ಗೊಂಬೆ ಮನೆಗೆ ಲಕ್ಷ್ಮಿಯ ಆಗಮನ, ಹೆಣ್ಣು ಮಗುವಿಗೆ ಜನ್ಮ ನೀಡಿದ ನೇಹಾ ಗೌಡ

ಕಿರುತೆರೆ ನಟಿ ನೇಹಾ ಹಾಗೂ ಚಂದನ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಜೋಡಿಗೆ ಮುದ್ದಾದ ಹೆಣ್ಣು ಮಗುವೊಂದು ಜನಿಸಿದೆ. ನೇಹಾ ಹಾಗೂ ಚಂದನ್ ಈ ಖುಷಿ ಸುದ್ದಿಯನ್ನು ಫ್ಯಾನ್ಸ್ ಗೆ ನೀಡಿದ್ದಾರೆ.
 

Actress Neha Ramakrishna gave birth baby girl roo

ಲಕ್ಷ್ಮಿ ಬಾರಮ್ಮ ಖ್ಯಾತಿಯ (Lakshmi Baramma fame) ಗೊಂಬೆ ಮನೆಗೆ ಮುದ್ದಾದ ಗೊಂಬೆಯ ಆಗಮನವಾಗಿದೆ. ಧನತ್ರಯೋಶಿ ದಿನ ನೇಹಾ ಮನೆಗೆ ಲಕ್ಷ್ಮಿ ಬಂದಿದ್ದಾಳೆ. ನಟಿ ನೇಹಾ ರಾಮಕೃಷ್ಣ (Neha Ramakrishna) ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದಾರೆ. ನೇಹಾ ಗೌಡ, ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. ಅಕ್ಟೋಬರ್ 29ರಂದು ನೇಹಾ ಗೌಡಗೆ ಹೆರಿಗೆಯಾಗಿದೆ. ಈ ಖುಷಿ ಸುದ್ದಿಯನ್ನು ನೇಹಾ ಹಾಗೂ ಅವರ ಪತಿ ಚಂದನ್ ಗೌಡ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಅಕ್ಟೋಬರ್ 29, 2024 ರಂದು ನಮ್ಮ ಮನೆಗೆ ಹೆಣ್ಣು ಮಗುವಿನ ಆಗಮನವಾಗಿದೆ. ನಾವು ತುಂಬಾ ಸಂತೋಷವಾಗಿದ್ದೇವೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಕ್ಕೆ ಧನ್ಯವಾದಗಳು. ತಾಯಿ ಮತ್ತು ನಮ್ಮ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ, ಸಂತೋಷದಿಂದ ಇದ್ದಾರೆ. ತಂದೆ ಸ್ವಲ್ಪ ಭಾವುಕರಾಗಿದ್ದಾರೆ ಎಂಬ ಶೀರ್ಷಿಕೆ ಹಾಕಿ, ಖುಷಿ ಸುದ್ದಿಯನ್ನು ನೇಹಾ ಹಾಗೂ ಚಂದನ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಉರ್ಫಿ ಹಿಂದಿಕ್ಕಿದ ಯುವಕ, ಪಟಾಕಿಯೇ ಆಭರಣವಾಯ್ತು!

ನೇಹಾ ರಾಮಕೃಷ್ಣನ್ ಗೆ ಹೆಣ್ಣು ಮಗು ಎನ್ನುವ ವಿಷ್ಯ ತಿಳಿಯುತ್ತಿದ್ದಂತೆ ಫ್ಯಾನ್ಸ್ ಖುಷಿಯಾಗಿದ್ದಾರೆ. ಶುಭಾಶಯಗಳು ಹರಿದು ಬರ್ತಿವೆ. ಇನ್ಸ್ಟಾ ಖಾತೆಯಲ್ಲಿ ಶ್ವೇತಚಂಗಪ್ಪ ಸೇರಿದಂತೆ ಸೆಲೆಬ್ರಿಟಿಗಳಿಂದ ಹಿಡಿದು ಅಭಿಮಾನಿಗಳವರೆಗೆ ಎಲ್ಲರೂ ನೇಹಾ ಗೌಡ ಹಾಗೂ ಚಂದನ್ ಗೆ ಶುಭಕೋರಿದ್ದಾರೆ. 

ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದ ಗೊಂಬೆ ನೇಹಾ ಗೌಡ ಹಾಗೂ ಚಿನ್ನು ಪಾತ್ರದಲ್ಲಿ ಮಿಂಚಿದ್ದ ಕವಿತಾ ಗೌಡ ಇಬ್ಬರೂ ಒಂದೇ ಬಾರಿ ಗರ್ಭಿಣಿಯಾಗಿದ್ದು ಫ್ಯಾನ್ಸ್ ಖುಷಿಯನ್ನು ಡಬಲ್ ಮಾಡಿತ್ತು. ಕವಿತಾ ಗೌಡ  ಕೆಲ ದಿನಗಳ ಹಿಂದಷ್ಟೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ – ಮಗ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ. ನೇಹಾಗೆ ಹೆಣ್ಣು, ಕವಿತಾಗೆ ಗಂಡು. ಸರಿಯಾಯ್ತು ಎನ್ನುತ್ತಿದ್ದಾರೆ ಫ್ಯಾನ್ಸ್.  

ನೇಹಾ ಗೌಡ ತಾವು ಗರ್ಭಿಣಿ ಎಂಬ ಖುಷಿ ವಿಷ್ಯವನ್ನು ಫ್ಯಾನ್ಸ್ ಮುಂದೆ ಹಂಚಿಕೊಂಡಿದ್ದರು. ಅಲ್ಲದೆ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ರು. ಗರ್ಭಿಣಿಯಾಗಿದ್ದಾಗ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದ ನೇಹಾ ಗೌಡ, ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಅವರ ಶಾಕುಂತಲೆ ಫೋಟೋ ಶೂಟ್ ಹಾಗೂ ಕುದುರೆ ಬಳಿ ನಿಂತ ಡಿಫರೆಂಟ್ ಫೋಟೋ ಶೂಟ್ ಎಲ್ಲರ ಗಮನ ಸೆಳೆದಿತ್ತು. ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿಕೊಂಡಿದ್ದ ನೇಹಾ ಗೌಡಗೆ ಕಲರ್ಸ್ ಕನ್ನಡ ವೇದಿಕೆ ಮೇಲೆ ಸೀಮಂತ ನಡೆದಿತ್ತು. ಸ್ನೇಹಿತೆ ಅನುಪಮ ಗೌಡ ಮನೆ ಪ್ರವೇಶದಲ್ಲಿ ಮಿಂಚಿದ್ದ ನೇಹಾ, ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟೀವ್ ಆಗಿದ್ದಾರೆ. ಗರ್ಭಾವಸ್ಥೆಯ ಸುಂದರ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಕಿಚ್ಚ ಸುದೀಪ್ 'ಬಿಗ್ ಬಾಸ್ ಬಿಡೋ ಸೀಕ್ರೆಟ್' ಬಿಚ್ಚಿಟ್ಟ ನಟ ಪ್ರಥಮ್, ಹೀಗೆಲ್ಲಾ ಇದ್ಯ ವಿಷ್ಯ?

ಲಕ್ಷ್ಮಿ ಬಾರಮ್ಮ ಸೀರಿಯಲ್ ನಂತ್ರ ನೇಹಾ ಗೌಡ, ಬಿಗ್ ಬಾಸ್, ನಮ್ಮ ಲಚ್ಚಿ ಸೀರಿಯಲ್ ಜೊತೆ ತೆಲುಗು, ತಮಿಳು ಧಾರಾವಾಹಿಯಲ್ಲೂ ನಟಿಸಿದ್ದಾರೆ. ರಾಜಾ ರಾಣಿ ಶೋ ವಿನ್ನರ್ ಆಗಿರುವ ನೇಹಾ ಸದ್ಯ ಯಾವುದೇ ಸೀರಿಯಲ್ ಒಪ್ಪಿಕೊಂಡಿರಲಿಲ್ಲ. ಆಸ್ಟ್ರೇಲಿಯಾದಲ್ಲಿ ಕೆಲಸದಲ್ಲಿದ್ದ ಚಂದನ್ ಮದುವೆಯಾಗಿದ್ದ ನೇಹಾ, ಪತಿಯನ್ನು ನಟನೆಗೆ ಕರೆ ತಂದಿದ್ದಾರೆ. ರಾಜಾ ರಾಣಿಗಾಗಿ ಆಸ್ಟ್ರೇಲಿಯಾದ ಐಟಿ ಕೆಲಸಕ್ಕೆ ಗುಡ್ ಬೈ ಹೇಳಿ ಬೆಂಗಳೂರು ಸೇರಿದ್ದ ಚಂದನ್, ನಂತರ ಡ್ಯಾನ್ಸ್ ರಿಯಾಲಿಟಿ ಶೋದಲ್ಲೂ ಭಾಗವಹಿಸಿದ್ದರು. ಜೊತೆಗೆ ಅಂತರಪಟ ಧಾರಾವಾಹಿಯಲ್ಲಿ ನಾಯಕನಾಗಿ ಸಹ ಗುರುತಿಸಿಕೊಂಡಿದ್ದಾರೆ. 

ಸ್ಯಾಂಡಲ್ವುಡ್ ಗೆ ಈ ವರ್ಷ ಅನೇಕ ಸ್ಟಾರ್ ಕಿಡ್ಸ್ ಆಗಮನವಾಗಿದೆ. ಚಿನ್ನು – ಚಂದನ್ ಗಂಡು ಮಗುವಿನ ಪಾಲಕರಾದ್ರೆ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಹೆಣ್ಣು ಮಗುವಿಗೆ ಪಾಲಕರಾಗಿದ್ದಾರೆ. ಹರ್ಷಿಕಾ ಪೊಣಚ್ಚ ಹಾಗೂ ಭುವನ್ ಪೊನ್ನಣ್ಣ ಕೂಡ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ.  
 

Latest Videos
Follow Us:
Download App:
  • android
  • ios