ಅಮೃತಧಾರೆ ಡುಮ್ಮ ಸರ್ ಗೌತಮ್‌ಗೆ ಮತ್ತೆ ಸಂಕಷ್ಟ: ಹಳೆಯ ಪ್ರೇಮಕಥೆ ಬಿಚ್ಚಿಟ್ಟ ಡೈರೆಕ್ಟರ್‌ಗೆ ನೆಟ್ಟಿಗರ ತರಾಟೆ!
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮದುವೆಯಾಗಿ ಸಂಸಾರ ಆರಂಭಿಸಿ ಮಗುವಿನ ನಿರೀಕ್ಷೆಯಲ್ಲಿದ್ದಾಗ, ನಿರ್ದೇಶಕರು ಹಳೆಯ ಪ್ರೇಯಸಿ ಮಾನ್ಯಳನ್ನು ಧಾರಾವಾಹಿಗೆ ಎಂಟ್ರಿ ಕೊಡಿಸಿದ್ದಾರೆ. ಗೌತಮ್‌ನ ನೆಮ್ಮದಿ ಕೆಡಿಸಲು ಈ ಮಾನ್ಯಳ ಕಥೆ ತಂದಿದ್ದಾರೆ ಎಂದು ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಅ.18): ಅಮೃತಧಾರೆ ಧಾರಾವಾಹಿಯ ಡುಮ್ಮ ಸರ್ ಗೌತಮ್ ಬಹುಕಾಲದ ನಂತರ ಮದುವೆಯಾಗಿ ಇದೀಗ ಸಂಸಾರ ಆರಂಭಿಸಿ ಮಗುವಿನ ನಿರೀಕ್ಷೆಯಲ್ಲಿರುವಾಗ ನಿರ್ದೇಶಕರು ಮತ್ತೊಂದು ಸಂಕಷ್ಟ ತಂದೊಡ್ಡಲು ಹಳೆಯ ಪ್ರೇಯಸಿ ಮಾನ್ಯಳನ್ನು ಧಾರಾವಾಹಿಗೆ ಎಂಟ್ರಿ ಕೊಡಿಸಿದ್ದಾರೆ. ಗೌತಮ್‌ನ ನೆಮ್ಮದಿ ಕಿತ್ತುಕೊಳ್ಳುವುದಕ್ಕೆಂದೇ ಈ ಮಾನ್ಯಳ ಕಥೆ ತರುತ್ತಿದ್ದೀರಾ ಎಂದು ವೀಕ್ಷಕರು ನಿರ್ದೇಶಕರ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಜೀ ಕನ್ನಡದ ಪ್ರಮುಖ ಧಾರಾವಾಹಿಗಳಲ್ಲಿ ಒಂದಾಗಿರುವ ಅಮೃತಧಾರೆಯಲ್ಲಿ ಮದುವೆಯನ್ನೇ ಮಾಡಿಕೊಳ್ಳುವುದಿಲ್ಲ ಎನ್ನುತ್ತಿದ್ದ ಡುಮ್ಮ ಸರ್ ಗೌತಮ್ ತಂಗಿಯ ಮದುವೆ ವೇಳೆಯಲ್ಲಿ ಮಧ್ಯಮ ವರ್ಗದ ಹುಡುಗಿ ಭೂಮಿಕಾಳನ್ನು ಮದುವೆ ಮಾಡಿಕೊಂಡಿದ್ದಾನೆ. ಮದುವೆಯಾದರೂ ಹಲವು ದಿನಗಳ ಕಾಲ ಬ್ರಹ್ಮಚರ್ಯ ಅನುಭವಿಸಿದ್ದ ಗೌತಮ್ ಇತ್ತೀಚೆಗೆ ಹೆಂಡತಿಯೊಂದಿಗೆ ಸಂಸಾರವನ್ನು ಆರಂಭಿಸಿದ್ದು, ಇದೀಗ ಹೆಂಡತಿ ಭೂಮಿಕಾ ಗರ್ಭಿಣಿ ಆಗುವ ಸಿಹಿ ಸುದ್ದಿ ನೀಡುವ ಪರಿಸ್ಥಿತಿಯಲ್ಲಿದ್ದಾಳೆ. ಇಂತಹ ಸಂದರ್ಭದಲ್ಲಿ ಗೌತಮ್ ಹಳೆಯ ಪ್ರೇಮಕಥೆಯನ್ನು ನಿರ್ದೇಶಕರು ವೀಕ್ಷಕರ ಮುಂದಿಡಲು ಸಜ್ಜಾಗಿದ್ದಾರೆ. ಅದು ಕೂಡ ಗೌತಮ್ ನೆಮ್ಮದಿಯನ್ನು ಕಿತ್ತುಕೊಳ್ಳುವುಕ್ಕೆಂದೇ ಈ ಕಥೆಯನ್ನು ಮುನ್ನೆಲೆಗೆ ತರುತ್ತಿದ್ದು, ವೀಕ್ಷಕರು ನಿರ್ದೇಶಕರ ನಡೆಗೆ ಗರಂ ಆಗಿದ್ದಾರೆ.
ಇದನ್ನೂ ಓದಿ: ಅಮೃತಧಾರೆ ಮೂಡ್ನಲ್ಲೇ ರಿಯಲ್ ಹೆಂಡ್ತಿಯನ್ನೂ ಕನ್ಫ್ಯೂಸ್ ಮಾಡ್ಕೋತಾರಾ ರಾಜೇಶ್? ದಂಪತಿ ಹೇಳಿದ್ದು ಕೇಳಿ
ಧಾರಾವಾಹಿಯಲ್ಲಿ ನಿರ್ದೇಶಕರು ಗೌತಮ್ ಮಾಜಿ ಪ್ರೇಯಸಿ ಮಾನ್ಯಳ ಪಾತ್ರವನ್ನು ಪರಿಚಯ ಮಾಡುವ ಮೊದಲೇ ಆಕೆಯನ್ನು ಆಕ್ಸಿಡೆಂಟ್‌ನಲ್ಲಿ ಸಾಯಿಸಿರುವ ನಿರ್ದೇಶಕರು ಅದರ ಹಿಂದಿನ ಕಥೆಯನ್ನು ವೀಕ್ಷಕರ ಮುಂದಿಡುತ್ತಿದ್ದಾರೆ. ಆದರೆ, ಇದೀಗ ಮಾನ್ಯಳ ತಂಗಿ ಧಾನ್ಯ ತನ್ನ ಅಕ್ಕನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಯಾರೋ ಬೇಕಂತಲೇ ಆಕ್ಸಿಡೆಂಟ್ ಮಾಡಿಸಿ ಕೊಲೆ ಮಾಡಿದ್ದಾರೆ ಎಂಬ ಅನುಮಾನದಿಂದ ಸಾವಿನ ಹಿಂದಿನ ರಹಸ್ಯ ಬೇಧಿಸಲು ಮುಂದಾಗಿದ್ದಾಳೆ. ಇದರಿಂದಾಗಿ ಅಕ್ಕನ ಪ್ರಿಯತಮ ಗೌತಮ್‌ಗೆ ಕರೆ ಮಾಡಿ ಮಾತನಾಡಿದ್ದಾಳೆ. ಆದರೆ, ಧಾನ್ಯ ಹೇಳಿದ ನಂತರವೇ ಗೌತಮ್‌ಗೆ ಮಾನ್ಯ ಸತ್ತಿರುವ ವಿಚಾರ ತಿಳಿದಿದ್ದು, ಅದರಲ್ಲಿಯೂ ಮಾನ್ಯಳನ್ನು ಕೊಲೆ ಮಾಡಲಾಗಿದೆ ಎಂಬ ವಿಚಾರ ಕೇಳಿ ಕಸಿವಿಸಿಗೊಂಡಿದ್ದಾನೆ.
ಇದನ್ನೂ ಓದಿ: ವೀಕ್ಷಕರ ಎದೆಯಲ್ಲಿ ಕಚಗುಳಿಯಿಟ್ಟ ಗೌತಮ್ - ಭೂಮಿ ರೊಮ್ಯಾಂಟಿಕ್ ಮಾತು...ಬೇಗ ಗುಡ್ ನ್ಯೂಸ್ ಕೊಡಿ ಅಂತಿದ್ದಾರೆ
ಇನ್ನು ಧಾರಾವಾಹಿಯ ಪ್ರೋಮೋ ನೋಡಿದ ನೆಟ್ಟಿಗರು ಅಮೃತಧಾರೆ ಧಾರಾವಾಹಿ ಒಂದೊಳ್ಳೆ ಇಂಟ್ರೆಸ್ಟಿಂಗ್ ಆಗಿ ವೀಕ್ಷಕರ ಮನಸ್ಸನ್ನು ಗೆದ್ದಿತ್ತು. ಆದರೆ, ಇದೀಗ ನಿರ್ದೇಶಕರೇ ಸ್ವತಃ ಧಾರಾವಾಹಿ ಹಾಳು ಮಾಡುತ್ತಿದ್ದಾರೆ. ಡೈರೆಕ್ಟರ್ ನೀವು ದಯವಿಟ್ಟು ಭೂಮಿಕಾ ಮತ್ತು ಗೌತಮ್ ಕಥೆಯನ್ನು ಮತ್ತು ಅವರ ಪ್ರೀತಿಯನ್ನು ತೋರಿಸಿ ಸಾಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು 'ಇವಳು ಯಾರು ಮತ್ತೆ ಮಾನ್ಯ ಮತ್ತು ಅವರ ತಂಗಿ ಅಮಾನ್ಯ. ಡುಮ್ಮ ಸರ್‌ಗೆ ಒಂದರ ಮೇಲೆ ಒಂದು ನೋವು' ಎಂದಿದ್ದಾರೆ. ಮತ್ತೊಬ್ಬರು 'ಮಾನ್ಯ ಅವರನ್ನ ಯೂಸ್ ಮಾಡ್ಕೊಂಡಿದ್ದು ಶಕುಂತಲಾ, ನಂತರ ಬಳಸಿಕೊಂಡು ಸಾಯ್ಸೋದು ಇವರ ಕೆಲಸ ನಾ? ಎಂದು ಕಾಮೆಂಟ್ ಮೂಲಕ ನಿರ್ದೇಶಕರಿಗೆ ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ನಿರ್ದೇಶಕರೇ ನೀವು ಮಾನ್ಯಳ ಅಪಘಾತದ ಕತೆಯನ್ನು ಯಾವಾಗ ಬಿಚ್ಚಿಡ್ತೀರಾ? ನಾವು ಯಾವಾಗ ನೋಡೋದು ಎಂದು ಕೇಳಿದ್ದಾರೆ.