Asianet Suvarna News Asianet Suvarna News

ಹೆಂಡ್ತಿ ಒಬ್ಬಳೇ ಅಳುತ್ತಿದ್ದಳು, 2 ಸಲ ಆಶ್ರಮಕ್ಕೆ ಸೇರಲು ಪ್ರಯತ್ನ ಪಟ್ಟಿದ್ದಾಳೆ: ನಟ ವಿನಯ್ ಭಾವುಕ ಮಾತು

ಇಸ್ಮಾರ್ಟ್‌ ಜೋಡಿಯಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ ವಿನಯ್ ಗೌಡ. ಪತ್ನಿಯಿಂದಲೇ ನನ್ನ ಜೀವನ ಸರಿ ದಾರಿಗೆ ಬಂತು ಎಂದ ನಟ...

Actor Vinay gowda shares about wife Akshatha pregnancy vcs
Author
Bangalore, First Published Aug 8, 2022, 2:51 PM IST

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಇಸ್ಮಾರ್ಟ್‌ ಜೋಡಿ ರಿಯಾಲಿಟಿ ಶೋನಲ್ಲಿ ಕಿರುತೆರೆ ನಟ ವಿನಯ್ ಗೌಡ ಮತ್ತು ಪತ್ನಿ ಅಕ್ಷತಾ ಸ್ಪರ್ಧಿಸುತ್ತಿದ್ದಾರೆ. ಮನಸ್ಸು ಬಿಚ್ಚಿ ಮಾತನಾಡುವ ಎಪಿಸೋಡ್‌ನಲ್ಲಿ ಪತ್ನಿ ಅನುಭವಿಸಿರುವ ಮಾನಸಿಕ ನೋವುಗಳು ಮತ್ತು ತಮ್ಮ ಕುಟುಂಬ ಕಟ್ಟುವ ಸಮಯ ಹೇಗಿತ್ತು ಎಂದು ಹೇಳಿಕೊಂಡಿದ್ದಾರೆ.

ವಿನಯ್ ಮಾತು:

'ನನ್ನ ಹೆಂಡತಿ ಇಲ್ಲ ಅಂದ್ರೆ ನಾನಿಲ್ಲ. ಆಕೆ ನನ್ನನ್ನು ಮಗು ರೀತಿ ನೋಡಿಕೊಳ್ಳುತ್ತಾಳೆ. ಆಕೆ ಬಂದ ಮೇಲೆ ಜೀವನ ಬದಲಾಗಿತ್ತು ಪದಗಳಲ್ಲಿ ನಾನು ಹೇಳುವುದಕ್ಕೆ ಅಗೋಲ್ಲ. ಅವಳು ಇರಲಿಲ್ಲ ಅಂದ್ರೆ ನಾನು ಝಿರೋ...ಅಪ್ಪ ಅಮ್ಮ ಇಲ್ಲ ಹೇಳೋರು ಇಲ್ಲ ಕೇಳೋರು ಇಲ್ಲ ಏನಾಗುತ್ತಿದ್ದೆ ಗೊತ್ತಿಲ್ಲ' ಎಂದು ಹೇಳುವ ಮೂಲಕ ಪತ್ನಿ ಬಗ್ಗೆ ವಿನಯ್ ಮಾತು ಶುರು ಮಾಡುತ್ತಾರೆ.

Actor Vinay gowda shares about wife Akshatha pregnancy vcs

'ನನ್ನ ಪತ್ನಿ ಗರ್ಭಿಣಿಯಾದಾಗ ಸ್ಕ್ಯಾನಿಂಗ್‌ನಲ್ಲಿ ಒಂದು ದಿನ ಮಾರ್ಕರ್‌ಗಳು ಇರುತ್ತದೆ ಅಂದ್ರು. ಡಾಕ್ಟರ್‌ ಹೇಳಿದ್ದರು ಮಂಗೋಲಿಸಮ್‌ ಇದೆ ಮಗುವಿಗೆ ಅಬ್‌ನಾರ್ಮಲ್‌ ಆಗಿ ಮಗು ಹುಟ್ಟುತ್ತೆ ಎಂದು ಹೇಳಿದ್ದರು. ನಮಗೆ ತುಂಬಾ ಬೇಸರ ಆಯ್ತು. ನನಗಿಂತ ಹೆಚ್ಚಾಗಿ ಆಕೆಗೆ ಬೇಸರ ಆಯ್ತು ಏಕೆಂದರೆ ನಾನು ಫೀಲ್ ಮಾಡೋಕೆ ಆಗೋಲ್ಲ. ಎಲ್ಲಿ ನನಗೆ ಗೊತ್ತಾಗುತ್ತದೆ ಅಂತ ಆಕೆ ಒಬ್ಬಳೇ ಆಳುತ್ತಿರುವುದು ನನಗೆ ಗೊತ್ತಿತ್ತು. ಆ ಸಮಯಲ್ಲಿ ನಾನು ಹೇಗೆ ರಿಸೀವ್ ಮಾಡಬೇಕು ರಿಯಾಕ್ಟ್‌ ಮಾಡಬೇಕು ಅಂತ ಗೊತ್ತಿರಲಿಲ್ಲ. ಆ ಸಮಯಲ್ಲಿ ನಾನು ಸಪೋರ್ಟ್‌ ಮಾಡೋಕು ಆಗಲಿಲ್ಲ ನನದೇ ಲೋಕದಲ್ಲಿದ್ದೆ. ನೀನು ತುಂಬಾ ನರಳಿರುವೆ' ಎಂದು ವಿನಯ್ ಮಾತನಾಡಿದ್ದಾರೆ.

ಕತ್ತು ಹಿಸುಕಿ ನನ್ನನ್ನು ಜಾಡಿಸಿ ಒದ್ದಿದ್ದಾನೆ ಈ ಎಕ್ಸ್‌ ಬಾಯ್‌ಫ್ರೆಂಡ್: BIGG BOSS ಸಾನ್ಯ ಅಯ್ಯರ್‌

'ಈ ಫ್ಯಾಮಿಲಿಗಳು ಅದರ ಬಾಂಡಿಂಗ್‌ ಎಲ್ಲವೂ ನನಗೆ ಡೆಡ್ ಆಗಿತ್ತು. ಅಪ್ಪ ಅಮ್ಮ ಅವರದ್ದು ಡಿವೋರ್ಟ್‌ ಆಯ್ತು ಅದರ ಬಗ್ಗೆ ನಾನು ಏನೂ ಹೇಳುವುದಿಲ್ಲ ಏಕೆಂದರೆ ಇದೆಲ್ಲಾ ನೋಡಿ ನಾನು ಫುಲ್ ಬ್ಲ್ಯಾಂಕ್ ಆಗಿದೆ. ಯಾರೂ ಬೇಡ ನನಗೆ ಅಂತ ನಾನು ಮುಂಬೈಗೆ ಹೋದೆ. ಬೆಂಗಳೂರಿಗೆ ಬಂದಾಗ ಆಕೆಗೆ ಕರೆ ಮಾಡೋಣ ಅಂತ ಮಾಡಿದೆ. ಒಂದು ಮಾತು ಹೇಳಿದ್ದ ಬಂದೇ ಬರ್ತಿನಿ ಅಂತ. ಆಕೆ ಹೇಳಿದ್ದಳು ನಾನು ನಿನಗೆ ಕಾಯುತ್ತಿರುವೆ. ಆಕೆ ಹೇಳಿದಾಗ ಪದಗಳೇ ಇರಲಿಲ್ಲ. ನನ್ನ ಜೀವಕ್ಕೂ ಒಬ್ರು ಪ್ರಾಮುಖ್ಯತೆ ನೀಡುತ್ತಾರೆ ಅಂದ್ರೆ ಪುಣ್ಯ. ನಮ್ಮ ಮಾವ ಪೊಲೀಸ್ ಆಫೀಸರ್ ಮದುವೆಗೆ ಒಪ್ಪಲಿಲ್ಲ ಆದರೆ ಆಕೆ ಬಿಡಲಿಲ್ಲ ಮದುವೆ ಅಂತ ಆದರೆ ಅದು ವಿನಯ್‌ನೇ ಅಂತ ಹೇಳಿದ್ದಳು. ಎರಡು ಸಲ ಗುರು ಪೂರ್ಣಮಿ ದಿನ ಆಕೆ ಮಠ ಸೇರಿಕೊಳ್ಳುತ್ತೀನಿ ಅಂತ ಹೋಗಿದ್ದಳು, ಎರಡು ಸಲನೂ ನಿನಗೆ ಟೈಂ ಬಂದಿಲ್ಲ ಅಂತ ಹೇಳಿ ಕಳುಹಿಸಿದ್ದಾರೆ' ಎಂದು ವಿನಯ್ ಹೇಳಿದ್ದಾರೆ.

'ಗುರು ಪೂರ್ಣಮಿ ದಿನ ನಾವು ಈ ವೇದಿಕೆ ಮೇಲೆ ಮತ್ತೆ ಮದುವೆ ಆದಾಗ ಆ ಖುಷಿನ ಹೇಳಿಕೊಳ್ಳುವುದಕ್ಕೆ ಆಗಲಿಲ್ಲ. ಮೈಂಡ್‌ ಫುಲ್ ಬ್ಲ್ಯಾಂಕ್ ಆಯ್ತು. ಯಾಕಂದ್ರೆ ಅವಳಿಗೆ ಆ ರೀತಿ ಮದುವೆ ಕೊಡಲು ಆಗಲಿಲ್ಲ. ಈ ವೇದಿಕೆ ಮೇಲೆ ಮದುವೆ ಮಾಡಿಸಿದಕ್ಕೆ ನಿಮಗೆ ಧನ್ಯವಾದಗಳನ್ನು ಹೇಳಬೇಕು' ಎಂದಿದ್ದಾರೆ ವಿನಯ್.

Follow Us:
Download App:
  • android
  • ios