Asianet Suvarna News Asianet Suvarna News

ಆಗಿದ್ದು ಆಯ್ತು, ಜೀವನದಲ್ಲಿ ಮುಂದಕ್ಕೆ ಹೋಗು ಅಂತಾರೆ... ಎನ್ನುತ್ತಲೇ ವಿಜಯ ರಾಘವೇಂದ್ರ ಹೇಳಿದ್ದೇನು?

ಪತ್ನಿ ಸ್ಪಂದನಾ ಮತ್ತು ತಮ್ಮ ಸಂಬಂಧ ಯಾವ ರೀತಿಯದ್ದು ಎಂದು ಹೇಳುತ್ತಲೇ ಜೀವನದಲ್ಲಿ ಮುಂದೆ ಸಾಗುವ ಬಗ್ಗೆ ನಟ ವಿಜಯ ರಾಘವೇಂದ್ರ ಹೇಳಿದ್ದೇನು?
 

actor Vijay Raghavendra about his wife Spandana and their relationship in an inerview suc
Author
First Published Sep 4, 2024, 2:41 PM IST | Last Updated Sep 4, 2024, 2:41 PM IST

ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಸಾವನ್ನಪ್ಪಿ ಒಂದು ವರ್ಷ ಕಳೆದೇ ಹೋಗಿದೆ. 2023 ರ ಕಳೆದ ಆಗಸ್ಟ್​ ತಿಂಗಳಿನಲ್ಲಿ,  ಸ್ಪಂದನಾ ಅವರು ತಮ್ಮ ಸ್ನೇಹಿತೆಯರೊಟ್ಟಿಗೆ ಬ್ಯಾಂಕಾಕ್ (Bangkok) ಹೋಗಿದ್ದಾಗ ಅವರಿಗೆ ಹೃದಯ ಸ್ತಂಭನವಾಗಿ ನಿಧನರಾಗಿದ್ದಾರೆ.   ಈ ಅಕಾಲಿಕ ಸಾವು ಎಲ್ಲರಿಗೂ ಆಘಾತವನ್ನು ಉಂಟು ಮಾಡಿತ್ತು. ಇದು ಭಾರಿ ಮಟ್ಟದಲ್ಲಿ ಸುದ್ದಿಯೂ ಆಗಿತ್ತು. ಪತ್ನಿಯನ್ನು ಕಳೆದುಕೊಂಡಿರುವ ನಟ ವಿಜಯ ರಾಘವೇಂದ್ರ ಅವರು ಇಂದಿಗೂ, ಪತ್ನಿಯ ನೆನಪುಗಳನ್ನು ಮೆಲುಕು ಹಾಕುತ್ತಲೇ ಇರುತ್ತಾರೆ. ಸೋಷಿಯಲ್​ ಮೀಡಿಯಾದಲ್ಲಿ ಪತ್ನಿ ಜೊತೆಗಿನ ಸವಿ ನೆನಪುಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ.  ಮೊನ್ನೆಯಷ್ಟೇ ದಂಪತಿ ಮದುವೆಯಾಗಿ 17 ವರ್ಷವಾಗಿದ್ದು, ಮಗ ಅದನ್ನು ಆಚರಿಸಿದ್ದ. ಈ ವೇಳೆಯೂ ವಿಜಯ ರಾಘವೇಂದ್ರ ಭಾವುಕರಾಗಿದ್ದರು.
 
ಇದೀಗ ಮತ್ತೆ ಪತ್ನಿ ಸ್ಪಂದನಾರನ್ನು ವಿಜಯ ರಾಘವೇಂದ್ರ ನೆನೆದಿದ್ದಾರೆ. ಆಗಿದ್ದು ಆಯ್ತು ಜೀವನದಲ್ಲಿ ಮುಂದಕ್ಕೆ ಹೋಗು ಎಂಬ ಒತ್ತಾಯ ಬರುತ್ತಿದೆ ಎನ್ನುತ್ತಲೇ ತಮ್ಮ ಮತ್ತು ಪತ್ನಿ ಸ್ಪಂದನಾರ ಸಂಬಂಧದ ಕುರಿತು ಮಾತನಾಡಿದ್ದಾರೆ. ನಿಮ್ಮಥ ಗಂಡನೇ ಇಲ್ಲ, ನೀವೊಬ್ಬ ಅದ್ಭುತ ಗಂಡ ಎಂದೆಲ್ಲಾ ನನ್ನನ್ನು ಹೊಗಳುತ್ತಾರೆ. ನೀವು ತುಂಬಾ ಸ್ಟ್ರಾಂಗ್‌ ಎನ್ನುತ್ತಾರೆ. ಅಸಲಿಗೆ ಅವೆಲ್ಲಾ ಸುಳ್ಳು.  ನಾನು ಎಂಥವನು ಎಂದು ನನಗೆ ಚೆನ್ನಾಗಿ ಗೊತ್ತಿದೆ. ನಾನು ಒಳ್ಳೆಯ ಗಂಡ ಅಲ್ಲ, ಬದಲಿಗೆ ಸ್ಪಂದನಾ ಒಳ್ಳೆಯ ಪತ್ನಿ ಆಗಿದ್ದಳು. ನನ್ನ ವಿಚಾರದಲ್ಲಿ ಅವಳು ಎಷ್ಟು ಕಾಂಪ್ರಮೈಸ್‌ ಆಗಿದ್ದಳು ಎನ್ನುವ ಸತ್ಯ ನನಗೆ ಗೊತ್ತು ಎಂದು ಅಗಲಿದ ಪತ್ನಿಯನ್ನು ನೆನಪಿಸಿಕೊಂಡಿದ್ದಾರೆ.

ಅವಳಲ್ಲಿದ್ದ ಮೌನ ನನಗೆ ಬದುಕು ಕಟ್ಟುಕೊಟ್ಟಿದೆ: ಅಂತರಾಳದ ಮಾತು ಬಿಚ್ಚಿಟ್ಟ ವಿಜಯ್​ ರಾಘವೇಂದ್ರ

ಜೀವನದಲ್ಲಿ ಮೂವ್‌ ಆನ್‌ ಆಗು ಎಂದು ಒತ್ತಾಯ ಮಾಡುತ್ತಾರೆ. ಆದರೆ ಜೀವನದಲ್ಲಿ ಮುಂದೆ ಹೋಗಲು ನಮ್ಮದು ಮರೆತು ಹೋಗುವ ಸಂಬಂಧವಲ್ಲ, ಬಿಟ್ಟು ಮುಂದಕ್ಕೆ ಹೋಗುವ ಸಮಯ ಇದಲ್ಲ ಎಂದು ನಟ ವಿಜಯ್‌ ರಾಘವೇಂದ್ರ ಹೇಳಿದ್ದಾರೆ.  ಜೀವನದಲ್ಲಿ ಏನು ಬಂದರೂ ಅದನ್ನು ಎದುರಿಸುತ್ತೇನೆ. ಜೀವನದವನ್ನು ಪ್ರಶ್ನೆ ಮಾಡಲು ಹೋಗುವುದಿಲ್ಲ. ಪ್ರಶ್ನೆ ಮಾಡಿದ್ರೆ ಬೇಸರ, ಕಣ್ಣೀರು ಜಾಸ್ತಿ ಆಗುತ್ತದೆ. ಅದಕ್ಕಾಗಿಯೇ ಪ್ರಶ್ನೆ ಮಾಡುವುದನ್ನೇ ಬಿಟ್ಟುಬಿಟ್ಟಿದ್ದೇನೆ. ಜೀವನದಲ್ಲಿ ಅಕ್ಸಪ್ಟೆನ್ಸ್‌ ಇರಬೇಕು. ಅದನ್ನು ನಾನು ಮಾಡಿಕೊಂಡಿದ್ದೇನೆ. ಜೀವನ ಕೊಡುವ ಉತ್ತರ ಎಂದಿದ್ದಾರೆ. 

ಒಂದು ಕ್ಷಣಕ್ಕೆ ಒಂದು ಹೆಜ್ಜೆ ಅನ್ನುವ ರೀತಿಯ ಜೀವನ ನನ್ನದು. ಬದುಕಿನಲ್ಲಿ ಹೀಗೆಯೇ ಆಗುತ್ತದೆ ಎನ್ನುವುದು ಯಾರಿಗೂ ತಿಳಿದಿರುವುದೇ ಇಲ್ಲ. ಆದರೆ ಒಮ್ಮೊಮ್ಮೆ ದಿಢೀರನೆ ಆಗುವ ಘಟನೆಗಳು ಮನಸ್ಸನ್ನು ಎಷ್ಟು ಜರ್ಜರಿತರನ್ನಾಗಿ ಮಾಡುತ್ತದೆಯೋ ಅಷ್ಟೇ ಜೀವನವನ್ನು ಗಟ್ಟಿ ಕೂಡ ಮಾಡುತ್ತದೆ. ನನ್ನ ಲೈಫ್​ನಲ್ಲಿಯೂ ಹಾಗೆಯೇ  ಆಗಿಬಿಟ್ಟತು. ಜೀವನ ಸರಿಯಾಗಿ ಹೋಗುತ್ತಿರುವ ಸಂದರ್ಭದಲ್ಲಿ ಒಂದೇ ಸಲಕ್ಕೆ ಭಗವಂತ ಶಾಕ್​ ಕೊಟ್ಟು ಇಡೀ ಬದುಕನ್ನೇ ಅಲ್ಲಾಡಿಸಿಬಿಟ್ಟ. ಆದರೆ ಆ ಸಮಯದಲ್ಲಿ ನನ್ನ ಕುಟುಂಬ, ಸ್ನೇಹಿತರು, ಮೀಡಿಯಾಗಳು ಹಾಗೂ ಸಹೋದ್ಯೋಗಿಗಳು ನೀಡಿರುವ ಧೈರ್ಯವನ್ನು ನಾನೆಂದೂ ಮರೆಯಲು ಸಾಧ್ಯವಿಲ್ಲ ಎಂದು ಈ ಹಿಂದೆಯೂ ನಟ ಹೇಳಿದ್ದರು. 

ಶೂಟಿಂಗ್‌ ಅಂದ್ರೆ ಸುಮ್ನೇನಾ? ಬೈಕ್‌ನಲ್ಲಿ ನಟಿಯನ್ನು ಕರ್ಕೊಂಡು ಹೋಗೋದಕ್ಕೂ ಎಷ್ಟು ಸರ್ಕಸ್‌ ಮಾಡ್ತಾರೆ ನೋಡಿ...

Latest Videos
Follow Us:
Download App:
  • android
  • ios