ಅಗ್ನಿ ಸಾಕ್ಷಿಯ ಜನರ ನೆಚ್ಚಿನ ನಟಿ ವೈಷ್ಣವಿ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಈ ಬಗ್ಗೆ ಗೊತ್ತಾ ನಿಮಗೆ..? ನಟಿಯೇ ಇದನ್ನು ತಿಳಿಸಿದ್ದಾರೆ

ಅಗ್ನಿಸಾಕ್ಷಿ ಧಾರವಾಹಿಯ ಮೂಲಕ ಕನ್ನಡಿಗರ ಮನ ಗೆದ್ದ ನಟಿ ವೈಷ್ಣವಿ ಅವರ ರಿಲೇಷನ್‌ಶಿಪ್ ಬಗ್ಗೆ ಎಲ್ಲರಿಗೂ ಸಿಕ್ಕಾಪಟ್ಟೆ ಕುತೂಹಲವಿದೆ.

ವೈಷ್ಣವಿ ಯಾರನ್ನಾದ್ರೂ ಲವ್ ಮಾಡುತ್ತಿದ್ದಾರಾ..? ರಿಲೇಷನ್‌ಶಿಪ್‌ನಲ್ಲಿದ್ದಾರಾ ಎಂಬ ಪ್ರಶ್ನೆ ಪ್ರತಿ ಬಾರಿ ನಟಿಗೆ ಕೇಳಲ್ಪಡುತ್ತದೆ. ಆದ್ರೆ ಈವರೆಗೂ ನಟಿ ಇದಕ್ಕೆ ಸ್ಪಷ್ಟ ಉತ್ತರವನ್ನು ಕೊಟ್ಟಿರಲಿಲ್ಲ.

ಮನೆಯಲ್ಲಿರುವ ಎಲ್ಲರೂ ಫೇಕ್.. ಎರಡನೇ ವಾರ ಮಾತಿನ ಮಲ್ಲಿ ಹೊರಕ್ಕೆ

ಆದರೆ ಈ ಬಾರಿ ಕಲರ್ಸ್ ಕನ್ನಡದ ಚಾಟ್ ಕಾರ್ನ್‌ರ್‌ನಲ್ಲಿ ಭಾಗವಹಿಸಿದ ನಟಿ ಈ ಪ್ರಶ್ನೆಗೆ ಉತ್ತರಿಸಿ ಬಿಡುತ್ತೇನೆ ಅಂತ ಉತ್ತರವನ್ನು ಹೇಳಿಯೇ ಬಿಟ್ಟಿದ್ದಾರೆ.

ನಟಿ ವೈಷ್ಣವಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಚಾಟ್‌ ಕಾರ್ನರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ನಟಿ ಈ ಒಂದು ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಪ್ರಶಾಂತ್ ಸಂಬರಗಿಗೆ ಮನೆಯಲ್ಲಿ ತಬ್ಬಿಕೊಳ್ಳುವ ಮಜಾ: ಕಿಚ್ಚ ಖಡಕ್ ಎಚ್ಚರಿಕೆ

ಹೌದು ನಾನು ರಿಲೇಷನ್‌ಶಿಪ್‌ನಲ್ಲಿದ್ದೇನೆ. ನಮ್ಮಿಬ್ಬರ ರಿಲೆಷನ್‌ಶಿಪ್ ಸ್ಟ್ರಾಂಗ್ ಅಗಿದೆ. ಹಾಗೆಯೇ ಮುಂದುವರಿಯುತ್ತಿದೆ ಎಂದು ಉತ್ತರಿಸಿದ್ದಾರೆ ನಟಿ.

ಆಮೇಲೆ ಯಾರದು ವ್ಯಕ್ತಿ, ಯಾರ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದೀರಿ ಎಂದು ಕೇಳಿದಾಗ ಕೆಲಸದ ಜೊತೆ ಎಂದಿದ್ದಾರೆ ವೈಷ್ಣವಿ. ಇದೊಂದು ಹಳೆ ಟೆಕ್ಸಿಕ್ ಆದ್ರೂ ಮೊದಲ ಬಾರಿ ಹೇಳಿದಾಗ ಓಹ್ ಹೌದೇನೋ ಎಂಬಷ್ಟು ಸಹಜವಾಗಿ ಮಾತನಾಡಿದ್ದಾರೆ ಅಗ್ನಿಸಾಕ್ಷಿ ನಟಿ.