ಗರ್ಭಿಣಿ ಅಲ್ಲದಿದ್ರೂ ಸೀಮಂತಕ್ಕೆ ರೆಡಿ! ಮಗಳ ದುರಾಸೆಗೆ ಮುಗ್ಧ ಅಮ್ಮನಿಗೆ ಇದೆಂಥ ಶಿಕ್ಷೆ!

ಗರ್ಭಿಣಿ ಅಲ್ಲದಿದ್ದರೂ ಹಣದ ದುರಾಸೆಗೆ ಬಿದ್ದು ಸೀಮಂತಕ್ಕೆ ರೆಡಿಯಾಗಿದ್ದಾಳೆ ಸಂಧ್ಯಾ! ಮಗಳ ದುರಾಸೆಗೆ ಅಮ್ಮನಿಗೇಕೆ ಶಿಕ್ಷೆ?
 

Although not pregnant greedy Sandhya ready for seemantha in Sreerastu Shubhamastu suc

ಅಮ್ಮ ಅಪಾರ ಸ್ವಾಭಿಮಾನಿ. ಅಮ್ಮನಂತೆ ಮಗ ಕೂಡ ಸ್ವಾಭಿಮಾನಿಯೇ. ಆದರೆ ಎಲ್ಲ ಮಕ್ಕಳೂ ಅಪ್ಪ-ಅಮ್ಮನಂತೆಯೇ ಇರಲಾರರಲ್ಲ? ಇವಳೊಬ್ಬಳು ಮಗಳು. ಅತಿರೇಕದ ದುರಾಸೆ. ಹಣಕ್ಕಾಗಿ ಯಾವ ಲೆವೆಲ್ಲಿಗಾದರೂ ಹೋಗುತ್ತಾಳೆ. ತನ್ನ ಅಮ್ಮ ಶ್ರೀಮಂತರ ಮನೆಯ ಸೊಸೆಯಾಗಿ ಹೋಗಿರುವುದನ್ನೇ ಬಂಡವಾಳ ಮಾಡಿಕೊಂಡು ಅಲ್ಲಿಯೂ ತನ್ನ ಛಾಪು ತೋರಿಸುತ್ತಿದ್ದಾಳೆ. ಅಮ್ಮನನ್ನು ಸಂಕಷ್ಟಕ್ಕೆ ಸಿಲುಕಿಸಿದರೂ ಇವಳಿಗೆ ಹಣದ ಮೋಹವೇ ಹೆಚ್ಚು. ಯಾರಿಗೆ ಏನಾದರೂ ಪರವಾಗಿಲ್ಲ. ಇದಕ್ಕೆ ಅಮ್ಮ ಬಲಿಯಾಗ್ತಾಳಾ?

ಇದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು, ಶುಭಮಸ್ತು ಸೀರಿಯಲ್‌ ಕಥೆ. ಮಕ್ಕಳು ಸರಿಯಾಗಿಲ್ಲವೆಂದರೆ ಅಮ್ಮನಾದವಳು ಏನೆಲ್ಲಾ ಹಿಂಸೆ ಅನುಭವಿಸಬೇಕು ಎನ್ನುವುದನ್ನು ಸದ್ಯ ಸೀರಿಯಲ್‌ ಸಂಧ್ಯಾ ಕ್ಯಾರೆಕ್ಟರ್‌ ತೋರಿಸುತ್ತಿದೆ. ಇದರಲ್ಲಿ ಅಮ್ಮ ತುಳಸಿ ಶ್ರೀಮಂತರ ಮನೆಯ ಸೊಸೆಯಾಗಿ ಹೋಗಿದ್ದನ್ನೇ ಬಂಡವಾಳ ಮಾಡಿಕೊಂಡಿರುವ ಸಂಧ್ಯಾ, ತಾನು ಸುಳ್ಳು ಗರ್ಭಿಣಿ ಎಂದು ಹೇಳಿಕೊಂಡು ಸೀಮಂತಕ್ಕೆ ರೆಡಿಯಾಗಿದ್ದಾಳೆ. ಈಕೆ ಗರ್ಭಿಣಿ ಎಂದುಕೊಂಡೇ ಅಮ್ಮ ತುಳಸಿ ಸೇರಿದಂತೆ ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಇದೀಗ ಸಂಧ್ಯಾ ಹೊಟ್ಟೆಗೆ ಬಟ್ಟೆ ಹಾಕಿಕೊಂಡಿದ್ದರಿಂದ ತುಳಸಿಗೆ ಸತ್ಯ ತಿಳಿದಿದೆ.

ಲಕ್ಷ ಕೋಟಿ ಒಡತಿಯಾದ್ರೂ ನೃತ್ಯದ ಸಾಂಗತ್ಯ ಬಿಡದ ನೀತಾ: ಪುತ್ರನ ಮದುವೆಯಲ್ಲಿ ಮಂತ್ರಮುಗ್ಧ ಪ್ರದರ್ಶನ

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

ಆದರೆ ಕುತಂತ್ರಿ ದೀಪಿಕಾಗೂ ಈ ವಿಷಯ ತಿಳಿದಿದೆ. ತುಳಸಿ ವಿರುದ್ಧ ಸದಾ ತಂತ್ರ ರೂಪಿಸುತ್ತಿರುವ ದೀಪಿಕಾ, ಇದೀಗ ಇದನ್ನೇ ಅಸ್ತ್ರವಾಗಿಸಿಕೊಂಡು ಏನು ಮಾಡುತ್ತಾಳೆ ಎನ್ನುವುದು ಅಭಿಮಾನಿಗಳ ನೋವಿಗೆ ಕಾರಣವಾಗಿದೆ. ಅಷ್ಟಕ್ಕೂ, ಇದಾಗಲೇ, ಮಧ್ಯ ವಯಸ್ಕರ ಮದುವೆ ಕುರಿತ ಧಾರಾವಾಹಿಯಾಗಿರುವ ಶ್ರೀರಸ್ತು ಶುಭಮಸ್ತು ಒಂದು ಕುತೂಹಲ ಹಂತಕ್ಕೆ ಬಂದಿತ್ತು ಎನ್ನುವಾಗಲೇ ಇನ್ನೋರ್ವ ವಿಲನ್​ ಎಂಟ್ರಿಯಾಗಿ ವೀಕ್ಷಕರು ಬೇಸರಪಟ್ಟುಕೊಂಡಿದ್ದರು. ಶಾರ್ವರಿಯೊಬ್ಬಳು ಸಾಲದು ಎಂದು ದೀಪಿಕಾ ಎನ್ನುವ ಇನ್ನೋರ್ವ  ವಿಲನ್​ ತಂದಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. 

ತುಳಸಿಯೆಂಬ ಒಳ್ಳೆಯ ಹೆಣ್ಣುಮಗಳು ಇಷ್ಟೆಲ್ಲಾ ತೊಂದರೆ ಅನುಭವಿಸುವುದು ನೋಡಲು ಸಾಧ್ಯವಿಲ್ಲ. ಆಕೆ ಎಷ್ಟೇ ಒಳ್ಳೆಯದ್ದನ್ನೇ ಮಾಡಿದರೂ ಆಕೆಗೆ ತೊಂದರೆಯೇ ಸಿಗುವುದು ಸರಿಯಲ್ಲ ಎನ್ನುವ ಮಧ್ಯೆಯೇ ಇದೀಗ ಸಂಧ್ಯಳ ಕಾಟ ಶುರುವಾಗಿದೆ. ಒಂದೆಡೆ  ದೀಪಿಕಾ, ಶಾರ್ವರಿಯಾದರೆ ಇನ್ನೊಂದೆಡೆ ಖುದ್ದು ಮಗಳು ಸಂಧ್ಯಾಳೇ ತುಳಸಿಗೆ ವಿಲನ್​ ಆಗಿದ್ದಾಳೆ. ಇದೊಂದು ಕ್ಯಾರೆಕ್ಟರ್​ ಆಗಿದ್ದರೂ ಸಂಧ್ಯಾ ವಿರುದ್ಧ ಶ್ರೀರಸ್ತು ಶುಭಮಸ್ತು ಸೀರಿಯಲ್​ ಪ್ರೇಮಿಗಳು ಕಿಡಿ ಕಾರುತ್ತಿದ್ದಾರೆ. ಇಂಥ ಒಬ್ಬಳು ಮಗಳು ಮನೆಯಲ್ಲಿ ಇದ್ದರೆ ಸರ್ವನಾಶ ಎನ್ನುತ್ತಿದ್ದಾರೆ. ಇನ್ನು ಹಲವರು ನಿರ್ದೇಶಕರೇ ದಯವಿಟ್ಟು ಈ ಸಂಧ್ಯಾ ಕ್ಯಾರೆಕ್ಟರ್​ ಅನ್ನು ತೆಗೆದುಹಾಕಿ, ಇಲ್ಲದಿದ್ದರೆ ಸ್ಟೈಕ್​ ಮಾಡುತ್ತೇವೆ, ಸೀರಿಯಲ್​ ನೋಡುವುದನ್ನು ಬ್ಯಾನ್​ ಮಾಡುತ್ತೇವೆ ಎಂದೆಲ್ಲಾ ಹೇಳುತ್ತಿದ್ದಾರೆ. ಒಂದು ಪಾತ್ರ ಪ್ರೇಕ್ಷಕರನ್ನು ಎಷ್ಟರಮಟ್ಟಿಗೆ ಕಿರಿಕ್​ ಹುಟ್ಟಿಸುತ್ತದೆ ಎನ್ನುವುದಕ್ಕೆ ನೆಟ್ಟಿಗರ ಈ ಮಾತೇ ಸಾಕ್ಷಿಯಾಗಿದೆ. ಅಷ್ಟಕ್ಕೂ ಸಂಧ್ಯಾ ಪಾತ್ರಧಾರಿ ದೀಪಾ ಕಟ್ಟೆ ಕೂಡ ಇದನ್ನೇ ಒಮ್ಮೆ ಸಂದರ್ಶನದಲ್ಲಿ ಹೇಳಿದ್ದರು. ಜನರು ಹೊರಗಡೆ ಹೋದಾಗ ಜನ ತಮ್ಮನ್ನು ಹೇಗೆ ಕೆಟ್ಟ ರೀತಿಯಲ್ಲಿ ನೋಡುತ್ತಾರೆ ಎನ್ನುವುದನ್ನು ಹೇಳಿದ್ದರು. ಆ ಮಟ್ಟಿಗೆ ಪಾತ್ರ ಜೀವಂತಿಕೆ ತುಂಬಿದೆ.  

ಅನೇಕ ಮಕ್ಕಳ ಆಸೆ ಹೊಂದಿರೋ ಪರಿಣಿತಿ ಚೋಪ್ರಾ ಗರ್ಭಿಣಿ? ಐದು ತಿಂಗಳಿಗೇ ಕೊಟ್ರಾ ಗುಡ್​ ನ್ಯೂಸ್​?

Latest Videos
Follow Us:
Download App:
  • android
  • ios