ ಕೌಂಟರ್ ಕೊಡಬೇಕು ಎಂದು 'ಹೊಟ್ಟೆ ಉರ್ಕೊಳ್ಳಿ ಅಂತಲೇ ಮದುವೆಯಾಗಿದ್ದು' ಎಂದಿದ್ದಾರೆ ಉಪ್ಪಿ. ಈ ಸಂಭಾಷಣೆಯನ್ನು ನೋಡಿದ ಕಲರ್ಸ್ ಕುಟುಂಬದವರು ಸಖತ್ ಎಂಜಾಯ್ ಮಾಡಿದ್ದಾರೆ.
ಅನುಪಮಾ ಗೌಡ ಬ್ರೇಕಪ್:
ಅನುಪಮಾ ಗೌಡ ಅಕ್ಕ ಸೀರಿಯಲ್ ಸಮಯದಲ್ಲಿ ಪ್ರೀತಿಯ ಬಿದ್ದಿದ್ದರು, ಹಲವು ವರ್ಷಗಳ ಕಾಲ ಲವ್ ಮಾಡಿದ್ದಾರೆ. ನಿಶ್ಚಿತಾರ್ಥ ಮತ್ತು ಮದುವೆ ಹಂತಕ್ಕೆ ಇವರ ಲವ್ ಹೋಗಿದೆ ಆದರೆ ಸಣ್ಣ ಪುಟ್ಟ ಮನಸ್ತಾಪಗಳಿಂದ ಕ್ಯಾನ್ಸಲ್ ಆಗಿದೆ. ಈ ಸತ್ಯವನ್ನು ಬಿಗ್ ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಸುವಾಗ ಅನುಪಮಾ ರಿವೀಲ್ ಮಾಡಿದ್ದರು. ಅನುಪಮಾ ಗೌಡ ಕೈಯಲ್ಲಿ ಎರಡು ರಿಂಗ್ ಒಟ್ಟಿಗೆ ಇರುವ ಟ್ಯಾಟೂ ಇದೆ, ಅದರ ನಡುವೆ ಸ್ವಲ್ಪ ಜಾಗ ಬಿಡಿಸಿದ್ದಾರೆ. ಇದನ್ನು ತಮ್ಮ ಸ್ನೇಹಿತರು ಪ್ರಶ್ನೆ ಮಾಡಿದಾಗ ನಾನು ಮದುವೆಯಾಗುವ ದಿನಾಂಕವನ್ನು ಹಾಕಿಸಬೇಕು ಎಂದು ಮಾಡಿಸಿದ್ದು ಆದರೆ ಆ ಹುಡುಗನ ಜೊತೆ ಬ್ರೇಕಪ್ ಆಯ್ತು ಎಂದಿದ್ದಾರೆ. ಅಲ್ಲಿಂದ ಸಿಂಗಲ್ ಆಗಿರುವ ಅನುಪಮಾ ಗೌಡ....ತಮ್ಮ ಪರ್ಫೆಕ್ಟ್ ಲೈಫ್ ಪಾರ್ಟನರ್‌ನ ಇನ್ನೂ ಹುಡುಕಿಕೊಂಡಿಲ್ಲ.
ತಿನ್ಬೇಕಾದ್ರೂ ನೆಟ್ಟಗೆ ಕೂರಮ್ಮ; ಜೈ ಜಗದೀಶ್ ಪುತ್ರಿ ಮತ್ತೆ ಟ್ರೋಲ್!