ಇಂಗ್ಲಿಷ್‌ ಬರದೆ ಅವಮಾನ ಎದುರಿಸಿದ್ದ ಅವಿನಾಶ್; ರಿವೇಂಜ್ ತೆಗೆದುಕೊಂಡಿದ್ದು ಹೇಗೆಂದು ಬಹಿರಂಗ ಪಡಿಸಿದ ನಟ

ಇಂಗ್ಲಿಷ್‌ ಬರದೆ ಅವಮಾನ ಎದುರಿಸಿದ್ದ ಅವಿನಾಶ್ ಬಳಿಕ ರಿವೇಂಜ್ ತೆಗೆದುಕೊಂಡಿದ್ದು ಹೇಗೆಂದು ವೀಕೆಂಡ್ ವಿತ್ ರಮೇಶ್ ನಲ್ಲಿ ಬಹಿರಂಗ ಪಡಿಸಿದ್ದಾರೆ. 

Actor Avinash About his poor English in early days in weekend with ramesh sgk

ಕನ್ನಡ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದಿರುವ ವೀಕೆಂಡ್ ವಿತ್ ರಮೇಶ್‌ನ ಈ ವಾರದ ಅತಿಥಿಗಳಾಗಿ ಅವಿನಾಶ್ ಮತ್ತು ಮಂಡ್ಯ ರಮೇಶ್ ಕಾಣಿಸಿಕೊಂಡಿದ್ದಾರೆ.  ಈಗಾಗಲೇ ವೀಕೆಂಡ್ ಕುರ್ಚಿ ಮೇಲೆ 5 ಅತಿಥಿಗಳು ಕುಳಿತಿದ್ದಾರೆ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಪ್ರಭುದೇವ, ಡಾ.ಮಂಜುನಾಥ್, ಹಿರಿಯ ನಟ ದತ್ತಣ್ಣ ಹಾಗೂ ಡಾಲಿ ಧನಂಜಯ್ ವೀಕೆಂಡ್ ವಿತ್ ರಮೇಶ್ ಸಾಧಕರ ಕುರ್ಚಿ ಏರಿದ್ದಾರೆ. ಈ ಬಾರಿಯ ಅತಿಥಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಎಳೆಯಲಾಗಿದೆ.

ಈಗಾಗಲ್ ನಟ ಅವಿನಾಶ್ ಅವರ ಪ್ರೋಮೋ ರಿಲೀಸ್ ಮಾಡಲಾಗಿದೆ. ವೀಕೆಂಡ್ ವಿತ್ ರಮೇಶ್ ಅಂದಮೇಲೆ ಸಾಕಷ್ಟು ವಿಚಾರಗಳು ಬಹಿರಂಗವಾಗಲಿದೆ. ಅಭಿಮಾನಿಗಳಿಗೆ ಗೊತ್ತಿರದ ಅನೇಕ ಇಂಟ್ರಸ್ಟಿಂಗ್ ವಿಚಾರಗಳು ತೆರೆದುಕೊಳ್ಳಲಿದೆ. ಅವಿನಾಶ್ ಅವರ ಬಗ್ಗೆಯೂ ಸಾಕಷ್ಟು ವಿಚಾರಗಳು ಬಹಿರಂಗವಾಗಿದ್ದು ಅವಿನಾಶ್ ಸಂಚಿಕೆ ನೋಡಲು ಅಭಿಮಾನಿಗಳು ಕಾರತರಾಗಿದ್ದಾರೆ.  ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ಅವಿನಾಶ್ ಪ್ರಾರಂಭದ ದಿನಗಳಲ್ಲಿ ಇಂಗ್ಲಿಷ್ ಬರದೆ ಅವಮಾನ ಎದುರಿಸಿದ್ದ ಬಗ್ಗೆ ಬಹಿರಂಗ ಪಡಿಸಿದ್ದಾರೆ. 

ಪೋಸ್ಟ್ ಗ್ರಾಜುಯೇಟ್ ಮಾಡಿದ್ದು ಇದೇ ಕಾರಣಕ್ಕೆ

ಪೋಸ್ಟ್ ಗ್ರಾಜುಯೇಟ್ ಮಾಡಿದ್ದು ಯಾಕೆಂದು ವಿವರಿಸಿದ ಅವಿನಾಶ್, 'ಈ ಬಗ್ಗೆ ಯಾರಿಗೂ ಗೊತ್ತಿಲ್ಲ, ನನಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಇಂಗ್ಲಿಷ್‌ಗೆ ತುಂಬಾ ಕಷ್ಟ ಪಡುತ್ತಿದ್ದೆ. ಒಮ್ಮೆ ಅಕ್ಕನ ಜೊತೆ ಯಾರದ್ದೋ ಮದುವೆಗೆ ಹೋಗಿದ್ದೆ, ಅಲ್ಲಿ ಹೆಸರೇನು ಅಂತ ಇಂಗ್ಲಿಷ್‌ನಲ್ಲಿ ಕೇಳಿದ್ರು ಅದು ಗೊತ್ತಾಯಿತು ಹೇಳಿದೆ. ವೇರ್ ಆರ್ ಯು ಪುಟ್ ಅಪ್ ಅಂತ ಕೇಳಿದರು. ಪುಟ್ ಅಪ್ ಅಂದರೆ ಏನು ಅಂತ ಗೊತ್ತಾಗಿಲ್ಲ. ಹೀಗಂದ್ರೆ ಮನೆಯಲ್ಲಿದೆ ಅಂತ ಅರ್ಥ, ನನಗೆ ಅದು ತುಂಬಾ ಅವಮಾನವಾಯ್ತು. ಥು..ಏನಿದು ಇಂಗ್ಲಿಷ್ ಕಲಿಬೇಕಂತ ನಾನು ಡಿಗ್ರಿಯಲ್ಲಿ ಇಂಗ್ಲಿಷ್ ತೆಗೆದುಕೊಂಡು, ಬಳಿಕ ಎಂಎ ಇಂಗ್ಲಿಷ್ ಮಾಡಿದೆ' ಎಂದು ಹೇಳಿದರು. ಆಗ ರಮೇಶ್ ಅರವಿಂದ್ ಮಾತನಾಡಿ, 'ಇಂಗ್ಲಿಷ್ ಲೆಕ್ಚರ್ ಕೂಡ ಆದ್ರಿ, ಇಂಗ್ಲಿಷ್ ನಾಟಕ ಮಾಡಿ ಎಲ್ಲಾ ರಿವೇಂಜ್ ತೆಗೆದುಕೊಂಡಿದ್ದೀರಾ' ಎಂದು ಹೇಳಿದರು. 

ದೇವರ ಮನೆಯಲ್ಲಿ ವಿಷ್ಣುವರ್ಧನ್ ಫೋಟೋ; ಆಪ್ತಮಿತ್ರನ ಮೇಲಿನ ಅಪಾರ ಪ್ರೀತಿ ಬಿಚ್ಚಿಟ್ಟ ಮಾಳವಿಕಾ-ಅವಿನಾಶ್

ಪ್ರೊಫೆಸರ್ ಯುಆರ್ ಅನಂತಮೂರ್ತಿ ಇಂಗ್ಲಿಷ್ ಕ್ಲಾಸ್ ಹೇಗಿತ್ತು ಎಂದು ವಿವರಿದ  ಅವಿನಾಶ್

ಮಾನಸ ಗಂಗೋತ್ರಿಯಲ್ಲಿ ಎಂಎ ಓದುವಾಗ ಅವಿನಾಶ್ ಅವರಿಗೆ ಪ್ರೊಫೆಸರ್ ಆಗಿದ್ದವರು ಯುಆರ್ ಅನಂತಮೂರ್ತಿ. ಅನಂತಮೂರ್ತಿ ಅವರ ಬಗ್ಗೆ ಅವಿನಾಶ್ ಇಂಟ್ರಸ್ಟಿಂಗ್ ಮಾಹಿತಿ ರಿವೀಲ್ ಮಾಡಿದ್ದಾರೆ. ಅವಿನಾಶ್ ಅವರಿಗೆ ತುಂಬಾ ಸ್ಫೂರ್ತಿ ನೀಡಿದ ವ್ಯಕ್ತಿ ಅನಂತಮೂರ್ತಿ.

'ಅದ್ಭುತವಾದ ಟೀಚರ್, ಅದೇ ನಮಗೆ ಮುಖ್ಯ. ಇಂಗ್ಲಿಷ್ ತರಗತಿಯಲ್ಲಿ ಕನ್ನಡದಲ್ಲಿ ಪಾಠ ಮಾಡುತ್ತಿದ್ದವರು ಅಂದರೆ ಅವರು ಒಬ್ಬರೇ. ಕನ್ನಡದಲ್ಲೇ  ಹೇಳಿಕೊಡುತ್ತಿದ್ದರು. ಇಂಗ್ಲಿಷ್ ಕ್ಲಾಸ್ ನಲ್ಲಿ ಕನ್ನಡ ತುಂಬಾ ಮಾತನಾಡುತ್ತಿದ್ದರು. ಅವರು ಹೇಳ್ತಾ ಇದ್ದ ಕಾರಣ ಇದು ಇಂಗ್ಲಿಷ್ ಭಾಷೆಯಲ್ಲ, ಇಂಗ್ಲಿಷ್ ಸಾಹಿತ್ಯ ಎಂದು. ಭಾಷೆ ಬೇರೆ ಸಾಹಿತ್ಯ ಬೇರೆ ಎಂದು ಹೇಳುತ್ತಿದ್ದರು. ಅದ್ಭುತವಾದ ವಿಮರ್ಶೆ ಮಾಡುತ್ತಿದ್ದರು. ಅಕ್ಕಮಹಾದೇವಿ ಅವರ ಸಾಹಿತ್ಯನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಯಾರ ಸಾಹಿತ್ಯ ಎಂದು ಕೇಳುತ್ತಿದ್ದರು' ಎಂದು ಅನಂತಮೂರ್ತಿ ಬಗ್ಗೆ ವಿವರಿಸಿದರು.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios