ಪತ್ನಿಯನ್ನು ತಿರುಗಾಡಲು ಕರ್ಕೊಂಡು ಹೋಗ್ತೀರಾ ಎಂಬ ಪ್ರಶ್ನೆಯನ್ನು ‘ಕೌನ್ ಬನೇಗಾ ಕರೋಡ್ಪತಿ’ ಸ್ಪರ್ಧಿ ಕೇಳಿದಾಗ ಅಮಿತಾಭ್ ಉತ್ತರ ಹೀಗಿತ್ತು...
ಅಮಿತಾಭ್ ಬಚ್ಚನ್ ಅವರ ಅವರ ಜನಪ್ರಿಯ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್ಪತಿ’ (Kaun Banega Crorepati) ಮತ್ತೊಮ್ಮೆ ತೆರೆ ಮೇಲೆ ಬಂದಿದೆ. ಕಳೆದ ಒಂದೂವರೆ ದಶಕಗಳಿಂದ ಈ ಷೋ ನಡೆಸಿಕೊಡುತ್ತಿದ್ದಾರೆ ಅಮಿತಾಭ್. 14 ಕಂತುಗಳನ್ನು ಪೂರೈಸಿರುವ ಈ ಷೋ, ಇದೀಗ 15ನೇ ಕಂತಿಗೆ ಪದಾರ್ಪಣೆ ಮಾಡಿದೆ. ಸಹಸ್ರಾರು ಮಂದಿ ಕೋಟ್ಯಧಿಪತಿಯಾಗುವ ಕನಸು ಹೊತ್ತು ಈ ಷೋನಲ್ಲಿ ಸ್ಪರ್ಧಿಸಿದ್ದಾರೆ. ಆರಂಭದಲ್ಲಿ ಒಂದು ಕೋಟಿ ಗೆಲ್ಲುವ ಅವಕಾಶವಿತ್ತು. ಅದನ್ನೀಗ ಏಳು ಕೋಟಿಗೆ ಏರಿಸಲಾಗಿದೆ. ಪಂಜಾಬ್ ಮೂಲದ 21 ವರ್ಷದ ಜಸ್ಕರನ್ ಸಿಂಗ್ (Jaskaran Singh) ಒಂದು ಕೋಟಿ ರೂಪಾಯಿ ಗೆದ್ದು ಇದಾಗಲೇ ಈ ಸೀಸನ್ನ ಮೊದಲ ಕೋಟ್ಯಧಿಪತಿಯಾಗಿದ್ದಾನೆ.
ಅಮಿತಾಭ್ ಬಚ್ಚನ್ ಅವರು ಈ ಷೋ ನಡೆಸಿಕೊಡುವ ಸ್ಟೈಲೇ ಕುತೂಹಲವಾದದ್ದು. ಒಂದಷ್ಟು ತಮಾಷೆ, ಒಂದಷ್ಟು ಮನೆಯ ವಿಷಯ, ಮತ್ತೊಂದಷ್ಟು ಪರ್ಸನಲ್ ವಿಷಯಗಳನ್ನು ಕೆದಕಿ, ಅದರ ಬಗ್ಗೆ ಮಾಹಿತಿ ನೀಡಿ ಹಾಸ್ಯ ಮಾಡುತ್ತಲೇ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಇದೀಗ ಅಂಥದ್ದೇ ಒಂದು ಸಂಚಿಕೆ ವೈರಲ್ ಆಗಿದೆ. ಹಾಸ್ಯದ ತುಣುಕು ಇರುವ ಸಂಚಿಕೆ ಇದಾಗಿದ್ದು, ಉತ್ತರ ಪ್ರದೇಶದ ಹಮೀರ್‌ಪುರದ ರೋಲ್‌ಓವರ್ ಸ್ಪರ್ಧಿ ಅಶ್ವನಿ ಅವರೊಂದಿಗೆ ನಡೆಸುವ ಸಂವಾದ ಇದಾಗಿದೆ.
KBC-15: ಇದು ಏಳು ಕೋಟಿ ಗೆಲ್ಲಬಹುದಾಗಿದ್ದ ಪ್ರಶ್ನೆ: ನಿಮಗೇನಾದರೂ ಉತ್ತರ ಗೊತ್ತಾ?
ಈ ಆಟದ ಸಮಯದಲ್ಲಿ, ಅಶ್ವನಿ ಅವರ ಪತ್ನಿಯನ್ನು ಅಮಿತಾಭ್ ಮಾತನಾಡಿಸಿದ್ದಾರೆ. ಆಗ ಅವರು, ನಾನು ಮಾಡುವ ಅಡುಗೆ ಅವರಿಗೆ ಇಷ್ಟವಾಗುವುದಿಲ್ಲ ಎಂದು ಪತ್ನಿ ದೂರಿದ್ದಾರೆ. ಗಂಡ ಅಶ್ವನಿ ನನ್ನನ್ನು ಎಲ್ಲಿಯೂ ಹೊರಗೆ ಕರೆದುಕೊಂಡು ಹೋಗುವುದಿಲ್ಲ, ನನಗಾಗಿ ಏನನ್ನೂ ಕೊಡಿಸುವುದಿಲ್ಲ ಎಂದಿದ್ದಾರೆ. ಆಗ ಇಲ್ಲಿ ಕೌನ್ ಬನೇಗಾ ಕರೋರ್ಪತಿ ಆಡಿದರೆ ಸಾಕಾಗುವುದಿಲ್ಲ. ಪತಿ -ಪತ್ನಿಯ ನಡುವೆಯೂ ಈ ಸ್ಪರ್ಧೆ ಇರಬೇಕು, ಪತ್ನಿಯನ್ನು ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗಬೇಕು ಎಂದೆಲ್ಲಾ ಬುದ್ಧಿಮಾತು ಹೇಳಿದರು.
ಕೂಡಲೇ ಆ ಸ್ಪರ್ಧಿ ನೀವು ನಿಮ್ಮ ಪತ್ನಿ ಜಯಾ ಬಚ್ಚನ್ ಅವರನ್ನು ಹೊರಗಡೆ ಕರೆದುಕೊಂಡು ಹೋಗುತ್ತೀರಾ ಎಂದು ಪ್ರಶ್ನಿಸಿದಾಗ ಅಲ್ಲಿದ್ದವರೆಲ್ಲಾ ನಗೆಗಡಲಿನಲ್ಲಿ ತೇಲಾಡಿದರು. ಇದಕ್ಕೆ ಅಮಿತಾಭ್ ಬಚ್ಚನ್ ಏನು ಉತ್ತರ ಕೊಡುತ್ತಾರೆ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದರು. ಕೂಡಲೇ ಅಮಿತಾಭ್ ಅವರು, ನನ್ನ ಪತ್ನಿಯೂ ಕೆಲಸಕ್ಕೆ ಹೋಗುತ್ತಾಳೆ. ನಾನು ನನ್ನ ಕೆಲಸ ಮುಗಿಸಿ ಮನೆಗೆ ಹೋದಾಗ ಆಕೆ ಪಾರ್ಲಿಮೆಂಟಿನಲ್ಲಿ ಇರುತ್ತಾಳೆ. ಇನ್ನು ಹೇಗೆ ಕರೆದುಕೊಂಡು ಹೋಗುವುದು ಎಂದಾಗ ಎಲ್ಲರೂ ನಗೆಗಡಲಿನಲ್ಲಿ ತೇಲಾಡಿದರು.
ಅಪ್ಪಟ ರೇಷ್ಮೆ ಸೀರೆ ಗುರುತಿಸೋದು, ಕಾಪಾಡೋದು ಹೇಗೆಂದು ತಿಳಿಸಿದ ನಟಿ ಅಮೃತಾ ರಾಮಮೂರ್ತಿ
ಮೊನ್ನೆಯಷ್ಟೇ ₹1 ಕೋಟಿಯ ಪ್ರಶ್ನೆಗೆ ಉತ್ತರಿಸುವ ಮೂಲಕ ಜಸ್ಕರನ್ ಋತುವಿನ ಮೊದಲ ಕೋಟ್ಯಧಿಪತಿಯಾದರು. ನಂತರ 7 ಕೋಟಿ ರೂಪಾಯಿಗೆ ಒಂದು ಪ್ರಶ್ನೆ ಕೇಳಲಾಗಿತ್ತು. ಇದನ್ನು ಗೆಲ್ಲುತ್ತಾರೋ ಇಲ್ಲವೋ ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. 15 ಪ್ರಶ್ನೆಯನ್ನು ಗೆದ್ದು ಒಂದು ಕೋಟಿ ರೂಪಾಯಿ ಪಡೆದಿದ್ದ ಜಸ್ಕರನ್ ಅವರು ಏಳು ಕೋಟಿ ಗಳಿಸಲು ಒಂದೇ ಒಂದು ಪ್ರಶ್ನೆ ಬಾಕಿ ಇತ್ತು. ಆ ಪ್ರಶ್ನೆಯನ್ನು ಅಮಿತಾಭ್ ಬಚ್ಚನ್ ಕೇಳಿದರು. ಆದರೆ ಜಸ್ಕರನ್ ಅವರಿಗೆ ಈ ಪ್ರಶ್ನೆಗೆ ಸರಿಯಾದ ಉತ್ತರ ಸಿಗದೇ ಅವರು ಷೋ ತ್ಯಜಿಸಲು ನಿರ್ಧರಿಸಿದರು. ಅಷ್ಟಕ್ಕೂ ಆ ಪ್ರಶ್ನೆ ಏನೆಂದರೆ, ಪದ್ಮ ಪುರಾಣದ ಪ್ರಕಾರ, ಜಿಂಕೆಯ ಶಾಪದಿಂದ ನೂರು ವರ್ಷಗಳ ಕಾಲ ಯಾವ ರಾಜ ಹುಲಿಯಾಗಿ ಬದುಕಬೇಕಾಯಿತು? ಆಯ್ಕೆಗಳೆಂದರೆ: ಎ) ಕ್ಷೇಮಧೂರ್ತಿ ಬಿ) ಧರ್ಮದತ್ತ ಸಿ) ಮಿತಧ್ವಜ ಡಿ) ಪ್ರಭಂಜನ. ಇದರ ಉತ್ತರ ಪ್ರಭಂಜನ. ಆದರೆ ಇದನ್ನು ಉತ್ತರಿಸಲು ಅವರಿಗೆ ಕಷ್ಟವಾಗಿ ಷೋ ತ್ಯಜಿಸಿದರು.
