ಲಕ್ಷ ಕೋಟಿ ಒಡತಿಯಾದ್ರೂ ನೃತ್ಯದ ಸಾಂಗತ್ಯ ಬಿಡದ ನೀತಾ: ಪುತ್ರನ ಮದುವೆಯಲ್ಲಿ ಮಂತ್ರಮುಗ್ಧ ಪ್ರದರ್ಶನ
ಮಗನ ಮದುವೆಯಲ್ಲಿ ಅದ್ಭುತ ನೃತ್ಯದ ಮೂಲಕ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದ್ದಾರೆ ನೀತಾ ಅಂಬಾನಿ. ನೃತ್ಯಕ್ಕೂ, ನೀತಾ ಅವರಿಗೆ ಇರುವ ಅವಿನಾಭಾವ ಸಂಬಂಧವೇನು?
ಈಗ ಎಲ್ಲೆಲ್ಲೂ ಮುಕೇಶ್ ಮತ್ತು ಅನಿತಾ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯದ್ದೇ ವಿಷಯ. ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಖ್ಯಾತ ಉದ್ಯಮಿಯಾಗಿರುವ ಮುಕೇಶ್ ಅವರ ಪುತ್ರನ ಮದ್ವೆಗೆ ದೇಶ-ವಿದೇಶಗಳಿಂದ ಗಣ್ಯಾತಿಗಣ್ಯರು ಆಗಮಿಸುತ್ತಲೇ ಇದ್ದಾರೆ. ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಈ ಮದುವೆ ನಡೆಯುತ್ತಿದೆ. ಇದಾಗಲೇ ಪ್ರೀ- ಈವೆಂಟ್ನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಸ್ಟೆಪ್ ಹಾಕಿದ್ದಾರೆ. ಖುದ್ದು ಮದುಮಕ್ಕಳು ಡ್ಯಾನ್ಸ್ ಮಾಡಿದ್ದಾರೆ. ಆದರೆ ಇದೀಗ ಎಲ್ಲರ ಗಮನ ಸೆಳೆದಿರುವುದು ಅನಿತಾ ಅಂಬಾನಿಯವರ ಅದ್ಭುತ ನೃತ್ಯ ಪ್ರದರ್ಶನ.
ಇವರ ನೃತ್ಯ ನೋಡುತ್ತಿದ್ದಂತೆಯೇ ಇವರು ನೃತ್ಯಗಾತಿಯೇ, ಭರತನಾಟ್ಯ ಕಲಾವಿದೆಯೇ ಎಂದು ಹಲವರು ಗೂಗಲ್ನಲ್ಲಿ ಸರ್ಚ್ ಮಾಡುತ್ತಿದ್ದಾರೆ. ಇವರು ಮಗನ ಮದುವೆಯಲ್ಲಿ ಮಾಡಿರುವ ಅದ್ಭುತ ನೃತ್ಯ ಪ್ರದರ್ಶನಕ್ಕೆ ಮನಸೋಲದವರೇ ಇಲ್ಲ. 60ರ ಹರೆಯದಲ್ಲಿಯೂ ಮದುಮಗಳಂತೆ ಮಿಂಚುತ್ತಿರುವ ಅನಿತಾ ಅವರ ಕುರಿತು ಕೆಲವೇ ಜನರಿಗೆ ತಿಳಿದಿರಲಿಕ್ಕೆ ಸಾಕು. ಅವರು ಈ ರೀತಿಯ ಅದ್ಭುತ ಭರತನಾಟ್ಯ ಪ್ರದರ್ಶನ ಮಾಡುವ ಹಿಂದೆ ದೊಡ್ಡ ಕಥೆಯೇ ಇದೆ. ಅಷ್ಟಕ್ಕೂ ಅನಿತಾ ಅವರು, ನೃತ್ಯಗಾರ್ತಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಚಿಕ್ಕದೊಂದು ಶಾಲೆಯಲ್ಲಿ ನೃತ್ಯ ಶಿಕ್ಷಕಿಯಾಗಿ ಜೀವನ ನಡೆಸುತ್ತಿದ್ದರು. ನೃತ್ಯವೇ ಅವರ ಉಸಿರಾಗಿತ್ತು, ಅದೇ ಅವರಿಗೆ ಸಂಪಾದನೆಯ ಮಾರ್ಗವೂ ಆಗಿತ್ತು. ಮುಕೇಶ್ ಅಂಬಾನಿಯನ್ನು ಮದುವೆಯಾಗುವ ಮೊದಲು, ನೀತಾ ಅಂಬಾನಿ ಮುಂಬೈನ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಅವರು ತರಬೇತಿ ಪಡೆದ ಶಾಸ್ತ್ರೀಯ ನೃತ್ಯಗಾರ್ತಿಯಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಿದ್ದರು.
ಅನಂತ್ ಅಂಬಾನಿ ಜೊತೆ ಆಲಿಯಾ ಪುತ್ರಿ ಕ್ಯೂಟ್ ಮಾತುಕತೆ: ಈಗಲೇ ಸ್ಕೆಚ್ ಹಾಕಿದ್ದಾಳೆ ಎಂದ ಫ್ಯಾನ್ಸ್...
ಇದೀಗ ಲಕ್ಷ ಕೋಟಿ ರೂಪಾಯಿ ಒಡತಿಯಾದರೂ ನೃತ್ಯದ ಸಾಂಗತ್ಯವನ್ನು ಬಿಡಲಿಲ್ಲ ಅನಿತಾ. ಇಂದಿಗೂ, ಈ ವಯಸ್ಸಿನಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಮಗನ ಮದುವೆಯಲ್ಲಿ ಪಕ್ಕಾ ದೇಸಿಯಾಗಿ ಮಿಂಚುತ್ತಿರುವ ತಾಯಿ ನೀತಾ ಅಂಬಾನಿ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಕೈ ಮಗ್ಗ ಸೀರೆ ಧರಿಸಿ ಗಮನ ಸೆಳೆದಿದ್ದರೆ, ಶಾಸ್ತ್ರೀಯ ನೃತ್ಯ ಪ್ರದರ್ಶನದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ನೀತಾ ಅಂಬಾನಿಯವರು ಮಗ ಹಾಗೂ ಸೊಸೆಗಾಗಿ ಅವರ ದಾಂಪತ್ಯ ಜೀವನ ಚೆನ್ನಾಗಿರಲಿ ಎಂದು ಪ್ರಾರ್ಥಿಸಿ ಮಾತೆ ಅಂಬೆಗಾಗಿ ಮಾಡುವ ವಿಶ್ವಾಂಭರಿ ಸ್ತುತಿಯನ್ನು ಮಾಡಿದ್ದಾರೆ. ನೀತಾ ಅವರ ಶಾಸ್ತ್ರೀಯ ನೃತ್ಯಗಾರರೊಂದಿಗೆ ವಿಶ್ವಂಭರಿ ಸ್ತುತಿಯಲ್ಲಿ ಪ್ರದರ್ಶನ ನೀಡಿರುವುದು ನೋಡುಗರಿಗೆ ಖುಷಿ ಕೊಟ್ಟಿದೆ. ಈ ಸಂದರ್ಭದಲ್ಲಿ, ನೀತಾ ಅಂಬಾನಿ ಕೆಂಪು ಕಲರ್ ಸೀರೆಯಲ್ಲಿ ಹೈಲೆಟ್ ಆಗಿದ್ದಾರೆ. ನೀತಾ ಅಂಬಾನಿ ಅವರ ಈ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಭಾರತೀಯ ಸಂಸ್ಕೃತಿ ಹಾಗೂ ಕರಕುಶಲದ ಬಗ್ಗೆ ನೀತಾ ಅಂಬಾನಿಗಿರುವ ಗೌರವ, ಪ್ರೀತಿಗೆ ಇದು ಸಾಕ್ಷಿಯಾಗಿತ್ತು. ಕೆನೆ ಬಣ್ಣದ ಕೈಮಗ್ಗ ಸೀರೆಯ ಜೊತೆಗೆ ಅದಕ್ಕೊಪ್ಪುವ ಹಸಿರು ಹರಳಿನ ಕಿವಿಯೋಲೆ, ಉದ್ದನೆಯ ಸರ ಹಾಗೂ ಬಳೆಗಳನ್ನು ಧರಿಸಿದ್ದು ನೀತಾ.
ನಿಮ್ಮ ಚಡ್ಡಿ, ಬನಿಯನ್ ಮಾರಿದ್ರೂ ಮೂರು ಖಾನ್‌ರನ್ನು ಸೇರಿಸಲು ಸಾಧ್ಯವಿಲ್ಲ ಎಂದಿದ್ದ ಶಾರುಖ್: ಈಗ?