ಬಿಗ್‌ಬಾಸ್‌’ನಿಂದ ಹೊರ ಬಂದ ಕರ್ನಾಟಕದ ಮನೆಮಗಳಿಗೆ ಸಿಕ್ತು ಅದ್ಧೂರಿ ಸ್ವಾಗತ

ಬಿಗ್‌ಬಾಸ್‌ ಸೀಸನ್11 ಕೊನೆಯ ಹಂತಕ್ಕೆ ತಲುಪಿದ್ದು, ಇದೀಗ ಕಳೆದವಾರ ಐಶ್ವರ್ಯ ಸಿಂಧೋಗಿ ಎಲಿಮೇಟ್ ಆಗಿದ್ದು,ದೊಡ್ಮನೆಯಿಂದ ಹೊರಬಂದ ಕರ್ನಾಟಕದ ಮನೆಮಗಳಿಗೆ ಅದ್ಧೂರಿ ಸ್ವಾಗತ ದೊರೆತಿದೆ. 
 

Aishwarya Sindhogi received grand welcome pav

ಬಿಗ್‌ಬಾಸ್‌ ಕನ್ನಡ ಸೀಸನ್ 11 (Bigg Boss Season 11) ಶುರುವಾಗಿ ಈಗಾಗಲೇ 90 ದಿನಗಳು ಕಳೆದಿದ್ದು, ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಒಂದೊಂದು ವಾರ ಒಬ್ಬೊಬ್ಬರದ್ದು ಆಡುವ ರೀತಿ ಬೇರೆ ಬೇರೆಯಾಗಿರೋದರಿಂದ ಯಾರು ಟಾಪ್ 5 ನಲ್ಲಿ ಉಳಿದುಕೊಳ್ಳುತ್ತಾರೆ, ಯಾರು ವಿನ್ ಆಗುತ್ತಾರೆ ಅನ್ನೋದನ್ನು ಹೇಳೊದಕ್ಕೆ ಕಷ್ಟವಾಗಿದೆ. ಇದೀಗ ಈ ವಾರ ಬಿಗ್ ಬಾಸ್ ಮನೆಯಿಂದ ನಟಿ ಐಶ್ವರ್ಯ ಸಿಂಧೋಗಿ ಹೊರ ಬಂದಿದ್ದಾರೆ. ಬಿಗ್‌ಬಾಸ್‌ ಇಲ್ಲಿವರೆಗೂ ಯಾರಿಗೂ ಕೊಡದಂತಹ ಭಾವನಾತ್ಮಕ ಬೀಳ್ಕೊಡುಗೆಯನ್ನು ಐಶ್ವರ್ಯ ಸಿಂಧೋಗಿಗೆ (Aishwarya Sindhogi)ನೀಡಿದ್ದು, ಇದು ವೀಕ್ಷಕರ ಕಣ್ಣನ್ನೂ ಒದ್ದೆ ಮಾಡಿತ್ತು. 

ಎಲಿಮಿನೇಟ್ ಆದ ಐಶ್ವರ್ಯಗೆ ಪ್ರೀತಿಯಿಂದ ಪತ್ರ ಬರೆದ ಬಿಗ್ ಬಾಸ್ 'ಪ್ರೀತಿಯ ಐಶ್ವರ್ಯ 13 ವಾರಗಳ ಕಾಲ ಒಬ್ಬ ಪ್ರಬಲ ಸ್ಪರ್ಧಿಯಾಗಿ ಈ ಮನೆಯಲ್ಲಿದ್ದುದು ಸಂತೋಷ. ಬೇಸರದ ಜೊತೆ ನಗು ದುಃಖ, ಕೋಪ, ತುಂಟಾಟ ಹೀಗೆ ನಿಮ್ಮ ಭಾವನೆಗಳಿಗೆ ಸಾಕ್ಷಿಯಾಗಿರುವ ಈ ಮನೆಯಿಂದ ಈಗ ನಿಮ್ಮನ್ನು ಕಳುಹಿಸಿಕೊಡಲೇಬೇಕಾಗಿದೆ. ತನ್ನವರು ಯಾರೂ ಇಲ್ಲ ಎಂಬ ಕೊರಗಿನೊಂದಿಗೆ ಈ ಮನೆ ಪ್ರವೇಶ ಮಾಡಿದ್ರಿ ಆದರೆ ಈಗ ಬಿಗ್ ಬಾಸ್ ಮನೆ ಜೊತೆಗೆ ಕರ್ನಾಟಕದ ಮನೆಮನದಲ್ಲೂ ನೀವಿದ್ದೀರಿ. ಈ ಮನೆಯಲ್ಲಿ ನಿಮ್ಮ ಪ್ರಯಣ ಮುಗಿದಿರಬಹುದು ಆದರೆ ನಮ್ಮ ನಿಮ್ಮ ನಂಟು ಎಂದಿಗೂ ಮುಗಿಯುವಂಥದ್ದಲ್ಲ ಎಂದು ಬರೆದಿದ್ದರು. 

ಬಿಗ್​ಬಾಸ್​ ಇತಿಹಾಸದಲ್ಲೇ ಸಿಕ್ಕಿರದ ಗಿಫ್ಟ್​ ನನಗೆ ಸಿಕ್ಕಿದೆ: ಲೈವ್​ನಲ್ಲಿ ಬಂದು ಖುಷಿ ಹಂಚಿಕೊಂಡ ಐಶ್ವರ್ಯಾ

ಅಷ್ಟೇ ಅಲ್ಲ ಐಶ್ವರ್ಯಾ ಲಗೇಜ್ ಹಿಡಿದುಕೊಂಡು ಮನೆಯಿಂದ ಹೊರನಡೆಯುವ ಹೊತ್ತಿಗೆ ಬಿಗ್ ಬಾಸ್ ಈ ಮನೆಯಲ್ಲಿನ (bigg boss house) ನಿಮ್ಮ ಆಟ ಇಂದಿಗೆ ಮುಗಿದಿರಬಹುದು, ಆದರೆ ಮನೆಯ ದ್ವಾರ ತೆರೆದುಕೊಳ್ಳುವುದು ಆಟದಿಂದ ಹೊರಹಾಕಲ್ಪಟ್ಟ ಐಶ್ವರ್ಯಾಗೆ ಅಲ್ಲ. ತನ್ನ ತವರಿನಿಂದ ಹೊರಟು ಹೊಸ ಜೀವನದತ್ತ ಹೆಜ್ಜೆ ಇಡುತ್ತಿರುವ ಈ ಮನೆಯ ಮಗಳು ಐಶ್ವರ್ಯಾಳಿಗೆ, ಎನ್ನುತ್ತಾ 'ಹೋಗಿ ಬಾ ಮಗಳೇ'ಎಂದು ಬಿಗ್ ಬಾಸ್ ಹೇಳಿದ್ದು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಅದಾದ ಮೇಲೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೂ ಸಹ ಐಶ್ವರ್ಯಕ್ಕೆ ಅದ್ಧೂರಿಯಾಗಿ ಸ್ವಾಗತ ಸಿಕ್ಕಿದೆ. 

ಹೋಗಿ ಬಾ ಮಗಳೇ ಎಂದ ಬಿಗ್ ಬಾಸ್; ಬಿಕ್ಕಿ ಬಿಕ್ಕಿ ಅತ್ತ ಐಶ್ವರ್ಯಾ ಶಿಂಧೋಗಿ

ಕನ್ನಡಿಗರ ಮನಗೆದ್ದ ಕರ್ನಾಟಕದ ಮನೆಮಗಳು (Daughter of Karnataka) ಐಶ್ವರ್ಯಾಗೆ ಸ್ವಾಗತ ಎನ್ನುತ್ತಾ ಆರತಿ ಮಾಡಿ ಬರಮಾಡಿಕೊಂಡು, ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ಹೂಗುಚ್ಚ ನೀಡಿ, ಅಭಿಮಾನಿಗಳು ಜೊತೆಯಾಗಿ ಸೇರಿ ಸ್ವಾಗತ ಕೋರಿದ್ದಾರೆ. ಇಷ್ಟೊಂದು ಗ್ರ್ಯಾಂಡ್ ವೆಲ್ ಕಮ್ ಸಿಗುತ್ತೆ ಅಂತ ನನಗೆ ಗೊತ್ತಿರಲಿಲ್ಲ. ಸರ್ಪ್ರೈಸ್ ಆಯ್ತು ಎಂದಿದ್ದಾರೆ ಐಶ್ವರ್ಯ. ಹೇಗಿತ್ತು ನೋಡಿ ಐಶ್ವರ್ಯಗೆ ಸಿಕ್ಕಾ ಗ್ರ್ಯಾಂಡ್ ಸ್ವಾಗತ… ವಿಡೀಯೋ ಇಲ್ಲಿದೆ… 

 

Latest Videos
Follow Us:
Download App:
  • android
  • ios