Asianet Suvarna News Asianet Suvarna News

'ಜೀವ ಹೂವಾಗಿದೆ' ಧಾರಾವಾಹಿಯಿಂದ ಹೊರ ನಡೆದ ನಟಿ ಶಿಲ್ಪಾ ರವಿ!

ರಾಘವೇಂದ್ರ ರಾಜ್‌ಕುಮಾರ್ ನಿರ್ಮಾಣದ ಧಾರಾವಾಹಿಯಿಂದ ಹೊರ ನಡೆದ ಜನಪ್ರಿಯ ನಟಿ ಶಿಲ್ಪಾ ರವಿ. ಕಾರಣವೇನು?
 

Actress Shilpa Ravi quits Star Suvarna Jeeva Hoogavide daily soap vcs
Author
Bangalore, First Published Sep 17, 2021, 5:18 PM IST
  • Facebook
  • Twitter
  • Whatsapp

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೀವ ಹೂವಾಗಿದೆ ಧಾರಾವಾಹಿಯ ಪ್ರಮುಖ ಪಾತ್ರಧಾರಿ ನಟಿ ಶಿಲ್ಪಾ ರವಿ ವೈಯಕ್ತಿಕ ಕಾರಣದಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ. ಶಿಲ್ಪಾ ಪಾತ್ರವನ್ನು ದೀಪಾ ಕಟ್ಟೆ ನಿರ್ವಹಿಸಲಿದ್ದಾರೆ. 

'ಜೀವ ಹೂವಾಗಿ' ಧಾರಾವಾಹಿ ಮೂಲಕ ರಾಜ್‌ಕುಮಾರ್ ಅವರ ಕುಟುಂಬದ ಜೊತೆ ನನ್ನ ಸಂಪರ್ಕ ಬೆಳೆಯಿತು. ಈ ಹಿಂದೆ ನನ್ನ ಧಾರಾವಾಹಿ ನಿರ್ಮಾಣ ಮಾಡಿದ್ದು ಶಿವರಾಜ್‌ಕುಮಾರ್. ಆಕಸ್ಮಿಕವಾಗಿ ಅವರ ಬ್ಯಾನರ್‌ನಲ್ಲಿ ನನಗೆ ಕೆಲಸ ಮಾಡುವ ಅವಕಾಶ ಸಿಕಿತು,' ಎಂದು ಶಿಲ್ಪಾ ಇ-ಟೈಮ್ಸ್ ಜೊತೆ ಮಾತನಾಡಿದ್ದಾರೆ. 

ಗೋವಾದಿಂದ ಹಿಂದಿರುಗಿದ ನಟ ದರ್ಶಕ್‌, ಹೆಂಡ್ತಿ ಮಾಡಿರೋ ಬೆಡ್‌ರೂಮ್‌ ಅಲಂಕಾರ ನೋಡಿ ಶಾಕ್!

'ಜೀವ ಹೂವಾಗಿದೆ ಧಾರಾವಾಹಿಯಲ್ಲಿ ನಾನು ವಿದ್ಯಾವಂತ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿರುವೆ. ಪಾತ್ರದ ಹೆಸರು ಮಧುಮಿತಾ. ಸಿಟಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಹಳ್ಳಿಗೆ ಹೋಗಿರುತ್ತಾಳೆ. ದುಷ್ಮನ್ ಕುಟುಂಬದ ಹುಡುಗನನ್ನ ಪ್ರೀತಿಸುತ್ತಾಳೆ. ಹೇಗೆ ತಮ್ಮ ಸಂಬಂಧ ಉಳಿಸಿಕೊಂಡು ಹೋಗುತ್ತಾರೆ ಎಂಬುವುದು ಕತೆ,' ಎಂದು ಶಿಲ್ಪಾ ತಮ್ಮ ಪಾತ್ರ ಪರಿಚಯ ಮಾಡಿದ್ದಾರೆ.  ಆರೋಗ್ಯದ ಸಮಸ್ಯೆಯಿಂದ ಶಿಲ್ಪಾ ಧಾರಾವಾಹಿಯಿಂದ ಹೊರ ನಡೆದಿದ್ದಾರೆ.

ಕೆಲವು ತಿಂಗಳ ಹಿಂದೆ ನಟ ದರ್ಶಕ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಶಿಲ್ಪಾ ಹೊಸ ಜರ್ನಿ ಬಗ್ಗೆ ಮಾತನಾಡಿದ್ದಾರೆ. 'ನಾನು ಹಾಗೂ ದರ್ಶಕ್ ಇಬ್ಬರೂ ಕಲಾವಿದರು ಎನ್ನೋದು ಖುಷಿಯ ವಿಷಯ. ಹೀಗಾಗಿ ನಾವಿಬ್ಬರೂ ಪರಸ್ಪರ ಅರ್ಥ ಮಾಡಿಕೊಳ್ಳಬಹುದು. ಇಬ್ಬರೂ ವೃತ್ತಿಯನ್ನು ಗೌರವಿಸುತ್ತೇವೆ. ಮದುವೆ ನಂತರ ನಾನು ನಟಿಸುತ್ತೇನೆ ಎಂದರೆ ದರ್ಶಕ್‌ಗಾಗಲೀ ಅವರು ಮನೆಯವರಿಗಾಗಲೀ ಯಾವುದು ತೊಂದರೆ ಇಲ್ಲ,' ಎಂದು ಶಿಲ್ಪಾ ಈ ಹಿಂದೆ ಹೇಳಿದ್ದರು.

 

Follow Us:
Download App:
  • android
  • ios