ಕಣ್ಣು ಕದ್ದು ನೋಡ್ತಿದೆ-ಮನಸ್ಸು ಮುದ್ದು ಮಾಡ್ತಿದೆ,ಸೀರೆಯಲ್ಲಿ ಟೆಂಪರೇಚರ್ ಹೆಚ್ಚಿಸಿದ ಉರ್ಫಿ!
ಚಿತ್ರ ವಿಚಿತ್ರ ಫ್ಯಾಶನ್, ಬೋಲ್ಡ್ ಡಿಸೈನ್ ಮೂಲಕ ಉರ್ಫಿ ಸಂಚಲನ ಸೃಷ್ಟಿಸಿದ್ದಾರೆ. ಆದರೆ ಈ ಬಾರಿ ಉರ್ಫಿ ಸೀರೆಯುಟ್ಟ ಎಲ್ಲರ ನಿದ್ದೆಗೆಡಿಸಿದ್ದರೆ. ಉರ್ಫಿಯ ಮೈಮಾಟ, ಬಳುಕುವ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಮಾಡೆಲ್ ಕಮ್ ನಟಿ ಉರ್ಫಿ ಜಾವೇದ್ ಈಗಾಗಲೇ ಹಲವು ಫ್ಯಾಶನ್ ಮೂಲಕ ಭಾರಿ ಜನಪ್ರಿಯರಾಗಿದ್ದಾರೆ. ಬೋಲ್ಡ್, ಟಾಪ್‌ಲೆಸ್ ಸೇರಿದಂತೆ ಹಲವು ರೀತಿಯಲ್ಲಿ ಉರ್ಫಿ ಕಾಣಿಸಿಕೊಂಡು ಟೆಂಪರೇಚರ್ ಹೆಚ್ಚಿಸಿದ್ದಾರೆ.
ಈ ಬಾರಿ ಉರ್ಫಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಉರ್ಫಿ ಸೀರೆಯಲ್ಲಿ ಕಾಣಿಸಿಕೊಳ್ಳುವುದು ಇದೇ ಮೊದಲಲ್ಲ. ಆದರೆ ಈ ಬಾರಿ ಉರ್ಫಿ ಎಲ್ಲರ ಮನಗೆದ್ದಿದ್ದಾರೆ.
ಬಳಕುವ ಮೈ, ಅದಕ್ಕೊಪ್ಪು ತೆಳ್ಳನೆಯ ಸೀರೆಯಲ್ಲಿ ಉರ್ಫಿ ಕಾಣಿಸಿಕೊಂಡಿದ್ದಾರೆ. ಫ್ಯಾಶನ್ ಕಾರ್ಯಕ್ರಮದಲ್ಲಿ ಉರ್ಫಿ ಇದೇ ಸೀರೆ ಮೂಲಕ ವಯ್ಯಾರದಿಂದ ಹೆಜ್ಜೆ ಹಾಕಿದ್ದಾರೆ.
ಫ್ಯಾಶನ್ ಕಾರ್ಯಕ್ರಮಕ್ಕಾಗಿ ಉರ್ಫಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ ಉರ್ಫಿ, ತೀರ್ಪುಗಾರರಿಗೆ ಶಾಕ್ ನೀಡಿದ್ದಾರೆ.
Urfi javed
ಉರ್ಫಿ ಜಾವೇದ್ ಇತ್ತೀಚೆಗೆ ನೀಲಿ ಬಿಕಿನಿ ಸ್ವಿಮ್ ಸ್ಯೂಟ್‌ನಲ್ಲಿ ಕಾಣಿಸಿಕೊಂಡಿದ್ದರು. ಉರ್ಫಿಯ ಹೊಸ ಬೋಲ್ಡ್ ಅವತಾರ ಭಾರಿ ಚರ್ಚೆಯಾಗಿತ್ತು.
ಉರ್ಫಿ ಏಕಾಏಕಿ ತಲೆ ಬೋಳಿಸಿಕೊಂಡ ಫೋಟೋ ಪೋಸ್ಟ್ ಮಾಡಿದ್ದರು. ಇದು ಮಾರ್ಫ್ ಫೋಟೋ ಎಂದು ಕೆಲ ಅಭಿಮಾನಿಗಳು ಹೇಳಿದ್ದರು. ಇದೀಗ ಸೀರೆಯಲ್ಲಿ ಉರ್ಫಿ ಉದ್ದ ಕೂದಲಿನಲ್ಲಿ ಕಾಣಿಸಿಕೊಂಡಿದ್ದಾರೆ.
Urfi Javed Fan
ಕೀ ಬೋರ್ಡ್, ಬ್ರಾ ಅಕ್ವೇರಿಯಂ, ಕೈಗಳಿಂದ ಖಾಸಗಿ ಅಂಗ ಮುಚ್ಚಿಕೊಂಡು ಉರ್ಫಿ ಫೋಸ್ ನೀಡಿದ್ದಾರೆ. ಉರ್ಫಿ ಪ್ರತಿ ಬಾರಿ ಅಭಿಮಾನಿಗಳಿಗೆ ಹೊಸತು ನೀಡಿ ಅಚ್ಚರಿಗೊಳಿಸಿದ್ದಾರೆ.
ಉರ್ಫಿಯ ಫ್ಯಾಶನ್ ಆರಂಭದಲ್ಲಿ ಭಾರಿ ಟೀಕೆ ವ್ಯಕ್ತವಾಗಿದ್ದರೂ ಇದೀಗ ಬಾಲಿವುಟ್ ನಟಿಯರೂ ಉರ್ಫಿ ಫ್ಯಾಶನ್‌ಗೆ ಮಾರು ಹೋಗಿದ್ದಾರೆ. ಕೆಲವರು ಉರ್ಫಿಯನ್ನ ಹೊಗಳಿದ್ದಾರೆ.