Asianet Suvarna News Asianet Suvarna News

ಮಹಾಭಾರತಕ್ಕೆ ಸಂಬಂಧಿಸಿದ ಊರುಗಳು ಈಗೆಲ್ಲೆಲ್ಲಿವೆ ಗೊತ್ತಾ?

ಮಹಾಭಾರತದಲ್ಲಿ ಕೇಳಿ ಬರುವ ಹಲವಾರು ನಗರಗಳು ಇಂದು ಎಲ್ಲೆಲ್ಲ ಇವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾದೀತು. ಏಕೆಂದರೆ ಅವು ಪಾಕಿಸ್ತಾನದಿಂದ ಹಿಡಿದು ಪಂಜಾಬ್‌ವರೆಗೆ, ಉತ್ತರಪ್ರದೇಶದಿಂದ ಅಸ್ಸಾಂವರೆಗೂ ಹಬ್ಬಿವೆ. 

Places of Modern India Associated with Mahabharata
Author
Bangalore, First Published Jul 16, 2020, 3:59 PM IST

ಗಾಂಧಾರ, ಕುರುಕ್ಷೇತ್ರ, ಮತ್ಸ್ಯ, ತಕ್ಷಶಿಲೆ, ಮಾದ್ರಾ, ಹಸ್ತಿನಾಪುರ ಹೀಗೆ ಮಹಾಭಾರತದಲ್ಲಿ ಹಲವಾರು ನಗರಗಳ ಹೆಸರುಗಳು ಬರುತ್ತವೆ. ಇವೆಲ್ಲ ನಿಜವಾಗಿಯೂ ಇರುವ ನಗರಗಳ ಹೆಸರೇ, ಅಥವಾ ಕಾಲ್ಪನಿಕವೇ ಎಂದೆಲ್ಲ ನೀವು ಹಲವಾರು ಬಾರಿ ಯೋಚಿಸಿರಬಹುದು.  ಆದರೆ, ಈ ಎಲ್ಲ ನಗರಗಳೂ ಉತ್ತರ ಭಾರತದಿಂದ ಪಾಕಿಸ್ತಾನದವರೆಗೆ ಹಬ್ಬಿ ಹರಡಿವೆ. 

ಗಾಂಧಾರ- ಸಿಂಧ್ ಪ್ರದೇಶ, ರಾವಲ್ಪಿಂಡಿ
ಧೃತರಾಷ್ಟ್ರನ ಪತ್ನಿ ಗಾಂಧಾರಿಯ ತವರೂರಾದ ಗಾಂಧಾರ ರಾಜ ಸುಬಲನ ಆಡಳಿತ ಕ್ಷೇತ್ರ. ಸುಬಲ ಮಹಾಭಾರತ ಯುದ್ಧವನ್ನು ಕುತಂತ್ರದಿಂದ ಸಾಧಿಸಿದ ಶಕುನಿಯ ತಂದೆಯೂ ಹೌದು. ಈತ ದುರ್ಯೋಧನನಿಗೆ ತಾಯಿಯ ಕಡೆಯಿಂದ ಮಾವನಾಗಬೇಕು. ಈ ಗಾಂಧಾರ ದೇಶ ಇಂದು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ಸಿಂಧ್ ಪ್ರದೇಶವಾಗಿದೆ. 

ವರ್ಕ್ ಫ್ರಂ ಹೋಂ ಆಯ್ತು, ಈಗಿನ ಟ್ರೆಂಡ್ ವರ್ಕ್ ಫ್ರಂ ಹಿಲ್ಸ್

ತಕ್ಷಶಿಲಾ- ರಾವಲ್ಪಿಂಡಿ, ಪಾಕಿಸ್ತಾನ
ಗಾಂಧಾರ ದೇಶದ ರಾಜಧಾನಿಯಾಗಿ ತಕ್ಷಶಿಲಾದ ಹೆಸರು ಮಹಾಭಾರತದಲ್ಲಿ ಕೇಳಿಬರುತ್ತದೆ. ತಕ್ಷಶಿಲೆಯು ಇಂದು ಪಾಕಿಸ್ತಾನದಲ್ಲಿರುವ ರಾವಲ್ಪಿಂಡಿಯೇ ಆಗಿದೆ. ಮಹಾಭಾರತ ಯುದ್ಧದ ಬಳಿಕ ಪಾಂಡವರೆಲ್ಲರೂ ಹಿಮಾಲಯಕ್ಕೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಪರೀಕ್ಷಿತನನ್ನು ರಾಜನನ್ನಾಗಿಸುತ್ತಾರೆ. ಆದರೆ, ಹಾವು ಕಚ್ಚಿದ ಕಾರಣ ಪರೀಕ್ಷಿತ ಮರಣವನ್ನಪ್ಪುತ್ತಾನೆ. ಆಗ ಆತನ ಪುತ್ರ ಜನಮೇಜಯ ನಾಗಯಜ್ಞ ಮಾಡಿ, ತಕ್ಷಶಿಲೆಯಲ್ಲಿರುವ ಎಲ್ಲ ಹಾವುಗಳನ್ನೂ ಹುಡುಕೀ ಹುಡುಕಿ ಕೊಲ್ಲಿಸುತ್ತಾನೆ. 

Places of Modern India Associated with Mahabharata

ಕೈಕೇಯ ಪ್ರದೇಶ- ಜಮ್ಮುಕಾಶ್ಮೀರದ ಉತ್ತರ ಗಡಿ
ಕೈಕೇಯವನ್ನು ಜಯಸೇನ ರಾಜ ಆಳುತ್ತಿರುತ್ತಾನೆ. ಈತ ವಾಸುದೇವನ ಸಹೋದರಿ ರಾಧಾದೇವಿಯನ್ನು ವಿವಾಹವಾಗುತ್ತಾನೆ. ಈತನ ಪುತ್ರ ವಿಂದ್ ಜರಾಸಂಧನಿಗೂ, ದುರ್ಯೋಧನನಿಗೂ ಸ್ನೇಹಿತನಾಗಿರುತ್ತಾನೆ. ಈತನಿಗೆ ತನ್ನ ತಂಗಿಯನ್ನು ದುರ್ಯೋಧನನಿಗೆ ವಿವಾಹ ಮಾಡಿಕೊಡಬೇಕೆಂದಿರುತ್ತದೆ. ಆದರೆ ಆಕೆ ಕೃಷ್ಣನನ್ನು ಪ್ರೀತಿಸುತ್ತಿರುತ್ತಾಳೆ. ಹಾಗಾಗಿ, ಕೃಷ್ಣನನ್ನೇ ವಿವಾಹವಾಗುತ್ತಾಳೆ. ಮಹಾಭಾರತದಲ್ಲಿ ಕೈಕೇಯ ಪ್ರದೇಶವು ವೀರ ಸೇನಾನಿಗಳಿಗೆ ಹೆಸರುವಾಸಿಯಾಗಿರುತ್ತದೆ. ಯುದ್ಧದಲ್ಲಿ ದುರ್ಯೋಧನ ಪರವಾಗಿ ಕೈಕೇಯದವರು ಹೋರಾಡುತ್ತಾರೆ. ಈ ಪ್ರದೇಶ ಈಗ ಜಮ್ಮು ಕಾಶ್ಮೀರದ ಉತ್ತರ ಗಡಿ ಪ್ರದೇಶವಾಗಿದೆ. 

ಮಾದ್ರಾ- ಜಮ್ಮುಕಾಶ್ಮೀರದ 1 ಬದಿಯ ಹಿಮಾಲಯ ಪ್ರದೇಶ
ವೇದಗಳ ಸಮಯದಲ್ಲಿ ಮಾದ್ರಾ ದೇಶ ಪ್ರಖ್ಯಾತವಾಗಿರುತ್ತದೆ. ಇದು ಇಂದು ಹಿಮಾಲಯದ ಒಂದು ಭಾಗವಾಗಿದೆ. ಇದನ್ನು ಉತ್ತರಕುರು ಎಂದೂ ಹೇಳುತ್ತಾರೆ. ಮಹಾಭಾರತದ ಸಮಯದಲ್ಲಿ ಇದು ಶಲ್ಯನ ರಾಜ್ಯವಾಗಿತ್ತು. ಆತನ ಸಹೋದರಿ ಮಾದ್ರಿಯನ್ನು ಪಾಂಡುವಿಗೆ ವಾವಾಹ ಮಾಡಿಕೊಡಲಾಗುತ್ತದೆ. ನಕುಲ ಹಾಗೂ ಸಹದೇವರು ಮಾದ್ರಿಯ ಮಕ್ಕಳು. 

ಉಜ್ಜನಕ್- ನೈನಿತಾಲ್, ಉತ್ತರ ಪ್ರದೇಶ
ಇದು ಇಂದು ಉತ್ತರ ಪ್ರದೇಶದ ನೈನಿತಾಲ್ ಜಿಲ್ಲೆಯ ಕಾಶಿಪುರ ಬಳಿ ಇದೆ. ಈ ಉಜ್ಜನಕ್‌ನಲ್ಲಿಯೇ ದ್ರೋಣಾಚಾರ್ಯರು ಪಾಂಡವರು ಹಾಗೂ ಕೌರವರಿಗೆ ಬಿಲ್ವಿದ್ಯೆ ಹೇಳಿಕೊಟ್ಟಿದ್ದು. ಇಲ್ಲಿ ಭೀಮ ದೊಡ್ಡದಾದ ಶಿವಲಿಂಗವನ್ನು ಪ್ರತಿಷ್ಠಾಪಿಸುತ್ತಾನೆ. ಹಾಗಾಗಿ, ಈ ಸ್ಥಳಕ್ಕೆ ಭೀಮಶಂಕರ ಎಂಬ ಹೆಸರೂ ಇದೆ. 

Places of Modern India Associated with Mahabharata

ಹಸ್ತಿನಾಪುರ- ಮೀರತ್ ಬಳಿ, ಉತ್ತರಪ್ರದೇಶ
ಮಹಾಭಾರತ ಕಾಲದ ವೈಭವೋಪೇತ ರಾಜ್ಯ ಹಸ್ತಿನಾಪುರ ಇಂದು ಮೀರತ್ ಬಳಿ ಇದೆ. ಕೌರವರು ಹಾಗೂ ಪಾಂಡವರ ರಾಜಧಾನಿ ಹಸ್ತಿನಾಪುರವಾಗಿತ್ತು. ದ್ಯೂತ ನಡೆದು ಪಾಂಡವರು ಸೋತದ್ದು ಇಲ್ಲಿವೇ. ವಿವಾಹವಾಗುವುದಿಲ್ಲವೆಂದು ಭೀಷ್ಮ ಪ್ರತಿಜ್ಞೆಗೈದದ್ದೂ ಇಲ್ಲಿಯೇ. 

ಕುರುಕ್ಷೇತ್ರ- ಅಂಬಾಲಾ, ಹರಿಯಾಣಾ
ಕುರುಕ್ಷೇತ್ರವು ಮಹಾಭಾರತದಲ್ಲಿ ಯುದ್ಧಭೂಮಿಯಾಗಿತ್ತು. ಹಾಗಾಗಿ, ಆ ಧರ್ಮಯುದ್ಧಕ್ಕೆ ಕುರುಕ್ಷೇತ್ರ ಯುದ್ಧ ಎಂದೇ ಹೆಸರಿದೆ. ಇದು ಇಂದು ಹರಿಯಾಣಾದ ಅಂಬಾಲದಿಂದ 40 ಕಿಲೋಮೀಟರ್ ದೂರದಲ್ಲಿದೆ. ಇದೇ ಸ್ಥಳದಲ್ಲಿ ಕೃಷ್ಣನು ಭಗವದ್ಗೀತೆಯನ್ನು ಬೋಧಿಸಿದ್ದು. ಇಂದು ಇಲ್ಲಿರುವ ಬ್ರಹ್ಮ ಸರೋವರ ಬಹಳ ಜನಪ್ರಿಯವಾಗಿದ್ದು, ಸೂರ್ಯ ಗ್ರಹಣದ ಸಂದರ್ಭದಲ್ಲಿ ಯಾತ್ರಾರ್ತಿಗಳು ಇಲ್ಲಿ ಂಬದು ಕೆರೆಯಲ್ಲಿ ಮುಳುಗೇಳುತ್ತಾರೆ. ಮಹಾಭಾರತ ಯುದ್ಧಕ್ಕೂ ಮುನ್ನ ಇದೇ ಬ್ರಹ್ಮಕುಂಡದಲ್ಲಿ ಕೃಷ್ಣ ಹಾಗೂ ಯಾದವರು ಬಂದು ಮುಳುಗೆದ್ದಿದ್ದರು ಎನ್ನಲಾಗಿದೆ. 

ಪಾಂಚಾಲ- ಹಿಮಾಲಯದ ಬಳಿ, ಉತ್ತರ ಪ್ರದೇಶ
ಪಾಂಚಾಲದ ಅರ್ಧ ರಾಜ್ಯ ದ್ರೌಪದಿಯ ತಂದೆ ದ್ರುಪದನಾಗಿದ್ದರೆ, ಮತ್ತರ್ಧವನ್ನು ದ್ರೋಣಾಚಾರ್ಯರು ಹೊಂದಿದ್ದರು. ಇಂದು ಈ ಸ್ಥಳ ಚಂಬಾ ನದಿ ಹಾಗೂ ಹಿಮಾಲಯದ ನಡುವೆ ಇದೆ. 

ಹಿಮಾಲಯದ ತಪ್ಪಲಲ್ಲಿ ವರ್ಕ್ ಫ್ರಂ ಹೋಮ್; ಹೀಗೊಂದು ಕ್ವಾರಂಟೈನ್ ಟೂರ್

ಇಂದ್ರಪ್ರಸ್ಥ- ಹೊಸದಿಲ್ಲಿ
ಪಾಂಡವರು ಖಾಂಡವವನವನ್ನು ಕಡಿದು, ದೇವತೆಗಳ ವಾಸ್ತುಶಿಲ್ಪಿ ವಿಶ್ವಕರ್ಮನ ಯೋಜನೆಯಂತೆ ಹೊಸದಾಗಿ ಕಟ್ಟಿದ ಭವ್ಯ ನಗರ ಇಂದ್ರಪ್ರಸ್ಥ. ಇಂದು ಇದು ಹೊಸದಿಲ್ಲಿಯ ದಕ್ಷಿಣಕ್ಕಿದೆ. ಈಗಲೂ ಇಲ್ಲಿನ ಸಣ್ಣಪ್ರದೇಶವನ್ನು ಇಂದ್ರಪ್ರಸ್ಥ ಎನ್ನಲಾಗುತ್ತದೆ. 

ಅಂಗದೇಶ- ಗೊಂಡಾ, ಉತ್ತರ ಪ್ರದೇಶ
ಕರ್ಣನಿಗೆ ಆಳ್ವಿಕೆಗಾಗಿ ದುರ್ಯೋಧನ ನೀಡಿದ್ದ ರಾಜ್ಯ ಅಂಗದೇಶ ಇಂದು ಉತ್ತರ ಪ್ರದೇಶದ ಗೊಂಡಾ ಎಂಬ ಸ್ಥಳವಾಗಿದೆ. ದುರ್ಯೋಧನನಿಗೆ ಈ ಸ್ಥಳ ಜರಾಸಂಧನಿಂದ ಉಡುಗೊರೆಯಾಗಿ ಸಿಕ್ಕಿತ್ತು. ಇದಕ್ಕೆ ಮಾಲಿನೀ ನಗರ ಎಂಬ ಹೆಸರೂ ಇತ್ತು. 

ಏಕಚಕ್ರಾನಗರಿ- ಆರಾ, ಬಿಹಾರ
ಮಹಾಭಾರತದ ಸಮಯದಲ್ಲಿ ಇಂದಿನ ಆರ್ಹಾ ಏಕಚಕ್ರಾನಗರಿ ಎಂಬ ಹೆಸರು ಪಡೆದಿತ್ತು. ಕೆಲ ದಿನಗಳ ಕಾಲ ಪಾಂಡವರು ಇಲ್ಲಿನ ಬ್ರಾಹ್ಮಣನೊಬ್ಬನ ಮನೆಯಲ್ಲಿ ತಂಗಿದ್ದರು ಎಂಬ ಕತೆ ಇದೆ. ಭೀಮ ಬಕಾಸುರನನ್ನು ಕೊಂದದ್ದು ಇಲ್ಲಿಯೇ. 

ಮಣಿಪುರ- ಈಶಾನ್ಯ ರಾಜ್ಯ
ಈಶಾನ್ಯ ಭಾರತದ ಒಂದು ರಾಜ್ಯವಾಗಿರುವ ಮಣಿಪುರ- ಮಹಾಭಾರತದ ಕಾಲದಲ್ಲೂ ಇದೇ ಹೆಸರನ್ನು ಹೊಂದಿತ್ತು. ಇಲ್ಲಿನ ರಾಜ ಚಿತ್ರವಾಹನನ ಪುತ್ರಿ ಚಿತ್ರಾಂಗದೆಯನ್ನು ಅರ್ಜುನ ವಿವಾಹವಾಗುತ್ತಾನೆ. ಇವರಿಬ್ಬರಿಗೆ ಭಬ್ರುವಾಹನ ಜನಿಸುತ್ತಾನೆ. 

Follow Us:
Download App:
  • android
  • ios