Asianet Suvarna News Asianet Suvarna News

ಜೈದೇವ್ ಮೋಸದ ಕೋಟೆ ಭೇದಿಸಲು ಭೂಮಿಕಾಗೆ ಮಲ್ಲಿ ಹೆಲ್ಪ್!

ಚಿಕ್ಕಮಗಳೂರಿನಲ್ಲಿ ಭೂಮಿಕಾಳನ್ನು ಅಪರಿಹರಿಸಿದ ವ್ಯಕ್ತಿಯೇ  ಜೈದೇವ್‌ಗೆ ಕಾಲ್ ಮಾಡುತ್ತಿದ್ದಾನೆ. ಭೂಮಿಕಾ ಫೋನ್ ರಿಸೀವ್ ಮಾಡ್ತಾಳಾ? ಅತ್ತಿಂದ ಕೇಳುವ ಧ್ವನಿಯನ್ನು ಭೂಮಿಕಾ ಗುರುತಿಸುತ್ತಾಳಾ ಎಂಬುವುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

Amrutadhare serial update bhoomika searching jai  dev  bedroom mrq
Author
First Published Jun 18, 2024, 1:24 PM IST

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿ ದಿನದಿಂದ ದಿನಕ್ಕೆ ವೀಕ್ಷಕರ ಕುತೂಹಲವನ್ನು ಹೆಚ್ಚು ಮಾಡುತ್ತಿದೆ. ಗೌತಮ್ ಕಂಪನಿಗೆ ಸಿಗಬೇಕಾದ ಟೆಂಡರ್, ಬೇರೆ ಸಂಸ್ಥೆಯ ಪಾಲಾಗಿದೆ. ತನ್ನ ಕಂಪನಿಯವರಿಂದಲೇ ಮಾಹಿತಿ ಸೋರಿಕೆಯಾಗಿದ ಎಂಬ ಅನುಮಾನ ಗೌತಮ್‌ಗೆ ಬಂದಿದೆ. ಹಾಗಾಗಿ ಈ ಬಗ್ಗೆ ತನಿಖೆ ನಡೆಸಲು ಗೌತಮ್ ಸೂಚಿಸಿದ್ದಾನೆ. ಆದ್ರೆ ಭೂಮಿಕಾಗೆ ಮೈದುನ ಜೈದೇವ್ ಮೇಲೆಯೇ ಬಲವಾದ ಅನುಮಾನ ಬಂದಿದೆ. ತನ್ನ ಅನುಮಾನ ಬಗೆಹರಿಸಿಕೊಳ್ಳಲು ಮಲ್ಲಿಯನ್ನು ಭೂಮಿಕಾ ಬಳಸಿಕೊಂಡಿದ್ದಾಳೆ.

ಮಲ್ಲಿ ಗರ್ಭಿಣಿಯಾಗಿದ್ದು, ಆಕೆಗೆ ಗಂಡನ ಜೊತೆ ವಾಕಿಂಗ್ ಹೋಗುವಂತೆ ಭೂಮಿಕಾ ಹೇಳಿದ್ದಾಳೆ. ಮಲ್ಲಿ ಮುಂದೆ ಒಳ್ಳೆಯವನಂತೆ ನಟಿಸುತ್ತಿರುವ ಜೈದೇವ್, ಹೆಂಡತಿ ಕರೆಯುತ್ತಿದ್ದಂತೆ ವಾಕಿಂಗ್‌ಗೆ ಹೋಗಲು ಸಿದ್ಧನಾಗಿದ್ದಾನೆ. ಮೊಬೈಲ್ ಬೆಡ್‌ರೂಮ್‌ನಲ್ಲಿಯೇ ಬಿಟ್ಟ ಜೈದೇವ್ ಪತ್ನಿ ಮಲ್ಲಿ ಜೊತೆ ವಾಕಿಂಗ್ ಹೋಗಿದ್ದಾನೆ. 

ಫೋನ್ ಕಾಲ್ ರಿಸೀವ್ ಮಾಡ್ತಾಳಾ ಭೂಮಿಕಾ?

ಇತ್ತ ಭೂಮಿಕಾ ಇಬ್ಬರ ಬೆಡ್‌ರೂಮ್‌ಗೆ ಟೆಂಡರ್ ಕುರಿತು ಯಾವುದಾದ್ರೂ ದಾಖಲೆಗಳು ಸಿಗುತ್ತಾ ಎಂದು ಭೂಮಿಕಾ ಹುಡುಕಾಟ ನಡೆಸುತ್ತಿದ್ದಾಳೆ. ಈ ವೇಳೆ ಜೈದೇವ್ ಮೊಬೈಲ್‌ಗೆ ಪದೇ ಪದೇ ಕಾಲ್ ಬರುತ್ತಿದೆ. ಚಿಕ್ಕಮಗಳೂರಿನಲ್ಲಿ ಭೂಮಿಕಾಳನ್ನು ಅಪರಿಹರಿಸಿದ ವ್ಯಕ್ತಿಯೇ  ಜೈದೇವ್‌ಗೆ ಕಾಲ್ ಮಾಡುತ್ತಿದ್ದಾನೆ. ಭೂಮಿಕಾ ಫೋನ್ ರಿಸೀವ್ ಮಾಡ್ತಾಳಾ? ಅತ್ತಿಂದ ಕೇಳುವ ಧ್ವನಿಯನ್ನು ಭೂಮಿಕಾ ಗುರುತಿಸುತ್ತಾಳಾ ಎಂಬುವುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಅಧಿಕಾರ ನಿನಗೇ ಸಿಗತ್ತಮ್ಮಾ... ಪ್ಲೀಸ್​ ಒಡವೆ ಹೇರ್ಕೊಬೇಡ ತಾಯಿ... ಭೂಮಿಕಾಗೆ ನೆಟ್ಟಿಗರ ಕಿವಿಮಾತು!

ಭೂಮಿಕಾಗೆ ಸಿಕ್ತು ತಮ್ಮನ ಸಹಾಯ

ಇತ್ತ ಮಲ್ಲಿ ತನ್ನ ಗಂಡ ಸಂಪೂರ್ಣವಾಗಿ ಬದಲಾಗಿದ್ದು, ತನ್ನೊಂದಿಗೆ ಚೆನ್ನಾಗಿದ್ದಾರೆ ಎಂದು ಭೂಮಿಕಾ ಬಳಿ ಹೇಳಿಕೊಂಡಿದ್ದಾಳೆ. ಇತ್ತ ಭೂಮಿಕಾಗೆ ಸಹಾಯ ಮಾಡಲು ತಮ್ಮ ಜೀವ ಸಹ ಮುಂದಾಗಿದ್ದಾನೆ. ಟೆಂಡರ್ ಪಡೆದುಕೊಂಡಿರುವ ಕಂಪನಿಯಲ್ಲಿ ತನ್ನ ಪರಿಚಯದವರು  ಕೆಲಸ ಮಾಡುತ್ತಿದ್ದು, ಅವರ ಮೂಲಕ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾನೆ.

ಜೈದೇವ್‌ಗೆ ಮಾವನ ಎಚ್ಚರಿಕೆ

ಗೌತಮ್ ಟೆಂಡರ್ ಕುರಿತು ತನಿಖೆ ನಡೆಸಲು ಪ್ರೈವೇಟ್ ಏಜೆನ್ಸಿಗೆ ಆದೇಶ ನೀಡಿರುವ ವಿಷಯವನ್ನ ಜೈದೇವ್‌ಗೆ ಸೋದರ ಮಾವ ಹೇಳುತ್ತಾನೆ. ನನ್ನನ್ನು ಹಿಡಿಯಲು ಸಾಧ್ಯವೇ ಇಲ್ಲ. ಟೆಂಡರ್ ಸಿಕ್ಕವರೊಂದಿಗೆ ನಾನು ಚಾಟ್ ಮಾಡಿರೋದಕ್ಕೆ ಯಾವುದೇ ದಾಖಲೆಗಳು ಇಲ್ಲ ಎಂದು ಗಾಯಗೊಂಡ ಸಿಂಹದ ಉಸಿರು ಅದರ ಘರ್ಜನೆಗಿಂತ ಭಯಂಕರವಾಗಿರುತ್ತದೆ ಎಂದು ಸಿನಿಮಾದ ಡೈಲಾಗ್ ಹೊಡೆದಿದ್ದಾನೆ.

ಅಮೃತಧಾರೆ: ಎಲ್ಲೆಲ್ಲೂ ಚಿಕನ್, ಭೂಮಿಕಾ ಸೇಡಿನ ಜ್ವಾಲೆಗೆ ತತ್ತರಿಸಿದ ಡುಮ್ಮ ಸರ್!

ಅಮೃತಧಾರೆ ಈ ಹೆಸರು ಕೇಳಿದರೆ ಸೀರಿಯಲ್​ ವೀಕ್ಷಕರಿಗೆ ಅದೇನೋ ಒಂಥರಾ ರೋಮಾಂಚನ ಆಗುವುದು ಇದೆ. ಕಾರಣ, ಮಧ್ಯ ವಯಸ್ಕರಾಗಿರುವ ಇಬ್ಬರ ನಡುವಿನ ಅಪರೂಪದ ಪ್ರೇಮ ಕಥೆ ಇದು. ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಈ ಸೀರಿಯಲ್​ ಹಲವು ಸೀರಿಯಲ್​ಗಳಿಗಿಂತಲೂ ಭಿನ್ನವಾಗಿರುವ ಕಾರಣ, ಇದನ್ನು ಪ್ರೇಕ್ಷಕರಿಗೆ ಅಚ್ಚುಮೆಚ್ಚಿನ ಸೀರಿಯಲ್​ ಆಗಿದೆ. ಸದ್ಯ ಸೀರಿಯಲ್​ ಪ್ರೇಮಿಗಳ ಮನಸ್ಸನ್ನು ಗೆಲ್ಲುತ್ತಿರುವ ಸೀರಿಯಲ್​ಗಳ ಪೈಕಿ ಜೀ ಕನ್ನಡದ ಅಮೃತಧಾರೆ ಅಗ್ರಸ್ಥಾನ ಪಡೆದಿದೆ. 

Latest Videos
Follow Us:
Download App:
  • android
  • ios