'ಮತ್ತೆ ವಸಂತ' ಧಾರಾವಾಹಿಯಲ್ಲಿ ಮಿಂಚುತ್ತಿರುವ ಅಕ್ಷತಾ ದೇಶಪಾಂಡೆ ಇದೀಗ ಮತ್ತೊಂದು ಧಾರಾವಾಹಿಗೆ ಸಿಹಿ ಮಾಡಿದ್ದಾರೆ. ಎರಡೂ ಪ್ರಾಜೆಕ್ಟ್‌ಗಳನ್ನು ಸಮವಾಗಿ ನಿಭಾಯಿಸುವುದಾಗಿ ಭರವಸೆ ನೀಡಿದ ಅಕ್ಷತಾಗೆ ಅಭಿಮಾನಿಗಳು ನಾನ್ ಸ್ಟಾಪ್ ಮೆಸೇಜ್ ಮಾಡುತ್ತಿದ್ದಾರೆ. 

'ಎಲ್ಲರಿಗೂ ಹಾಯ್. ನನಗೆ ತುಂಬಾ ಜನರು ಮೆಸೇಜ್ ಹಾಗೂ ಕಾಲ್ ಮಾಡುತ್ತಿದ್ದಾರೆ, ನಾನು ಮತ್ತೆ ವಸಂತ ಧಾರಾವಾಹಿಯಿಂದ ಹೊರ ಬಂದಿರುವುದಾಗಿ, ಎನ್ನುತ್ತಿದ್ದಾರೆ. ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡುವೆ. ನಾನು ಕಾವ್ಯಾಂಜಲಿ ಧಾರಾವಾಹಿಯಲ್ಲಿ ಅಂಜಲಿ ಪಾತ್ರಕ್ಕೆ ಸಹಿ ಮಾಡಿರುವೆ. ಆದರೆ ಮತ್ತೆ ವಸಂತ ಸೀರಿಯಲ್‌ನಿಂದ ಹೊರ ಬಂದಿಲ್ಲ. ಎರಡೂ ಕಥೆಗಳನ್ನೂ ಸಮವಾಗಿ ನಿಭಾಯಿಸುವೆ. ಅಪರ್ಣಾ ಕೇವಲ ಪಾತ್ರವಲ್ಲ. ನನಗೆ ಅದು ಎಮೋಶನ್. ದಯವಿಟ್ಟು ಈ ರೀತಿ ಪ್ರಶ್ನೆಗಳನ್ನು ಕೇಳಬೇಡಿ. ಅಂಜಲಿ ಪಾತ್ರಕ್ಕೂ ನಿಮ್ಮ ಪ್ರೀತಿ ಇರಲಿ,' ಎಂದು ಬರೆದುಕೊಂಡಿದ್ದಾರೆ. 

ಸ್ಟಾರ್‌ ಸುವರ್ಣದಲ್ಲಿ ಶುರುವಾಗಲಿದೆ 'ಮತ್ತೆ ವಸಂತ'! 

ಕಿರುತೆರೆ ಲೋಕ ದಲ್ಲಿ ಅಕ್ಷತಾ ತಮ್ಮದೇ ವಿಭಿನ್ನ ಛಾಪು ಮೂಡಿಸಿದ್ದಾರೆ. ಎರಡು ಧಾರಾವಾಹಿಗಳಲ್ಲಿ ಎರಡು ಬೇರೆ ರೀತಿಯ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಅಂಜಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ದೀಪಾ ಜಗದೀಶ್, ಧಾರಾವಾಹಿಯಿಂ ಹೊರ ಬಂದಿರುವ ಮಾಹಿತಿ ಲಭ್ಯವಾಗಿತ್ತು. ಕೇವಲ 4 ತಿಂಗಳು ಅಂಜಲಿ ಪಾತ್ರಕ್ಕೆ ಜೀವ ತುಂಬಿದ್ದರು.