ಬಾಲಿವುಡ್‌ನಲ್ಲಿ ತೆರೆ ಕಾಣಲು ಸಜ್ಜಾಗುವ ಚಿತ್ರಗಳು ಒಮ್ಮೆ 'ದಿ ಕಪಿಲ್‌ಶರ್ಮಾ ಶೋ'ನಲ್ಲಿ ಪ್ರಚಾರ ಮಾಡಿದರೆ ಸಾಕು, ಚಿತ್ರ ಸೂಪರ್‌ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎಂಬ ನಂಬಿಕೆ ಬಾಲಿವುಡ್‌ನಲ್ಲಿದೆ. ಇದಕ್ಕೆ ಕಾರಣ ಶೋಗಿರುವ ಅಪಾರ ಪ್ರೇಕ್ಷಕರು ಹಾಗೂ ಟಿಆರ್‌ಪಿ. ಎಷ್ಟೇ ಬ್ಯುಸಿಯಾಗಿದ್ದರೂ ರೆಕಾರ್ಡ್‌ ಅಥವಾ ಸೇವ್‌ ಮಾಡ್ಕೊಂಡು ಎಪಿಸೋಡ್‌ ವೀಕ್ಷಿಸುವಷ್ಟು ಜನಪ್ರಿಯತೆ ಗಳಿಸಿದೆ ಈ ಶೋ.

'ಪ್ರಿನ್ಸೆಸ್‌' ಆಗಮನದಿಂದ ಫಾದರ್‌ಹುಡ್‌ಗೆ ಕಾಲಿಟ್ಟ ಕಾಮಿಡಿ ಸ್ಟಾರ್ ಕಪಿಲ್!

ಅಮಿತಾಬ್‌ ಬಚ್ಚನ್‌ನಿಂದ ಹಿಡಿದು ಈಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟ ನಟ-ನಟಿಯರೂ ಈ  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವು ದಿನಗಳ ಹಿಂದೆ ಅಕ್ಷಯ್ ಕುಮಾರ್‌ ಸಹ ಭಾಗಿಯಾಗಿದ್ದರು, ಮೋಜು ಮಸ್ತಿ ಮಾಡುತ್ತಾ, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಹಾಸ್ಯ ಕಲಾವಿದರು ಹಾಗೂ ನಟ ಚಂದನ್‌ ಈ ಶೋಗಾಗಿ ಪಡೆಯುವ ಸಂಭಾವನೆ ಇದೀಗ ರಿವೀಲ್‌ ಆಗಿದೆ. 

ಹೌದು! ಚಂದನ್‌ ಒಬ್ಬ Stand-up comedian. ಲಾಫ್ಟರ್‌ ಚಾಲೆಂಜ್‌ 3 ರಿಯಾಲಿಟಿ ಶೋ ವಿನ್ನರ್. ಹಲವು ಕಾಮಿಡಿ ಶೋಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತ ಗಮನ ಸೆಳೆದಿದ್ದಾರೆ. ಈಗ ಕಪಿಲ್‌ ಶೋನಲ್ಲಿ ಸ್ಟಾರ್‌ ಲೈಟ್‌. ಅಕ್ಷಯ್ ಕುಮಾರ್‌ ಚಂದನ್‌ ಅವರ ಕಾಂಟ್ರ್ಯಾಕ್ಟ್‌ ಪೇಪರ್‌ ಹಿಡಿದು ಸಂಭಾವನೆ ರಿವೀಲ್‌ ಮಾಡಿದ್ದಾರೆ.

ಕಪಿಲ್ ಶರ್ಮಾ ಹಾಗೂ ಅಂಬಾನಿ ಮಗಳು ಡಿ. 12ರಂದೇ ಮದುವೆಯಾಗಿದ್ದೇಕೆ?

'ಶೋನಲ್ಲಿ 'oye hoye oye hoye' ಎಂದು ಹೇಳುತ್ತಾ ಕಾಮಿಡಿ ಮಾಡುವ ಚಂದನ್‌ ಪಡೆಯುವ ಸಂಭಾವನೆ 5 ನಿಮಿಷಕ್ಕೆ 5 ಲಕ್ಷ ರೂ!  ಅಂದರೆ 1 ನಿಮಿಷಕ್ಕೆ 1 ಲಕ್ಷ ರೂ. ವೇತನ ಪಡೆಯೋ ಅದ್ಭುತ ಕಲಾವಿದ,' ಎಂದು ಹೇಳಿದ್ದರು. 

ಈ ಹಿಂದೆ ಉದಿತ್‌ ನಾರಾಯಣ್‌ ಶೋನಲ್ಲಿ ಭಾಗಿಯಾಗಿದ್ದಾಗ, ಕಪಿಲ್‌ ಶರ್ಮಾ ಸಂಭಾವನೆ ಬಹಿರಂಗ ಪಡಿಸಿದ್ದರು. 1 ಎಪಿಸೋಡ್‌ ಮಾಡುವುದಕ್ಕೆ ಕಪಿಲ್‌ ಸುಮಾರು 1 ಕೋಟಿ ರೂ. ಪಡೆಯುತ್ತಾರಂತೆ.