Asianet Suvarna News Asianet Suvarna News

ಭಗವದ್ಗೀತೆ, ಕಗ್ಗದ ಸಾಲುಗಳ ಮೂಲಕವೇ ಚಕಾಚಕ್‌ ಜಾದೂ ಮಾಡಿದ ನಟ ಎಂ.ಡಿ ಕೌಶಿಕ್!

ಭಗವದ್ಗೀತೆ, ಕಗ್ಗದ ಸಾಲು ಹೇಳುತ್ತಲೇ ಚಕಾಚಕ್‌ ಎಂದು ಜಾದೂ ಮಾಡಿದ್ದಾರೆ  ನಟ, ಜಾದೂಗಾರ ಎಂ.ಡಿ ಕೌಶಿಕ್! ಅವರು ಮಾಡಿರುವ ಜಾದೂ ಹೇಗಿದೆ ನೋಡಿ...

 

Actor magician M D Kaushik performed the magic while reciting a line of Bhagavad Gita and Kagga suc
Author
First Published Sep 4, 2024, 4:27 PM IST | Last Updated Sep 4, 2024, 4:32 PM IST

 ಸಿನಿಮಾ ಪ್ರಿಯರಿಗೆ ಎಂ.ಡಿ.ಕೌಶಿಕ್‌ ಹೆಸರು ಚಿರಪರಿಚಿತ.  ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿರುವ ಇವರು,  ನಟ, ನಿರ್ದೇಶಕ, ಬರಹಗಾರ, ನಿರ್ಮಾಪಕ ಮತ್ತು ಗೀತರಚನೆಕಾರ ಮಾತ್ರವಲ್ಲದೇ ಅದ್ಭುತ ಜಾದೂಗಾರ ಕೂಡ ಹೌದು. ಬರಹಗಾರ ಮತ್ತು ನಿರ್ದೇಶಕರಾಗಿ ತಮ್ಮ ಚೊಚ್ಚಲ ಪ್ರವೇಶವನ್ನು ಮಾಡಿದ ಕೌಶಿಕ್ 1987 ರಲ್ಲಿ ನೀರ್ನಳ್ಳಿ ರಾಮಕೃಷ್ಣ ಮತ್ತು ತಾರಾ ವೇಣು ಅಭಿನಯದ ಮುಖವಾದ ಚಿತ್ರದೊಂದಿಗೆ ಸಿನಿ ಪಯಣವನ್ನು ಆರಂಭಿಸಿರುವವರು.

ಇದೀಗ ಕೌಶಿಕ್‌ ಅವರು ಭಗವದ್ಗೀತೆ ಮತ್ತು ಮಂಕುತಿಮ್ಮನ ಕಗ್ಗದ ಸಾಲುಗಳನ್ನು ಹೇಳುತ್ತಲೇ ಜಾದೂ ಮಾಡಿದ್ದಾರೆ. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಸಿಹಿ ಕಹಿ ಚಂದ್ರು ಅವರು ನಡೆಸಿಕೊಡುವ ಬೊಂಬಾಟ್‌ ಭೋಜನ ಕಾರ್ಯಕ್ರಮದಲ್ಲಿ ಕೌಶಿಕ್‌ ಅವರು ಜಾದೂ ಪ್ರದರ್ಶನ ನೀಡಿದ್ದಾರೆ. ಮೊದಲಿಗೆ ಅವರು ಭಗವದ್ಗೀತೆಯ ಸಾಲುಗಳನ್ನು ಹೇಳಿದ್ದಾರೆ. ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ, ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ ||  ಇದರ ಅರ್ಥ, ಆತ್ಮವನ್ನು ಶಸ್ತ್ರಗಳು ಕತ್ತರಿಸಲಾರವು, ಬೆಂಕಿಯು ಸುಡಲಾರದು, ನೀರು ತೇವ ಮಾಡಲಾರದು ಮತ್ತು ಗಾಳಿಯು ಒಣಗಿಸಲಾರದು ಎನ್ನುತ್ತಲೇ ಬದುಕಿನಲ್ಲಿ ಈ ಶ್ಲೋಕ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸಿದ್ದಾರೆ.

ಆಗಿದ್ದು ಆಯ್ತು, ಜೀವನದಲ್ಲಿ ಮುಂದಕ್ಕೆ ಹೋಗು ಅಂತಾರೆ... ಎನ್ನುತ್ತಲೇ ವಿಜಯ ರಾಘವೇಂದ್ರ ಹೇಳಿದ್ದೇನು?

ಬದುಕು ಖಾಲಿ ಹಾಳೆ ಎನ್ನುತ್ತಲೇ ಖಾಲಿ ಪಟ್ಟಿಯನ್ನು ತೋರಿಸಿದ್ದಾರೆ. ಬಳಿಕ ಅದರಲ್ಲಿ ಒಂದಿಷ್ಟು ತಿಳಿವಳಿಕೆ ತುಂಬಿದಾಗ ಹೇಗೆ ಇರುತ್ತದೆ ಎಂದಾಗ ಆ ಪಟ್ಟಿಯಲ್ಲಿ ಕೆಲವೊಂದು ಚಿತ್ತಾರ ಮೂಡಿದೆ. ಬದುಕನ್ನು ಇನ್ನೂ ಕಲರ್‌ಫುಲ್‌ ಆಗಿ ಇಟ್ಟುಕೊಳ್ಳುವುದು ನಮ್ಮ ಕೈಯಲ್ಲಿದೆ ಎಂದು ಟಕ್‌ ಎಂದಾಗ ಅದೇ ಪಟ್ಟಿಯಲ್ಲಿ ಬಣ್ಣದ ಚಿತ್ತಾರ ಮೂಡಿದೆ. ಹೀಗೆ ಬದುಕಿನ ಬಗ್ಗೆ ಮಂಕುತಿಮ್ಮನ ಕಗ್ಗದಲ್ಲಿ ಉಲ್ಲೇಖವಾಗಿರುವ ಕಗ್ಗಗಳನ್ನೂ ಕೌಶಿಕ್‌ ಹೇಳಿದ್ದಾರೆ. ಇಂದು ಮದುವೆಯ ಹಬ್ಬ; ನಾಳೆ ವೈಕುಂಠ ತಿಥಿ ಇಂದು ಮೃಷ್ಟಾನ್ನ ಸುಖ ; ನಾಳೆ ಭಿಕ್ಷಾನ್ನ ಇಂದು ಬರಿಯುಪವಾಸ ; ನಾಳೆ ಪಾರಣೆ-ಯಿಂತು ಸಂದಿರುವುದನ್ನಋಣ - ಮಂಕುತಿಮ್ಮ ಎನ್ನುವ ಡಿ.ವಿ.ಗುಂಡಪ್ಪ ಅವರ ಕಗ್ಗವನ್ನು ಹೇಳುತ್ತಲೇ ಮತ್ತೊಂದು ಜಾದೂ ಮಾಡಿದ್ದಾರೆ. ನಮಗೆ ಇರುವುದು ಒಂದೇ ಮುಖವಾದರೂ, ನಮ್ಮೊಳಗೆ ಹಲವಾರು ರೀತಿಯ ಮುಖಗಳು ಇರುತ್ತವೆ. ಹಲವಾರು ಪ್ರಾಣಿಗಳು  ನಮ್ಮೊಳಗೇ ಇರುತ್ತವೆ ಎಂದು ತೋರಿಸುವ ಜಾದೂ ಮಾಡಿದ್ದಾರೆ. 
 
ಇದರ ಜೊತೆಗೆ, ನಮ್ಮ ಜೀವನದಲ್ಲಿ ಇರುವ ಗಂಟುಗಳ ಬಗ್ಗೆ ತಿಳಿಸಿದ್ದಾರೆ. ಒಂದೇ ಒಂದು ಗಂಟು ಇದ್ದರೂ ನಮ್ಮ ಬದುಕನ್ನು ಹೇಗೆ ನಾವು ಜಟಿಲ ಮಾಡಿಕೊಳ್ಳುತ್ತೇವೆ ಎನ್ನುವ ಬಗ್ಗೆ ತಿಳಿಸುತ್ತಲೇ ಗಂಟಿನ ಮ್ಯಾಜಿಕ್‌ ಕೂಡ ಮಾಡಿದ್ದಾರೆ. ಇದೇ ವೇಳೆ ಒಂದಷ್ಟು ಪೇಪರ್‌ಗಳನ್ನು ಬಾಯಿಯ ಒಳಗೆ ಹಾಕಿಕೊಂಡು, ಬಳಿಕ ಸರವನ್ನು ಬಾಯಿಯಿಂದ ತೆಗೆದಿದ್ದಾರೆ. ಹೀಗೆ ಭಗವದ್ಗೀತೆ ಮತ್ತು ಮಂಕುತಿಮ್ಮನ ಕಗ್ಗದ ಸಾರವನ್ನು ಹೇಳುತ್ತಲೇ ಜಾದೂ ಮಾಡಿದ್ದಾರೆ. 

Latest Videos
Follow Us:
Download App:
  • android
  • ios