Asianet Suvarna News Asianet Suvarna News

KBC: ಕೆಲಸ ಕಳೆದುಕೊಳ್ಳೋ ಭಯದಲ್ಲಿ ಅಮಿತಾಭ್ ಬಚ್ಚನ್​- ನಟ ಹೇಳಿದ್ದೇನು?

ಕೌನ್​ ಬನೇಗಾ ಕರೋರ್​ಪತಿ ಕೆಲಸವನ್ನು ಕಳೆದುಕೊಳ್ಳುವ ಭಯ ತಮ್ಮನ್ನು ಕಾಡುತ್ತಿದೆ ಎಂದಿದ್ದಾರೆ ಬಿಗ್​-ಬಿ ಅಮಿತಾಭ್​ ಬಚ್ಚನ್​. ಅವರು ಹೀಗೆ ಹೇಳಲು ಕಾರಣವೇನು? 
 

Amitabh Bachchan says that he is worried about losing the job suc
Author
First Published Sep 9, 2023, 6:17 PM IST

ಕೌನ್​ ಬನೇಗಾ ಕರೋರ್​ಪತಿ ಸೀಸನ್​ 15 ಸಕತ್​ ಸೌಂಡ್​ ಮಾಡುತ್ತಿದೆ. ಇದಾಗಲೇ 21ರ ಯುವಕನೊಬ್ಬ ಒಂದು ಕೋಟಿ ರೂಪಾಯಿ ಗೆದ್ದು ಕರೋರ್​ಪತಿಯಾಗಿದ್ದಾರೆ. ಈ ಗೇಮ್​ಷೋ ಇಷ್ಟೊಂದು ಫೇಮಸ್​ ಆಗಲು ಕಾರಣ ನಟ ಅಮಿತಾಭ್​ ಬಚ್ಚನ್​ ಎನ್ನುವುದು ಎಲ್ಲರಿಗೂ ತಿಳಿದದ್ದೇ. ವಯಸ್ಸು ಎನ್ನುವುದು ದೇಹಕ್ಕೆ ಮಾತ್ರ, ಮನಸ್ಸಿಗೆ ಅಲ್ಲ ಎನ್ನುವ ಗಾದೆ ಮಾತನ್ನು ಇದಾಗಲೇ ಹಲವಾರು ಮಂದಿ ಸಾಬೀತು ಮಾಡಿದ್ದಾರೆ. ಇನ್ನು ನಟನೆಯ ವಿಷಯಕ್ಕೆ ಬಂದರೆ ಕೆಲವು ಹಿರಿಯ ನಟರಿಗೆ ಸರಿಸಾಟಿ ಯುವಕರೂ ಇಲ್ಲವೇನೋ ಎನ್ನಿಸುತ್ತದೆ. ಅಂಥವರಲ್ಲಿ ಒಬ್ಬರು ನಟ ಅಮಿತಾಭ್ ಬಚ್ಚನ್ (Amitabh Bachchan). ಅಮಿತಾಭ್​ ಅವರಿಗೆ ಈಗ 80 ವರ್ಷ. ಈ ವಯಸ್ಸಿನಲ್ಲೂ ಅವರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಹಲವು ಜಾಹೀರಾತುಗಳಲ್ಲಿ ಭಾಗವಹಿಸುತ್ತಿದ್ದಾರೆ, ಕೆಲವು ಕಡೆಗಳಲ್ಲಿ ಹಿನ್ನೆಗೆ ದನಿಯನ್ನೂ ನೀಡುತ್ತಾರೆ. ಈ ವಯಸ್ಸಿನಲ್ಲಿಯೂ ಬಿಡುವಿಲ್ಲದೇ ಅವಿರತವಾಗಿ ದುಡಿಯುತ್ತಿದ್ದಾರೆ ಅಮಿತಾಭ್​. ಈಗ ಅವರ ಜನಪ್ರಿಯ ಕಾರ್ಯಕ್ರಮ  ‘ಕೌನ್ ಬನೇಗಾ ಕರೋಡ್​ಪತಿ’ (Kaun Banega Crorepati) ಮತ್ತೊಮ್ಮೆ ತೆರೆ ಮೇಲೆ ಬಂದಿದೆ.  ಕಳೆದ ಒಂದೂವರೆ ದಶಕಗಳಿಂದ ಈ ಷೋ ನಡೆಸಿಕೊಡುತ್ತಿದ್ದಾರೆ ಅಮಿತಾಭ್​.

ಇದೀಗ ನಟ ಅಮಿತಾಭ್​ ಅವರಿಗೂ ಕೆಲಸ ಕಳೆದುಕೊಳ್ಳುವ ಭೀತಿ ಶುರುವಾಗಿದೆ. ಅದರಲ್ಲಿಯೂ ಕೌನ್​ ಬನೇಗಾ ಕರೋರ್​ಪತಿಯಲ್ಲಿನ ಕೆಲಸ ತಾವು ಕಳೆದುಕೊಳ್ಳಬಹುದು ಎನ್ನುತ್ತಿದ್ದಾರೆ ನಟ. ಹೌದು. ಇದಕ್ಕೆ ಕಾರಣ ಆರ್ಟಿಫಿಷಿಯಲ್​ ಇಂಟಲಿಜೆನ್ಸ್​. ಎಐ ಎಂದು ಕರೆಸಿಕೊಳ್ಳುವ ಕೃತಕ ಬುದ್ಧಿಮತ್ತೆ ಈಗ ಬಹಳ ಸದ್ದು ಮಾಡುತ್ತಿದೆ. ಇದರ ಜೊತೆಗೆ ಚಾಚ್​ಜಿಪಿಟಿ. ಎಲ್ಲೆಲ್ಲೂ, ಬಹುತೇಕ ಎಲ್ಲ ಉದ್ಯೋಗ ಕ್ಷೇತ್ರಗಳಲ್ಲಿಯೂ ಇವು ಕಾಲಿಟ್ಟಿದೆ. ಯಾರದ್ದೇ ನಕಲು ಮಾಡುವ ಸಾಮರ್ಥ್ಯ ಇದಕ್ಕೆ ಇರುವ ಕಾರಣದಿಂದಲೇ ಬಹುತೇಕ ದೇಶಗಳಲ್ಲಿ ಅನೇಕ ಮಂದಿ ಇದಾಗಲೇ ಉದ್ಯೋಗವನ್ನೂ ಕಳೆದುಕೊಂಡಿದ್ದಾರೆ. ಲಕ್ಷ ಲಕ್ಷ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಅನೇಕ ಮಂದಿ ಮಾಡುವ ಕೆಲಸಗಳನ್ನು ಎಐ ಮಾಡುವ ಸಾಮರ್ಥ್ಯ ಹೊಂದಿರುವ ಹಿನ್ನೆಲೆಯಲ್ಲಿ ಹೋಟೆಲ್, ಮಾಧ್ಯಮ ಸೇರಿದಂತೆ, ಎಲ್ಲಾ ಕ್ಷೇತ್ರಗಳಲ್ಲಿಯೂ ಮಾಲೀಕರು ಎಐನಿಂದ ಕೆಲಸ ಮಾಡಿಸಿಕೊಳ್ಳಲು ತೊಡಗಿದ್ದಾರೆ. ಚಾಟ್​ ಜಿಪಿಟಿ ಮೂಲಕ ಕೆಲಸ ಮಾಡಿಸಿಕೊಳ್ಳುವುದೂ ಇದೀಗ ಸುಲಭವಾಗಿದೆ. 

KBC-15: ಇದು ಏಳು ಕೋಟಿ ಗೆಲ್ಲಬಹುದಾಗಿದ್ದ ಪ್ರಶ್ನೆ: ನಿಮಗೇನಾದರೂ ಉತ್ತರ ಗೊತ್ತಾ?

ಇಷ್ಟೆಲ್ಲಾ ಮಾಡುವ ಎಐಗೆ ಅಮಿತಾಭ್​ ಬಚ್ಚನ್​ (Amitabh Bachchan) ಅವರಂತೆಯೇ ಕೌನ್​ ಬನೇಗಾ ಕರೋರ್​ಪತಿ ನಡೆಸಿಕೊಡುವುದು ಹೆಚ್ಚು ಕಷ್ಟವೇನಲ್ಲ. ಇದನ್ನು ಅರಿತೇ ನಟ ಈ ಮಾತನ್ನು ಹೇಳಿದ್ದಾರೆ. ಇದಾಗಲೇ ಎಐ ವಿರೋಧಿಸಿ ಹಾಲಿವುಡ್​​ ನಟ-ನಟಿಯರಿಂದ ದೊಡ್ಡ ಮಟ್ಟದ ಪ್ರತಿಭಟನೆಯೇ ನಡೆದಿತ್ತು. ಚಿತ್ರರಂಗದವರಿಗೂ ಇದು ಶಾಕಿಂಗ್​ ಸುದ್ದಿಯೇ. ಇದನ್ನೇ ಮುಂದಿಟ್ಟುಕೊಂಡು ತಮ್ಮದೇ ಆದ ಹಾಸ್ಯಭರಿತ ರೀತಿಯಲ್ಲಿ ನಟ ಅಮಿತಾಭ್​ ಬಚ್ಚನ್​ ತಾವು ಕೆಲಸ ಕಳೆದುಕೊಳ್ಳಬಹುದು ಎಂದು ಹೇಳಿದ್ದಾರೆ. ತಾವು ಕೆಲಸ ಕಳೆದುಕೊಂಡು ತಮ್ಮ ಸ್ಥಾನಕ್ಕೆ ಎಐ ಬಂದರೂ ಅಚ್ಚರಿ ಏನಿಲ್ಲ ಎಂದಿದ್ದಾರೆ. 

ಯಾವುದೇ ಆಧುನಿಕ ತಂತ್ರಜ್ಞಾನ (Modern Technology) ಬಂದರೂ ಎಲ್ಲಾ ಕ್ಷೇತ್ರಗಳ ಅರ್ಹರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎನ್ನುವ ಮಾತೂ ಇದೆ. ಕೆಲಸದಲ್ಲಿ ಶ್ರದ್ಧೆಯಿಲ್ಲದೇ, ತೆಗೆದುಕೊಳ್ಳುವ ಸಂಬಳಕ್ಕೆ ನಿಮಿತ್ತ ಮಾತ್ರರಾಗಿ ಕೆಲಸ ಮಾಡುವ ಉದ್ಯೋಗಿಗಳಿಗೆ ಇದು ಹೆಚ್ಚಿನ ರೀತಿಯಲ್ಲಿ ತೊಂದರೆ ಉಂಟುಮಾಡುತ್ತದೆ ಎಂದೂ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಆಧುನಿಕ ತಂತ್ರಜ್ಞಾನದಿಂದ ಏನೆಲ್ಲಾ ಅನುಕೂಲ, ಅನನುಕೂಲ ಇವೆಯೋ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ. 

ಪತ್ನಿಯನ್ನು ತಿರುಗಾಡಲು ಕರ್ಕೊಂಡು ಹೋಗ್ತೀರಾ ಎಂಬ ಪ್ರಶ್ನೆಗೆ ಅಮಿತಾಭ್​ ಉತ್ತರ ಹೀಗಿತ್ತು...
 

Follow Us:
Download App:
  • android
  • ios