ಬದುಕೇ ಹೀಗಲ್ವಾ..? ಕುತೂಹಲದ ಪೋಸ್ಟ್​ ಶೇರ್​ ಮಾಡಿದ ಅಮೃತಧಾರೆ ಗೌತಮ್​ ಅಮ್ಮ, ನಟಿ ಚಿತ್ಕಲಾ

ಅಮೃತಧಾರೆ ಭಾಗ್ಯಮ್ಮ ಪಾತ್ರಧಾರಿ ಚಿತ್ಕಲಾ ಬಿರಾದಾರ್​, ಸುಧಾ ಪಾತ್ರಧಾರಿ ಮೇಘಾ ಶೆಣೈ ಬಾಲಕಿ ಜೊತೆ ರೀಲ್ಸ್​ ಮಾಡಿದ್ದಾರೆ. ಅದೀಗ ವೈರಲ್​ ಆಗಿದೆ.
 

Amrutadhare  Bhagyamma Chitkala Biradar and Sudhas character Megha Shenoy reels gone viral

 ಬದುಕೇ ಹೀಗಲ್ವಾ..? ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು,ಇನ್ನೆಲ್ಲೋ ಉಳಿದು ಅಳಿಯುವ ಈ ಜಾತ್ರೆಯಲ್ಲಿ ಸುಖ ಬಂದಾಗ ಹಿಗ್ಗದೆ, ದುಖಃ ಬಂದಾಗ ಕುಗ್ಗದೆ ಬದುಕುವುದು ಕೂಡ ಒಂದು ಕಲೆನೇ ಅಲ್ಲವೆ? ಜೀವನ ಇರುವುದೇ ಸಂಭ್ರಮಿಸೊಕೆ... ಹೀಗೆಂದು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ ನಟಿ ಚಿತ್ಕಲಾ ಬಿರಾದಾರ್​. ಚಿತ್ಕಲಾ ಎಂದರೆ ಬಹುತೇಕರಿಗೆ ತಿಳಿಯದೇ ಹೋಗಬಹುದು. ಇವರೇ ಅಮೃತಧಾರೆ ಸೀರಿಯಲ್​ ಗೌತಮ್​ ದಿವಾನ್​ ಅಮ್ಮ ಭಾಗ್ಯಮ್ಮ. ಸದ್ಯ ನೆನಪಿನ ಶಕ್ತಿ ಕಳೆದುಕೊಂಡಿರುವ ಭಾಗ್ಯಮ್ಮನಿಗೆ ಮಗನೇ ಆರೈಕೆ ಮಾಡುತ್ತಿದ್ದಾನೆ. ಆಕೆಗೆ ಯಾವಾಗ ನೆನಪು ಬರುತ್ತದೆಯೋ ಎಂದು ಕಾಯುತ್ತಿದ್ದಾನೆ ಮಗ. ಇದೀಗ ಭಾಗ್ಯಮ್ಮ, ಗೌತಮ್​  ದಿವಾನ್​ ತಂಗಿ ಸುಧಾ ಹಾಗೂ ಮಗಳು ಸೇರಿ ಒಂದು ರೀಲ್ಸ್​ ಮಾಡಿದ್ದಾರೆ. ಅದನ್ನು ಶೇರ್​ ಮಾಡಿರುವ ನಟಿ ಚಿತ್ಕಲಾ, ಈ ರೀತಿ ಬರೆದುಕೊಂಡಿದ್ದಾರೆ. 

ಚಿತ್ಕಲಾ ಕುರಿತು ಹೇಳುವುದಾದರೆ,  ಈ ಹಿಂದೆ ಕಲರ್ಸ್ ಕನ್ನಡದ 'ಕನ್ನಡತಿ' ಸೀರಿಯಲ್‌ನಲ್ಲಿ ಅಮ್ಮಮ್ಮ ಆಗಿ ಫೇಮಸ್ ಆಗಿದ್ದವರು. ಆಮೇಲೆ ಸಾಲು ಸಾಲು ಸಿನಿಮಾಗಳಲ್ಲೂ ಬ್ಯುಸಿ ಆದರು.  ಇಂಗ್ಲೀಷ್ ಪ್ರೊಫೆಸರ್ ಆಗಿದ್ದವರು ಇವರು. ಈ ಮೊದಲು ಒಂದಿಷ್ಟು ಸೀರಿಯಲ್, ಸಿನಿಮಾಗಳಲ್ಲಿ ನಟಿಸಿದ್ದರೂ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟದ್ದು ಕಿರುತೆರೆ. ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚಾಗಿ ಸೌಂಡ್​ ಮಾಡುತ್ತಿದ್ದ ಧಾರಾವಾಹಿ ಎಂದರೆ ಅದು ಕನ್ನಡತಿ. ಇದೇ ಕನ್ನಡತಿ ಸೀರಿಯಲ್​ ಮೂಲಕ ಅಮ್ಮಮ್ಮನಾಗಿ ವೀಕ್ಷಕರ ಮೇಲೆ ಪ್ರಭಾವ ಬೀರಿದ ನಟಿ ಚಿತ್ಕಲಾ ಬಿರಾದಾರ್. ಕನ್ನಡತಿ ಬಳಿಕ ಬೃಂದಾವನ ಧಾರಾವಾಹಿಯಲ್ಲಿ ವಿಭಿನ್ನ ಹೇರ್ ಸ್ಟೈಲ್​ನೊಂದಿಗೆ ವೀಕ್ಷಕರ ಗಮನ ಸೆಳೆದಿದ್ದರು. ಬೃಂದಾವನದ ನಂತರ ಸೀರಿಯಲ್​ನಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಚಿತ್ಕಳಾ ಅವರು ಅಮೆರಿಕ ಪ್ರವಾಸದಲ್ಲಿದ್ರು. ಮಗ ಸೊಸೆ ಜೊತೆ ಸಮಯ ಕಾಳಿತಿದ್ರು. ಅಲ್ಲಿಂದ ಬಂದ್ಮೇಲೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ರು. ಸದ್ಯ ಮತ್ತೆ ಹೊಸ ಪಾತ್ರದಲ್ಲಿ ವೀಕ್ಷಕರ ಮುಂದೆ ಬಂದ ಕಮಾಲ್​ ಮಾಡುತ್ತಿದ್ದಾರೆ.

ಕ್ಯಾನ್ಸರ್​ ಚಿಕಿತ್ಸೆಗೆ ಹಣವಿಲ್ಲದೇ ಬಳಲ್ತಿರೋ 'ಗಟ್ಟಿಮೇಳ'ದ ನಟಿ: ನೋವಿನ ಕಥೆ ಬಿಚ್ಚಿಟ್ಟ ಕಮಲಶ್ರೀ

ಇನ್ನು ಸುಧಾ ಪಾತ್ರಧಾರಿಯ ಕುರಿತು ಹೇಳುವುದಾದರೆ,  ನಟಿ ಹೆಸರು ಮೇಘಾ ಶೆಣೈ (Meghaa Shenoy). ಮೇಘಾ ಕಿರುತೆರೆಗೆ ಹೊಸಬರಲ್ಲ, ಕನ್ನಡ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ, ವಿಲನ್ ಆಗಿ ಹೀಗೆ ಹಲವು ರೀತಿಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ರಕ್ಷಾಬಂಧನ (Rakshabandhana), ಆರತಿಗೊಬ್ಬ ಕೀರ್ತಿಗೊಬ್ಬ, ಬ್ರಾಹ್ಮಿನ್ಸ್ ಕೆಫೆ ಧಾರಾವಾಹಿಗಳಲ್ಲಿ ಇವರು ನಟಿಸಿದ್ದರು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಂದರಿ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸಿದ್ದ ಮೇಘಾ ಶೆಣೈ, ನಂತರ ಕಾವೇರಿ, ಜನುಮದ ಜೋಡಿ, ಮಹಾದೇವಿ ಸೀರಿಯಲ್ ಗಳಲ್ಲಿ ನಟಿಸಿದ್ದರು. ಇನ್ನು ರಕ್ಷಾಬಂಧನ ಮತ್ತು ಆರತಿಗೊಬ್ಬ ಕೀರ್ತಿಗೊಬ್ಬ ಸೀರಿಯಲ್ ಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಜೊತೆಗೆ ಸ್ಟಾರ್ ಸುವರ್ಣ (Star Suvarna) ವಾಹಿನಿಯ ಜೀವ ಹೂವಾಗಿದೆ ಧಾರಾವಾಹಿಗಳಲ್ಲೂ ನಟಿಸಿದ್ದರು. ಇದೀಗ ಇದೇ ಮೊದಲ ಬಾರಿಗೆ ಮೇಘಾ ಶೆಣೈ, ಇಲ್ಲಿವರೆಗೂ ನಟಿಸಿರೋದಕ್ಕಿಂತ ವಿಭಿನ್ನವಾದ ಪಾತ್ರದಲ್ಲಿ ನಟಿಸುತ್ತಿದ್ದು, ಬಡವರ ಮನೆಯ ಮುಗ್ಧ ಮಹಿಳೆಯಾಗಿ, ತನ್ನ ಕುಟುಂಬವನ್ನ ಸಲಹಲು ಕೆಲಸದವಳಾಗಿ ದುಡಿಯುವ ಮಹಿಳೆ ಸುಧಾ ಪಾತ್ರದಲ್ಲಿ ಮೇಘಾ ಕಾಣಿಸಿಕೊಂಡಿದ್ದಾರೆ.  

ಇವರ ಜೊತೆ ಪುಟಾಣಿ ಬಾಲಕಿ ಸೇರಿಕೊಂಡು ರೀಲ್ಸ್​ ಮಾಡಿದ್ದಾಳೆ. ಮೊದಲಿಗೆ ನೆನಪಿನ ಶಕ್ತಿ ಹೋಗಿರುವ ಭಾಗ್ಯಮ್ಮಾ ಕಾಣುತ್ತಾಳೆ. ಬಳಿಕ, ಬಾಲಕಿ ಜಾದೂ ಮಾಡಿದಾಗ ಭಾಗ್ಯಮ್ಮ ಸರಿಯಾಗುತ್ತಾಳೆ. ಇಂಥದ್ದೊಂದು ಸುಂದರ ರೀಲ್ಸ್​  ಮಾಡಿದ್ದಾರೆ ಈ ನಟಿಯರು. ಅದನ್ನು ಶೇರ್​ ಮಾಡಿಕೊಂಡಿರುವ ಚಿತ್ಕಲಾ ಅವರು ಈ ರೀತಿಯಾಗಿ ಕ್ಯಾಪ್ಷನ್​ ಕೊಟ್ಟು, ಅಮೃತಧಾರೆಯಲ್ಲಿನ ತಮ್ಮ ಕ್ಯಾರೆಕ್ಟರ್​ ಅನ್ನು ನೈಜ ಜೀವನಕ್ಕೆ ಹೋಲಿಕೆ ಮಾಡಿದ್ದಾರೆ. 

ಆವೇಶದಲ್ಲಿ ನಿಜವಾಗ್ಲೂ ಕೆನ್ನೆಗೆ ಹೊಡೆದೇ ಬಿಡೋದಾ ಪುಟ್ಟಕ್ಕನ ಮಗಳು ಸಹನಾ? ವಿಲನ್​ ಕಲಿ ಸುಸ್ತೋ ಸುಸ್ತು!

Latest Videos
Follow Us:
Download App:
  • android
  • ios