ಕಂಠಿಗೆ ಖುಲಾಯಿಸಿದ ಅದೃಷ್ಟ! ರಾಕಿಂಗ್ ಸ್ಟಾರ್ ಯಶ್ ಮಾಡಿಯೇ ಬಿಟ್ರು ಫೋನ್ಕಾಲ್!
ಪುಟ್ಟಕ್ಕನ ಮಕ್ಕಳು ಕಂಠಿಗೆ ಅದೃಷ್ಟ ಖುಲಾಯಿಸಿದ್ದು, ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ ಯಶ್ ಖುದ್ದು ಕರೆ ಮಾಡಿ ಶಹಬ್ಬಾಸ್ಗಿರಿ ನೀಡಿದ್ದಾರೆ. ಏನಿದು ವಿಷಯ?
ಪುಟ್ಟಕ್ಕನ ಮಕ್ಕಳು ಸೀರಿಯಲ್ ಕಂಠಿ ಅದೃಷ್ಟ ಖುಲಾಯಿಸಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಡಾನ್ಸ್ ಕರ್ನಾಟಕ ಡಾನ್ಸ್ ಷೋನಲ್ಲಿ ಕಂಠಿ ಮಾಡಿರುವ ಅದ್ಭುತ ಡಾನ್ಸ್ ತೀರ್ಪುಗಾರರ ಮನಸ್ಸು ಗೆದ್ದಿದೆ. ಕಳೆದ ವಾರ ಥೇಟ್ ಯಶ್ ಅವರಂತೆಯೇ ನೀವು ಡಾನ್ಸ್ ಮಾಡುತ್ತಿರುವಿರಿ ಎಂದು ಜಡ್ಜ್ಸ್ ಹಾಡಿ ಹೊಗಳಿದ್ದರು. ಇದೇ ವೇಳೆ ಆ್ಯಂಕರ್ ಅನುಶ್ರೀ ಅವರು ಇವರ ಡಾನ್ಸ್ ಅನ್ನು ಯಶ್ ಅವರಿಗೆ ತೋರಿಸಬೇಕು ಎಂದಾಗ, ತೀರ್ಪುಗಾರರಾಗಿರುವ ಶಿವರಾಜ್ ಕುಮಾರ್ ಅವರು, ಯಶ್ ಅವರಿಗೆ ನಾನೇ ಫೋನ್ ಮಾಡಿ ಹೇಳುತ್ತೇನೆ ಎಂದರು. ಅದೇ ರೀತಿ ಈಗ ನಡೆದಿದೆ. ಕಂಠಿ ಅವರ ವಿಡಿಯೋ ನೋಡಿ ಖುದ್ದು ಯಶ್ ಫೋನ್ಕಾಲ್ ಮಾಡಿದ್ದಾರೆ. ಕಂಠಿಗೆ ವೇದಿಕೆ ಮೇಲೆ ಸರ್ಪ್ರೈಸ್ ನೀಡಿದ್ದಾರೆ. ನಮಸ್ತೆ ಕಂಠಿಯವರೇ ಹೇಗಿದ್ದೀರಾ ಎಂದು ಯಶ್ ಹೇಳಿದಾಗಲೇ ಕಂಠಿ ಪುಳಕಗೊಂಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ನಿಮ್ಮ ಪರ್ಫಾಮೆನ್ಸ್ ನೋಡಿದೆ. ತುಂಬಾ ಚೆನ್ನಾಗಿ ಮಾಡಿದ್ದಿರಾ. ಎಲ್ಲಾ ಶಿವಣ್ಣ ಇನ್ಸ್ಪಿರೇಷನ್. ಹೀಗೆಯೇ ಮುಂದುವರೆಯಿರಿ ರಂದು ಕಂಠಿಗೆ ಯಶ್ ಅವರು ಆಶೀರ್ವಾದ ಮಾಡಿದ್ದಾರೆ. ಅಂದಹಾಗೆ, ಎಲ್ಲರ ಮನಸ್ಸನ್ನು ಗೆದ್ದು, ಕದ್ದಿರುವ ಕಂಠಿಯ ನಿಜವಾದ ಹೆಸರು ಧನುಷ್. ಇದೀಗ ಧನುಷ್ ಅವರು Dance ಕರ್ನಾಟಕ Dance ರಿಯಾಲಿಟಿ ಷೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ವಾರ 'Jodi Introduction Round'ನಲ್ಲಿ ಮನಿಷಾ ಅವರ ಜೊತೆ ಸಕತ್ ರೊಮಾನ್ಸ್ ಮಾಡಿದ್ದರು. ಈ ಮೂಲಕ ವೇದಿಕೆಯಲ್ಲಿ ಪ್ರೇಮದ ಕಿಚ್ಚು ಹೊತ್ತಿಸಿದ್ದರು. 'ಚೆಂದುಟಿಯ ಪಕ್ಕದಲಿ' ಹಾಡಿನಲ್ಲಿ ಭರ್ಜರಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಧನುಷ್ ಅವರು ನಟನೆಗೆ ಮಾತ್ರವಲ್ಲದೇ ಡಾನ್ಸ್ಗೂ ಸೈ ಎನ್ನುವುದನ್ನು ಇಲ್ಲಿ ನಿರೂಪಿಸಿದ್ದಾರೆ. ಕಳೆದ ಸಲದಂತೆ ಇವರಿಗೆ ತೀರ್ಪುಗಾರರ ಕಡೆಯಿಂದಲೂ ಈ ಭಾರಿ ಶ್ಲಾಘನೆ ವ್ಯಕ್ತವಾಗಿದೆ.
ತಮ್ಮವರ ಮೇಲೆಯೇ ಈ ಪರಿ ಹಿಂಸಾಚಾರ, ಇನ್ನು... ಎನ್ನುತ್ತಲೇ ಸನಾತನ ಧರ್ಮದ ಮಹತ್ವ ತಿಳಿಸಿದ ಕಂಗನಾ
ಅಷ್ಟಕ್ಕೂ, ಈ ಬಾರಿಯ ಡಾನ್ಸ್ ಕರ್ನಾಟಕ ಡಾನ್ಸ್ (DKD) ಕರ್ನಾಟಕ ಮೂಲೆಮೂಲೆಯಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಒಂದೇ ವೇದಿಕೆಯ ಮೇಲೆ ನರ್ತಿಸುವಂತೆ ಮಾಡುವ ಷೋ ಆಗಿದೆ. ಆದರೆ ಈ ಬಾರಿ ವಿಭಿನ್ನ ಪ್ರಯೋಗ ಮಾಡಲಾಗಿದೆ. ಈ ಸಲ ಇಲ್ಲಿ ಬಂದಿರುವ ಸ್ಪರ್ಧಿಗಳು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡವರೇ ಹೆಚ್ಚು. ಕಿರುತೆರೆ, ಹಿರಿತೆರೆ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ಸೌಂಡ್ ಮಾಡುತ್ತಿರುವವರನ್ನು ಇದರಲ್ಲಿ ಆಯ್ಕೆ ಮಾಡಲಾಗಿದೆ. ಈ ಬಾರಿ ಆರ್ಯವರ್ಧನ್ ಗುರೂಜಿ, ಒಳ್ಳೆ ಹುಡುಗ ಎಂದೇ ಹಾಕಿಕೊಳ್ಳುವ ಪ್ರಥಮ್, ಪುಟ್ಟಕ್ಕನ ಮಕ್ಕಳು ಕಂಠಿ ಅಂದರೆ ಧನುಷ್, ಇದೇ ಸೀರಿಯಲ್ನ ಸಹನಾ ಅಂದರೆ ಅಕ್ಷರ, ಸೀತಾರಾಮ ಸೀರಿಯಲ್ ಖ್ಯಾತಿಯ ಪ್ರಿಯಾ ಅಂದರೆ ಮೇಘನಾ ಶಂಕರಪ್ಪ, ಗಗನ, ರೆಮೊ, ವಿಶ್ವ, ಅಮೃತಧಾರೆ ಜೀವನ್ ಅರ್ಥಾತ್ ಶಶಿ ಹೆಗ್ಡೆ ಮುಂತಾದವರು ಈ ಷೋನಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದಾರೆ. ಸೀತಾರಾಮ ಸೀರಿಯಲ್ ಸಿಹಿ ಅಂದರೆ ರೀತು ಸಿಂಗ್ ಕೂಡ ಸ್ಪರ್ಧಿಸುತ್ತಿದ್ದಾಳೆ.
ಇನ್ನು ಧನುಷ್ ಕುರಿತು ಹೇಳುವುದಾದರೆ, ಚಿಕ್ಕ ವಯಸ್ಸಿನಿಂದಲೂ ಸಿನಿಮಾ ನಾಯಕರನ್ನು ನೋಡಿ, ಅವರಂತೆಯೇ ತಾನಾಗಬೇಕು ಎಂಬ ಕನಸು ಕಂಡದ್ದ ಧನುಶ್ ಈಗ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಮೂಲಕ ಆ ಕನಸು ನನಸು ಮಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಇದಾಗಲೇ ಧನುಷ್ ಕೆಲವು ಕಿರುಚಿತ್ರಗಳಲ್ಲಿ ನಟಿಸಿದ್ದಾರೆ. ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ನಟಿಸುವುದಕ್ಕೂ ಮುನ್ನ ಇವರು ಧನುಷ್, 'ಅನಿರೀಕ್ಷಿತ', '18+2' ಕಿರುಚಿತ್ರಗಳನ್ನು, 'ನನ್ನ ನಗು' ಹಾಡಿನ ಆಲ್ಬಂ ಮಾಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನಾಯಕನಾಗಬೇಕು ಎಂಬ ಕನಸು ಕಂಡವರು. ಕೋಲಾರ ಜಿಲ್ಲೆಯ ಸಂತೆಹಳ್ಳಿ ಇವರ ಊರು. ಧನುಷ್ ಅವರು ಎಂಜಿನಿಯರಿಂಗ್ ಮುಗಿಯುತ್ತಿದ್ದಂತೆಯೇ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಆಡಿಷನ್‌ನಲ್ಲಿ ಆಯ್ಕೆಯಾದರು. ಇತ್ತೀಚೆಗಷ್ಟೇ ಧನುಷ್ ಗೌಡ ಕಾಣಿಸಿಕೊಂಡಿದದ 'ಮನಸೆಲ್ಲಾ ನೀನೇ' ಆಲ್ಬಂ ರಿಲೀಸ್ ಆಗಿತ್ತು. ಶಿಕ್ಷಣ ಮುಗಿದಿದ್ದೇ ತಡ ನೇರವಾಗಿ ಬಣ್ಣದ ಲೋಕಕ್ಕೆ ಧುಮುಕಿದವರು ಇವರು.
ತರುಣ್-ಸೋನಲ್ ಮದುವೆಗೆ ಕ್ಷಣಗಣನೆ... ನಟಿಯ ಭರ್ಜರಿ ಬ್ಯಾಚುಲರ್ ಪಾರ್ಟಿ ಹೇಗಿತ್ತು ನೋಡಿ...!