Asianet Suvarna News Asianet Suvarna News

ಕಿಮೋಥೆರಪಿಗೆ ಕೂದಲು ಕತ್ತರಿಸಿದ ಹೀನಾ, ನೋವಿನಲ್ಲೂ ನಗು ಚೆಲ್ಲಿ ಕ್ಯಾನ್ಸರ್ ಚಿಕಿತ್ಸೆ ಆರಂಭಿಸಿದ ನಟಿ

ಖ್ಯಾತ ನಟಿ ಹೀನಾ ಖಾನ್ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇದೀಗ ಕಿಮೋಥೆರಪಿ ಆರಂಭಗೊಂಡಿದೆ. ಆದರೆ ಥೆರಪಿಗೂ ಮುನ್ನ ಕೂದಲು ಕತ್ತರಿಸಲಾಗಿದೆ. ನೋವು, ಚಿಕಿತ್ಸೆ ನಡುವೆ ನಗುತ್ತಲೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
 

Actress Hina khan cuts long hair ahead of chemotherapy with smile fans gets emotional ckm
Author
First Published Jul 4, 2024, 1:24 PM IST

ಮುಂಬೈ(ಜು.04) ಟಿವಿ ನಟಿ ಹೀನಾ ಖಾನ್ ಸ್ತನ ಕ್ಯಾನ್ಸರ್ ಚಿಕಿತ್ಸೆ ಆರಂಭಗೊಂಡಿದೆ.  ಬಿಗ್ ಬಾಸ್‌ ಮಾಜಿ ಸ್ಪರ್ಧಿ, ಯೇ ರಿಶ್ತಾ ಕ್ಯಾ ಕೆಹ್ಲಾತ್‌ ಧಾರವಾಹಿ ಖ್ಯಾತಿಯ ನಟಿ ಇತ್ತೀಚೆಗೆ ಕ್ಯಾನ್ಸರ್ ಕುರಿತು ಮಾಹಿತಿ ಬಿಚ್ಚಿಟ್ಟಿದ್ದರು. ಇದೀಗ ಹೀನಾ ಖಾನ್ ಅವರಿಗೆ ಕಿಮೋಥೆರಪಿ ಆರಂಭಗೊಂಡಿದೆ. ಈ ಚಿಕಿತ್ಸೆಗೂ ಮುನ್ನ ಕೂದಲು ಕತ್ತರಿಸಲಾಗಿದೆ. ಸಂಪೂರ್ಣ ಕೂದಲು ಕತ್ತರಿಸಿ ಬಳಿಕ ಚಿಕಿತ್ಸೆ ಆರಂಭಿಸಲಾಗಿದೆ. ತೀವ್ರ ನೋವಿನಲ್ಲೂ ನಟಿ ನಗುತ್ತಲೇ ಚಿಕಿತ್ಸೆ ಆರಂಭಿಸಿದ್ದಾರೆ. ಜೊತೆಗೆ ಸಂದೇಶವನ್ನೂ ನೀಡಿದ್ದಾರೆ.

ಚಿಕಿತ್ಸೆ ಆರಂಭಕ್ಕೂ ಮುನ್ನ ಭಾವುಕರಾದ ಹೀನಾ ಖಾನ್, ಸೋಶಿಯಲ್ ಮೀಡಿಯಾ ಮೂಲಕ ಭಾವನೆ ವ್ಯಕ್ತಪಡಿಸಿದ್ದಾರೆ.   ನನ್ನ ತಾಯಿ ಅಳುತ್ತಾ  ನನ್ನನ್ನು ಕಾಶ್ಮೀರದಿಂದ ಆಶೀರ್ವದಿಸಿದ್ದಾರೆ. ತಾಯಿಯ ಅಳು ನಿಮಗೆ ಕೇಳಿಸಬಹುದು. ಕಾರಣ ಆಕೆ ಈ ರೀತಿ ಸಂದರ್ಭ ಎದುರಿಸಬಹುದು ಎಂದು ಕನಸು ಮನಸ್ಸಲ್ಲೂ ಊಹಿಸಿರಲಿಲ್ಲ. ಹೃದಯವಿದ್ರಾವಕ ಭಾವನೆ ನಿಯಂತ್ರಿಸಲು ಎಲ್ಲರಲ್ಲೂ ಯಾವುದೇ ಸಾಧನವಿರುವುದಿಲ್ಲ ಎಂದು ಹೀನಾ ಖಾನ್ ಹೇಳಿದ್ದಾರೆ.

ಎಲ್ಲಾ ಸುಂದರ ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಇದು ಕಷ್ಟ. ಮಹಿಳೆಗೆ ಕೂದಲು ತೆಗೆಯದ ಕಿರೀಟ. ಆದರೆ ಅದೇ ಕೂದಲನ್ನು ಕತ್ತರಿಸಬೇಕಾದ ಪರಿಸ್ಥಿತಿಯಲ್ಲಿದ್ದೀರಿ ಎಂದರೆ ನೀವು ಘೋರ ಯುದ್ಧ ಎದುರಿಸುತ್ತಿದ್ದೀರಿ ಎಂದರ್ಥ. ನೀವು ಕಿರೀಟವನ್ನು ಕಳೆದುಕೊಳ್ಳಲು ಮುಂದಾಗಿದ್ದೀರಿ.ಗೆಲ್ಲಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕೆಲವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.ನಾನು ಗೆಲ್ಲಲು ನಿರ್ಧರಿಸಿದ್ದೇನೆ.

ಹೀನಾ ಖಾನ್, ತಹಿರಾ ಕಶ್ಯಪ್.. ಸ್ತನ ಕ್ಯಾನ್ಸರ್‌‌ನಿಂದ ಬಳಲಿದ ನಟಿಯರಿವರು

ಕಿಮೋಥೆರಪಿ ಆರಂಭಗೊಂಡರೆ ಕೂದಲು ಉದುರುತ್ತದೆ. ಅದಕ್ಕೂ ಮೊದಲೇ ಕತ್ತರಿಸಲು ನಿರ್ಧರಿಸಿದೆ. ಮಾನಸಿಕವಾಗಿ ಇದು ಕಷ್ಟ. ನನ್ನ ಕಿರೀಟವನ್ನು ಕಳೆದುಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಅದನ್ನು ನಾನು ಮಾಡುತ್ತೇನೆ. ಕಾರಣ ನನ್ನ ನಿಜವಾದ ಕಿರೀಟ ಧೈರ್ಯ ಮತ್ತು ನನ್ನ ಶಕ್ತಿ. ಇದೀಗ ನನ್ನ ಕೂದಲಿನಿಂದಲೇ ವಿಗ್ ಮಾಡಲು ನಾನು ನಿರ್ಧರಿಸಿದ್ದೇನೆ.  

ಆತ್ಮ ಉಳಿಯಬೇಕು ಎಂದರೆ ಕೆಲವು ಕಳೆದುಕೊಳ್ಳಬೇಕು. ಕೂದಲು ಮತ್ತೆ ಬೆಳೆಯುತ್ತದೆ, ಹುಬ್ಬು ಮತ್ತೆ ಬರುತ್ತದೆ. ಚರ್ಮ ಸುಕ್ಕಾಗುತ್ತದೆ. ನನ್ನ ಪಯಣವನ್ನು ಚಿತ್ರೀಕರಿಸಿದ್ದೇನೆ. ಇದೇ ರೀತಿ ಯುದ್ಧದಲ್ಲಿರುವ ಹಲವರಿಗೆ ಧೈರ್ಯವಾಗಿರಲಿ. ಪ್ರೀತಿ ಇರಲಿ ಎಂದು ಹೀನಾ ಖಾನ್ ಹೇಳಿದ್ದಾರೆ.  

 

  
ಇತ್ತೀಚೆಗೆ ಹೀನಾ ಖಾನ್ ತಮ್ಮ ಸ್ತನ ಕ್ಯಾನ್ಸರ್ ಕುರಿತು ಬಹಿರಂಗಪಡಿಸಿದ್ದರು. ನನ್ನನ್ನು ಪ್ರೀತಿಸುವ ಮತ್ತು ಕಾಳಜಿ ವಹಿಸುವ ಪ್ರತಿಯೊಬ್ಬರೊಂದಿಗೆ ಮಹತ್ವದ ವಿಚಾರವೊಂದನ್ನು ಹಂಚಿಕೊಳ್ಳಲು ಬಯಸುತ್ತೇನೆ. ನನಗೆ ಮೂರನೇ ಹಂತದ ಕ್ಯಾನ್ಸರ್‌ ಇರುವುದು ಪತ್ತೆಯಾಗಿದೆ. ಈ ಸವಾಲಿನ ರೋಗದ ಹೊರತಾಗಿಯೂ ಇದರಿಂದ ಆದಷ್ಟು ಬೇಗ ಗುಣಮುಖಳಾಗಿ ಬರುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದು ಹೀನಾ ಖಾನ್ ಹೇಳಿದ್ದರು.

 

ಎಲ್ಲಾ ರೂಮರ್‌ಗಳಿಗೆ ಸ್ಪಷ್ಟನೆ, 3ನೇ ಹಂತದ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವ ನಟಿ ಹೀನಾ!
 

Latest Videos
Follow Us:
Download App:
  • android
  • ios