Asianet Suvarna News Asianet Suvarna News

BBK 11: ಬಿಗ್‌ ಬಾಸ್‌ಗೆ ಎಂಟ್ರಿ ಪಡೆದ 'ಯಮುನಾ ಶ್ರೀನಿಧಿ', ಮನೆಗೆ ಹೊಕ್ಕ ಕೂಡಲೇ ಸಿಕ್ತು ದೊಡ್ಡ ಜವಾಬ್ದಾರಿ!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾಕುಮಾರಿ' ಧಾರಾವಾಹಿಯಲ್ಲಿ ಖ್ಯಾತಿ ಪಡೆದಿದ್ದ ಹಿರಿಯ ನಟಿ ಯಮುನಾ ಶ್ರೀನಿಧಿ, ಬಿಗ್ ಬಾಸ್ ಕನ್ನಡ ಸೀಸನ್ 10 ರ ಮನೆಗೆ ಎರಡನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ಭವ್ಯಾ ಗೌಡ ಅವರ ನಂತರ ಮನೆಗೆ ಎಂಟ್ರಿ ಕೊಟ್ಟ ಇವರಿಗೆ ಬಿಗ್ ಬಾಸ್ ವಿಶೇಷ ಜವಾಬ್ದಾರಿಯನ್ನೂ ನೀಡಿದ್ದಾರೆ.

Actress Yamuna Srinidhi Enters Bigg Boss Kannda Season 11 House san
Author
First Published Sep 29, 2024, 6:49 PM IST | Last Updated Sep 29, 2024, 7:07 PM IST

ಬೆಂಗಳೂರು (ಸೆ. 29): ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ಕನ್ಯಾಕುಮಾರಿ ಸೀರಿಯಲ್‌ನಲ್ಲಿ ನಾಯಕನ ಅಮ್ಮನ ಪಾತ್ರದಲ್ಲಿ ನಟಿಸಿದ್ದ ಹಿರಿಯ ನಟಿ ಯಮುನಾ ಶ್ರೀನಿಧಿ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಬಿಗ್‌ ಬಾಸ್‌ನ ದೊಡ್ಮನೆಗೆ 2ನೇ ಸ್ಪರ್ಧಿಯಾಗಿ ಅವರು ಎಂಟ್ರಿ ಪಡೆದುಕೊಂಡಿದ್ದಾರೆ. ವೇದಿಕೆಯ ಮೇಲೆ ಮೊದಲ ಸ್ಪರ್ಧಿಯಾಗಿದ್ದ ಭವ್ಯಾ ಗೌಡ ಅವರೊಂದಿಗೆ ಯಮುನಾ ಶ್ರೀನಿಧಿ ಅವರನ್ನೂ ಕರೆದು ಬಿಗ್‌ ಬಾಸ್‌ ಮನೆಗೆ ಕಳುಹಿಸಲಾಯಿತು. ಇಬ್ಬರೂ ಮನೆಗೆ ಹೊಕ್ಕ ಕೂಡಲೇ ದೊಡ್ಡ ಜವಾಬ್ದಾರಿಯನ್ನೂ ಬಿಗ್‌ ಬಾಸ್‌ ನೀಡಿದ್ದಾರೆ. ತಮ್ಮ ನಟನೆಯಿಂದ ಅದ್ಭುತ ಅಭಿಮಾನಿಗಳನ್ನು ಪಡೆದಿರುವ ಯಮುನಾ ಶ್ರೀನಿಧಿ, ಕನ್ಯಾಕುಮಾರಿ ಸೀರಿಯಲ್‌ನಲ್ಲಿ ಮಾಡಿದ ಧನಲಕ್ಷ್ಮೀ ಪಾತ್ರ ಸಾಕಷ್ಟು ಜನಪ್ರಿಯವಾಗಿತ್ತು. ಮುಗ್ಧ ತಾಯಿ ತನ್ನ ಮಗನ ಸಂತೋಷಕ್ಕಾಗಿ ಏನು ಮಾಡಲು ತಯಾರಿರುವ ಪಾತ್ರದಲ್ಲಿ ಇವರು ನಟಿಸುತ್ತಿದ್ದರು. 2021ರಲ್ಲಿ ಪ್ರಸಾರವಾಗಿದ್ದ ಈ ಧಾರವಾಹಿ 2022ರಲ್ಲಿ ಅಂತ್ಯವಾಗಿತ್ತು. ಹಳ್ಳಿಯ ಬಡತನ ಜೋಗಿ ಹಟ್ಟಿಯ ಪುಟ್ಟ ಮನೆ ಹಾಗೂ ಹಳ್ಳಿಯ ಕನ್ನಡದ ಸೊಗಡಿನಲ್ಲಿ ಯಮುನಾ ಮಿಂಚಿದ್ದರು.

ಬಿಗ್‌ ಮನೆಗೆ ಹೋದಾಗಲೇ ಸಿಕ್ತು ದೊಡ್ಡ ಜವಾಬ್ದಾರಿ: ಬಿಗ್‌ ಬಾಸ್‌ ಮನೆಗೆ ಮೊದಲ ಹಾಗೂ 2ನೇ ಸ್ಪರ್ಧಿಯಾಗಿ ಎಂಟ್ರಿ ಪಡೆದುಕೊಂಡ ಭವ್ಯಾ ಗೌಡ ಹಾಗೂ ಯಮುನಾ ಶ್ರೀನಿಧಿಗೆ ಬಿಗ್‌ ಬಾಸ್‌ ದೊಡ್ಡದೊಂದು ಜವಾಬ್ದಾರಿ ನೀಡಿದ್ದರು. ಬಿಗ್‌ ಬಾಸ್‌ ಮನೆಯ ಕನ್ಫೆಶನ್‌ ರೂಮ್‌ನಲ್ಲಿ ಇರುವ ಇವರಿಬ್ಬರು, ಬರುವ ಸ್ಪರ್ಧಿಗಳು ಸ್ವರ್ಗಕ್ಕೆ ಹೋಗಬೇಕೋ? ನರಕಕ್ಕೆ ಹೋಗಬೇಕೋ? ಎನ್ನುವುದನ್ನು ತಿಳಿಸುವ ಅಧಿಕಾರವನ್ನು ನೀಡಲಾಗಿತ್ತು. ಅದರಂತೆ ಧನಂಜಯ್‌ ಆಚಾರ್‌ ಅವರನ್ನು ಇವರು ಸ್ವರ್ಗಕ್ಕೆ ಕಳಿಸಿದ್ದಾರೆ.

ಅದಕ್ಕೂ ಮುನ್ನ ಜೀ ಕನ್ನಡದಲ್ಲಿ ಪ್ರಸಾರವಾಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದ ಕಮಲಿ ಧಾರವಾಹಿಯಲ್ಲಿ ಕಮಲಿಯ ತಾಯಿಯಾದ ಗೌರಿ ಪಾತ್ರವನ್ನು ನಿರ್ವಹಣೆ ಮಾಡಿದ್ದರು. ಧಾರವಾಹಿ ಅಲ್ಲದೆ,  ‘ಮನಸಿನಾಟ’, ‘ಫೇಸ್ ಟು ಫೇಸ್’, ‘ಕರ್ಷಣಂ’, ‘ಗಲ್ಲಿ ಬೇಕರಿ, ‘ರನ್ನ’, ‘ರಾಂಧವ’ ಇತ್ಯಾದಿ ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದಾರೆ. ಅದರೊಂದಿಗೆ ‘ಅರಮನೆ’, ‘ಅಶ್ವಿನಿ ನಕ್ಷತ್ರ’, ‘ಮಧು ಮಗಳು’, ‘ಒಂದೂರಲ್ಲಿ ರಾಜ ರಾಣಿ’, ‘ಅಮೃತವರ್ಷಿಣಿ’, ‘ಸಾಕ್ಷಿ’ ಮುಂತಾದ ಧಾರವಾಹಿಯಲ್ಲಿ ನಟಿಸಿದ್ದಾರೆ.

BBK 11: ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಚೈತಾ ಕುಂದಾಪುರ ಬಿಗ್‌ ಬಾಸ್‌ ಮನೆಗೆ ಎಂಟ್ರಿ!

ಮೈಸೂರು ಮೂಲದ ಯಮುನಾ ಶ್ರೀನಿಧಿ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ.  ಯಮುನಾ ಬರೀ ನಟನೆಯಲ್ಲಿ ಛಾಪು ಮೂಡಿಸಿದವರಲ್ಲ. ಅಮೆರಿಕದಲ್ಲಿ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ನೀಡಿದ್ದಾರೆ. ಮೊದ ಮೊದಲಿಗೆ ಭರತನಾಟ್ಯ ಮಾಡುತ್ತಿದ್ದ ಯಮುನಾ, ಬಳಿಕ ಭರತನಾಟ್ಯ ಗುರುಗಳಿಂದ ವಿವಿಧ ಶೈಲಿಯ ಭರತನಾಟ್ಯವನ್ನು ಕಲಿತಿದ್ದಾರೆ. ಅಷ್ಟೇ ಅಲ್ಲ ಇವರು ವಿದೇಶದಲ್ಲಿ ಒಂದಷ್ಟು ವರ್ಷ ವಾಸವಾಗಿದ್ದವರು. ಶಾಸ್ತ್ರೀಯ ಭರತನಾಟ್ಯ ನರ್ತಕಿ, ನೃತ್ಯ ಸಂಯೋಜಕಿಯಾಗಿ 15 ವರ್ಷಗಳ ಕಾಲ USA ನಲ್ಲಿ ಜೀವನವನ್ನು ನಡೆಸಿದ ನಂತರ, ಯಮುನಾ 2012 ರಲ್ಲಿ ಭಾರತಕ್ಕೆ ಮರಳಿದರು.
ನಂತರ ಅವರು ಕನ್ನಡ ಧಾರಾವಾಹಿ ಅಶ್ವಿನಿ ನಕ್ಷತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಕನ್ನಡ ಚಿತ್ರರಂಗದ ಪ್ರಮುಖ ನಟರೊಂದಿಗೆ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 10ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. 2019ರಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರ ಯಮುನಾ ಪ್ರಚಾರ ಮಾಡಿದ್ದರು. ಮತ್ತು ನಾವಿಕ ಕನ್ನಡ ಸಮಾವೇಶಕ್ಕೆ ಸಾಂಸ್ಕೃತಿಕ ರಾಯಭಾರಿಯಾಗಿಯೂ ನೇಮಕಗೊಂಡಿದ್ದರು.

BBK 11: ಮಗುವಿನಿಂದ ಬಂದ ಅದೃಷ್ಟ: ಬಿಗ್ ಬಾಸ್ ಮನೆಗೆ ಟಿಕ್‌ಟಾಕ್ ಸ್ಟಾರ್ ಧನರಾಜ್ ಆಚಾರ್ಯ ಎಂಟ್ರಿ..!

Latest Videos
Follow Us:
Download App:
  • android
  • ios