Asianet Suvarna News Asianet Suvarna News

ಕನ್ನಡ ಕಿರುತೆರೆ ಎಂದೂ ಬಿಡುವುದಿಲ್ಲ, ತೆಲುಗು ಕಲಿಯುತ್ತಿರುವೆ: ಗಟ್ಟಿಮೇಳ ನಿಶಾ ರವಿಕೃಷ್ಣನ್

ತೆಲುಗು ಧಾರಾವಾಹಿ ಒಪ್ಪಿಕೊಂಡಿರುವ ನಟಿ ನಿಶಾ ರವಿ ಕೃಷ್ಣನ್, ಈಗೀಗ ತೆಲುಗು ಕಲಿಯುತ್ತಿರುವುದರ ಬಗ್ಗೆ ಮಾತನಾಡಿದ್ದಾರೆ. 

Zee Kannada Gattimela fame Nisha Ravikrishnan bags telugu project vcs
Author
Bangalore, First Published Sep 21, 2021, 12:53 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ 'ರೌಡಿ ಬೇಬಿ ಅಮೂಲ್ಯ' ಎಂದೇ ಹೆಸರು ಪಡೆದಿರುವ ನಿಶಾ ರವಿಕೃಷ್ಣನ್ ಈಗ ತೆಲುಗು ಕಿರುತೆರೆ ಲೋಕಕ್ಕೆ ಹಾರುತ್ತಿದ್ದಾರೆ. ಗಟ್ಟಿಮೇಳ ಧಾರಾವಾಹಿ ಹಾಗೂ ತೆಲುಗು ಧಾರಾವಾಹಿ ಎರಡನ್ನೂ ನಿಭಾಯಿಸುವುದಾಗಿ ಹೇಳಿದ್ದಾರೆ.  

ಬಾಯಲ್ಲೇ ಗಟ್ಟಿಮೇಳದ ರೌಡಿ ಬೇಬಿ ಚಿತ್ರ ಬಿಡಿಸಿದ ಅಭಿಮಾನಿ

ಗಟ್ಟಿಮೇಳ ಧಾರಾವಾಹಿ ಅತಿ ಹೆಚ್ಚು ಟಿಆರ್‌ಪಿ ಪಡೆಯುತ್ತಿದ್ದರೂ, ತೆಲುಗು ಧಾರಾವಾಹಿ ಒಪ್ಪಿ ಕೊಂಡಿರುವ ಕಾರಣ ನಿಶಾ ಧಾರಾವಾಹಿ ಕೈ ಬಿಡುತ್ತಿದ್ದಾರೆ ಎನ್ನುವ ಗಾಸಿಪ್ ಹರಿದಾಡುತ್ತಿದೆ.  ನಾನು ಧಾರಾವಾಹಿ ಬಿಡುವುದಿಲ್ಲ. ಆ ರೀತಿ ನಿರ್ಧಾರ ತೆಗದುಕೊಳ್ಳುವುದಿಲ್ಲ. ಕನ್ನಡ ಧಾರಾವಾಹಿ ನನ್ನ ಮೊದಲ ಆದ್ಯತೆ ಹಾಗೂ ನಾನು ತೆಲುಗು  ಕಲಿಯುತ್ತಿರುವೆ. ಅದಲ್ಲದೇ ಅಲ್ಲಿನ ಕಲಾವಿದರಿಗೆ ನಾನು ಕನ್ನಡ ಕಲಿಸುತ್ತಿರುವೆ, ಎಂದು ನಿಶಾ ಹೇಳಿದ್ದಾರೆ. 

Zee Kannada Gattimela fame Nisha Ravikrishnan bags telugu project vcs

ವಿನಯ್ ರಾಜ್‌ಕುಮಾರ್ ಹಾಗೂ ಅದಿತಿ ಪ್ರಭುದೇವ ಅವರೊಂದಿಗೆ 'ಅಂದೊಂದಿತ್ತು ಕಾಲ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿರುವ ನಟಿ ನಿಶಾ,  ಎರಡೂ ಭಾಷೆಯ ಧಾರಾವಾಹಿಗಳ ಚಿತ್ರೀಕರಣದಲ್ಲಿ ಸದ್ಯಕ್ಕೆ ಬ್ಯುಸಿಯಾಗಿದ್ದಾರೆ. ಗಟ್ಟಿಮೇಳದಲ್ಲಿ ಕಾಣಿಸಿಕೊಂಡಿರುವ ಅಮೂಲ್ಯ ಪಾತ್ರವೇ ತೆಲಗು ಸೀರಿಯಲ್‌ನಲ್ಲಿ ಮಾಡುತ್ತಿರುವ ಪಾತ್ರಕ್ಕೆ ಹೋಲುತ್ತದೆ ಎನ್ನಲಾಗಿದೆ.

Follow Us:
Download App:
  • android
  • ios