Aase serial : ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ‘ಆಸೆ’ ಧಾರಾವಾಹಿಯಲ್ಲಿ ಮಹಾ ತಿರುವು ಸಿಕ್ಕಿದೆ. ಒಂದೆಡೆ ರೋಹಿಣಿಯ ಸತ್ಯದ ಅನಾವರಣ ಆಗಿದ್ರೆ, ಮತ್ತೊಂದೆಡೆ, ರೌಡಿಗಳ ಜೊತೆಗಿನ ಹೋರಾಟದಲ್ಲಿ ನಾಯಕ ಸೂರ್ಯ ದುರಂತ ಅಂತ್ಯ ಕಂಡಿದ್ದಾನೆ. 

‘ಆಸೆ’ ಸೀರಿಯಲ್ ನಾಯಕ ಸೂರ್ಯನ ದುರಂತ ಅಂತ್ಯ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿತ್ತಿರುವ ‘ಆಸೆ’ ಧಾರಾವಾಹಿ, ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಮಿಡಲ್ ಕ್ಲಾಸ್ ಕುಟುಂಬದ ಜೀವನದ ಕುರಿತಾದ ಸುಂದರ ಕಥೆಯನ್ನು ಹೊಂದಿದ ಧಾರಾವಾಹಿ ಇದಾಗಿದೆ. ಆದರೆ ಇದೀಗ ಧಾರಾವಾಹಿಯಲ್ಲಿ ಸಾಲು ಸಾಲು ಟ್ವಿಸ್ಟ್ ಗಳು ಕಾಣಿಸಿಕೊಂಡಿವೆ. ಮಹಾತಿರುವುಗಳನ್ನು ಕಂಡು ವೀಕ್ಷಕರು ಶಾಕ್ ಆಗಿದ್ದಾರೆ. ಅಷ್ಟಕ್ಕೂ ಧಾರಾವಾಹಿಯಲ್ಲಿ ಆಗುತ್ತಿರುವುದು ಏನು? ಎರಡು ಮಹಾತಿರುವುಗಳು ಕನಸೊ? ನನಸೋ? ಅನ್ನೋದನ್ನು ನೋಡೋಣ,

Add Asianetnews Kannada as a Preferred SourcegooglePreferred

ಆಸೆ ಧಾರಾವಾಹಿಯಲ್ಲಿ ಮೊದಲನೇ ಟ್ವಿಸ್ಟ್ ಎಂದರೆ, ಇಷ್ಟು ದಿನ ರೋಹಿಣಿ ಕಾಯ್ದುಕೊಂಡು ಬಂದಿದ್ದ ಒಡಲ ಸತ್ಯ ಇದೀಗ ಸೂರ್ಯನ ಮುಂದೆ ಬಯಲಾಗಿದೆ. ಈ ವಿಷ್ಯ ಮೊದಲೇ ಮೀನಾಗೆ ತಿಳಿದಿತ್ತು. ರೋಹಿಣಿಗೆ ಬಾಲ್ಯ ವಿವಾಹವಾಗಿರುತ್ತೆ, ಮದ್ಯವಯಸ್ಕ ವ್ಯಕ್ತಿಯನ್ನು ಮದುವೆಯಾಗಿದ್ದ ರೋಹಿಣಿಗೆ ಒಂದು ಮಗುವಾಗುತ್ತಿದ್ದಂತೆ, ಗಂಡ ಎನ್ನುವ ವ್ಯಕ್ತಿ ಸಾವನ್ನಪ್ಪಿರುತ್ತಾನೆ. ಆ ಸಂದರ್ಭದಲ್ಲಿ ರೋಹಿಣಿಗೆ ಹತ್ತಿರವಾಗಿದ್ದು, ಮನೋಜ. ರೋಹಿಣಿ ತನ್ನ ಹಳೆಯ ಸತ್ಯವನ್ನು ಮುಚ್ಚಿಟ್ಟು, ಮನೋಜ್ ಜೊತೆ ಮದುವೆಯಾಗಿರುತ್ತಾಳೆ. ಆದರೆ ಮೀನಾಗೆ ವಿಷಯ ಗೊತ್ತಾದ ಮೇಲೆ ಅವಳಿಗೆ ಬುದ್ದಿ ಹೇಳಿದ್ದಳು. ನಾನೇ ಆ ವಿಷ್ಯವನ್ನು ಮನೆ ಮಂದಿ ಮುಂದೆ ಹೇಳುತ್ತೇನೆ ಎಂದು ರೋಹಿಣಿ ಹೇಳಿದ್ದಳು. ಇದೀಗ ಸೂರ್ಯನಿಗೆ ಕ್ರಿಶ್ ರೋಹಿಣಿಯ ಸ್ವಂತ ಮಗು ಎನ್ನುವ ಸತ್ಯ ಗೊತ್ತಾಗಿದೆ. ಸೂರ್ಯ ಅದನ್ನು ಮನೆ ಮಂದಿ ಮುಂದೆ ಹೇಳುತ್ತಾನೆ. ಇದರಿಂದ ಕೋಪಗೊಂಡ ಮನೆಮಂದಿ ರೋಹಿಣಿಯನ್ನು ಮನೆಯಿಂದ ಹೊರ ಹಾಕುತ್ತಾರೆ.

ಧಾರಾವಾಹಿಯ ಇನ್ನೊಂದು ಟ್ವಿಸ್ಟ್ ಎಂದರೆ ಅದು ಕಥೆಯ ಜೀವಾಳವೇ ಆಗಿದ್ದ ಸೂರ್ಯನ ಸಾವು. ಹೌದು, ರೌಡಿಗಳ ಜೊತೆ ನಡೆದ ಹೊಡೆದಾಟದಲ್ಲಿ ಸೂರ್ಯ ಮೃತಪಟ್ಟಿರುವಂತೆ ತೋರಿಸಲಾಗಿದೆ. ಸೂರ್ಯನ ಸಾವಿನ ಸುದ್ದಿ ಕೇಳಿ ಕುಟುಂಬ ಶಾಕ್ ನಲ್ಲಿದೆ. ಮನೆಗೆ ಬಂದ ಸೂರ್ಯನ ಮೃತ ದೇಹವನ್ನು ನೋಡಿ, ಮೀನಾಳಿಗೆ ಇದು ನಿಜವೋ? ಸುಳ್ಳೋ ಎಂದು ನಂಬಲು ಆಗದೇ ಇರುವಂತೆ ಕುಸಿದು ಹೋಗಿದ್ದಾಳೆ. ಸಕ್ರೆಬೈಲು ಶಾಂತಿ ಕೂಡ ಕಣ್ಣೀರಿಡುತ್ತಿದ್ದಾಳೆ. ಶಾಂತಿಯನ್ನು ನೋಡಿ ರಂಗನಾಥ್, ಅವನು ಬದುಕಿರುವಾಗ ಒಂದು ದಿನವೂ ಅವನ ನೆರಳು ಸೋಕದಂತೆ ನಡೆದುಕೊಂಡು ಬಿಟ್ಟೆಯಲ್ಲ. ಈಗ ನೀನು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದರೂ ಸಿಗದೆ ಇರುವಷ್ಟು ದೂರ ಹೋಗಿ ಬಿಟ್ಟಿದ್ದಾನೆ, ನನ್ನ ಮಗನನ್ನ ಕರೆದುಕೊಂಡು ಬಿಟ್ಯಲ್ಲಪ್ಪ, ನನ್ನ ಮಗ ದೂರವಾಗಿ ಹೋದ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.

ವೀಕ್ಷಕರು ಏನೆಂದು ಹೇಳುತ್ತಿದ್ದಾರೆ?

ಇನ್ನು ಹೊಸ ಪ್ರೊಮೋವನ್ನು ನೋಡಿ ವೀಕ್ಷಕರು ಕೂಡ ಶಾಕ್ ಆಗಿದ್ದಾರೆ. ಕಥೆಯ ಜೀವಾಳವೇ ಸೂರ್ಯ ಆತನೇ ಸಾವನ್ನಪ್ಪಿದರೆ ಕಥೆಗೆ ಅರ್ಥವೇ ಇಲ್ಲ, ಕಥೆಯೇ ಇಲ್ಲ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಇದು ರೋಹಿಣಿಯ ಕನಸು, ಸೂರ್ಯನಿಗೆ ಏನೂ ಆಗೋದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಅಷ್ಟಕ್ಕೂ ಧಾರಾವಾಹಿಯಲ್ಲಿ ಏನಾಗಲಿದೆ ನೋಡೋದಕ್ಕೆ ಇನ್ನೂ ಕಾಯಬೇಕು.

View post on Instagram