ಚುಮು ಚುಮು ಚಳಿಯಲ್ಲಿ ಸ್ವಿಮ್ಮಿಂಗ್ ವಿಡಿಯೋ ಶೇರ್ ಮಾಡಿ ಬಿಸಿಯೇರಿಸಿದ ನಟಿ ಜ್ಯೋತಿ ರೈ
ನಟಿ ಜ್ಯೋತಿ ರೈ ಅಲಿಯಾಸ್ ಜ್ಯೋತಿ ಪೂರ್ವಜ್ ಅವರು ಸ್ವಿಮ್ ಮಾಡುವ ವಿಡಿಯೋ ಶೇರ್ ಮಾಡಿದ್ದು, ಪಡ್ಡೆ ಹುಡುಗರಲ್ಲಿ ಬಿಸಿ ಏರಿಸಿದ್ದಾರೆ.
ನಟಿ ಜ್ಯೋತಿ ರೈ, ನಿರ್ದೇಶಕ ಸುಕ್ಕು ಪೂರ್ವಜ್ ಅವರನ್ನು ಮದುವೆಯಾಗಿ ಜ್ಯೋತಿ ಪೂರ್ವಜ್ ಆಗಿದ್ದಾರೆ. ಮೊದಲಿನಿಂದಲೂ ಸದಾ ಒಂದಿಲ್ಲೊಂದು ವಿಡಿಯೋಗಳನ್ನು ಶೇರ್ ಮಾಡಿಕೊಂಡು ಸದ್ದು ಮಾಡುತ್ತಲೇ ಇರುತ್ತಾರೆ ನಟಿ. ಹಲವಾರು ಕನ್ನಡ ಹಾಗೂ ತೆಲುಗು ಸೀರಿಯಲ್‌ಗಳಲ್ಲಿ ನಟಿಸಿ ಮನೆ ಮಾತಾಗಿರುವ ಜ್ಯೋತಿ ಅವರು, ಸದ್ಯ ಹೈದರಾಬಾದ್‌ನಲ್ಲಿ ಸೆಟಲ್ ಆಗಿದ್ದಾರೆ. ವಯಸ್ಸು 40ರ ಆಸುಪಾಸಾದರೂ ಇಂದಿಗೂ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬೋಲ್ಡ್ ಫೋಟೋಗಳ ಮೂಲಕ ಅಭಿಮಾನಿಗಳ ಎದೆಯಲ್ಲಿ ಮಿಂಚು ಹರಿಸುತ್ತಲೇ ಇರುತ್ತಾರೆ. ಪ್ರತಿದಿನ ಹೊಸ ಹೊಸ ರೀತಿಯ ಹಾಟ್‌ಸ್ಟೈಲ್‌ನಲ್ಲಿ ಫೋಟೋ ಶೂಟ್ ಮಾಡುತ್ತಿರುವ ಜ್ಯೋತಿ ಅವರ ಕೆಲವೊಂದು ಅಶ್ಲೀಲ ಎನ್ನುವ ವಿಡಿಯೋ ವೈರಲ್ ಆಗಿದ್ದರಿಂದ ಕೆಲ ಕಾಲ ಸೋಷಿಯಲ್ ಮೀಡಿಯಾದಿಂದಲೇ ಹೊರಕ್ಕೆ ಉಳಿದಿದ್ದರು ಜ್ಯೋತಿ.
ಆದರೆ ಮತ್ತೆ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಅವರು ತಾವು ಸ್ವಿಮ್ಮಿಂಗ್ ಕಲಿಯುತ್ತಿರುವುದಾಗಿ ಹೇಳಿ ಅದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಚುಮುಚುಮು ಚಳಿಯಲ್ಲಿ ತಣ್ಣಗಿನ ನೀರಿನಲ್ಲಿ ಇಳಿದ ಜ್ಯೋತಿ ಅವರ ಸ್ವಿಮ್ಮಿಂಗ್ ಅವತಾರ ನೋಡಿ ಬಿಸಿಯೇರಿತು ಎನ್ನುತ್ತಿದ್ದಾರೆ ಕೆಲವು ನೆಟ್ಟಿಗರು. ಈಗಲೇ ಇಷ್ಟು ಹಾಟ್ ಆಗಿದ್ದೀರಿ, ಸ್ವಿಮ್ಮಿಂಗ್ ಕಲಿತು ಮತ್ತಷ್ಟು ಹಾಟ್ ಆಗಲುಹೊರಟಿದ್ದೀರಾ ಎಂದು ಮತ್ತಷ್ಟು ಮಂದಿ ಕಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ನಟಿಯ ಈಜಿನ ವಿಡಿಯೋ ಸಕತ್ ವೈರಲ್ ಆಗುತ್ತಿದೆ.
ನಮ್ಮ ಮನೆ ತುಂಬಾ ಚಿಕ್ಕದು ಎನ್ನುತ್ತಲೇ 'ನಗುವಿನೊಡೆಯ'ನ ಪರಿಚಯಿಸಿದ ಆ್ಯಂಕರ್ ಅನುಶ್ರೀ
ಅಂದಹಾಗೆ ನಟಿ ಜ್ಯೋತಿ, ಸಾಲು ಸಾಲು ಸಿನಿಮಾಗಳಲ್ಲಿಯೂ ಬ್ಯುಜಿ ಆಗಿದ್ದಾರೆ. ಕೆಲ ದಿನಗಳ ಹಿಂದೆ ಡಾನ್ಸ್ ಅಭ್ಯಾಸ ಮಾಡದೇ ಸೊಂಟ ಬಳುಕಿಸೋ ವಿಡಿಯೋ ಪೋಸ್ಟ್ ಮಾಡಿದ್ದ ಇವರು, ಅಭಿಮಾನಿಗಳಿಗೆ ಹೊಸ ಆಫರ್ ನೀಡಿದ್ದರು. ಅವರ ಮುಂದಿನ ಚಿತ್ರ ಕಿಲ್ಲರ್‌ನ ಭಾಗವಾಗಲು ಹೇರ್ ಸ್ಟೈಲಿಸ್ಟ್ ಹಾಗೂ ಮೇಕಪ್ ಆರ್ಟಿಸ್ಟ್ ಬಗ್ಗೆ ಅವರು ಪೋಸ್ಟ್ ಮಾಡಿ ಆಸಕ್ತರು ಸಂಪರ್ಕಿಸುವಂತೆ ಕೇಳಿಕೊಂಡಿದ್ದರು. 'ನಮಗೆ ಮೇಕಪ್ ಆರ್ಟಿಸ್ಟ್ ಹಾಗೂ ಹೇರ್ ಸ್ಟೈಲಿಸ್ಟ್ ಅಗತ್ಯವಿದೆ. ಯಾರಾದರೂ ವೃತ್ತಿಪರರಿದ್ದರೆ, ನಾನು ಪ್ರತಿಭಾನ್ವಿತ ಹಾಗೂ ಅನುಭವಿ ಮೇಕಪ್ ಆರ್ಟಿಸ್ಟ್ ಹಾಗೂ ಹೇರ್ ಸ್ಟೈಲಿಸ್ಟ್ ಹುಡುಕಾಟದಲ್ಲಿದ್ದೇನೆ. ಸಖತ್ ಆಗಿರೋ ಶೂಟ್ ಶೆಡ್ಯುಲ್‌ನಲ್ಲಿ ಅವರು ನನ್ನೊಂದಿಗೆ ಭಾಗವಹಿಸಬೇಕಿದೆ ಎಂದಿದ್ದರು.
ಇತ್ತೀಚೆಗೆ ಅವರು ಶೇರ್ ಮಾಡಿಕೊಂಡಿದ್ದ ಹಾಟ್ ಫೋಟೋಗಳಿಗೆ ಪತಿ ಸುಕ್ಕು ಪೂರ್ವಜ್ ಮಾಡಿದ್ದ ಕಮೆಂಟ್ ಕೂಡ ಸದ್ದು ಮಾಡಿತ್ತು. ಅದರೊಂದಿಗೆ ಅವರು ಜೀವನದ ಕುರಿತಾಗಿ ಕೆಲವೊಂದು ಕೋಟ್ಸ್ ಶೇರ್ ಮಾಡಿಕೊಂಡಿದ್ದರು. ಕೆಲವೊಮ್ಮೆ ಜೀವನವನ್ನು ಬದಲಾಯಿಸುವ ಆ ಒಂದು ವರ್ಷವನ್ನು ಪಡೆಯೋದಕ್ಕೆ 10 ವರ್ಷಗಳೇ ಬೇಕಾಗುತ್ತೆ ಎಂದು ಬರೆದುಕೊಂಡಿದ್ದರು. ಇಂಟರ್ನೆಟ್ ನೋಡಿ ಮೋಸ ಹೋಗಬೇಡಿ, ಯಾರೂ ಕೂಡ ಅವರ ಸೋಲನ್ನು ಪೋಸ್ಟ್ ಮಾಡೋದಕ್ಕೆ ಇಷ್ಟ ಪಡೋದಿಲ್ಲ ಎಂದು ಬರೆದುಕೊಂಡಿದ್ದರು. ಕನ್ನಡ ಕಿರುತೆರೆ ಬಳಿ, ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ ನಟಿ, ನಂತರ ಕನ್ನಡ ಸಿನಿಮಾ, ತೆಲುಗು ವೆಬ್ ಸೀರೀಸ್ ಎಂದು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಪ್ರೆಗ್ನೆಂಟ್ ಮಾಡಿ ಓಡಿ ಹೋದ... ನಿಖಾಗೆ ರೆಡಿಯಾಗಿ ಗರ್ಲ್ ಫ್ರೆಂಡ್ ಕೈಲಿ ತಗ್ಲಾಕ್ಕೊಂಡ! ವಿಡಿಯೋ ವೈರಲ್