ಮುಂಬೈನಲ್ಲಿ ನಟಿಯೊಬ್ಬರ ಒಳಉಡುಪು ಕ್ಯಾಮೆರಾಗಳಲ್ಲಿ ಸೆರೆಯಾಗಿ ಸಾರ್ವಜನಿಕ ಮುಜುಗರಕ್ಕೆ ಕಾರಣವಾಯಿತು. ಪಾಪರಾಜಿಗಳು ಫೋಟೋ, ವಿಡಿಯೋ ತೆಗೆಯುವಾಗ ಈ ಘಟನೆ ನಡೆದಿದೆ. ಸಾರ್ವಜನಿಕರು ಪಾಪರಾಜಿಗಳ ನಡೆಯನ್ನು ಖಂಡಿಸಿ, ನಟಿಯ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀಡಿಯೊವನ್ನು ತೆಗೆದು ಹಾಕುವಂತೆ ಒತ್ತಾಯಿಸಿದ್ದಾರೆ.

ಸೋಶಿಯಲ್‌ ಮೀಡಿಯಾ ಬಂದಾಗಿನಿಂದ ಸಿನಿಮಾ ತಾರೆಯರು, ಸೀರಿಯಲ್‌ ನಟಿಯರ ಮೇಲೆ ಹದ್ದಿನ ಕಣ್ಣಿಡೋದು ಹೆಚ್ಚಾಗಿದೆ. ನೆಮ್ಮದಿಯಾಗಿ ಒಂದು ನಾಲ್ಕು ಹೆಜ್ಜೆ ನಡೆಯುವಂತೆಯೂ ಇಲ್ಲ. ಗಲ್ಲಿ ಗಲ್ಲಿಯಲ್ಲಿ ನಿಂತಿರುವ ಪಾಪರಾಜಿಗಳು ಅವರ ಫೋಟೋಗಳನ್ನು ತೆಗೆದು, ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಾರೆ.

ಪಾಪರಾಜಿಗಳು ಮಾತ್ರವಲ್ಲ ಸಾಮಾನ್ಯ ಜನರು ಕೂಡ ಸಿನಿಮಾ ನಟ, ನಟಿಯರು ಬಂದ್ರೆ ಮೈಮೇಲೆ ಮುಗಿ ಬಿದ್ದು ಅವರ ವಿಡಿಯೋವನ್ನು ತೆಗೆದುಕೊಳ್ಳುತ್ತಾರೆ. ಬಳಿಕ ಇದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಾಕಿ, ಲೈಕ್ಸ್‌, ವೀವ್ಸ್‌ ಹಾಗೂ ಕಾಮೆಂಟ್‌ ಪಡೆಯುವ ಉದ್ದೇಶ ಅವರದಾಗಿರುತ್ತದೆ. ಇದೇ ರೀತಿಯ ಘಟನೆಯಲ್ಲಿ ಮುಂಬೈನಲ್ಲಿ ಪಾಪರಾಜಿಗಳು ಫೋಟೋ, ವಿಡಿಯೋ ಕ್ಲಿಕ್‌ ಮಾಡುವ ಭರದಲ್ಲಿ ನಟಿಯೊಬ್ಬಳ ಮಾನ ಮೂರಾಬಟ್ಟೆಯಾಗಿದೆ. 

ಮುಂಬೈನ ಪ್ರಮುಖ ಬೀದಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವೊಂದರಲ್ಲಿ ಹಾಜರಾಗಬೇಕಿದ್ದ ನಟಿ ತಮ್ಮ ಕಾರ್‌ ಪಾರ್ಕ್ ಮಾಡಿ ಬರುತ್ತಿದ್ದರು. ಬಿಳಿ ಬಣ್ಣದ ಪ್ಯಾಂಟ್‌ ಹಾಗೂ ತೋಳುಗಳಿಲ್ಲದ ಶಾರ್ಟ್‌ ಧರಿಸಿ ಕಾರ್ಯಕ್ರಮಕ್ಕೆ ಈಕೆ ಬರುತ್ತಿರುವುದನ್ನು ಪಾಪರಾಜಿಗಳು ವಿಡಿಯೋ ಮಾಡುತ್ತಿದ್ದರು. ಹಾಕಿದ್ದ ಶಾರ್ಟ್‌ ಕೊಂಚ ಮಟ್ಟಿಗೆ ಮೇಲೆ ಸರಿದಿದ್ದು ಅನಿಸಿತ್ತು. ನಡೆಯುವಾಗಲೇ, ಶಾರ್ಟ್‌ಅನ್ನು ಹಿಡಿದು ಸಣ್ಣಗೆ ಕೆಳಕ್ಕೆ ಜಗ್ಗಿದ್ದಾರೆ. ಈ ವೇಳೆ ಆಕೆ ಧರಿಸಿದ ಒಳಉಡುಪು ಕಿತ್ತು ಕೈಗೆ ಬಂದಿದೆ. 

ಬಹುಶಃ ಯಾರೂ ನೋಡದೇ ಇದ್ದರೆ ಆಕೆಗೆ ಮುಜುಗರವಾಗುತ್ತಿರಲಿಲ್ಲ. ಒಳಉಡುಪು ಕಿತ್ತು ಕೈಗೆ ಬಂದಿದ್ದು, ಪಾಪರಾಜಿಗಳ ಕ್ಯಾಮೆರಾಗಳಲ್ಲೇ ಸೆರೆಯಾಗಿತ್ತು. ಮುಂದೇನು ಮಾಡೋದು ಅನ್ನೋದೇ ತೋಚದಂತಾಗಿ ತನ್ನ ಇನ್ನೊಂದು ಕೈ ಹಾಗೂ ಅದರಲ್ಲಿದ್ದ ಮೊಬೈಲ್‌ನಿಂದ ಮುಚ್ಚಿಕೊಳ್ಳಲು ಪ್ರಯತ್ನ ಮಾಡಿದ್ದಾಳೆ. ಕೊನೆಗೆ ಕ್ಯಾಮೆರಾಗೆ ಬೆನ್ನುಹಾಕಿ, ಸೀದಾ ಅದನ್ನು ತನ್ನ ಬ್ಯಾಗ್‌ಗೆ ಹಾಕಿಕೊಂಡು ಹಿಂದಕ್ಕೆ ನಡೆದಿದ್ದಾಳೆ.

ಆದರೆ, ಆಕೆ ಮಾಡಿದ ಈ ಎಲ್ಲಾ ವರ್ತನೆಗಳು ಕ್ಯಾಮೆರಾದಲ್ಲಿ ಸಂಪೂರ್ಣ ಸೆರೆಯಾಗಿದ್ದು, ಸೋಶಿಯಲ್‌ ಮೀಡಿಯಾ ಪಾಪರಾಜಿಗಳು ಇದನ್ನು ಪೋಸ್ಟ್‌ ಕೂಡ ಮಾಡಿದ್ದಾರೆ.

ಸಾರ್ವಜನಿಕರ ಆಕ್ರೋಶ: ಮುಂಬೈನ ಫಿಲ್ಮಿಗ್ಯಾನ್‌ ವೆಬ್‌ಪೇಜ್‌ ತನ್ನ ಥ್ರೆಡ್ಸ್‌ ಪೇಜ್‌ಲ್ಲಿ ಈ ವಿಡಿಯೋ ಪೋಸ್ಟ್‌ ಮಾಡಿದೆ. 'ಓಹ್!!! 🫨🫨 ಏನೋ ತಪ್ಪಾಗಿದೆ ಅಂತ ನಮಗೆ ಅನಿಸುತ್ತಿದೆ 😳😳' ಎಂದು ಶೀರ್ಷಿಕೆ ನೀಡಿ ವಿಡಿಯೋ ಪೋಸ್ಟ್‌ ಮಾಡಿದೆ. ಇನ್ನೂ ಕೆಲವರು ಈ ನಟಿಯ ಹೆಸರೇನು ಅನ್ನೋದನ್ನು ಪ್ರಶ್ನೆ ಮಾಡಿದ್ದಾರೆ.

'ಆ ಪಾಪರಾಜಿಗಳಿಗೆ ನಾಚಿಕೆಯಾಗಬೇಕು! ಅವರು ಎಲ್ಲಾ ಮಿತಿಗಳನ್ನು ದಾಟುತ್ತಿದ್ದಾರೆ. ಒಂಚೂರು ನಾಚಿಕೆಯಿಲ್ಲ' ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಆದಷ್ಟು ಬೇಗ ಇದನ್ನು ಡಿಲೀಟ್‌ ಮಾಡಿ ಎಂದು ಹಲವರು ಒತ್ತಾಯಿಸಿದ್ದಾರೆ. ಇಂಥ ಕಂಟೆಂಟ್‌ಗಳನ್ನು ಎಂದಿಗೂ ಶೂಟ್‌ ಮಾಡಬೇಡಿ. ಅದನ್ನು ಇಲ್ಲಿಯೂ ಪೋಸ್ಟ್‌ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

Bengaluru: ಮೆಟ್ರೋ ನಿಲ್ದಾಣದಲ್ಲೇ ಯುವ ಜೋಡಿಯ ರೋಮ್ಯಾನ್ಸ್, ಇದೆಂಥಾ ಅಸಹ್ಯ ಎಂದ ನೆಟ್ಟಿಗರು!

'ನೀವು ತುಂಬಾ ಶೋಚನೀಯ. ಸ್ವಲ್ಪವಾದರೂ ಗೌರವ ಇಟ್ಟುಕೊಳ್ಳಿ. ನೀವು ಹೇಗೆ ಅಷ್ಟು ಕೀಳಾಗಿ ವರ್ತಿಸುತ್ತೀರಿ ಮತ್ತು ಇನ್ನೊಬ್ಬರ ಖಾಸಗಿತನವನ್ನ ಹಾಳುಮಾಡುತ್ತೀರಿ. ಈ ವೀಡಿಯೊ ಅವಳನ್ನು ಮಾನಸಿಕವಾಗಿ ತೊಂದರೆಗೊಳಿಸಬಹುದು' ಎಂದು ಮನವಿ ಮಾಡಿದ್ದಾರೆ.

ಕೆಲಸಕ್ಕೆ ಹೊರಟ ತಾಯಿಯನ್ನು ಕಂಡು ಅಮ್ಮಾ, ಅಮ್ಮಾ ಎಂದು ಕೂಗಿ ಕಣ್ಣೀರಿಟ್ಟ ಮಗು: ವಿಡಿಯೋ