ಉರ್ಫಿ ಹಿಂದಿಕ್ಕಿದ ಯುವಕ, ಪಟಾಕಿಯೇ ಆಭರಣವಾಯ್ತು!

ದೀಪಾವಳಿ ಹಬ್ಬದಲ್ಲಿ ಮನೆಗೆ ತಂದ ಪಟಾಕಿಯನ್ನೇ ಈತ ಆಭರಣ ಮಾಡ್ಕೊಂಡಿದ್ದಾನೆ. ಇನ್ಸ್ಟಾದಲ್ಲಿ ಪೋಸ್ಟ್ ವೈರಲ್ ಆಗಿದೆ. ನೀವ್ ಮಾತ್ರ ಆತನ ವಿಡಿಯೋ ನೋಡಿ, ಪ್ರಯತ್ನ ಮಾಡೋಕೆ ಹೋಗ್ಬೇಡಿ. 
 

Man wearing ornaments made up of crackers roo

ಬಾಲ್, ಪೇಪರ್, ಎಲೆ ಹೀಗೆ ಯಾವ ವಸ್ತು ಕಂಡ್ರೂ ಅದು ಬಾಲಿವುಡ್ ಬೆಡಗಿ ಉರ್ಫಿ ಜಾವೇದ್ (Urfi Javed) ಡ್ರೆಸ್ ಆಗುತ್ತೆ. ಆದ್ರೆ ಉರ್ಫಿ ಜಾವೇದ್ ಗಿಂತ ಒಂದು ಹೆಜ್ಜೆ ಮುಂದಿದ್ದಾನೆ ಈ ಹುಡುಗ. ದೀಪಾವಳಿ (Diwali) ಸಮಯದಲ್ಲಿ ಮನೆ ಹೊರಗೆ ಸಿಡಿಯುವ ಪಟಾಕಿ ಈತನ ಮೈಮೇಲಿದೆ. ಪಟಾಕಿ (Fireworks)ಯನ್ನೇ ಆಭರಣ ಮಾಡ್ಕೊಂಡು ಮಿಂಚುತ್ತಿರುವ ಈತನ ವಿಡಿಯೋ ಸೋಶಿಯಲ್ ಮೀಡಿಯಾ (Social Media) ದಲ್ಲಿ ವೈರಲ್ ಆಗ್ತಿದೆ.

ದೀಪಗಳ ಜೊತೆ ಪಟಾಕಿ ದೀಪಾವಳಿಯ ಆಕರ್ಷಣೆ. ಪರಿಸರ ನಾಶವಾಗುತ್ತೆ ಎನ್ನುವ ಕಾರಣಕ್ಕೆ ಅನೇಕ ಕಡೆ ಪಟಾಕಿ ಬ್ಯಾನ್ ಆಗಿದೆ. ಆದ್ರೂ ಜನರು ಅಲ್ಲಿ ಇಲ್ಲಿ ಪಟಾಕಿ ಹಚ್ಚುತ್ತಿದ್ದಾರೆ. ಪಟಾಕಿ ಸಿಡಿಸುವಂತಿಲ್ಲ ಸರಿ, ಅದನ್ನು ಆಭರಣ ಮಾಡ್ಕೊಳ್ಬೇಡಿ ಅಂತ ಯಾರೂ ಹೇಳಿಲ್ವಲ್ಲ? ಇದೇ ಪ್ರಶ್ನೆ ಮುಂದಿಟ್ಟು ಹುಡುಗನೊಬ್ಬ ಈ ಪ್ರಯತ್ನಕ್ಕೆ ಮುಂದಾಗಿದ್ದಾನೆ. ಪಟಾಕಿಯನ್ನೇ ಆಭರಣ ಮಾಡ್ಕೊಂಡು ಮಿಂಚಿದ್ದಾನೆ. ಡಿಫರೆಂಟ್ ಆಗಿ ಮಿಂಚಿದ್ರೂ ಈತನ ಪ್ರಯತ್ನ ಅಪಾಯಕಾರಿ. ಸ್ವಲ್ಪ ಎಚ್ಚರ ತಪ್ಪಿದ್ರೂ ಪ್ರಾಣಕ್ಕೆ ಹಾನಿ. 

ಕಿಚ್ಚ ಸುದೀಪ್ 'ಬಿಗ್ ಬಾಸ್ ಬಿಡೋ ಸೀಕ್ರೆಟ್' ಬಿಚ್ಚಿಟ್ಟ ನಟ ಪ್ರಥಮ್, ಹೀಗೆಲ್ಲಾ ಇದ್ಯ ವಿಷ್ಯ?

ರವಿ ಸಾಗರ್ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ರವಿ ಸಾಗರ್, ಮೂರು ವಿಡಿಯೋಗಳನ್ನು  ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋಗಳಲ್ಲಿ ರವಿ ಸಾಗರ್, ಬಿಳಿಯ ಮಿನುಗುವ ಲೆಹೆಂಗಾ ಮತ್ತು ಚೋಲಿ ಧರಿಸಿರೋದನ್ನು ನೀವು ಕಾಣ್ಬಹುದು. ತಲೆಗೆ ಮ್ಯಾಚಿಂಗ್ ಸ್ಕಾರ್ಫ್ ಕೂಡ ಹಾಕಿಕೊಂಡಿದ್ದಾರೆ. ಅವರ ಲೆಹಂಗಾ, ಚೋಲಿಗಿಂತ ಆಭರಣ ಹೆಚ್ಚು ಸೆಳೆಯುತ್ತದೆ. ಈ ಕಂಟೆಂಟ್ ಕ್ರಿಯೇಟರ್ ಕೊರಳಿಗೆ ಪಟಾಕಿ ಮಾಲೆಯನ್ನು ಹಾಕಿಕೊಂಡಿದ್ದಾನೆ. ಜೊತೆಗೆ ಅಟಂಬಾಂಬ್ ಹಾರವನ್ನೂ ಹಾಕಿಕೊಂಡಿದ್ದಾನೆ. ತಲೆಗೆ ಪಟಾಕಿ ಹಾರವನ್ನು ಕಟ್ಟಿದ್ದು, ಕೈ ಹಾಗೂ ಕಿವಿಯೋಲೆ ಕೂಡ ಪಟಾಕಿಯದ್ದೇ ಅನ್ನೋದು ವಿಶೇಷ. ಉಂಗುರ ಮತ್ತು ಮೂಗುತಿಯಾಗಿ ನೆಲಚಕ್ರವನ್ನು ಬಳಸಿದ್ದಾನೆ.  ಹಣೆ ಮಧ್ಯದಲ್ಲಿ ಬಾಂಬ್ ನೇತಾಡುತ್ತಿದೆ. ಎರಡು ಹಾಡು ಮತ್ತು ಒಂದು ಡೈಲಾಗ್‌ ವಿಡಿಯೋವನ್ನು ಇದೇ ಡ್ರೆಸ್ ನಲ್ಲಿ ಶೂಟ್ ಮಾಡಿ ಪೋಸ್ಟ್ ಮಾಡಲಾಗಿದೆ. ರವಿ, ಮೈಮೇಲೆ ಪಟಾಕಿ ಹಾಕಿಕೊಂಡು, ಕೈನಲ್ಲಿ ದೀಪ ಹಿಡಿದು ಫೋಟೋಕ್ಕೆ ಫೋಸ್ ನೀಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಬೆಂಕಿಪೊಟ್ಟಣ ಕೈನಲ್ಲಿದೆ. 

ಇನ್ಸ್ಟಾದಲ್ಲಿ ಈ ವಿಡಿಯೋಗಳು ವೈರಲ್ ಆಗಿವೆ. ಬೆಂಕಿಕಡ್ಡಿ ಗೀರಬೇಕು ಎನ್ನಿಸುತ್ತಿದೆ ಅಂತ ಒಬ್ಬರು ಬರೆದ್ರೆ ಮತ್ತೊಬ್ಬರು, ದೀಪವನ್ನು ಸ್ವಲ್ಪ ಹತ್ತಿರಕ್ಕೆ ತೆಗೆದುಕೊಂಡು ಹೋಗಿ ಅಂತ ಕಮೆಂಟ್ ಮಾಡಿದ್ದಾರೆ. ದೀಪದ ಮೂಲಕ ಹಣೆಗೆ ಸಿಂಧೂರ ಇಡುವ ಬಯಕೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಓಡಾಡುವ ಅಟಂಬಾಂಬ್ ಅಂತ ಇನ್ನೊಬ್ಬರು ಹೇಳಿದ್ರೆ, ಬೆಂಕಿ ಹಚ್ಚಿದ್ರೆ ಮೊದಲು ಯಾವ ಪಟಾಕಿ ಸಿಡಿಯುತ್ತೆ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ.

ಅಮೃತಧಾರೆಗೆ ಎಂಟ್ರಿ ಕೊಟ್ಟಿರೋ ಕನ್ನಡತಿಯ ಅಮ್ಮಮ್ಮ... ಹಿಂದೆ ಜರ್ಮನಿಯಲ್ಲಿ ಇಂಗ್ಲೀಷ್

ಈ ವಿಡಿಯೋವನ್ನು ಕೆಲವರು ವಿರೋಧಿಸಿದ್ದಾರೆ. ಇಂಥ ವಿಡಿಯೋಗಳನ್ನು ಮಾಡ್ಬೇಡಿ. ಮಕ್ಕಳು ಇದನ್ನು ಪ್ರಯತ್ನಿಸಿದ್ರೆ ಕಷ್ಟ ಎಂದಿದ್ದಾರೆ. ಅಷ್ಟೇ ಅಲ್ಲ, ಸ್ವಲ್ಪ ಯಾಮಾರಿದ್ರೂ ನಿಮಗೆ ಅಪಾಯ. ದಯವಿಟ್ಟು ಇಂಥ ಪ್ರಯತ್ನದ ಸಮಯದಲ್ಲಿ ದೀಪ, ಬೆಂಕಕಡ್ಡಿಯಿಂದ ದೂರವಿರಿ ಎಂದು ಸಲಹೆ ನೀಡಿದ್ದಾರೆ.

ದೀಪಾವಳಿಯಲ್ಲಿ ಸಿಡಿಯುವ ಪಟಾಕಿ ಬಹಳ ಅಪಾಯಕಾರಿ. ಬೀದಿ ಬೀದಿಯಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸುವ ಎಷ್ಟೋ ಜನರು ಕಣ್ಣು ಕಳೆದುಕೊಂಡಿದ್ದಾರೆ. ಮೈ ಸುಟ್ಟುಕೊಂಡು ಆಸ್ಪತ್ರೆ ಸೇರಿದ್ದಾರೆ. ಪಟಾಕಿ ಪರಿಸರ ಹಾಳು ಮಾಡುವುದಲ್ಲದೆ ಜೀವಕ್ಕೆ ಹಾನಿಯುಂಟು ಮಾಡ್ಬಹುದು. ಅಲ್ಪ ಸಂತೋಷಕ್ಕೆ ಹಣ ಸುಡುವ ಬದಲು ಹೂ, ಹಣ್ಣಿನ ಮೂಲಕ ದೀಪಾವಳಿ ಆಚರಿಸಿ. 

 

 

 
 
 
 
 
 
 
 
 
 
 
 
 
 
 

A post shared by Ravi Kumar (@ravisagar88)

Latest Videos
Follow Us:
Download App:
  • android
  • ios