ಗೌತಮ್‌ಗೆ ಎಲ್ಲಾ ಸತ್ಯ ತಿಳಿದಿದ್ದು, ಭೂಮಿಕಾಳನ್ನು ದೀಪಿಕಾ ಹೆಸರಿನಲ್ಲಿ ಮನೆಗೆ ಕರೆತಂದಿದ್ದಾನೆ. ಶಕುಂತಲಾ ಮತ್ತು ಜೈದೇವ್‌ಗೆ ತಕ್ಕ ಶಾಸ್ತಿ ಮಾಡಲು ಇಬ್ಬರೂ ಸೇರಿ ಹೊಸ ಆಟ ಶುರು ಮಾಡಿದ್ದಾರೆ. ರೋಚಕ ಹಂತ ತಲುಪಿರುವ ಈ ಸೀರಿಯಲ್ ಶೀಘ್ರದಲ್ಲೇ ಮುಕ್ತಾಯವಾಗುವ ಸಾಧ್ಯತೆಯಿದೆ.

ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಈಗ ರೋಚಕ ಹಂತ ತಲುಪಿದೆ. ಗೌತಮ್​ಗೆ ಎಲ್ಲಾ ವಿಷಯನೂ ಗೊತ್ತಾಗಿದೆ. ಇದೇ ಕಾರಣಕ್ಕೆ ದೀಪಿಕಾ ಎಂದು ಭೂಮಿಕಾಳನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ ಗೌತಮ್​. ಮನೆಗೆ ಬರುತ್ತಿದ್ದಂತೆಯೇ, ಭೂಮಿಕಾ ಮತ್ತು ಗೌತಮ್​ ಕ್ಲೋಸ್​ ಆಗಿರೋದನ್ನು ನೋಡಿದ ಶಕುಂತಲಾಗೆ ತಲೆ ತಿರುಗಿದೆ. ಅದಕ್ಕೇ ಅವಳು, ನೀನು ಮೊದಲಿನ ಹಾಗೆ ಇಲ್ಲ. ಈಗ ಇಷ್ಟು ಕ್ಲೋಸ್​​ ಯಾಕೆ ಆಗ್ತಿದ್ದಿಯಾ ಎಂದು ಪ್ರಶ್ನಿಸಿದಾಗ, ದೀಪಿಕಾ ಆಗಿರೋ ಭೂಮಿಕಾ, ನೀವೇ ಹೇಳಿದ್ರಲ್ಲ, ಗೌತಮ್ ಜೊತೆ ಕ್ಲೋಸ್​ ಆಗಿರು, ಇಲ್ಲಾಂದ್ರೆ ಡೌಟ್​ ಬರುತ್ತೆ ಅಂತ. ಅದಕ್ಕಾಗಿಯೇ ಕ್ಲೋಸ್​​ ಆಗಿದ್ದೇನೆ ಎಂದಳು.

ಶಕುಂತಲಾ ಕಕ್ಕಾಬಿಕ್ಕಿ

ಇದನ್ನು ಕೇಳಿದ ಶಕುಂತಲಾ, ಪರವಾಗಿಲ್ಲ, ನೀನು ತುಂಬಾ ಚೆನ್ನಾಗಿ ನಾಟಕವಾಡುತ್ತಿದ್ದಿ ಎಂದಾಗ, ಟಾಂಟ್ ಕೊಟ್ಟ ಭೂಮಿಕಾ, ನೀವು ನನಗಿಂತಲೂ ಚೆನ್ನಾಗಿ ಆ್ಯಕ್ಟ್​ ಮಾಡುತ್ತೀರಿ ಎಂದು ಹೇಳಿ ಅಲ್ಲಿಂದ ಹೋಗಿದ್ದಾಳೆ. ಇದನ್ನು ಕೇಳಿ ಶಕುಂತಲಾಗೆ ತಲೆ ತಿರುಗಿದಂತಾಗಿದೆ. ಅದ್ಯಾವ ಕಾರಣಕ್ಕೂ ಶಕುಂತಲಾಗೆ ಇವಳೇ ಭೂಮಿಕಾ ಇರಬಹುದು ಎನ್ನುವ ಡೌಟ್​ ಬಂದಿಲ್ಲ. ಆದರೆ ದೀಪಿಕಾಗೆ ಸತ್ಯ ತಿಳಿದು ನನಗೆ ಹೀಗೆಲ್ಲಾ ಹೇಳಿರಬಹುದಾ ಎಂದು ಡೌಟ್​ ಬಂದಿದೆ.

ಟ್ವಿಸ್ಟ್​ ಮೇಲೆ ಟ್ವಿಸ್ಟ್​

ಈಗ ಬಂದಿದೆ ಸಕತ್​ ಟ್ವಿಸ್ಟ್​. ಭೂಮಿಕಾ ಮನೆಗೆ ಬಂದ ಮೇಲೆ ಇನ್ನು ಶಕುಂತಲಾ ಮತ್ತು ಜೈದೇವ್​ ಆಟ ನಡೆಯಲ್ಲ. ಇಬ್ಬರಿಗೂ ಗೌತಮ್​ ಮತ್ತು ಭೂಮಿಕಾ ಸೇರಿ ತಕ್ಕ ಶಾಸ್ತಿ ಮಾಡೋದು ಇದ್ದೇ ಇದೆ. ಅಮೃತಧಾರೆ ಸೀರಿಯಲ್​ ಕೊನೆಯ ಹಂತದಲ್ಲಿ ಇದ್ದು, ಇನ್ನೇನು ಸ್ವಲ್ಪ ದಿನದಲ್ಲಿಯೇ ಭೂಮಿಕಾಮತ್ತು ಗೌತಮ್​ ಅಸಲಿ ಆಟ ಶುರು ಮಾಡಿಕೊಳ್ಳುತ್ತಾರೆ.

ಅಲ್ಲಿಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಪಡೆಯುತ್ತಿದ್ದ ಅಮೃತಧಾರೆ ಸೀರಿಯಲ್​ ಕೊನೆಯವರೆಗೂ ರೋಚಕತೆಯನ್ನು ಉಳಿಸಿಕೊಂಡಿರುವುದು ಕುತೂಹಲವಾಗಿದೆ. ಈಗಲೂ ಈ ಸೀರಿಯಲ್​ಗೆ ಸಿಕ್ಕಾಪಟ್ಟೆ ಬೇಡಿಕೆ ಇದ್ದು, ಇನ್ನೇನು ಸೀರಿಯಲ್​ ಮುಗಿಯತ್ತೆ ಎನ್ನುವಾಗಲೇ ಹಲವು ಬಾರಿ ಮತ್ತೆ ಟ್ವಿಸ್ಟ್​ ಕೊಡಲಾಗಿದೆ. ಆದರೆ ಈ ಸಲ, ಬಹುಶಃ ಹಾಗೆ ಆಗಲಿಕ್ಕಿಲ್ಲ. ಸೀರಿಯಲ್​ ಮುಗಿಯತ್ತೆ ಎಂದೇ ಹೇಳಲಾಗುತ್ತಿದೆ. ಏಕೆಂದರೆ ಜೀ ಅವಾರ್ಡ್​ಗೆ ಬಂದಿದ್ದ ಭೂಮಿಕಾ ಅರ್ಥಾತ್​ ನಟಿ, ಛಾಯಾ ಸಿಂಗ್​ ಅವರು ಕೂಡ ಈ ಬಗ್ಗೆ ಹಿಂಟ್​ ನೀಡಿದ್ದರು.