ಲಾಕ್‌ಡೌನ್‌ ಸಮಯದಲ್ಲಿ ಅತಿ ಹೆಚ್ಚು ವೀಕ್ಷಣೆ ಹಾಗೂ ಮೆಚ್ಚುಗೆ ಪಡೆದುಕೊಂಡ ಧಾರಾವಾಹಿಯೇ ಹಿಂದಿಯ 'ಮಹಾಭಾರತ'. ಪ್ರತಿಯೊಬ್ಬ ಪಾತ್ರಧಾರಿಯೂ ತನ್ನದೇಯಾದ ಅಭಿನಯದಿಂದ ಛಾರು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ ಅರ್ಜುನ ಪಾತ್ರಧಾರಿ ಶಾಹೀರ್‌ ಶೇಖ್‌ ಅತಿ ಹೆಚ್ಚು ಗಮನ ಸೆಳೆದವರು. ಇದಕ್ಕೆ ಕಾರಣವೇ ಬೇರೆ ಇದೆ....

ದ್ರೌಪದಿ ಕರ್ಣನನ್ನು ಗಂಡನಾಗಿ ಬಯಸಿದ್ದಳಾ? ಇಲ್ಲಿದೆ ಆ ಕತೆ

ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯ ನಟ-ನಟಿಯರ ವೈಯಕ್ತಿಕ ಜೀವನದ ಬಗ್ಗೆ ಚರ್ಚೆ ಆಗುವುದು ಕಾಮನ್. ಅವರ ಗರ್ಲ್‌ಫ್ರೆಂಡ್ ಯಾರು? ಯಾರ ಜೊತೆ ಸುತ್ತಾಡುತ್ತಿದ್ದಾರೆ ಎಂಬ ಪ್ರಶ್ನೆಗಳಿಗೆ ಊಹಾ ಪೋಹ ಉತ್ತರಗಳು ಸಿಗುತ್ತದೆ. ಆದಕ್ಕೆಲ್ಲಾ ದಾರಿ ಮಾಡಿಕೊಡುವುದು ಬೇಡ ಎಂದು ಶಾಹೀರ್‌ ತಮ್ಮ ಪ್ರೇಯಸಿ ಜೊತೆಗಿನ ಫೋಟೋ ರಿವೀಲ್ ಮಾಡಿದ್ದಾರೆ.

ಯಾರಾಕೆ?
ಶಾಹೀರ್‌ ಪ್ರೀತಿಸುತ್ತಿರುವುದು ನಿರ್ಮಾಪಕಿ ಏಕ್ತಾ ಕಪೂರ್ ಆಪ್ತ ಗೆಳತಿ ರುಚಿತಾ ಕಪೂರ್‌ ಅವರನ್ನು. ಏಕ್ತಾ ಕಪೂರ್ ನಿರ್ಮಾಣ ಸಂಸ್ಥೆಯಲ್ಲಿ ರುಚಿತಾ ಕ್ರಿಯೇಟಿವ್ ಪ್ರೊಡ್ಯುಸರ್, ಎಕ್ಸಿಕ್ಯೂಟಿವ್ ವಾಯ್ಸ್ ಪ್ರೆಸೆಂಟರ್ ಆಗಿ ಕೆಲಸ ಮಾಡುತ್ತಿದ್ದಾರೆ. 

 

 
 
 
 
 
 
 
 
 
 
 
 
 

Mommy there is something in the backyard.. #swipeleft #ikigai #madMe #girlwithcurls

A post shared by Shaheer Sheikh (@shaheernsheikh) on Oct 25, 2020 at 3:30am PDT

ಅನೇಕ ಖಾಸಗಿ ಕಾರ್ಯಕ್ರಮಗಳಲ್ಲಿ ರುಚಿತಾ ಹಾಗೂ ಶಾಹೀರ್ ಒಟ್ಟಾಗಿ ಕಾಣಿಸಿಕೊಂಡಿರುವ ಫೋಟೋಗಳು ವೈರಲ್ ಅಗಿದ್ದವು.

ಮಹಾಭಾರತಕ್ಕೆ ಸಂಬಂಧಿಸಿದ ಊರುಗಳು ಈಗೆಲ್ಲೆಲ್ಲಿವೆ ಗೊತ್ತಾ?

ಈ ಹಿಂದೆ ಶಾಹೀರ್‌ 'ನಿನ್ನಿಂದಲೇ' ನಟಿ ಏರಿಕಾ ಫರ್ನಾಂಡಿ ಅವರೊಂದಿಗೆ ಡೇಟ್ ಮಾಡುತ್ತಿದ್ದರು ಎಂಬ ಗುಸು ಗುಸು ಕೇಳಿ ಬಂದಿತ್ತು. 'ನಾವಿಬ್ಬರು ಒಳ್ಳೆಯ ಫ್ರೆಂಡ್ಸ್‌. ಜನರು ತಪ್ಪು ತಿಳಿದುಕೊಳ್ಳುತ್ತಿದ್ದಾರೆ,' ಎಂದು ಹೇಳಿ ಸ್ಪಷ್ಟನೆ ನೀಡಿದ್ದರು.