Asianet Suvarna News Asianet Suvarna News

ಅಗ್ನಿಸಾಕ್ಷಿ ಸೀರಿಯಲ್ ನಟ ರಾಜೇಶ್ ಧ್ರುವ 'ಬಿಗ್ ಬಾಸ್' ಮನೆ ಪ್ರವೇಶಕ್ಕೆ ಸಿದ್ಧತೆ?

ನಟ ರಾಜೇಶ್ ಧ್ರುವ ಇತ್ತೀಚೆಗೆ 'ಶ್ರಿ ಬಾಲಾಜಿ ಫೋಟೋ ಸ್ಟುಡಿಯೋ' ಹೆಸರಿನ  ಸಿನಿಮಾವೊಂದನ್ನು ನಿರ್ದೇಶಿಸಿ ಸುದ್ದಿ ಮಾಡಿದ್ದರು. ಅಗ್ನಿಸಾಕ್ಷಿ ಸೇರಿದಂತೆ ನಂದಿನಿ, ಅಣ್ಣ ತಂಗಿ, ಅನ್‌ಲಾಕ್ ಕನ್ನಡ ಮೊದಲಾದ ಪ್ರಾಜೆಕ್ಟ್‌ಗಳಲ್ಲಿ ನಟಿಸಿದ್ದಾರೆ. 

Agnisakshi fame actor Rajesh Dhruva enters in Bigg Boss srb
Author
First Published Oct 6, 2023, 7:33 PM IST

ಬಿಗ್ ಬಾಸ್‌ ಶೋ ಸ್ಟಾರ್ಟ್ ಆಗಲು ಇನ್ನೆರಡೇ ದಿನಗಳಿವೆ. 8 ಅಕ್ಟೋಬರ್ 2023 ರಂದು 6.00 ಗಂಟೆಗೆ ಶುರುವಾಗಲಿರುವ ಬಿಗ್ ಬಾಸ್ ಪ್ರೀಮಿಯರ್ ಶೋಗೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಸಮಯದಲ್ಲಿ 'ಅಗ್ನಿಸಾಕ್ಷಿ' ಖ್ಯಾತಿಯ ನಟ ರಾಜೇಶ್ ಧ್ರುವ (Rajesh Dhruva) ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಲಿದ್ದಾರೆ ಎಂಬ ಮಾಹಿತಿ ಇದೆ. ಇದು ಕೇವಲ ಗಾಸಿಪ್ ಅಥವಾ ಸತ್ಯ ಸಂಗತಿಯೋ ಎಂಬುದು ಕೇವಲ ಇನ್ನೆರಡು ದಿನಗಳಲ್ಲಿ ಗೊತ್ತಾಗಲಿದೆ. 

ಹೌದು, ನಟ ರಾಜೇಶ್ ಧ್ರುವ ಅಗ್ನಿಸಾಕ್ಷಿ ಸೀರಿಯಲ್‌ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದವರು. ಜತೆಗೆ, ಸಿನಿಮಾ ನಿರ್ದೇಶನದಲ್ಲೂ ಸೈ ಎನಿಸಿಕೊಂಡವರು. ಹೊಸ ಸೀರಿಯಲ್ ಒಂದರಲ್ಲಿ ಸದ್ಯವೇ ಕಿರುತೆರೆ ವೀಕ್ಷಕರಿಗೆ ತಮ್ಮ 'ದರ್ಶನ' ಕೊಡಲಿದ್ದಾರೆ ಎಂಬ ಮಾತೂ ಕೇಳಿ ಬರುತ್ತಿದೆ. ಈ ಸಮಯದಲ್ಲಿ, ಕಾಂಟ್ರೋವರ್ಸಿಗೂ ಜಾಗವಿರುವ ಬಿಗ್ ಬಾಸ್‌ ಶೋದಲ್ಲಿ ಸ್ಥಾನ ಪಡೆದಿರಬಹುದೇ? 

ಬಿಗ್ ಬಾಸ್‌ ಸೀಸನ್ 10ಕ್ಕೆ ಕ್ಷಣಗಣನೆ; ಪರಮೇಶ್ವರ್ ಗುಂಡ್ಕಲ್ ಮಿಸ್ ಮಾಡಿಕೊಳ್ತಿರೋ ವೀಕ್ಷಕರು!

ಅದೇನೇ ಇರಲಿ, ನಟ ರಾಜೇಶ್ ಧ್ರುವ ಇತ್ತೀಚೆಗೆ 'ಶ್ರಿ ಬಾಲಾಜಿ ಫೋಟೋ ಸ್ಟುಡಿಯೋ' ಹೆಸರಿನ  ಸಿನಿಮಾವೊಂದನ್ನು ನಿರ್ದೇಶಿಸಿ ಸುದ್ದಿ ಮಾಡಿದ್ದರು. ಅಗ್ನಿಸಾಕ್ಷಿ ಸೇರಿದಂತೆ ನಂದಿನಿ, ಅಣ್ಣ ತಂಗಿ, ಅನ್‌ಲಾಕ್ ಕನ್ನಡ ಮೊದಲಾದ ಸೀರಿಯಲ್ ಮತ್ತು ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ನಟಿಸಿದ್ದಾರೆ. ಇದೀಗ ಬಿಗ್ ಬಾಸ್ ಸೀಸನ್-10 ಮನೆಯಲ್ಲಿ ಸ್ಪರ್ಧಿಯಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂಬ ಸುದ್ದಿಯಿದೆ. ಈ ಸುದ್ದಿಯನ್ನು ಅವರು ಅಲ್ಲಗಳೆದಿದ್ದಾರೆ ಎನ್ನಲಾಗುತ್ತಿದ್ದರೂ ಅದನ್ನು ನಂಬಲು ಸಾಧ್ಯವಿಲ್ಲ. ಏಕೆಂದರೆ, ಹೌದು ಎಂದಾದರೆ ಖಂಡಿತ ಈಗ ಆ ಸೀಕ್ರೆಟ್ ಬಿಟ್ಟುಕೊಡುವುದಿಲ್ಲ, ಅಲ್ಲವೇ?

ಸೊಸೆ ಕಣ್ಣೀರಿಗೆ ಕರಗಿದಳಾ ಅತ್ತೆ; ಚಾರು ಬಳಿಗೆ ಬಂದ ರಾಮಚಾರಿ ಶಾಕ್ ಆಗ್ಬಿಟ್ಟ..!

ಒಟ್ಟಿನಲ್ಲಿ, ಹಬ್ಬಿರುವ ಈ ಸುದ್ದಿ ನಿಜವೋ ಸುಳ್ಳೋ ಎಂಬುದು ಇನ್ನೆರಡು ದಿನಗಳಲ್ಲಿ ಜಗತ್ತಿಗೇ ಗೊತ್ತಾಗಲಿದೆ. ಅಲ್ಲಿಯವೆರೆಗೆ ಕಾದು ಯಾರ್ಯಾರು ಬಿಗ್ ಬಾಸ್ ಮನೆಗೆ ನಿಜವಾಗಿಯೂ ಕಾಲಿಟ್ಟಿದ್ದಾರೆ ಎಂಬುದನ್ನು ನೋಡುವುದೊಂದೇ ದಾರಿ ಎನ್ನಬಹುದೇ? 

 

Follow Us:
Download App:
  • android
  • ios