ಪೋಷಕರಿಗೆ ಹೇಳದೇ ತಿರುಪತಿ ಬಸ್ಸು ಹತ್ತಿ ಹೊರಟಿದ್ದ ಲಾವಣ್ಯ; ಕೋಣನಕುಂಟೆಯಲ್ಲೇ ಇಳಿಬೇಕಾಯ್ತು!
ಲಾವಣ್ಯ ಅಪ್ಪ ಈ ಅಪರೂಪ ಎನಿಸುವಂಥ ಘಟನೆಯನ್ನು ವೇದಿಕೆಯಲ್ಲಿ ಹೇಳುತ್ತಿದ್ದರೆ ಸ್ವತಃ ಅಲ್ಲೇ ಇದ್ದ ಲಾವಣ್ ಸೇರಿದಂತೆ, ಅಲ್ಲಿದ್ದವರೆಲ್ಲ ನಗೆಗಡಲಿನಲ್ಲಿ ತೇಲಿ ಹೋದರು. ಲಾವಣ್ಯ ಅಪ್ಪ ಹಾಗೂ ಸ್ವತಃ ಲಾವಣ್ಯ ಹೇಳಿದಂತೆ 'ಲಾವಣ್ಯ ಆಗ ಚಿಕ್ಕ ಮಗುವಾಗಿದ್ದರಂತೆ. ಅವರ ಮನೆಯ ಪಕ್ಕದಲ್ಲಿಯೇ ಶರ್ಮಾ ಟ್ರಾನ್ಸ್‌ಪೋರ್ಟ್ ಇತ್ತಂತೆ.
ಶ್ರೀರಸ್ತು ಶುಭಮಸ್ತು ಸೀರಿಯಲ್ ಖ್ಯಾತಿಯ ನಟಿ ಲಾವಣ್ಯ ಜೀ ಕನ್ನಡದ ರಿಯಾಲಿಟಿ ಶೋ 'ಜೋಡಿ ನಂ 1' ನಲ್ಲಿ ಕಾಣಿಸಿಕೊಂಡಿದ್ದಾರೆ. ಅಪ್ಪನ ಜತೆ ವೇದಿಕೆಗೆ ಬಂದಿದ್ದ ನಟಿ ಲಾವಣ್ಯ ಅಲ್ಲಿ ತಮ್ಮ ಜೀವನದ ಅನೇಕ ಘಟನೆಗಳನ್ನು ಹಂಚಿಕೊಂಡಿದ್ದರು. ವೇದಿಕೆಯಲ್ಲಿದ್ದ ಅಪ್ಪ ಲಾವಣ್ಯ ಅವರ ಬಾಲ್ಯದ ಅನೇಕ ಘಟನೆಗಳನ್ನು ವೀಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ. ಅದರಲ್ಲೊಂದು 'ಹೇಳದೇ ಕೇಳದೇ ತಿರುಪತಿಗೆ ಬಸ್ಸು ಹತ್ತಿ ಹೋಗಿದ್ದ ಲಾವಣ್ಯ ಕತೆ'. ತುಂಬಾ ಆಸಕ್ತಿದಾಯಕವಾಗಿದೆ ಈ ಕಥೆ.
ಲಾವಣ್ಯ ಅಪ್ಪ ಈ ಅಪರೂಪ ಎನಿಸುವಂಥ ಘಟನೆಯನ್ನು ವೇದಿಕೆಯಲ್ಲಿ ಹೇಳುತ್ತಿದ್ದರೆ ಸ್ವತಃ ಅಲ್ಲೇ ಇದ್ದ ಲಾವಣ್ ಸೇರಿದಂತೆ, ಅಲ್ಲಿದ್ದವರೆಲ್ಲ ನಗೆಗಡಲಿನಲ್ಲಿ ತೇಲಿ ಹೋದರು. ಲಾವಣ್ಯ ಅಪ್ಪ ಹಾಗೂ ಸ್ವತಃ ಲಾವಣ್ಯ ಹೇಳಿದಂತೆ 'ಲಾವಣ್ಯ ಆಗ ಚಿಕ್ಕ ಮಗುವಾಗಿದ್ದರಂತೆ. ಅವರ ಮನೆಯ ಪಕ್ಕದಲ್ಲಿಯೇ ಶರ್ಮಾ ಟ್ರಾನ್ಸ್‌ಪೋರ್ಟ್ ಇತ್ತಂತೆ. ಅದೊಂದು ದಿನ ಮಗು ಲಾವಣ್ಯ ಶರ್ಮಾ ಟ್ರಾನ್ಸ್‌ಪೋರ್ಟ್ ಬಸ್ಸು ಹತ್ತಿದ್ದಾಳಂತೆ. ಅವಳ ಉದ್ದೇಶ ಸ್ಲೀಪಿಂಗ್ ಬಸ್ಸಿನಲ್ಲಿ ಹಾಸಿಗೆ ಹೇಗಿರುತ್ತೆ, ಹೇಗೆ ಮಲಗುತ್ತಾರೆ ಎಂಬುದನ್ನೆಲ್ಲಾ ನೋಡಲಂತೆ. ಆದರೆ, ಡ್ರೈವರ್ ಸೇರಿದಂತೆ ಯಾರಿಗೂ ಲಾವಣ್ಯ ಬಸ್ ಹತ್ತಿದ್ದಾಳೆ ಎಂಬುದು ಗೊತ್ತಿರಲಿಲ್ಲವಂತೆ.
ಒಂದೇ 'ಫ್ರೇಂ'ನಲ್ಲಿ ದಿಗ್ಗಜರ ಸಮಾಗಮ; ಎರಡು ದಶಕಗಳ ಬಳಿಕ ರಜನಿಕಾಂತ್-ಕಮಲ್ ಹಾಸನ್ ಭೇಟಿ!
ಹಾಗೇ ಬಸ್ ತಿರುಪತಿಗೆ ಹೊರಟಿದೆ. ಲಾವಣ್ಯಾಗೆ ಬಸ್ ಎಲ್ಲಿಗೆ ಹೋಗುತ್ತಿದೆ ಎಂಬ ಅರಿವೂ ಕೂಡ ಇರಲಿಲ್ಲವಂತೆ. ಹಾಗೇ ಬಸ್ ಹೋಗುತ್ತಿರುವಾಗ ಮನೆಯ ಟೆರೆಸ್ ಮೇಲೆ ತನ್ನ ಅಮ್ಮನನ್ನು ನೋಡಿ 'ಟಾಟಾ ಬೈ ಬೈ' ಎಂದಿದ್ದಾಳಂತೆ. ಅದನ್ನು ನೋಡಿದ ಲಾವಣ್ಯ ಅಮ್ಮ ಬೆಚ್ಚಿ ಬಿದ್ದು 'ಅಯ್ಯೋ ನನ್ನ ಮಗಳು, ಅಯ್ಯಯ್ಯೋ ನನ್ ಮಗಳು ಎಂದು ಕೂಗಿ, ಗಂಡನಿಗೆ ಹೇಳಿದ್ದಾಳಂತೆ. ತಕ್ಷಣ ಲಾವಣ್ಯ ಅಪ್ಪ ಮ್ಯಾನೇಜರ್‌ಗೆ ಹೇಳಿ, ಕೋಣನಕುಂಟೆ ಬಳಿ ಮಗಳನ್ನು ಬಸ್ಸಿನಿಂದ ಇಳಿಸಿಕೊಂಡರಂತೆ' ಈ ಘಟನೆ ಹೇಳಿದ ಲಾವಣ್ಯ ಅಪ್ಪ 'ಅಂದು ನಾನು ಇವಳನ್ನು ಅಲ್ಲಿ ಇಳಿಸಿಕೊಂಡಿದ್ದಕ್ಕೆ ಇಂದು ಅವಳಿಲ್ಲಿ ಇದ್ದಾಳೆ' ಎಂದಿದ್ದಾರೆ.
ಸೂಪರ್ ಸ್ಟಾರ್ ಶ್ರೀದೇವಿಗೆ ಅಮೆರಿಕಾದಲ್ಲಿ ಅನ್ಯಾಯ; ಭಾರೀ ಪರಿಹಾರ ಕೊಡಿಸಿದ್ದ ಅಧ್ಯಕ್ಷ ಬಿಲ್ ಕ್ಲಿಂಟನ್
ಒಟ್ಟಿನಲ್ಲಿ, ನಟಿ ಲಾವಣ್ಯ ಅವರು ಇಂದು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಚಿಕ್ಕವರಿದ್ದಾಗ ಅಪ್ಪ-ಅಮ್ಮನಿಗೆ ಸಿಕ್ಕಾಪಟ್ಟೆ ತಲೆನೋವು ಆಗಿದ್ದರಂತೆ. ಅವರಪ್ಪ ಅವಳನ್ನು 'ಡೋಲೋ ಸಿಕ್ಸ್ ಫಿಫ್ಟಿ' ಎಂದೇ ಕರೆಯುತ್ತಿದ್ದರಂತೆ. ಆದರೆ, ಇಂದು ಅಪ್ಪ-ಅಮ್ಮ ಹೆಮ್ಮೆ ಪಡುವಂತೆ ಬೆಳೆದಿದ್ದಾರೆ. ನಟಿ ಲಾವಣ್ಯ 'ಶ್ರೀರಸ್ತು ಶುಭಮಸ್ತು' ಸೀರಿಯಲ್ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ, ಜೀ ಕನ್ನಡದ 'ಜೋಡಿ ನಂಬರ್ 1' ರಿಯಾಲಿಟಿ ಶೋದಲ್ಲಿ ಕುಟುಂಬದವರೊಟ್ಟಿಗೆ ಕಾಣಿಸಿಕೊಂಡಿದ್ದಾರೆ.