Asianet Suvarna News Asianet Suvarna News

ಫೇಕ್ ಪ್ರೊಫೈಲ್‌; ನೆಟ್ಟಿಗರಿಗೆ ಎಚ್ಚರಿಸಿದ ಮಿಥುನ್ ತೇಜಸ್ವಿ

ಹೆಚ್ಚಾಗುತ್ತಿದೆ ಫೇಸ್‌ ಪ್ರೊಫೈಲ್ ಹಾವಳಿ. ಸಿಟ್ಟಿಗೆದ್ದು ಹುಷಾರಾಗಿರಿ ಎಂದ ನಟ.
 

Actor Mithun tejasvi disappointed with fake profiles on social media vcs
Author
Bangalore, First Published Aug 10, 2021, 12:55 PM IST

ಕಿರುತೆರೆ ಲೋಕದ ಜನಪ್ರಿಯ ನಟ ಮಿಥುನ್ ತೇಜಸ್ವಿ ಅವರ ಹೆಸರಿನಲ್ಲಿ ಅನೇಕ ಫೇಕ್ ಪ್ರೊಫೈಲ್ ಕ್ರಿಯೇಟ್ ಆಗುತ್ತಿರುವುದು ನಟನ ಗಮನಕ್ಕೆ ಬಂದಿದೆ. ಈ ಖಾತೆಗಳಿಂದ ಫ್ರೆಂಡ್ ರಿಕ್ವೆಸ್ಟ್ ಬಂದರೆ ದಯವಿಟ್ಟು ಒಪ್ಪಿಕೊಳ್ಳಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. 

'ಮತ್ತೊಂದು ಫೇಕ್ ಪ್ರೊಫೈಲ್. ದಯವಿಟ್ಟು ಈ ಪೇಜ್ ಒಪ್ಪಿಕೊಳ್ಳಬೇಡಿ. ಈ ಪೇಜ್‌ ಅನ್ನು ರಿಪೋರ್ಟ್ ಮಾಡಿ,' ಎಂದು ಫೇಕ್ ಅಕೌಂಟ್ ಫೋಟೋ ಹಂಚಿ ಕೊಂಡು ಬರೆದುಕೊಂಡಿದ್ದಾರೆ. ಹೀಗಾಗುತ್ತಿರುವುದು ಇದೇ ಮೊದಲಲ್ಲ. ಹಲವು ಫೇಕ್ ಅಕೌಂಟ್ಸ್ ಕ್ರಿಯೇಟ್ ಆಗಿವೆ, ಇ-ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಮಿಥುನ್ ಮಾತನಾಡಿದ್ದಾರೆ. 'ನನ್ನ ಹೆಸರಿನಲ್ಲಿ ಫೇಕ್ ಪ್ರೊಫೈಲ್ ಯಾರು ಕ್ರಿಯೇಟ್ ಮಾಡುತ್ತಿದ್ದಾರೆಂದು ನನಗೆ ಗೊತ್ತಿಲ್ಲ. ಇವೆಲ್ಲಾ ನೋಡಿ ನನಗೆ ಶಾಕ್ ಆಗುತ್ತಿದೆ. ಯಾವ ರೀತಿ ಫೇಕ್ ಖಾತೆ ತೆರೆದಿದ್ದಾರೆ ಅಂದ್ರೆ ನೋಡಲು ಸೇಮ್ ನಿಜವಾದ ಖಾತೆ ಅನಿಸಬೇಕು ಹಾಗೆ ಮಾಡಿದ್ದಾರೆ.  9 ಗಂಟೆ ಸುಮಾರಿಗೆ ಫೇಸ್ ಅಕೌಂಟ್ ಬಗ್ಗೆ ತಿಳಿದು ಬಂತು. ನನ್ನ ಸಿನಿ ಸ್ನೇಹಿತರಿಂದ ನನಗೆ ಕರೆ ಬಂದು. ಈ ಫೇಕ್ ಅಕೌಂಟ್‌ನಿಂದ ನನ್ನ ಸಿನಿ ಸ್ನೇಹಿತರಿಗೆ ಮೆಸೇಜ್ ಮಾಡುತ್ತಿದ್ದಾರೆ,' ಎಂದು ಮಿಥುನ್ ಹೇಳಿದ್ದಾರೆ. 

ನೆಟ್ಟಿಗನ ವಿರುದ್ಧ ಸೈಬರ್‌ ಕ್ರೈಂನಲ್ಲಿ ದೂರು ದಾಖಲಿಸಿದ ನಟ ವಿನೋದ್ ರಾಜ್!

'ಫೇಕ್ ಅಕೌಂಟ್ ತೆರೆದಿರುವ ವ್ಯಕ್ತಿ ನನ್ನನ್ನು ಬ್ಲಾಕ್ ಮಾಡಿದ್ದಾರೆ.  ನಾನು ಅಕೌಂಟ್ ಫೋಟೋ ಶೇರ್ ಮಾಡಿಕೊಂಡು ನನ್ನ ಸ್ನೇಹಿತರಿಗೆ ಬ್ಲಾಕ್ ಹಾಗೂ ರಿಪೋರ್ಟ್ ಮಾಡಲು ಹೇಳುತ್ತಿರುವೆ' ಎಂದಿದ್ದಾರೆ,. ಕೆಲವು ದಿನಗಳ ಹಿಂದೆ ನಟ ಕಿರಣ್ ರಾಜ್, ಮಾನಸ ಜೋಶಿ ಕೂಡ ಇದೇ ರೀತಿ ತೊಂದರೆ ಎದುರಿಸಿದ್ದರು.

Follow Us:
Download App:
  • android
  • ios