ಸುಹಾಸಿನಿ ಪಾತ್ರಕ್ಕೆ ಜೀವ ತುಂಬಿದ ಮೂವರು ನಟಿಯರು. ಅರ್ಚನಾನೇ ಕಮ್‌ ಬ್ಯಾಕ್ ಮಾಡುವ ಸಾಧ್ಯತೆಗಳಿವೆ....

ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ (Gattimela) ಧಾರಾವಾಹಿ ಕಳೆದ ಎರಡು ಮೂರು ವಾರಗಳಿಂದ ಟಿಆರ್‌ಪಿಯಲ್ಲಿ (TRP) ಮೊದಲ ಸ್ಥಾನ ಪಡೆದುಕೊಂಡಿದೆ. ಅಮೂಲ್ಯ ವೇದಾಂತ್ ಮದುವೆ ತಯಾರಿ ಶುರುವಾಗಿದೆ. ಆದರೆ ಅಷ್ಟರಲ್ಲಿ ಅಮೂಲ್ಯ ಕಾಣಿಯಾಗಿರುವುದಕ್ಕೆ ವೀಕ್ಷಕರು ಆತಂಕ ಪಟ್ಟಿದ್ದಾರೆ. 

ಇನ್ನು ತಾಯಿ ಸುಹಾಸಿನಿ (Suhasini) ಪಾತ್ರದಲ್ಲಿ ಮಿಂಚುತ್ತಿದ್ದ ಸ್ವಾತಿ ಧಾರಾವಾಹಿಯಿಂದ ಹೊರ ಬಂದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿತ್ತು. ಇದೀಗ ಸ್ವತಃ ಸ್ವಾತಿ (Swathi HV) ಅವರೇ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಈ ವಿಷಯವನ್ನು ಖಚಿತ ಪಡಿಸಿದ್ದಾರೆ. 'ಒಂದು ಆರಂಭ ಅಂದ್ಮೇಲೆ ಒಂದು ಕೊನೆ ಇರ್ಲೇ ಬೇಕು. ಹೌದು ನಾನು ಗಟ್ಟಿಮೇಳ ಸೀರಿಯಲ್‌ನಲ್ಲಿ ಸುಹಾಸಿನಿ ಪಾತ್ರದಲ್ಲಿ ಇನ್ನು ಕಾಣಿಸಿಕೊಳ್ಳುವುದಿಲ್ಲ. ನನಗೂ ತುಂಬಾನೇ ಬೇಸರವಿದೆ. ಇಡೀ ತಂಡವನ್ನು ನಾನು ಮಿಸ್ ಮಾಡಿಕೊಳ್ಳುವೆ. ಇಡೀ ತಂಡಕ್ಕೆ ನನ್ನ ಧನ್ಯವಾದಗಳು. ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದೀರಿ. ಅನಿವಾರ್ಯ ಕಾರಣದಿಂದ ನಾನು ಹೊರ ಬರಬೇಕಾಗಿದೆ. ಸುಹಾಸಿನಿ ಪಾತ್ರದಲ್ಲಿರುವುದಿಲ್ಲ. ಆದರೆ ಗಟ್ಟಿಮೇಳ ನನಗೆ ಫ್ಯಾಮಿಲಿ ಆಗಿರುತ್ತದೆ. ನನ್ನ ಎಲ್ಲಾ ಅಭಿಮಾನಿಗಳ (Fans) ಸಪೂರ್ಟ್‌ನಿಂದ ನಾನು ಇಲ್ಲಿಗೆ ಬಂದಿದ್ದೀನಿ,' ಎಂದು ಮಾತನಾಡಿದ್ದಾರೆ. 

ಕನ್ನಡ ಕಿರುತೆರೆ ಎಂದೂ ಬಿಡುವುದಿಲ್ಲ, ತೆಲುಗು ಕಲಿಯುತ್ತಿರುವೆ: ಗಟ್ಟಿಮೇಳ ನಿಶಾ ರವಿಕೃಷ್ಣನ್

ವೇದಾಂತ್ (Vedanth) ತಾಯಿ ಸುಹಾಸಿನಿ ಪಾತ್ರವು ಧಾರಾವಾಹಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಬೆಸ್ಟ್‌ ಅಮ್ಮ ಎಂದು ಸಾಬೀತು ಮಾಡಿಕೊಂಡಿರುವ ಸುಹಾಸಿನಿ ಸೊಸೆಯಂದಿರಿಗೆ ವಿಲನ್‌ ಆಗಿರುತ್ತಾಳೆ. ಸುಹಾಸಿನಿಯ ಎರಡು ಮುಖಗಳು ಯಾರಿಗೊ ಗೊತ್ತಾಗುವುದಿಲ್ಲ. ಸುಹಾಸಿಯ ನಾಟಕವನ್ನು ಬಹಿರಂಗ ಮಾಡಬೇಕು ಎನ್ನುತ್ತಿದ್ದ ಅಮೂಲ್ಯ (Amulya) ಈಗ ಕಿಡ್ನಪ್ ಆಗಿದ್ದಾರೆ. ಸುಹಾಸಿನಿಯೇ ಮಾಡಿಸಿರುವುದು ಎಂದು ಕೆಲವರಿಗೆ ಅನುಮಾನ ಬಂದು, ಹುಡುಕಾಟ ಶುರು ಮಾಡಿದ್ದಾರೆ.

ಒಬ್ಬ Artist ಜೀವನ ಹೇಗಿರುತ್ತದೆ ಎಂದು ಬರೆದುಕೊಂಡ ನಟ ಅಭಿಷೇಕ್ ರಾಮ್‌ದಾಸ್‌!

ಈ ಹಿಂದೆ ಸುಹಾಸಿನಿ ಪಾತ್ರದಲ್ಲಿ ರುಥು (Ruthu) ಮತ್ತು ಅರ್ಚನಾ ಕಾಣಿಸಿಕೊಂಡಿದ್ದರು. ಸ್ವಾತಿಯವರು ಬದಲಾದ ಪಾತ್ರದಲ್ಲಿ ಮೂರನೇ ಅವರು. ಸುಹಾಸಿನಿ ಪಾತ್ರಕ್ಕೆ ಜೀವ ತುಂಬುವ ನಾಲ್ಕನೇ ವ್ಯಕ್ತಿ ಯಾರು ಅಂತ ಕಾದು ನೋಡಬೇಕಿದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಅರ್ಚನಾ (Archana) ಅವರೇ ಕಮ್‌ಬ್ಯಾಕ್ ಮಾಡಲಿದ್ದಾರೆ. 

ಸದ್ಯ ಸ್ವಾತಿ ಕಲರ್ಸ್‌ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ಯಾಕುಮಾರಿ (Kanyakumari) ಧಾರಾವಾಹಿಯಲ್ಲಿ ಕನಿಕಾ ತಾಯಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ.