ಕೊನೆಗೂ ಗೌತಮ್-ಭೂಮಿಕಾ ಕೈಯಲ್ಲಿ ತಗ್ಲಾಕೊಂಡ ಜೈದೇವ್? ನಿಜ ಜೀವನದಲ್ಲಿ ಹೀಗೆ ಆಗುತ್ತೆ ಎಂದ ಫಾನ್ಸ್
ಗೌತಮ್ ಮತ್ತು ಭೂಮಿಕಾ ಗೋಡೌನ್ ಒಳಗೆ ಬಂದು ಎಲ್ಲಾ ಕಡೆ ಹುಡುಕಾಡಿದರೂ ಯಾರು ಸಿಕ್ಕಿಲ್ಲ. ಜೈದೇವ್ ಆಂಡ್ ಗ್ಯಾಂಗ್ ಕೆಂಚನ ಬಾಯಿಗೆ ಬಟ್ಟೆ ಕಟ್ಟಿ, ಬಿಗಿಯಾಗಿ ಹಿಡಿದುಕೊಂಡಿದ್ದಾರೆ. ಎಷ್ಟೇ ಹುಡುಕಾಡಿದರೂ ಯಾರೂ ಸಿಗದ ಹಿನ್ನೆಲೆ ಗೌತಮ್ ಮತ್ತು ಭೂಮಿಕಾ ಹೊರಗೆ ಬಂದಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿಯ (Amruthadhaare Serial) ಪ್ರತಿ ಸಂಚಿಕೆಯೂ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮನೆಯಲ್ಲಿದ್ದುಕೊಂಡೆ ಅಣ್ಣ ಗೌತಮ್‌ಗೆ (Gautham) ಮೋಸ ಮಾಡುತ್ತಿರುವ ಜೈದೇವ್ ಮತ್ತೊಮ್ಮೆ ತಗ್ಲಾಕ್ಕೊಳುವ ಸನ್ನಿವೇಶ ಬಂದಿದೆ. ಇಂದು ಪ್ರಸಾರವಾದ ಸಂಚಿಕೆಯಲ್ಲಿ ಗೌತಮ್ ಮತ್ತು ಭೂಮಿಕಾ (Bhumika) ತಮ್ಮ ವಿರುದ್ಧ ಸಂಚು ರೂಪಿಸುತ್ತಿರೋರು ಯಾರು ಎಂದು ಹುಡುಕಾಟಕ್ಕೆ ಮುಂದಾಗಿದ್ದಾರೆ. ಕಂಪನಿಯ ಟೆಂಡರ್ ತಪ್ಪಲು ಕಾರಣ ಯಾರು? ಇತ್ತ ಭೂಮಿಕಾಳ ಅಪಹರಣಕ್ಕೆ ಜೈದೇವ್ ಕಾರಣ ಅಂದಿರೋ ಕೆಂಚ ಸಾಕ್ಷ್ಯ ಕೊಡೋದಾಗಿ ಹೇಳಿದ್ದಾನೆ.
ಭೂಮಿಕಾ ಮತ್ತು ಗೌತಮ್‌ಗೆ ಸಾಕ್ಷ್ಯ ಕೊಡ್ತೀನಿ ಅಂದಿರೋ ಕೆಂಚ ಇದೀಗ ಜೈದೇವ್ ಗ್ಯಾಂಗ್ ವಶದಲ್ಲಿದ್ದಾನೆ. ಇತ್ತ ಕಾರ್ ಜಿಪಿಎಸ್ ಆಧರಿಸಿ ಸ್ಥಳಕ್ಕೆ ಬಂದಿರೋ ಭೂಮಿಕಾ ಮತ್ತು ಗೌತಮ್ ಹಣ ಕೊಡಲು ಬಂದು ವ್ಯಕ್ತಿಯನ್ನು ಹುಡುಕುತ್ತಿದ್ದಾರೆ. ಇತ್ತ ಗೌತಮ್ ಮತ್ತು ಭೂಮಿಕಾ ಗೋಡೌನ್ ಒಳಗೆ ಬಂದು ಎಲ್ಲಾ ಕಡೆ ಹುಡುಕಾಡಿದರೂ ಯಾರು ಸಿಕ್ಕಿಲ್ಲ. ಜೈದೇವ್ ಆಂಡ್ ಗ್ಯಾಂಗ್ ಕೆಂಚನ ಬಾಯಿಗೆ ಬಟ್ಟೆ ಕಟ್ಟಿ, ಬಿಗಿಯಾಗಿ ಹಿಡಿದುಕೊಂಡಿದ್ದಾರೆ. ಎಷ್ಟೇ ಹುಡುಕಾಡಿದರೂ ಯಾರೂ ಸಿಗದ ಹಿನ್ನೆಲೆ ಗೌತಮ್ ಮತ್ತು ಭೂಮಿಕಾ ಹೊರಗೆ ಬಂದಿದ್ದಾರೆ.
ಜೈದೇವ್ ಮೋಸದ ಕೋಟೆ ಭೇದಿಸಲು ಭೂಮಿಕಾಗೆ ಮಲ್ಲಿ ಹೆಲ್ಪ್!
ಕಾರ್, ಹಣ ಎಲ್ಲಾ ಸಿಕ್ತು!
ಹೊರಗೆ ಬರುತ್ತಲೇ ತಮಗೆ ಮಾಹಿತಿ ನೀಡಿದ್ದ ಮಧುಗೆ ಕಾಲ್ ಮಾಡುವ ಗೌತಮ್, ನಮಗೆ ಯಾರೂ ಸಿಗುತ್ತಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ಉತ್ತರಿಸುವ ಮಧು, ಕಾರ್ ಲೊಕೇಶನ್ ನೀವಿದ್ದ ಸ್ಥಳದಲ್ಲಿಯೇ ತೋರಿಸುತ್ತಿದೆ. ಹಾಗಾಗಿ ಅಲ್ಲಿಯೇ ಸುತ್ತಮುತ್ತ ಹುಡುಕಾಡಿ ಎಂದು ಹೇಳುತ್ತಾನೆ. ಮಧು ಮಾತಿನಂತೆ ಮತ್ತೆ ಹುಡುಕಾಟಕ್ಕೆ ಮುಂದಾದಾಗ ಹಣ ತಂದಿದ್ದ ವ್ಯಕ್ತಿಯ ಕಾರ್ ಕಾಣಿಸುತ್ತಿದೆ. ಕಾರ್ ಬಳಿ ಬಂದಾಗ ಒಳಗೆ ಹಣದ ಕಂತೆ ಕಾಣುತ್ತದೆ. ಆಗ ಕಾರ್, ಹಣ ಇಲ್ಲೇ ಇದೆ ಅಂದ್ರೆ ಸುತ್ತಮುತ್ತಾನೇ ಇರುತ್ತಾರೆ. ಮತ್ತೆ ಒಳಗೆ ಹೋಗಿ ಹುಡುಕೋಣ ಬನ್ನಿ ಎಂದು ಗೌತಮ್‌ನನ್ನು ಭೂಮಿಕಾ ಕರೆದುಕೊಂಡು ಹೋಗುತ್ತಾಳೆ.
ಅಷ್ಟರೊಳಗೆ ರೌಡಿಗಳು ಕೆಂಚನನ್ನು ಕರೆದುಕೊಂಡು ಹೋಗುತ್ತಿರೋದನ್ನು ಗೌತಮ್, ಭೂಮಿಕಾ ನೋಡಿ ಹಿಂಬಾಲಿಸಿಕೊಂಡು ಓಡಿ ಹೋಗ್ತಾರೆ. ಆದರೆ ಯಾರು ಇವರ ಕೈಗೆ ಸಿಗೋದಿಲ್ಲ. ಕೊನೆಗೆ ಹಿಂದಿರುಗಿ ಬಂದಾಗ ಅಲ್ಲೇ ಅಡಗಿಕೊಂಡಿದ್ದ ಜೈದೇವ್ ಕಾಣಿಸೋ ರೀತಿಯಲ್ಲಿ ಸಂಚಿಕೆಯನ್ನು ಮುಗಿಸಲಾಗಿದೆ. ನಿಜವಾಗಿಯೂ ಜೈದೇವ್ ಸಿಕ್ಕಿ ಹಾಕಿಕೊಳ್ತಾನಾ ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಧಾರಾವಾಹಿ ವಿಡಿಯೋಗೆ ಫೇಸ್‌ಬುಕ್‌ನಲ್ಲಿ ಏನಾದ್ರೂ ಸುಳ್ಳು ಕತೆ ಹೇಳಿ ನಾಟಕ ಮಾಡ್ತಾನೆ. ಹಾಗೇ ಕೆಂಚನ ಕತೆ ಮುಗಿಸ್ತಾನೆ.ಕೇಡಿಗಳನ್ನು ನಂಬಿಕೊಂಡ ಮುಗ್ಧರೇ ಮೊದಲು ಬಲಿಯಾಗೋದು ವಿಪರ್ಯಾಸ. ವಿಧಿ ಲೀಲೆ. ನಿಜ ಜೀವನದಲ್ಲಿ ಸಹ ಹೀಗೇನೇ ಆಗುತ್ತದೆ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
ಮದುಮಗಳಂತೆ ಕಂಗೊಳಿಸಿದ ಅಮೃತಧಾರೆ ಭೂಮಿಕಾ: ಡುಮ್ಮಾ ಸರ್ ಬಿದ್ದೋಗೋದು ಗ್ಯಾರೆಂಟಿ ಎಂದ ಫ್ಯಾನ್ಸ್
ಭುಮಿಕಾ ವರ್ಸಸ್ ಜೈದೇವ್
ಈ ಹಿಂದೆ ಗೌತಮ್ ಗೆಳೆಯ ಆನಂದ್ ಮೇಲೆ ಕಳ್ಳತನದ ಆರೋಪ ಮಾಡಿದ್ದ ಜೈದೇವ್ ರೆಡ್ ಹ್ಯಾಂಡ್ ಆಗಿ ಭೂಮಿಕಾ ಕೈಗೆ ಸಿಕ್ಕಿ ಹಾಕಿಕೊಂಡಿದ್ದನು. ಮೋಸದಿಂದ ಅಪ್ಪಿಯನ್ನು ಮದುವೆಯಾಗಲು ಮುಂದಾಗಿದ್ದ ವೇಳೆಯೂ ಮಲ್ಲಿಗೆ ಭೂಮಿಕಾ ನ್ಯಾಯ ಕೊಡಿಸಿದ್ದಳು. ಹಾಗಾಗಿ ಭೂಮಿಕಾ ಕಂಡರೆ ಜೈದೇವ್ ಕೆಂಡವಾಗುತ್ತಾನೆ. ಹಾಗಾಗಿ ಚಿಕ್ಕಮಗಳೂರಿನಲ್ಲಿ ಕೆಂಚನ ಮೂಲಕ ಭೂಮಿಕಾಳನ್ನು ಕೊಲೆ ಮಾಡಲು ಸಂಚು ರೂಪಿಸಿ ಜೈದೇವ್ ವಿಫಲವಾಗಿದ್ದನು. ತನ್ನ ಮೇಲೆ ಯಾವುದೇ ಅನುಮಾನ ಬರದಿರಲಿ ಎಂದು ಮನೆಯಲ್ಲಿ ಒಳ್ಳೆಯವನಂತೆ ಜೈದೇವ್ ನಟಿಸುತ್ತಿದ್ದಾನೆ.