Asianet Suvarna News Asianet Suvarna News

ಅಯೋಧ್ಯೆಯಲ್ಲಿ ಮೊಳಗಿದ ರಾಮ ಭಜನೆಗೆ ನೃತ್ಯದ ಮೆರುಗು ನೀಡಿದ ನಟಿ, ನೃತ್ಯಾಂಗನೆ ಅಂಕಿತಾ ಅಮರ್​...

 ನಟಿ ಹಾಗೂ ನೃತ್ಯಪಟು ಅಂಕಿತಾ ಅಮರ್​ ಅವರು, ರಾಮನ ಭಜನೆಗೆ ನೃತ್ಯದವನ್ನು ಪ್ರಸ್ತುತ ಪಡಿಸುವ ಮೂಲಕ ಅಯೋಧ್ಯೆಯಲ್ಲಿ ಭಕ್ತಿ ಮೆರೆದಿದ್ದಾರೆ.
 

Actress and dancer Ankita Amar  presenting dance to Ramas bhajan in Ayodhya.
Author
First Published Feb 5, 2024, 5:32 PM IST

ಅವಕಾಶದಲ್ಲಿ ಚಿಕ್ಕದು, ದೊಡ್ಡದು ಎಂಬುದಿಲ್ಲ. ಕಲೆಯೇ ಜೀವನ ಎಂದುಕೊಂಡ ಒಬ್ಬ ಕಲಾವಿದೆಗೆ ಎಲ್ಲಾ ರೀತಿಯ ಅವಕಾಶವೂ ಒಂದೇ. ಬಂದ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡರೆ ಅದು ನಮ್ಮನ್ನು ಯಶಸ್ಸಿನ ದಾರಿಗೆ ಖಂಡಿತಾ ಕರೆದೊಯ್ಯುತ್ತದೆ ಎನ್ನುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು ಎಂಬಿಬಿಎಸ್​ ಪದವೀಧರೆ ಅಂಕಿತಾ ಅಮರ್​.  ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಬೆಡಗಿ ಈಕೆ.  ಪುಟ್ಟಗೌರಿ ಮದುವೆ ಸೀರಿಯಲ್ ನಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದ ಇವರಿಗೆ ಹೆಸರು ತಂದುಕೊಟ್ಟದ್ದು, ಕಲರ್ಸ್ ಕನ್ನಡದ ನಮ್ಮನೆ ಯುವರಾಣಿ ಸೀರಿಯಲ್. ಪ್ರೇಕ್ಷಕರ ಪ್ರೀತಿಯ ಮೀರಾ ಎಂದೇ ಖ್ಯಾತಿ ಪಡೆದಿರುವ ಅಂಕಿತಾ, ನಟಿ ಮಾತ್ರವಲ್ಲದೇ ಖ್ಯಾತ ನಿರೂಪಕಿ ಕೂಡ. ಅಷ್ಟೇ ಅಲ್ಲದೇ ಈಕೆ  ಗಾಯಕಿ ಮತ್ತು ನೃತ್ಯಾಂಗನೆ.  ‘ನಮ್ಮನೆ ಯುವರಾಣಿ’ ಸೀರಿಯಲ್‌ನಲ್ಲಿ ತಮ್ಮ ಮುಗ್ಧ ನಟನೆಯ ಮೂಲಕ ಜನಪ್ರಿಯತೆ ಗಳಿಸಿದರು. ಇದಾದ ಮೇಲೆ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ನಿರೂಪಕಿಯಾಗಿದ್ದರು. ಮೂಲತಃ ಮೈಸೂರಿನವರಾದ ಅಂಕಿತಾ  ಓದಿದ್ದು ಎಂಬಿಬಿಎಸ್‌, ಆದರೆ ಆಯ್ಕೆ ಮಾಡಿಕೊಂಡಿರುವುದು ಬಣ್ಣದ ಲೋಕವನ್ನು.  

ಇದಾಗಲೇ ಹೇಳಿರುವಂತೆ ಈಕೆ ಖ್ಯಾತ ನೃತ್ಯಗಾರ್ತಿ ಕೂಡ. ಈ ಹಿಂದೆ ಕೃಷ್ಣನ ಭಜನೆಗೆ ನೃತ್ಯ ಮಾಡುವ ಮೂಲಕ ಎಲ್ಲರ ಮನಸೂರೆಗೊಂಡಿದ್ದರು ಅಂಕಿತಾ. ಇದೀಗ  ಈಗ ಅಯೋಧ್ಯೆಯಲ್ಲಿ ರಾಮನ ಭಜನೆಗೆ ಡ್ಯಾನ್ಸ್ ಮಾಡಿದ್ದಾರೆ.  ಜಯ ಜಯ ರಾಮ, ಜಾನಕಿ ಪ್ರೇಮ ಹಾಡಿಗೆ ಸುಂದರವಾಗಿ ಹೆಜ್ಜೆ ಹಾಕಿದ್ದಾರೆ. ನೂರಾರು ಮಹಿಳೆಯರು ದಾರಿಯುದ್ದಕ್ಕೂ ಭಜನೆ ಮಾಡುತ್ತಾ ಸಾಗುತ್ತಿದ್ದರೆ, ನಟಿ ಅಂಕಿತಾ ಎದುರಿನಲ್ಲಿ ಈ ಭಜನೆಗೆ ಹೆಜ್ಜೆ ಹಾಕುತ್ತಾ ಸಾಗಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದ್ದು, ಎಲ್ಲೆಲ್ಲೂ ಜೈಶ್ರೀರಾಮ್​ ಘೋಷಣೆ ಮೊಳಗಿದೆ. 

ಇಸ್ಲಾಂನಲ್ಲಿ ನಂಬಿಕೆಯಿಲ್ಲ ಎಂದಿದ್ದ ಉರ್ಫಿಯಿಂದ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಹೋಮ-ಹವನ

ಇನ್ನು ನಟಿಯ ಒಂದಿಷ್ಟು ಸಿನಿ ಪಯಣದ ಕುರಿತು ಹೇಳುವುದಾದರೆ, ‘ಅಬಜದಬ’ ಸಿನಿಮಾ ಮೂಲಕ ಅಂಕಿತಾ ಬೆಳ್ಳಿತೆರೆ ಪ್ರವೇಶ ಮಾಡಿದ್ದರು. ಅದಿನ್ನೂ ಬಿಡುಗಡೆಯಾಗಿಲ್ಲ. ಆದರೂ ರಕ್ಷಿತ್‌ ಶೆಟ್ಟಿ ನಿರ್ಮಾಣ ಸಂಸ್ಥೆಯ ‘ಇಬ್ಬನಿ ತಬ್ಬಿದ ಇಳೆಯಲಿ’, ‘ಮೈ ಹೀರೋ’, ಈಗ ‘ರಂಗು ರಗಳೆ’ ಹೀಗೆ ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.  ಇದೊಂದು ವಿಭಿನ್ನ ಶೈಲಿಯ ಸಿನಿಮಾವಾಗಿದ್ದು, ಮೂವರು ನಾಯಕರಿದ್ದಾರೆ.  

ಈ ಹಿಂದೆ ತಮ್ಮ ಬಣ್ಣದ ಲೋಕದ ಕುರಿತು ಮಾಧ್ಯಮದ ಎದುರು ಮಾತನಾಡಿದ್ದ ಅಂಕಿತಾ ಅವರು, ಮಲ್ಟಿ ಟಾಸ್ಕ್‌ ಎಂದರೆ ನನಗಿಷ್ಟ. ಕಲೆ ಸರಸ್ವತಿಯ ರೂಪ. ಆದ್ದರಿಂದ ನಿರೂಪಣೆಯ ಅವಕಾಶ ಬಂದಾಗ ಅದನ್ನು ಹೃದಯಪೂರ್ವಕವಾಗಿ ಸ್ವೀಕರಿಸಿದ್ದೇನೆ. ಶಾಲಾ, ಕಾಲೇಜು ದಿನಗಳಿಂದಲೂ ನನಗೆ ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ಒಲವು ಹೆಚ್ಚು. ಅದರಲ್ಲಿ ಭಾಗವಹಿಸಿಲ್ಲ ಎಂದರೆ ಓದಲು ಆಸಕ್ತಿಯೇ ಬರುತ್ತಿರಲಿಲ್ಲ. ಕೇವಲ ನಟನೆ ಮಾತ್ರವಲ್ಲದೆ, ಎಲ್ಲಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂಬುದು ನನ್ನ ಆಸೆ. ನೃತ್ಯ, ಗಾಯನ, ಹಿನ್ನೆಲೆ ಧ್ವನಿಯಲ್ಲಿ ಈಗಾಗಲೇ ಸಕ್ರಿಯಳಾಗಿದ್ದೇನೆ. ಸದ್ಯಕ್ಕೆ ಸುಗಮ ಸಂಗೀತ ಕಲಿಯುತ್ತಿದ್ದೇನೆ. ನೃತ್ಯದಲ್ಲಿ ಮತ್ತಷ್ಟು ಸಾಧನೆ ಮಾಡಲು ಸಜ್ಜಾಗುತ್ತಿದ್ದೇನೆ ಎಂದಿದ್ದರು. 

ನೃತ್ಯ, ಸಂಗೀತ, ಜಪದ ಮೂಲಕ ಸ್ಯಾಂಡಲ್​ವುಡ್​​ನಲ್ಲಿ ರಾಮನ ಸ್ಮರಣೆ... ಯಾರು ಹೇಗೆಲ್ಲಾ ಆಚರಿಸಿದ್ರು ನೋಡಿ...

 

Follow Us:
Download App:
  • android
  • ios