ಝೀ ಎಂಟರ್‌ಟೈನರ್ ಶೋನಲ್ಲಿ ಅಕುಲ್ ಬಾಲಾಜಿ ತಮ್ಮ ತಂದೆಯ ನೆನಪುಗಳನ್ನು ಹಂಚಿಕೊಂಡರು. ತಂದೆಯ ಆಕಸ್ಮಿಕ ನಿಧನದ ನಂತರ ಮಗ ಕ್ರಿಶ್ ಆಸರೆಯಾದ ಬಗ್ಗೆ ಭಾವುಕರಾದರು. ತಂದೆಯಂತೆಯೇ ಮಗನಲ್ಲೂ ಇರುವ ಗುಣಗಳನ್ನು, ಬರ್ತ್‌ಮಾರ್ಕ್ ಕೂಡ ಒಂದೇ ರೀತಿ ಇರುವುದನ್ನು ವಿವರಿಸಿದರು. ತಂದೆಯೇ ಮಗನಾಗಿ ಹುಟ್ಟಿ ಬಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ನಟ-ನಿರೂಪಕ ಅಕುಲ್ ಬಾಲಾಜಿ ಸದ್ಯ ಝೀ ಕನ್ನಡದ ಝೀ ಎಂಟರ್’ಟೈನರ್(Zee entertainer) ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿದ್ದಾರೆ. ಈ ಕಾರ್ಯಕ್ರದಮದಲ್ಲಿ ಝೀ ಸೀರಿಯಲ್ ತಾರೆಯರು ಸಖತ್ ಗೇಮ್ ಶೋ ನಡೆಯುತ್ತಿದ್ದು, ವೀಕ್ಷಕರಿಗಂತೂ ಭರ್ಜರಿ ಮನರಂಜನೆ ನೀಡುತ್ತಿರೋದಂತೂ ನಿಜಾ. ಅಷ್ಟೇ ಯಾಕೆ ಕಾರ್ಯಕ್ರಮವನ್ನು ಅಕುಲ್ ಬಾಲಾಜಿ ನಡೆಸಿಕೊಡೋದರಿಂದ ಅದು ಮತ್ತಷ್ಟು ಭರ್ಜರಿಯಾಗಿ, ಮನೋರಂಜನಾತ್ಮಕವಾಗಿ ಮೂಡಿ ಬರುತ್ತಿದೆ.
ಕಂಗಾಲಾಗಿ ಉಪ್ಪಿ ಕಾಲಿಗೆ ಬಿದ್ದ ಅಕುಲ್ ಬಾಲಾಜಿ; ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!
ಝೀ ಎಂಟರ್’ಟೈನರ್ ವೇದಿಕೆಯ ಮೇಲೆ ಅಕುಲ್ ಬಾಲಾಜಿಗೆ (Akul Balaji)ಸರ್ಪ್ರೈಸ್ ನೀಡಲು ಅವರ ಮಗ ಕ್ರಿಶ್ ಹಾಗೂ ಪತ್ನಿ ಜ್ಯೋತಿ ಅಕುಲ್ ಎಂಟ್ರಿ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಮಗನ ಬಗ್ಗೆ ಮಾತನಾಡುತ್ತಾ ಅಕುಲ್, ಇವನು ನನ್ನ ಮಗ ಅಲ್ಲ ನನ್ನ ತಂದೆ ಎಂದಿದ್ದಾರೆ. ಹದಿನೈದು ವರ್ಷಗಳ ಹಿಂದೆ ನನ್ನ ತಂದೆ ತೀರಿ ಹೋದ್ರು, ಅದು ಆಕಸ್ಮಿಕವಾಗಿ ಆಗಿದ್ದು, ರಾತ್ರಿ ಕಳೆಯೋದರೊಳಗೆ ಆಗಿದ್ದ ಘಟನೆಯಿಂದ ನಾನು ತುಂಬಾನೆ ನೊಂದಿದ್ದೆ. ನನಗೆ ಅಮ್ಮನಿಗಿಂತ ಅಪ್ಪನೇ ಇಷ್ಟ, ಅಮ್ಮ ನಂಗೆ ಜನ್ಮ ಕೊಟ್ಟಿದ್ರೆ, ಅಪ್ಪ ಜೀವನಾನೆ ಕೊಟ್ಟಿದ್ರು. ಆದ್ರೆ ಅಪ್ಪ ಸಡನ್ ಆಗಿ ಬಿಟ್ಟು ಹೋದಾಗ, ಡಿಪ್ರೆಶನ್ ಗೆ ಹೋಗಿದ್ದೆ, ಈ ಸಂದರ್ಭದಲ್ಲಿ ನನಗೆ ಸಿಕ್ಕ ಉಡುಗೊರೆ ಅಂದರೆ ನನ್ನ ಮಗ ಕ್ರಿಶ್.
ಅಕುಲ್ 'ಬಿಗ್ ಬಾಸ್' ನಡೆಸಿಕೊಡ್ಲಿ ಅಂದ್ರು ನೆಟ್ಟಿಗರು; ಪ್ಯಾಟೆ ಮಂದಿ ಕಾಡಿಗ್ ಬಂದ್ರು ವಿಡಿಯೋ ಎಫೆಕ್ಟ್!
ಅಕುಲ್ ಬಾಲಾಜಿ ಅವರ ಅಪ್ಪನ ಫೋಟೊ ತೋರಿಸುತ್ತಿದ್ದಂತೆ, ಮತ್ತಷ್ಟು ಭಾವುಕರಾದ ಅಕುಲ್ (emotional moment of Akul Balaji), ಅವರ ನಗುವೇ ನನ್ನ ಜೀವನ ಸ್ಪೂರ್ತಿ. ಅವರು ಇಲ್ಲದೇ ಇರುತ್ತಿದ್ದರೆ, ನಾನು ನಟ ಆಗ್ತಿಲ್ಲಾಯ್ತು, ನಿರೂಪಕ ಆಗಿ ವೇದಿಕೆ ಮೇಲೆ ಇವತ್ತು ನಿಂತಿರುತ್ತಲೇ ಇಲ್ಲಾಯ್ತು. ಎಲ್ಲಾದಕ್ಕೂ ಕಾರಣ ಅಪ್ಪ, ಲವ್ ಡ್ಯಾಡ್ ಎಂದು ಹೇಳಿ ಕಣ್ಣಿರು ಒರೆಸಿಕೊಂಡಿದ್ದಾರೆ ಅಕುಲ್. ಅಷ್ಟೇ ಅಲ್ಲ ತಮ್ಮ ಮೊದಲ ಸಿನಿಮಾ ಆತ್ಮೀಯ (first film Athmeeya) ಬಿಡುಗಡೆಯಾದಾಗ, ಅಪ್ಪ ಎಷ್ಟು ಸಂಭ್ರಮಪಟ್ಟಿದ್ದರು. ಆ ಸಿನಿಮಾವನ್ನು ಥಿಯೇಟರ್ ಗೆ ಹೋಗಿ ಅದೆಷ್ಟು ಸಲ ನೋಡಿದ್ದರು, ಹಾಗೂ ತಮಗೆ ಗೊತ್ತಿರುವ ಸ್ನೇಹಿತರು, ಬಂಧುಬಳಗವನ್ನೆಲ್ಲಾ ಸಿನಿಮಾ ನೋಡಲು ಕರೆದುಕೊಂಡು ಹೋಗಿ ಸಂಭ್ರಮಿಸಿರುವ ಕುರಿತು ಹೇಳಿ ಸಹ ಭಾವುಕರಾದರು ಅಕುಲ್. ಇವತ್ತು ಅದೇ ಅಪ್ಪನನ್ನು ಮಗನಲ್ಲಿ ಕಾಣುತ್ತಿರುವ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದ ಅಕುಲ್, ನನ್ನ ಅಪ್ಪನ ಆತ್ಮ ಮತ್ತೆ ನನ್ನ ಮಗನಲ್ಲಿ ಸೇರಿ, ನನ್ನ ಮಗುವಾಗಿ ಹುಟ್ಟಿದ್ದು ನನ್ನ ಪುಣ್ಯ. ಅಪ್ಪನ ಕೈಯಲ್ಲಿದ್ದ ಬರ್ತ್ ಮಾರ್ಕ್ ಮಗನ ಕೈಯಲ್ಲೂ ಇದೆ. ಅಷ್ಟೇ ಅಲ್ಲ ನಾನು ಬೇಜಾರಲ್ಲಿದ್ದರೆ, ಏನೂ ಹೇಳದೆಯೇ ಅಪ್ಪನಿಗೆ ಗೊತ್ತಾಗುತ್ತಿದ್ದು, ನನ್ನ ಬಳಿ ಬಂದು ಏನಾಯ್ತು ಬಾಲಾಜಿ ಅಂತ ಕೇಳುತ್ತಿದ್ದರು. ಅದೇ ರೀತಿ ಈಗ ನನ್ನ ಮಗನೂ ಅಷ್ಟೇ, ನನಗೆ ಸ್ವಲ್ಪ ಬೇಜಾರಾದ್ರು ಬಂದು ಡ್ಯಾಡ್ ಏನಾಯ್ತು ಅಂತ ಕೇಳುತ್ತಾನೆ. ಹಾಗಾಗಿ ಮಗನಲ್ಲೇ ಅಪ್ಪನನ್ನು ನೋಡುತ್ತೇನೆ ಎಂದು ಹೇಳಿದ್ದಾರೆ ಅಕುಲ್ ಬಾಲಾಜಿ.
